Connect with us

    LATEST NEWS

    ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ -1 ವೇಳಾಪಟ್ಟಿ ಪ್ರಕಟ

    Published

    on

    2025ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆ -1 ನಡೆಯುತ್ತಿದ್ದರೆ, ಮಾರ್ಚ್ 21ರಿಂದ ಏಪ್ರಿಲ್ 04 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1 ನಡೆಯಲಿವೆ.

    ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಮಾರ್ಚ್ 1ರಿಂದ ಮಾರ್ಚ್ 19ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ಹಾಗೂ ಮಾರ್ಚ್​ 20 ರಿಂದ ಏಪ್ರಿಲ್ 2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 16ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

    ದ್ವೀತಿಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ :

    ಮಾರ್ಚ್ 1- ಕನ್ನಡ, ಅರೇಬಿಕ್
    ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
    ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.
    ಮಾರ್ಚ್ 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ.
    ಮಾರ್ಚ್ 7- ಇತಿಹಾಸ, ಭೌತಶಾಸ್ತ್ರ.
    ಮಾರ್ಚ್ 10- ಐಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ.
    ಮಾರ್ಚ್ 12- ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ.
    ಮಾರ್ಚ್ 13- ಅರ್ಥಶಾಸ್ತ್ರ.
    ಮಾರ್ಚ್ 15- ಇಂಗ್ಲಿಷ್.
    ಮಾರ್ಚ್ 17- ಭೂಗೋಳಶಾಸ್ತ್ರ.
    ಮಾರ್ಚ್ 18- ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
    ಮಾರ್ಚ್ 19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್.
    ಮಾರ್ಚ್ 20- ಹಿಂದಿ.

    SSLC ಪರೀಕ್ಷೆ -1 ವೇಳಾಪಟ್ಟಿ :

    ಮಾರ್ಚ್ 21- ಪ್ರಥಮ ಭಾಷೆ
    ಮಾರ್ಚ್ 24- ಗಣಿತ
    ಮಾರ್ಚ್ 26- ದ್ವಿತೀಯ ಭಾಷೆ
    ಮಾರ್ಚ್ 29- ಸಮಾಜ ವಿಜ್ಞಾನ
    ಏಪ್ರಿಲ್ 2- ವಿಜ್ಞಾನ
    ಏಪ್ರಿಲ್ 4- ತೃತೀಯ ಭಾಷೆ

    LATEST NEWS

    ವಿಶ್ವಪ್ರಸಿದ್ಧ ‘ಮಹಾಕುಂಭ ಮೇಳ’ ಕ್ಕೆ ದಿನಗಣನೆ ಆರಂಭ

    Published

    on

    “ಹಿಂದೆ ನಡೆದಿದ್ದ ಪೂರ್ಣ ಮಹಾಕುಂಭ ಮೇಳದ ಸಮಯದಲ್ಲಿ ಈಗಿನ ಯಾರೂ ಬದುಕಿರಲಿಲ್ಲ. ಮುಂದೆ ನಡೆಯುವ ಮಹಾ ಕುಂಭಮೇಳದ ಸಮಯಕ್ಕೆ ಸಹ ನಾವ್ಯಾರೂ ಬದುಕಿರುವುದಿಲ್ಲ”. 144 ವರ್ಷಗಳ ನಂತರ ನಡೆಯುತ್ತಿರುವ ಐತಿಹಾಸ ಪ್ರಸಿದ್ಧ ಮಹಾ ಕುಂಭಮೇಳಕ್ಕೆ ಪ್ರಯಾಗ್‌ ನಗರ ಸಜ್ಜಾಗಿದೆ. ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ‘ಮಹಾಕುಂಭ ಮೇಳ’ ಎಂದು ಕರೆಯಲಾಗುತ್ತದೆ.

    ನಾಲ್ಕು ಗ್ರಹಗಳ ಅಪರೂಪದ ಸಂಯೋಜನೆಯಾಗುತ್ತಿರುವ ಹಿನ್ನೆಲೆ 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದ್ದು, ಸುಮಾರು 45 ಕೋಟಿಗೂ ಅಧಿಕ ಮಂದಿ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಕುಂಭಮೇಳ, ಅರ್ಧ ಕುಂಭ ಮತ್ತು ಪೂರ್ಣ ಕುಂಭಗಳಿಗೆ ಹೋಲಿಸಿದರೆ ಮಹಾ ಕುಂಭಮೇಳ ಬಹಳ ವಿಶೇಷವಾಗಿದೆ. ಮಹಾ ಕುಂಭ ಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಭಾರತದ ಪವಿತ್ರ ಸ್ಥಳಗಳಾದ ಒಂದಾದ ಪ್ರಯಾಗ್‌ರಾಜ್, ಹರಿದ್ವಾರ, ಉಜ್ಜಯಿನಿ ಅಥವಾ ನಾಸಿಕ್‌ನಲ್ಲಿ ನಡೆಸಲಾಗುತ್ತದೆ. ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್ನಲ್ಲಿ ನಡೆಯುತ್ತಿದೆ

    ಈ ಪವಿತ್ರ ಕಾರ್ಯಕ್ರಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ 2025 ಜನವರಿ 13 ಮಕರ ಸಂಕ್ರಾಂತಿಯಂದು ಪ್ರಾರಂಭವಾಗಿ ಫೆಬ್ರವರಿ 26 ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ.

    ಕುಂಭ ಮೇಳದ ಹಿನ್ನಲೆ :

    ಕುಂಭಮೇಳದ ಮೂಲವು ಹಿಂದೂ ಪುರಾಣಗಳಲ್ಲಿ, ವಿಶೇಷವಾಗಿ ಸಮುದ್ರ ಮಂಥನದ ಕಥೆಯಲ್ಲಿದೆ. ದೇವತೆಗಳು (ದೇವರುಗಳು) ಮತ್ತು ಅಸುರರು (ರಾಕ್ಷಸರು) ಅಮರತ್ವದ ಅಮೃತವಾದ ಅಮೃತವನ್ನು ಪಡೆಯುವ ಪ್ರಯತ್ನದಲ್ಲಿದ್ದಾಗ ಅಮೃತದಿಂದ ತುಂಬಿದ ಕುಂಭ (ಮಡಿಕೆ) ಹೊರಹೊಮ್ಮಿತು. ರಾಕ್ಷಸರಿಂದ ಅದನ್ನು ರಕ್ಷಿಸಲು, ಮೋಹಿನಿಯ ವೇಷದಲ್ಲಿರುವ ಭಗವಾನ್ ವಿಷ್ಣುವು ಮಡಿಕೆಯನ್ನು ಸ್ವಾಧೀನಪಡಿಸಿಕೊಂಡ. ಈ ರೀತಿ ವಶಪಡಿಸಿಕೊಂಡು ಕೊಂಡೊಯ್ಯುತ್ತಿದ್ದಾಗ ಅಮೃತದ ಹನಿಗಳು ಬಿದ್ದ ನಾಲ್ಕು ಸ್ಥಳಗಳೇ ಇಂದಿನ ಪ್ರಯಾಗರಾಜ್‌, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಕ್ಷೇತ್ರಗಳಾಗಿವೆ. ಈ ಸ್ಥಳಗಳು ಪವಿತ್ರ ಸ್ಥಳಗಳಾಗಿ  ಪೂಜಿಸಲ್ಪಡುವುದರಿಂದ ಅಲ್ಲಿಯೇ ಕುಂಭಮೇಳವನ್ನು ಆಚರಿಸಲಾಗುತ್ತದೆ.

    ಕುಂಭಮೇಳದ ವಿಧಗಳು :

    1. ಕುಂಭಮೇಳ:

    ಇದು ಪ್ರತಿ 4 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್ ಗಳ ಪೈಕಿ ಒಂದು ನಗರದಲ್ಲಿ ನಡೆಯುತ್ತದೆ. ಮೇಳದ ಸಮಯದಲ್ಲಿ, ಲಕ್ಷಾಂತರ ಭಕ್ತರು ಮತ್ತು ಸಂತರು ಪಾಪಗಳಿಂದ ಮುಕ್ತಿ ಪಡೆಯಲು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡುತ್ತಾರೆ.

    2. ಅರ್ಧ ಕುಂಭಮೇಳ:

    ಅರ್ಧ ಕುಂಭಮೇಳವು ಪ್ರತಿ 6 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಪ್ರಯಾಗ್‌ರಾಜ್ ಮತ್ತು ಹರಿದ್ವಾರದಲ್ಲಿ ಮಾತ್ರ ನಡೆಯುತ್ತದೆ.

    3. ಪೂರ್ಣ ಕುಂಭ:

    12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್‌ನ ಸಂಗಮದ ದಡದಲ್ಲಿ ಪೂರ್ಣ ಕುಂಭ ಮೇಳ ನಡೆಯುತ್ತದೆ. ಗ್ರಹಗಳ ಶುಭ ಜೋಡಣೆಯ ಆಧಾರದ ಮೇಲೆ ಕುಂಭಮೇಳದ ದಿನಾಂಕವನ್ನು ನಿರ್ಧರಿಸಲಾಗುತ್ತದೆ, ಈ ಅವಧಿಯಲ್ಲಿ ಲಕ್ಷಾಂತರ ಹಿಂದೂಗಳು ಶಾಹಿ ಸ್ನಾನ (ಪವಿತ್ರ ಸ್ನಾನ) ಮಾಡಲಿದ್ದಾರೆ.

    4. ಮಹಾ ಕುಂಭ:

    12 ಪೂರ್ಣ ಕುಂಭ ಮೇಳಗಳ ನಂತರ 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ಅಪರೂಪದ ಘಟನೆಗೆ ಹೆಚ್ಚು ಮಹತ್ವವಿದ್ದು ಜನರು ಮಹಾ ಕುಂಭದ ಸಮಯದಲ್ಲಿ ಸ್ನಾನಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಮನುಷ್ಯಜನ್ಮದಲ್ಲಿ ಒಂದೇ ಬಾರಿ ಕಾಣ ಸಿಗುವ ಮೇಳ ಇದಾಗಿದೆ.

    Continue Reading

    DAKSHINA KANNADA

    ಮಂಗಳೂರಿಗೆ ಮೊದಲು ರೈಲು ಬಂದದ್ದು ಯಾವಾಗ ಗೊತ್ತಾ..?

    Published

    on

    ಮಂಗಳೂರು: ಭಾರತೀಯ ರೈಲ್ವೇಗೆ ಸುಮಾರು 170 ವರ್ಷಗಳ ಇತಿಹಾಸ ಇದೆ. 1853 ರಲ್ಲಿ ಭಾರತದ ರೈಲು ಸಂಪರ್ಕ ಆರಂಭವಾಯಿತು. ಇವತ್ತಿನ ಈ ದಿನ ದೇಶದಾದ್ಯಂತ ಸುಮಾರು 23 ಸಾವಿರಕ್ಕಿಂತಲೂ ಹೆಚ್ಚಿನ ರೈಲುಗಳಿವೆ. ರೈಲ್ವೇ ವ್ಯವಸ್ಥೆಯಲ್ಲಿ ಇಡೀ ಜಗತ್ತಿನಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇದರೆಲ್ಲದರ ನಡುವೆ ಮಂಗಳೂರಿಗೆ ಮೊದಲು ರೈಲು ಯಾವಾಗ ಬಂದಿತು..? ಅದು ಯಾವುದು..? ತಿಳಿಯೋಣ ಬನ್ನಿ.

    ಭಾರತಕ್ಕೆ ರೈಲಿನ ಪರಿಚಯ ಆಗಿ 54 ವರ್ಷಗಳ ನಂತರ ಅಂದರೆ 1907 ರಲ್ಲಿ ನಮ್ಮ ಮಂಗಳೂರಿಗೆ ಮೊದಲ ರೈಲು ಬಂದಿತು. 1906 ರ ತನಕ ರೈಲ್ವೇ ಪಟ್ಟಿ ಕಾಂಞಂಗಾಡ್ ವರೆಗೆ ಮಾತ್ರ ಇತ್ತು. ತದನಂತರ ಕಾಸರಗೋಡು, ಕುಂಬ್ಳೆ ಆಗಿ ಮಂಗಳೂರಿಗೆ ಬರುತ್ತದೆ. 1907 ರಲ್ಲಿ ಕ್ಯಾಲಿಕಟ್ ನಿಂದ ಮಂಗಳೂರಿಗೆ ಮೊದಲ ರೈಲು ಬರುತ್ತದೆ. ಇದನ್ನು ಆಗದ ಮದ್ರಾಸ್ ಗವರ್ನರ್ ಹೆಚ್‌. ಇ. ಸರ್ ಆರ್ಥರ್ ಲವ್ಲಿ ಉದ್ಘಾಟನೆ ಮಾಡಿದರು.

    1910 ರಲ್ಲಿ ಮದ್ರಾಸ್‌ನಿಂದ ಮಂಗಳೂರಿಗೆ ರೈಲು ಬರಲು ಪ್ರಾರಂಭವಾಯಿತು. ಆ ರೈಲಿನಲ್ಲಿ ನಮ್ಮ ಮಂಗಳೂರಿನಲ್ಲಿ ಆಗಿತ್ತಿದ್ದ ಹಂಚುಗಳು ರವಾನೆ ಆಗುತ್ತಿದ್ದವು. ವಿಶೇಷವೆಂದರೆ 1929 ರಲ್ಲಿ ಮಂಗಳೂರಿನಿಂದ ಪಾಕಿಸ್ತಾನದ ಪೇಶಾವರಕ್ಕೆ ರೈಲ್ವೇ ವ್ಯವಸ್ಥೆ ಇದ್ದವು. ಆ ರೈಲಿನ ಹೆಸರು ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್. ಇದು ಭಾರೀ ಉದ್ದದ ರೈಲು ಜರ್ನಿ ಆಗಿದ್ದು, ಹೋಗಿ ಎತ್ತಲು 4 ರಿಂದ 5 ದಿನಗಳು ಬೇಕಿದ್ದವಂತೆ.

    1930ರ ನಂತರ ಮಂಗಳೂರಿನಲ್ಲಿ ಶಾಶ್ವತ ರೈಲ್ವೇ ಸ್ಟೇಷನ್ ಆಗುತ್ತದೆ. ಮಂಗಳೂರು ಸಿಟಿಯ ವಳಗೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎನ್ನುವ ಎರಡು ದೊಡ್ಡ ಸ್ಟೇಷನ್ ಗಳು ಆಗುತ್ತದೆ. ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿ ನಮ್ಮ ಮಂಗಳೂರಿನ ರೈಲ್ವೇ ಸ್ಟೇಷನ್ ಬರುತ್ತದೆ. ಇಲ್ಲಿಂದ ದೇಶದ ಮೂಲೆ ಮೂಲೆಗೆ ಹೋಗಲು ಒಂದಷ್ಟು ರೈಲುಗಳು ಇವೆ.

    Continue Reading

    LATEST NEWS

    ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂವು

    Published

    on

    ಲಕ್ನೋ: ಅಯೋಧ್ಯೆ ರಾಮಮಂದಿರದ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ 1 ವರ್ಷ ತುಂಬಿದ ಹಿನ್ನೆಲೆ ಅಯೋಧ್ಯೆಯಲ್ಲಿ 3 ದಿನಗಳ ಕಾಲ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಮೂರು ದಿನಗಳ ಕಾಲ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

    ಮೊದಲ ವಾರ್ಷಿಕೋತ್ಸವದ ಹಿನ್ನೆಲೆ ರಾಮಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್‌ ಹೂಗಳನ್ನ ಬಳಸಲಾಗಿದೆ. ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಎಲ್ಲೆಡೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.


    ದಿನಕ್ಕೆ 2 ಬಾರಿ ಅಗ್ನಿಹೋತ್ರ ಮಂತ್ರ ಪಠಣ:

    ಇಂದಿನಿಂದ ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇದರ ಭಾಗವಾಗಿ ಶುಕ್ಲ ಯಜುರ್ವೇದದಿಂದ ಅಗ್ನಿಹೋತ್ರ ಮಂತ್ರಪಠಣ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ 11 ಹಾಗೂ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ಮಂತ್ರ ಪಠಣ ಮಾಡಲಾಗುತ್ತದೆ. ಇದರೊಂದಿಗೆ ಲಕ್ಷ ರಾಮ ರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಹಾಗೂ 6 ಲಕ್ಷ ಶ್ರೀ ರಾಮ ಮಂತ್ರದ ಪಠಣ ಮಾಡಲಾಗುತ್ತದೆ. ಮಂದಿರದ ನೆಲಮಾಳಿಗೆಯಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ರಾಗ ಸೇವೆ, ಸಂಜೆ 6 ಗಂಟೆಗೆ ಅಭಿನಂದನಾ ಗೀತ ಸೇವೆ ಶ್ರೀರಾಮನಿಗೆ ಅರ್ಪಣೆಯಾಗಲಿದೆ. ಮೊದಲ ಮಹಡಿಯಲ್ಲಿ ಸಂಗೀತ ಮಾನಸ ಪಠಣ ನಡೆಯಲಿದೆ.

    Continue Reading

    LATEST NEWS

    Trending