Connect with us

    BANTWAL

    ರಾಜ್ಯದಲ್ಲಿ ಚುನಾವಣಾ ಕಾವು :ಪಶ್ಚಿಮ ವಲಯ ವ್ಯಾಪ್ತಿಯ ಎಸ್ಸೈಗಳ ವರ್ಗಾವಣೆ..!

    Published

    on

    ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಎಸ್ಸೈಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

    ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಎಸ್ಸೈಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

    ಕಾರ್ಕಳ ಗ್ರಾಮಾಂತರ ಠಾಣೆಯ ಶುಭಕರ ಅವರನ್ನು ಬರ್ಕೆ ಠಾಣೆಗೆ, ಪಡುಬಿದ್ರಿ ಠಾಣೆಯ ಪ್ರಕಾಶ್ ಸಾಲಿಯಾನ್‌ರನ್ನು ಮಂಗಳೂರು ಸಂಚಾರ ಉತ್ತರ ಠಾಣೆಗೆ, ಶಂಕರನಾರಾಯಣ ಪೊಲೀಸ್ ಠಾಣೆಯ ಸುದರ್ಶನ್ ಬಿ.ಎನ್. ಅವರನ್ನು ಉರ್ವಕ್ಕೆ, ಮಂಕಿ ಠಾಣೆಯ ಮುಷಾಹಿದ್ ಅಹ್ಮದ್‌ರನ್ನು ಮಂಗಳೂರು ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ.

    ಗೋಕರ್ಣ ಠಾಣೆಯ ಸುಧಾ ಟಿ.ಅಘನಾಶಿನಿ ಅವರನ್ನು ಪಣಂಬೂರಿಗೆ, ಚಿತ್ತಾಕುಲ ಠಾಣೆಯ ಕಲ್ಪನಾ ಬಂಗ್ಲೆ ಅವರನ್ನು ಕಂಕನಾಡಿ ನಗರಕ್ಕೆ, ಹೊನ್ನಾವರ ಠಾಣೆಯ ಗಣೇಶ್ ಎಚ್.ನಾಯಕ್‌ರನ್ನು ಕೊಣಾಜೆಗೆ, ಜೋಯಿಡಾ ಠಾಣೆಯ ಮಹದೇವಿ ನಾಯ್ಕೋಡಿ ಅವರನ್ನು ಮಂಗಳೂರು ಗ್ರಾಮಾಂತರಕ್ಕೆ, ಶಿರಸಿ ಹೊಸ ಮಾರ್ಕೆಟ್ ಠಾಣೆಯ ಮಾಲಿನಿ ಹಂಸಬಾವಿ ಅವರನ್ನು ಮಂಗಳೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

    ಹೊನ್ನಾವರ ಸಂಚಾರ ಠಾಣೆಯ ಮಂಜೇಶ್ವರ್ ಚಂದಾವರ್‌ರನ್ನು ಉಳ್ಳಾಲಕ್ಕೆ, ಹೊನ್ನಾವರ ಠಾಣೆಯ ಸಾವಿತ್ರಿ ನಾಯಕ್‌ರನ್ನು ಮೂಡುಬಿದಿರೆಗೆ, ಯಲ್ಲಾಪುರ ಠಾಣೆಯ ಶ್ಯಾಮ್ ಪಾವಸ್ಕರ್‌ರನ್ನು ಮಂಗಳೂರು ಪೂರ್ವಕ್ಕೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಠಾಣೆಯ ಚಂದ್ರಮ್ಮ ವೈ.ಎನ್. ಅವರನ್ನು ಮಂಗಳೂರು ಸಂಚಾರ ಉತ್ತರಕ್ಕೆ, ಚಿಕ್ಕಮಗಳೂರು ಗ್ರಾಮಾಂತರ ಸಂಚಾರ ಠಾಣೆಯ ಮುದ್ದಪ್ಪ ಬಿ.ಇ ಅವರನ್ನು ಮಂಗಳೂರು ಸಂಚಾರ ದಕ್ಷಿಣಕ್ಕೆ, ಚಿಕ್ಕಮಗಳೂರು ಎನ್.ಆರ್.ಪುರ ಠಾಣೆಯ ಜ್ಯೋತಿ ಎನ್.ಎ ಅವರನ್ನು ಕಂಕನಾಡಿ ನಗರಕ್ಕೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಗೇಣೋಜಿ ಕೆ.ಟಿ ಅವರನ್ನು ಕಂಕನಾಡಿ ನಗರಕ್ಕೆ, ಆಲ್ದೂರು ಠಾಣೆಯ ಕೀರ್ತಿಕುಮಾರ್ ಎಚ್.ಡಿ. ಅವರನ್ನು ಮೂಡುಬಿದಿರೆ ಪೊಲೀಸ್ ಠಾಣೆಗೆ ವರ್ಗಾಯಿಸಿ ಆದೇಶಿಸಲಾಗಿದೆ.

    ಬೀರೂರು ಠಾಣೆಯ ಬಸವರಾಜಪ್ಪ ಎಚ್ ಅವರನ್ನು ಮಂಗಳೂರು ಸಂಚಾರ ಪೂರ್ವ ಠಾಣೆಗೆ, ಚಿಕ್ಕಮಗಳೂರು ನಗರ ಠಾಣೆಯ ಸತೀಶ್ ಕೆ.ಎಸ್ ಅವರನ್ನು ಮಂಗಳೂರು ಸಂಚಾರ ಪಶ್ಚಿಮಕ್ಕೆ, ಪಂಚನಹಳ್ಳಿ ಠಾಣೆಯ ಲೀಲಾವತಿ ಆರ್. ಅವರನ್ನು ಮಂಗಳೂರು ಸೆನ್ ಕ್ರೈಂ ಠಾಣೆಗೆ ವರ್ಗಾಯಿಸಲಾಗಿದೆ.

    BANTWAL

    ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆಗೆ ಡಾಮರು

    Published

    on

    ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.

    ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ.

    Continue Reading

    BANTWAL

    ಮಂಗಳೂರು: ಯುವತಿ ವಿಚಾರದಲ್ಲಿ ಯುವಕನಿಗೆ ಥಳಿತ; ಆರೋಪಿಗಳು ಅರೆಸ್ಟ್

    Published

    on

    ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಫ(21) ಎಂಬಾತನನ್ನು ಕಂಬಕ್ಕೆ ಕಟ್ಟಿ ಹಾಕಿದ ಥಳಿಸಿದ ಆರು ಮಂದಿ ಆರೋಪಿಗಳನ್ನು ಬಂಟ್ವಾಳ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ ಆರೋಪಿಗಳಾದ ಕಂಚಿನಡ್ಕದ ನಿವಾಸಿಗಳಾಗಿರುವ ಮಹಮ್ಮದ್‌ ಸಪ್ವಾನ್( 25), ಮಹಮ್ಮದ್‌ ರಿಜ್ವಾನ್‌ (25), ಇರ್ಪಾನ್‍(27), ಅನೀಸ್‍ ಅಹಮ್ಮದ್‍ (19), ನಾಸೀರ್‍ (27), ಇಬ್ರಾಹಿಂ, ಶಾಕೀರ್‍ (18)ನನ್ನು ಬಂಧಿಸಲಾಗಿದೆ.

    ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನವೆಂಬರ್ 7ರಂದು ರಾತ್ರಿ 10 ಗಂಟೆ ಸುಮಾರಿಗೆ ಕಂಚಿನಡ್ಕ ಪದವು ನಿವಾಸಿಯಾಗಿರುವ ಯುವತಿಯೊಬ್ಬಳು ಮಹಮ್ಮದ್ ಮುಸ್ತಾಫಾನನ್ನು ಮನೆಗೆ ಬರಲು ಹೇಳಿದ್ದು, ಆಕೆ ಸೂಚನೆಯಂತೆ ಮಹಮ್ಮದ್ ಮುಸ್ತಾಫಾ ಅಲ್ಲಿಗೆ ಹೋಗಿದ್ದ. ಈ ವೇಳೆ ಅಲ್ಲಿದ್ದ ಆರೋಪಿಗಳು ಮಹಮ್ಮದ್‍ ಮುಸ್ತಾಫ್‍ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಆತನನ್ನು ಹಿಡಿದು ರಕ್ತ ಒಸರುವಂತೆ ಥಳಿಸಿದ್ದಲ್ಲದೇ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

     

    ಇದನ್ನೂ ಓದಿ : ಬಂಟ್ವಾಳ : ಮನೆಗೆ ಬಂದಿದ್ದ ಪ್ರಿಯಕರನ್ನು ಅ*ರೆಬೆತ್ತಲು ಮಾಡಿ ಹ*ಲ್ಲೆ

     

    ಮಹಮ್ಮದ್‍ ಮುಸ್ತಾಫ್‍ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಬಳಿಕ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಪೊಲೀಸರು ವಿಚಾರಣೆ ಮಾಡಲು ತೆರಳಿದಾದ ಮಹಮ್ಮದ್‍ ಮುಸ್ತಾಫ್‍ ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಕೊಲೆಯತ್ನ ನಡೆಸಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದೆ.

    Continue Reading

    BANTWAL

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕ ಆತ್ಮಹ*ತ್ಯೆ

    Published

    on

    ಬಂಟ್ವಾಳ: ವಿಷಪದಾರ್ಥ ಸೇವಿಸಿ ಯುವಕನೋರ್ವ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಕಡೇಶಿವಾಲಯದಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಕಂಡಿಗ ನಿವಾಸಿ ಗಣೇಶ್(25) ಆತ್ಮಹ*ತ್ಯೆ ಮಾಡಿಕೊಂಡ ಯುವಕ. ಗಣೇಶ್ ಅವರು ಸೋಮವಾರ ಮನೆಯಲ್ಲಿಯೇ ಸಂಜೆ ಹುಲ್ಲಿಗೆ ಬಿಡುವ ವಿಷವನ್ನು ಸೇವಿಸಿದ್ದರು.

    ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃ*ತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending