DAKSHINA KANNADA
ಪಾರ್ಕಿಂಗ್ ವಿಚಾರದಲ್ಲಿ ಚೂರಿ ಇರಿತ..! ವ್ಯಕ್ತಿಗೆ ಗಾಯ, ಆಸ್ಪತ್ರೆಗೆ
ಪುತ್ತೂರು: ಅಂಗಡಿ ಮುಂಭಾಗದಲ್ಲಿ ವಾಹನ ಪಾರ್ಕ್ ಮಾಡುವ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಡೆದಿದೆ. ಪುತ್ತೂರಿನ ಸದಾಶಿವ ಪೈ ಹಾಗೂ ಗುಣಶೇಖರ ಶೆಟ್ಟಿ ಎಂಬವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಅಗಲ ಕಿರಿದಾಗಿರುವ ಕೋರ್ಟ್ ರಸ್ತೆಯಲ್ಲಿ ಸಾಮಾನ್ಯವಾಗಿ ವಾಹನ ಪಾರ್ಕಿಂಗ್ ಸಮಸ್ಯೆ ಇದೆ. ಹೀಗಿರುವಾಗ ಈ ರಸ್ತೆಯಲ್ಲಿನ ಅಂಗಡಿಯೊಂದರ ಮುಂದೆ ಈ ಇಬ್ಬರ ನಡುವೆ ವಾಹನ ಪಾರ್ಕ್ ಮಾಡಿದ ವಿಚಾರವಾಗಿ ಗಲಾಟೆ ಆಗಿದೆ. ಈ ವೇಳೆ ಗುಣಶೇಖರ್ ಸದಾಶಿವ ಪೈ ಅವರಿಗೆ ಚೂರಿಯಿಂದ ಇರಿದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಚೂರಿ ಇರಿತದಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಿದ್ದ ಸದಾಶಿವ ಪೈ ಕೈಗೆ ಗಾಯವಾಗಿದೆ. ಸದಾಶಿವ ಪೈ ಪುತ್ತೂರಿನ ದರ್ಬೆ ನಿವಾಸಿಯಾಗಿದ್ದು, ಪ್ರತಿಷ್ಠಿತ ಜಿಎಸ್ಬಿ ಮನೆತನಕ್ಕೆ ಸೇರಿದವರಾಗಿದ್ದು, ಪುತ್ತೂರಿನ ಮುಕ್ರಂಪಾಡಿಯ ಆನಂದಾಶ್ರಮದಲ್ಲಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಇನ್ನು ಚೂರಿಯಿಂದಿ ಇರಿಯಲು ಮುಂದಾಗಿದ್ದ ಗುಣಶೇಖರ್ ಶೆಟ್ಟಿ ಉರಮಾಲ್ ನಿವಾಸಿಯಾಗಿದ್ದು, ಇವರೂ ಕೂಡಾ ಪ್ರತಿಷ್ಠಿತ ಕುಟಂಬದ ವ್ಯಕ್ತಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇಬ್ಬರೂ ಕೂಡಾ 60ರ ಆಸುಪಾಸಿನಲ್ಲಿ ಇರುವ ವ್ಯಕ್ತಿಗಳಾಗಿದ್ದು, ಈ ರೀತಿ ಪಾರ್ಕಿಂಗ್ ವಿಚಾರದಲ್ಲಿ ಕೈ ಕೈ ಮಿಲಾಯಿಸಿ ಚೂರಿ ಇರಿತ ಆಗುವ ಮಟ್ಟಕ್ಕೆ ತಲುಪಿದ ಬಗ್ಗೆ ಜನರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
DAKSHINA KANNADA
ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ : ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
ಮಂಗಳೂರು : ಕೋಲ್ನಾಡು ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಮಂಗಳವಾರ(ಜೂ.18) ಕೆಎಸ್ ರಾವ್ ನಗರದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.
ಈ ಸಂದರ್ಭ ಸರ್ವೋತ್ತಮ ಅಂಚನ್, ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಹಿಂದುಸ್ತಾನ್ ಪೆಟ್ರೋಲಿಯಂನ ರವಿ ಎಸ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ದಿನೇಶ್ ಕೆ, ಹಾಗೂ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ : ಯುವಕನ ಜೊತೆ ಓಡಿಹೋದ ತಾಯಿ..! ಅಮ್ಮಾ ಬಾರಮ್ಮ..ಎಂದು ಮಕ್ಕಳು ಅಂಗಲಾಚಿದ್ರೂ ಕ್ಯಾರೇ ಅನ್ನದ ತಾಯಿ..!!
DAKSHINA KANNADA
ಚಿಕ್ಕಮೇಳದ ಹೆಸರಿನಲ್ಲಿ ಯಕ್ಷಗಾನ ಕಲೆಗೆ ಅಪಚಾರ ಮಾಡದಿರಿ; ಒಕ್ಕೂಟ ಮನವಿ
ಮಂಗಳೂರು: ಇಂದು ದೇಶ, ವಿದೇಶಗಳಲ್ಲಿ ಯಕ್ಷಗಾನದ ಹಿರಿಮೆ ಸಾರಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಲೆಯ ಹೆಸರಿನಲ್ಲಿ ಕಲೆಯ ಗಂಧಗಾಳಿ ಇಲ್ಲದವರು ಕೂಡಾ ಯಕ್ಷ ಕಲೆಯನ್ನು ವಿರೂಪಗೊಳಿಸುತ್ತಿವುದು ವಿಷಾದನೀಯ ಸಂಗತಿ. ಇತ್ತೀಚಿನ ದಿನಗಳಲ್ಲಿ ಮಳೆಗಾಲದಲ್ಲಿ ತಿರುಗಾಟದ ಇಲ್ಲದ ಸಂದರ್ಭದಲ್ಲಿ ಮನೆ ಮನೆಗೆ ಚಿಕ್ಕ ಮೇಳಗಳು ಹೊರಡುತ್ತವೆ. ಆದರೆ ಯಕ್ಷಗಾನದ ಬಾಲಪಾಠವೂ ಆಗದವರಿಂದ ಚಿಕ್ಕ ಮೇಳ ಎಂದು ಹೆಸರಿಟ್ಟುಕೊಂಡು ಅದೊಂದು ದಂಧೆಯಾಗಿ ವ್ಯಾಪಕವಾಗಿರುವುದು ನೋವಿನ ಸಂಗತಿ ಎಂದು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸಮಿತಿ ದೂರಿದೆ.
ಸಂಪ್ರದಾಯಕ್ಕೆ ಬದ್ಧವಾಗಿ, ಶಿಸ್ತುಬದ್ಧವಾಗಿ ಯಕ್ಷಗಾನ ಮಾಡಲು ಕಲಾವಿದರಲ್ಲಿ ಒಟ್ಟು ಮಾಡಿಕೊಂಡು ತೆಂಕುತಿಟ್ಟು ಚಿಕ್ಕಮೇಳ ಹೆಸರಿನಲ್ಲಿ ತಿರುಗಾಟವನ್ನು ಆರಂಭಿಸಲಾಗಿದೆ. ಒಕ್ಕೂಟದ ಪರವಾನಿಗೆ ಇದ್ದವರಿಗೆ ಮಾತ್ರ ಮನೆಯಲ್ಲಿ ಆಟವಾಡಿಸಲು ಜನತೆ ಅನುವು ಮಾಡಿಕೊಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಿಜವಾದ ಕಲಾವಿದರಿಗೆ ಅನ್ಯಾಯವಾಗಬಾರದು ಎನ್ನುವ ನಿಟ್ಟಿನಲ್ಲಿ ಒಕ್ಕೂಟವನ್ನು ರಚನೆ ಮಾಡಲಾಗಿದೆ. ಒಕ್ಕೂಟದ ಅಧಿಕೃತ ಪರವಾಣಿಗೆ ಪಡೆದು ತಿರುಗಾಟ ಮಾಡುವವರು ಸಂಜೆ 6ರಿಂದ ರಾತ್ರಿ 10.30ರವರೆಗೆ ಕನ್ನಡ ಇಲ್ಲವೇ ತುಳುಭಾಷೆಗಳ ಗರಿಷ್ಠ 20 ನಿಮಿಷಗಳ ಸಂದೇಶ ಇರುವ ಸನ್ನಿವೇಶದ ಪ್ರದರ್ಶನ ಮಾಡಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರಮೇಶ ಕುಲಶೇಖರ, ಕುಮಾರ್ ಮಾಲೆಮಾರ್, ದಿವಾಕರ ದಾಸ್, ಕಡಬ ದಿನೇಶ ರೈ ಮೊದಲಾದವರಿದ್ದರು.
DAKSHINA KANNADA
ಉಪ್ಪಿನಂಗಡಿ: ಮಹಿಳೆ ಸಾ*ವಿನಲ್ಲಿ ಅನುಮಾನ; ಕೊ*ಲೆ ಶಂಕೆ
ಉಪ್ಪಿನಂಗಡಿ : ಇಲ್ಲಿನ ಪೆರ್ನೆ ಬಳಿಯ ಬಿಳಿಯೂರು ದರ್ಖಾಸ್ ಎಂಬಲ್ಲಿ ಮಹಿಳೆಯೋರ್ವರು ಮೃ*ತಪಟ್ಟಿದ್ದು ಕೊ*ಲೆ ಶಂಕೆ ವ್ಯಕ್ತವಾಗಿದೆ. ಹೇಮಾವತಿ (37) ಮೃ*ತ ಮಹಿಳೆ.
ಈಕೆ ತಾಯಿ, ಅಕ್ಕನ ಮಗನೊಂದಿಗೆ ಮನೆಯಲ್ಲಿದ್ದ ವೇಳೆ ಭಾನುವಾರ(ಜೂ.16) ರಾತ್ರಿ ಕೃತ್ಯ ನಡೆದಿದೆ. ಮೊದಲಿಗೆ ಪರಿಸರದಲ್ಲಿ ಹೃದಯಾಘಾ*ತವೆಂಬ ಸುದ್ದಿ ಹರಡಿತ್ತು. ಆದರೆ ಬಳಿಕ ಈ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ : ಕಡಬ : ವಿದ್ಯುತ್ ಶಾಕ್ ಹೊಡೆದು ಯುವಕ ಸಾ*ವು
ವಿಚಾರಣೆಗಾಗಿ ಮೃ*ತಳ ಅಕ್ಕನ ಮಗ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕನನ್ನು, ಆತನ ತಂದೆ ಶಂಕರ ಎಂಬವರನ್ನು ಕರೆದೊಯ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಉಪ್ಪಿನಂಗಡಿ ಪೊಲೀಸರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಷ್ಟೇ. ಮೃ*ತರು ಹೊಟೇಲ್ ಕಾರ್ಮಿಕೆಯಾಗಿದ್ದರು.
- LATEST NEWS5 days ago
ಅಡುಗೆ ಮನೆಯಿಂದ ಹಲ್ಲಿಗಳನ್ನು ಓಡಿಸಲು ಈ ಟಿಪ್ಸ್ ಅನುಸರಿಸಿ
- LATEST NEWS6 days ago
ಅಡುಗೆಯಲ್ಲಿ ಉಪ್ಪು ಜಾಸ್ತಿ ಆಯ್ತಾ? ಯೋಚನೆ ಬೇಡ, ಈ ಟಿಪ್ಸ್ ಫಾಲೋ ಮಾಡಿ
- FILM5 days ago
ಡ್ರೋನ್ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್ ಗಿಫ್ಟ್
- LATEST NEWS6 days ago
ನಿಲ್ಲಿಸಿದ್ದ ಕಂಟೈನರ್ ಗೆ ಎಕ್ಸ್ ಪ್ರೆಸ್ ಬಸ್ ಡಿಕ್ಕಿ..; ಚಾಲಕ ಸಹಿತ 20ಕ್ಕೂ ಅಧಿಕ ಮಂದಿಗೆ ಗಾಯ