Connect with us

    LATEST NEWS

    ಕಾರ್ಕಳ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಪ್ರಮೋದ್ ಮುತಾಲಿಕ್ ಗೆ ಶ್ರೀ ರಾಮ ಸೇನೆ ಆಗ್ರಹ..!

    Published

    on

    ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಗೊಂದಲಗಳು ಉಂಟಾದ ಕಾರಣ ಪ್ರಮೋದ್ ಮುತಾಲಿಕ್ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಬೇಕೆಂದು ಶ್ರೀ ರಾಮ ಸೇನೆಯ ಮಂಗಳೂರು ವಿಭಾಗಧ್ಯಕ್ಷರಾದ ಮೋಹನ್ ಭಟ್ ಅವರು ಆಗ್ರಹಿಸಿದ್ದಾರೆ.

    ಉಡುಪಿ : ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಗೊಂದಲಗಳು ಉಂಟಾದ ಕಾರಣ ಪ್ರಮೋದ್ ಮುತಾಲಿಕ್ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಬೇಕೆಂದು ಶ್ರೀ ರಾಮ ಸೇನೆಯ ಮಂಗಳೂರು ವಿಭಾಗಧ್ಯಕ್ಷರಾದ ಮೋಹನ್ ಭಟ್ ಅವರು ಆಗ್ರಹಿಸಿದ್ದಾರೆ.

    ಉಡುಪಿಯಲ್ಲಿ ಶ್ರೀ ರಾಮ ಸೇನೆಯ ಪ್ರಮುಖರೊಂದಿಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು  ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಕಾರ್ಕಳ ಹಾಲಿ ಶಾಸಕ ಬಿಜೆಪಿಯ ಸುನೀಲ್ ಕುಮಾರ್ ಅವರ ಎದುರು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಏಕ ಪಕ್ಷಿಯ ನಿರ್ಧಾರವಾಗಿದೆ.

    ಕಾರ್ಯಕರ್ತರ ಜೊತೆಗೆ ಮಾತುಕತೆ ಮಾಡದೆ ಚುನಾವಣೆಗೆ ನಿಲ್ಲುತ್ತಿದ್ದಾರೆ ಇದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

    ಮುತಾಲಿಕ್ ಚುನಾವಣೆಗೆ ನಿಂತರೆ ಕಾಂಗ್ರೆಸ್ ಗೆ ಲಾಭ ಆಗಬಹುದು ಅಥವಾ ಮಹಾನ್ ನಾಯಕನ ಎದುರು ಮುತಾಲಿಕ್ ಸೋಲು ಅನುಭವಿಸಬಹುದು ಎಂದು ಅಭಿಪ್ರಾಯ ಪಟ್ಟ ಅವರು ಇದು ಶ್ರೀರಾಮ ಸೇನಾ ಸಂಘಟನೆಗೆ ತೊಡಕಾಗಬಹುದು.

    ಆದ್ದರಿಂದ ಅವರು ಶ್ರೀರಾಮ ಸಂಘಟನೆ ನಮಗೆ ಬಿಟ್ಟುಕೊಟ್ಟು ಬೇಕಾದರೆ ಚುನಾವಣೆಗೆ ಸ್ಪರ್ಧಿಸಲಿ ಎಂದು ಮನವಿ ಮಾಡಿದರು.

    ಈ ಹಿನ್ನೆಲೆಯಲ್ಲಿ ಫೆಬ್ವರಿ 20 ನೇ ತಾರಿಕಿನಂದು ಸಂಘಟನೆಯ ಪಧಾಧಿಕಾರಿಗಳ ವಿಶೇಷ ಬೈಠಕನ್ನು ಕರೆಯಲಾಗಿದ್ದು ಇದರಲ್ಲಿ ನಮ್ಮ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು.

    ಪತ್ರಿಕಾಗೋಷ್ಟಿ ಸಮಗ್ರ ವಿವರ ..  

    ನಾವು ಕಳೆದ ಸುಮಾರು 22 ವರ್ಷಗಳಿಂದ ಹಿಂದೂ ಸಂಘಟನೆಯಲ್ಲಿದ್ದುಕೊಂಡು, ಮೊದಲಿಗೆ ಭಜರಂಗದಳದ ಜಿಲ್ಲಾ ಜವಾಬ್ದಾರಿ, ನಂತರ ನಮ್ಮ ಗುರುಗಳು ಹಾಗೂ ಸಂಘಟನೆಗೆ ನಾವು ಸೇರಲು ಪ್ರೇರಣಾಕರ್ತರೂ ಆದಂತಹ ಶ್ರೀ ಪ್ರಮೋದ್ ಮುತಾಲಿಕ್ ಅವರನ್ನು, ಸಂಘ ಪರಿವಾರದ ಹಿರಿಯ ನಾಯಕರು ಭಜರಂಗದಳದ ದಕ್ಷಿಣ ಭಾರತದ ಜವಾಬ್ದಾರಿಯಿಂದ ವಜಾಗೊಳಿಸಿದಂತಹ ಕಷ್ಟಕರ ಸಂದರ್ಭದಲ್ಲಿ ಪ್ರಮೋದ ಮುತಾಲಿಕ್ ಅವರಿಗೆ ಆದಂತಹ ಅವಮಾನವನ್ನು ಖಂಡಿಸಿ ಅವರ ಜೊತೆ ಸಾವಿರಾರು ಕಾರ್ಯಕರ್ತರು ಸಂಘಪರಿವಾರದ ಅನೇಕ ಸಂಘಟನೆಗಳ ಜವಾಬ್ದಾರಿಯಿಂದ ಹೊರಬಂದು ಶಿವಸೇನೆ, ರಾಷ್ಟ್ರೀಯ ಹಿಂದೂ ಸೇನೆ ನಂತರ ಶ್ರೀ ಪ್ರವೀಣ್ ವಾಲೆ ಮತ್ತು ಅಂದು ನಮ್ಮೊಂದಿಗೆ ಇದ್ದಂತಹ ಅನೇಕ ಹಿರಿಯ ನಾಯಕರುಗಳ ನೇತೃತ್ವದಲ್ಲಿ ಶ್ರೀರಾಮ ಸೇನೆ ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದು, ಆ ಸಂದರ್ಭದಲ್ಲಿ ಬಿಜೆಪಿ, ಸಂಘಪರಿವಾರ, ಕಾಂಗ್ರೆಸ್‌ ಹಾಗೂ ಅನೇಕ ವಿರೋಧಿಗಳನ್ನು ಎದುರಿಸಿ ಹಲವಾರು ಕೇಸುಗಳನ್ನು ಹಾಕಿಸಿಕೊಂಡು ನಾವುಗಳು ಮಡಿದ ಅಲ್ಪ ಹಣದಿಂದ ಈ ಸಂಘಟನೆಯನ್ನು ಬೆಳೆಸಿಕೊಂಡು ಬಂದಿದ್ದೇವೆ. ಆದರೆ ಕೊನೆಗೆ ಸಂಘಟನೆಯನ್ನು ಬೆಳೆಸಿದಂತಹ ನಾಯಕರನ್ನೇ ಅವಮಾನಿಸಿ ಸಂಘಟನೆಯಿಂದ ಹೊರಗಿಡುವಂತಹ ಪ್ರಕ್ರಿಯೆಗಳು ನಡೆಯಿತು. ಆದರೂ ಈ ಎಲ್ಲಾ ಬೆಳವಣಿಗೆಗಳನ್ನು ನೋಡಿಯೂ ಕೂಡಾ ಸಂಘಟನೆಯ ನಿಷ್ಠಾವಂತ ಕಾರ್ಯಕರ್ತರು ತಾವು ತೆಗೆದುಕೊಳ್ಳುವ ನಿರ್ಧಾರದಿಂದ ನಾವೇ ಕಟ್ಟಿ ಬೆಳೆಸಿದ ಸಂಘಟನೆಗೆ ಹಾನಿ ಆಗಬಾರದೆಂದು ಸುಮ್ಮನಿದ್ದು ಇದುವರೆಗೂ ಸಹಿಸಿಕೊಂಡು ಬಂದಿರುತ್ತೇವೆ.ಆದರೆ ಇತ್ತೀಚಿನ ದಿನಗಳಲ್ಲಿ ಸುಮಾರು 3 ತಿಂಗಳ ಅವಧಿಯಲ್ಲಿ ಆಗಿರುವಂತಹ ಘಟನೆಗಳು ನಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿರುತ್ತವೆ. ರಾಜ್ಯದ ಎಲ್ಲಾ ಕಡೆಗಳಿಂದ ಕಾರ್ಯಕರ್ತರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಆಗುತ್ತಿರುವಂತಹ ಬೆಳವಣಿಗೆಗಳ ಬಗ್ಗೆ ಬಹಳಷ್ಟು ಅಸಮಾಧಾನ ಹೊಂದಿದ್ದು, ಇವರುಗಳು ತೆಗೆದುಕೊಂಡಿರುವ ಹಲವು ಪ್ರಮುಖ ನಿರ್ಧಾರಗಳ ಬಗ್ಗೆ ಉಡುಪಿ ಜಿಲ್ಲೆಯ ಪ್ರಮುಖರಲ್ಲಿ ಆಗಲೀ ನಮ್ಮ ಸಂಘಟನೆಯ ಕಾರ್ಯಕರ್ತರಲ್ಲಿ ಆಗಲಿ ಚರ್ಚೆ ಮಾಡದೇ ಏಕಪಕ್ಷೀಯವಾಗಿ ಇವರು ತೆಗೆದುಕೊಂಡ ನಿರ್ಧಾರಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವಂತಹ ನಿರ್ಧಾರವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಯ ಕೆಲವು ಪದಾಧಿಕಾರಿಗಳು ಹಾಗು ಕಾರ್ಯಕರ್ತರು ತೀವ್ರತರದ ಅಸಮಾಧಾನವನ್ನು ವ್ಯಕ್ತಪಡಿಸಿರುತ್ತಾರೆ.ಪ್ರಾರಂಭದ ದಿನಗಳಲ್ಲಿ ಶ್ರೀ ಪ್ರಮೋದ್ ಮುತಾಲಿಕ್‌ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದವರಲ್ಲಿ ನಾನೂ ಕೂಡ ಒಬ್ಬ, ಆದರೆ ಅವರಿಗೆ ಈ ಸ್ಥಾನಮಾನವನ್ನು ಬಹಳ ಗೌರವಪೂರ್ವಕವಾಗಿ ಸಿಗಬೇಕೆಂದು ಶ್ರೀರಾಮ ಸೇನೆ ಸಂಘಟನೆ ಮತ್ತು ನಮ್ಮ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆ, ಇನ್ನು ಮುಂದಕ್ಕೆ ಆಗದಂತೆ ಎಲ್ಲಾ ಹಿಂದೂ ಸಂಘಟನೆಯ ನಾಯಕರನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ನಾವು ಈ ಮೊದಲಿನಿಂದಲೂ ಹೇಳುತ್ತಾ ಬಂದಿರುತ್ತೇವೆ.ಆದರೆ ಸುಮಾರು 3 ತಿಂಗಳಿನ ಹಿಂದೆ ಕಾರ್ಕಳದ ಒಬ್ಬ ಉದ್ಯಮಿ ಹಾಗು ನನ್ನ ಚಿರಪರಿಚಿತ ವ್ಯಕ್ತಿಯೊಬ್ಬ ಸಂಘಟನೆಯ ಬಗ್ಗೆ ಮತ್ತು ಶ್ರೀ ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಬಹಳ ಅನುಕಂಪವನ್ನು ತೋರಿಸುವ ನಾಟಕವನ್ನು ಮಾಡಿ ಸಹಾಯ ಮಾಡುವ ನೆಪದಲ್ಲಿ ಮಣಿಪಾಲದ ನನ್ನ ಮನೆಗೆ ಬಂದು ಶ್ರೀ ಪ್ರಮೋದ್ ಮುತಾಲಿಕ್ ಅವರ ಬಳಿ ಸುಮಾರು 1 ಗಂಟೆ ಮಾತಾಡಿರುತ್ತಾರೆ. ಅದರ ನಂತರದ ಬೆಳವಣಿಗೆ ನಮ್ಮೆಲ್ಲರನ್ನು ದಂಗು ಬಡಿಸಿದಂತಾಗಿದೆ. ಪ್ರತೀ ಬಾರಿ ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ನಾಯಕರಾದ ಶ್ರೀ ಪ್ರಮೋದ್ ಮುತಾಲಿಕ್ ಅವರು ಮುಂಚಿತವಾಗಿ ನಮಗೆ ತಿಳಿಸಿ ಬರುತ್ತಿದ್ದು, ನಮ್ಮ ಮನೆಯಲ್ಲೇ ವಾಸ್ತವ್ಯ ಮಾಡುತ್ತಿದ್ದರು. ಆದರೆ ಕಾರ್ಕಳದ ಉದ್ಯಮಿಯನ್ನು ಭೇಟಿಯಾದ 10 ದಿನಗಳ ಬಳಿಕ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಪ್ರವಾಸವನ್ನು ಕೈಗೊಂಡಿದ್ದು, ಸದ್ರಿ ಜಿಲ್ಲೆಗಳ ವಿಭಾಗದ ಅಧ್ಯಕ್ಷನಾದ ನನಗಾಗಲೀ ಅಥವಾ ಈ ಎರಡೂ ಜಿಲ್ಲೆಗಳ ಅಧ್ಯಕ್ಷರಿಗಾಗಲೀ ತಿಳಿಸದೇ ನೇರವಾಗಿ ಉರ್ಕಳದ ಉದ್ಯಮಿಯ ಉಸ್ತುವಾರಿಯಲ್ಲಿ ತಮ್ಮ 1 ದಿನದ ಪ್ರವಾಸವನ್ನು ಕೈಗೊಂಡಿರುತ್ತಾರೆ. ನಂತರ ಈ ಬೆಳವಣಿಗೆಯಿಂದ ಬೇಸತ್ತ ಮುಗಳೂರು : ಮತ್ತು ಉಡುಪಿ ಜಿಲ್ಲೆಯ ಚಾಧಿಕಾರುಗಳು ಮತ್ತು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಮುಂದಾದಾಗ ಇನ್ನು ಮುಂದೆ ಈ ರೀತಿಯ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂಬ ಭರವಸೆಯನ್ನು ಶ್ರೀ ಪ್ರಮೋದ್ ಮುತಾಲಿಕ ಅವರು ನೀಡಿರುತ್ತಾರೆ. ಈ ಘಟನೆಯ ಬಳಿಕ ಪ್ರಮೋದ್‌ ಮುತಾಲಿಕ ಅವರು ಕಾರ್ಕಳ ಕ್ಷೇತ್ರದ ವಿಧಾನ ಸಭೆಗೆ ಸ್ಪರ್ಧಿಸುವುದಾಗಿ ನಿರ್ಧಾರ ಮಾಡಿರುತ್ತಾರೆ. ಶ್ರೀರಾಮ ಸೇನೆಯ ಉಡುಪಿ-ಮಂಗಳೂರು ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಆಶಯದಂತೆ ಈ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ ಅವರಿಗೆ ಬಿಜೆಪಿ ಪಕ್ಷದ ಹಿರಿಯ ನಾಯಕರು ಯಾವುದಾದರೂ ಒಂದು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೇ, ಪ್ರಮೋದ್ ಮುತಾಲಿಕ್ ಅವರಿಗೆ ಬೆಂಬಲಿಸುವ ಮುಖಾಂತರ ಅವರು ಈವರೆಗೆ ಹಿಂದುತ್ವಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಕ್ಕಾಗಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ಗೌರವಿಸಬೇಕೆಂಬುದು ಶ್ರೀರಾಮ ಸೇನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಬೇಡಿಕೆಯಾಗಿತ್ತು.ಆದರೆ ಕೊನೆಯ ಗಳಿಗೆಯಲ್ಲಿ ಕಾರ್ಕಳದ ಉದ್ಯಮಿಯ ಜೊತೆಗೆ ಒಬ್ಬ ವಕೀಲ ಸೇರಿಕೊಂಡು, ಕಾರ್ಕಳದ ಶಾಸಕರಾದ ಶ್ರೀ ಸುನೀಲ್ ಕುಮಾರ್ ಅವರ ಮೇಲಿನ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳಲು ಪ್ರಮೋದ್‌ ಮುತಾಲಿಕ್ ಅವರನ್ನು ಕಾರ್ಕಳ ವಿಧಾನಸಭೆಗೆ ಸ್ಪರ್ಧಿಸುವಂತೆ ಒತ್ತಾಯಪೂರ್ವಕವಾಗಿ ಒಪ್ಪಿಸಿದ್ದು, ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಕಾರ್ಕಳದಲ್ಲಿ ರೋಲ್ ಕಾಲ್ ಮಾಡಿದ್ದಾರೆ ಎಂದು ನಮ್ಮ ಸಂಘಟನೆಗೆ ಸುಳ್ಳು ಆರೋಪ ಮಾಡಿ ಅವಮಾನ ಮಾಡಿದ್ದರು. ಈ ಬಗ್ಗೆ ವಿಭಾಗ ಅಧ್ಯಕ್ಷನ ನೆಲೆಯಲ್ಲಿ ನಾನು ಪ್ರಮೋದ್‌ ಮುತಾಲಿಕ್‌ ಅವರಲ್ಲಿ ಚರ್ಚಿಸಿದಾಗ, ಅವರು ಈ ಗಂಭೀರ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ನಿರ್ಲಕ್ಷಿಸಿದಾಗ ನನಗೆ ಬಹಳ ಆಘಾತವಾಯಿತು. ಅಲ್ಲದೇ `ಶ್ರೀರಾಮ ಸೇನೆಯ ಹೆಸರಿನ ಬದಲು “ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ’ ಎಂದು ಕಾರ್ಕಳದಲ್ಲಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು ನಮ್ಮನ್ನು ಯಾವುದೇ ಸಭೆಗೆ ಆಗಲೀ ಅಥವಾ ಅಲ್ಲಿ ನಡೆಯುವ ಯಾವುದೇ ವಿಚಾರದ ಬಗ್ಗೆ ಮಾಹಿತಿಯನ್ನು ನೀಡದೇ ನಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ಚರ್ಚಿಸದೇ ಶ್ರೀ ರಾಮ ಸೇನೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಮತ್ತು ಕಾರ್ಕಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಇವರ ನಿಲುವಿನಿಂದ ಒಗ್ಗಟ್ಟಿನಿಂದ ಇದ್ದ ನಮ್ಮ ಸಂಘಟನೆಯ ಕಾರ್ಯಕರ್ತರು ಇವತ್ತು ನಮ್ಮ ನಮ್ಮೊಳಗೆ ಕಚ್ಚಾಡುವಂತಹ ದುರ್ಗತಿ ಬಂದಿರುತ್ತದೆ. ಸುಮಾರು ವರ್ಷಗಳಿಂದ ಹಿಂದೂ ಯುವಕರಿಗೆ ಸಂಘಟನೆಗೆ ಸೇರಲು ಪ್ರೇರೇಪಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಬಂದಿದ್ದ ನಮ್ಮ ಸಂಘಟನೆಯನ್ನು ಯಾರೋ ಇಬ್ಬರು ನಮ್ಮ ಸಂಘಟನೆಗೆ ಯಾವುದೇ ರೀತಿಯ ಬೆಂಬಲವನ್ನು ಈ ಹಿಂದೆ ಕೊಡದೇ ಇದ್ದು, ಹಿಂದೆ ನಮ್ಮನ್ನು ವಿರೋಧಿಸುತ್ತಿದ್ದವರ ಜೊತೆಗೆ ಅವರ ವೈಯಕ್ತಿಕ ದ್ವೇಷ ಸಾಧನೆಗೆ ಪ್ರಮೋದ್ ಮುತಾಲಿಕ ಅವರನ್ನು ಬಳಸಿಕೊಂಡಿರುವುದು ಖಂಡನೀಯ.
    ತಮ್ಮ ಕಷ್ಟಕಾಲದಲ್ಲಿ ತಮ್ಮೊಂದಿಗೆ ಇದ್ದಂತಹ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಹಿಂದೂ ಯುವಕರನ್ನು ಸಂಘಟಿಸುವ ತಾವು ಇವತ್ತು ನಮ್ಮನಮ್ಮಲ್ಲೇ ಕಚ್ಚಾಡುವಂತೆ ಮಾಡಿರುವುದು ಬೇಸರ ತಂದಿದೆ. ತಮ್ಮ ಈ ನಿಲುವಿನಿಂದ ಬಹಳಷ್ಟು ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಪ್ರಮೋದ್ ಜೀ ಹಿಂದೂ ಯುವಕರೇ ತಮ್ಮ ಆಸ್ತಿ, ಎಲ್ಲಾ ಹಿಂದೂ ಸಂಘಟನೆಗಳೂ ಕೂಡ ತಮ್ಮನ್ನು ಗುರುಗಳೇ ಎಂದು ಪ್ರೀತಿಯಿಂದ ಕರೆಯುತ್ತಾರೆ. ತಮ್ಮ ಈ ನಿರ್ಧಾರದಿಂದ ಬಹಳಷ್ಟು ಕಾರ್ಯಕರ್ತರು ಬೀದಿಪಾಲಾಗುತ್ತಾರೆ. ದಯವಿಟ್ಟು ತಾವು ನಮಗೆ ಹಿಂದೂ ಯುವಕರನ್ನು ಒಗ್ಗಟ್ಟಿನಲ್ಲಿ ರುವುದನ್ನು ಕಲಿ, ಈಗ ತಾವೇ ನಮ್ಮ ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡಿರುವುದು ಸರಿಯಲ್ಲ, ಪ್ರಮೋದ್ ಜೀ ನಾವೆಲ್ಲಾ ನಿಮ್ಮ ಅಭಿಮಾನಿಗಳು, ನೀವು ಶಾಸಕರಾಗುವುದು ನಿಮ್ಮ ಕನಸಲ್ಲ, ಅದು ನಮ್ಮಂತಹ ಎಲ್ಲಾ ಹಿಂದೂ ಸಂಘಟನೆಯ ಕಾರ್ಯಕರ್ತರ ಆಶಯ. ಆದರೆ ಅದನ್ನು ಬಹಳ ಗೌರವದಿಂದ ಮತ್ತು ಎಲ್ಲ ಹಿಂದೂ ಕಾರ್ಯಕರ್ತರ ಹಾರೈಕೆಯಿಂದ ಒಗ್ಗಟ್ಟಿನಿಂದ ನಿಮಗೆ ದಕ್ಕಬೇಕ೦ಬುದು ನಮ್ಮ ಆಶಯ.

    ಚಂದ್ರಕಾಂತ್ ಶೆಟ್ಟಿ (ಗೌರವಾಧ್ಯಕ್ಷರು, ಮಂಗಳೂರು ವಿಭಾಗ)

    ಮೋಹನ್ ಭಟ್ ಮಂಗಳೂರು ವಿಭಾಗಧ್ಯಕ್ಷರು

    ಸಂದೀಪ್ ಮೂಡುಬೆಟ್ಟು
    ಕೀರ್ತಿರಾಜ್  (ಪ್ರ.ಕಾರ್ಯದರ್ಶಿ ಉಡುಪಿ ಜಿಲ್ಲೆ) (ಜಿಲ್ಲಾ ಕಾರ್ಯದರ್ಶಿ)

    kerala

    5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್‌..!

    Published

    on

    ಮಂಗಳೂರು ( ಕೇರಳ ) : ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ಐದು ವರ್ಷದಲ್ಲಿ ಸಂಸ್ಥೆಯ 20 ಕೋಟಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾಯಿಸಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಧನ್ಯ ಮೋಹನ್ ಎಂಬ ಮಹಿಳೆ ಈ ವಂಚನೆ ನಡೆಸಿದ್ದಾರೆ.

    ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ಹಣಕಾಸು ಸಂಸ್ಥೆಯ ಖಾತೆಯಿಂದ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಸಂಸ್ಥೆಯ ಆಡಿಟಿಂಗ್ ಸಮಯದಲ್ಲಿ 20 ಕೋಟಿ ಹಣದ ಲೆಕ್ಕಾಚಾರ ಸಿಗದೇ ಇದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ವಂಚಕಿ ಧನ್ಯ ಮೋಹನ್ ತಲೆಮರೆಸಿಕೊಂಡಿದ್ದರು. ಧನ್ಯ ಮೋಹನ್ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್ ಕೂಡ ಜಾರಿ ಮಾಡಿದ್ದರು.

    ಆನ್‌ ಲೈನ್ ಗೇಮಿಂಗ್‌ ಚಟಕ್ಕೆ ಬಲಿಯಾಗಿದ್ದ ಮಹಿಳೆ..!?

    ಕುಟುಂಬಸ್ಥರ ತೀವ್ರ ವಿಚಾರಣೆಯ ಹೊರತಾಗಿಯೂ ಧನ್ಯ ಮೋಹನ್ ಎಲ್ಲಿ ಹೋಗಿದ್ದಾರೆ ಅನ್ನೋ ವಿಚಾರದ ಮಾಹಿತಿ ದೊರೆತಿರಲಿಲ್ಲ. ಆದ್ರೆ, ಇದೀಗ ಆರೋಪಿ ವಂಚಕಿ ಧನ್ಯ ಮೋಹನ್ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಶರಣಾಗತಳಾಗಿದ್ದಾಳೆ.
    ಧನ್ಯ ಮನೆಯವರು ಆರ್ಥಿಕವಾಗಿ ಅಷ್ಟೊಂದು ಸದೃಢವಾಗಿಲ್ಲವಾಗಿದ್ದರೂ ಧನ್ಯ ಮೋಹನ್ ಈ ಹಣ ಎಲ್ಲಿ ಹೂಡಿಕೆ ಮಾಡಿದ್ದಾರೆ ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ, ಆಕೆ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು ಕಳೆದುಕೊಂಡಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ. ಅದೇನೆ ಇದ್ರೂ ಸದ್ಯ ಆಕೆಯ ವಿಚಾರಣೆಯ ಬಳಿಕ ಹಣ ಏನಾಯ್ತು ಅನ್ನೋ ವಿಚಾರ ಬಹಿರಂಗವಾಗಬೇಕಾಗಿದೆ.

    Continue Reading

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    LATEST NEWS

    WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?

    Published

    on

    ಮಂಗಳೂರು/ಮಹಾರಾಷ್ಟ್ರ : ಬಸ್ಸಿನಲ್ಲಿ ಸೀಟಿಗಾಗಿ ಹಂಬಲಿಸೋರು ಅನೇಕ ಮಂದಿ ಇದ್ದಾರೆ. ಅದೂ ಸಿಎಂ ಕುರ್ಚಿಗಾಗಿ ನಡೆಯೋ ರಾಜಕೀಯ ಗುದ್ದಾಟಕ್ಕಿಂತಲೂ ಮಿಗಿಲು. ಬಸ್ ಬಂದು ನಿಂತಾಗ ಪರಸ್ಪರ ತಳ್ಳಾಡಿ ಸೀಟು ಹಿಡಿಯುವ ದೃಶ್ಯ ಸಾಮಾನ್ಯ. ಕೆಲವೊಮ್ಮೆ ಬಸ್ ಹತ್ತಿದವರು ತಮ್ಮರಿಗಾಗಿ ಕರ್ಚೀಫ್ ಹಾಕಿಡೋದೂ ಇದೆ. ಇನ್ನೂ ಕೆಲವರು ಸೀಟ್ ಹಿಡಿಯಲು ಕಿಟಕಿಯಿಂದಲೂ ಕರ್ಚೀಫ್ ಹಾಕೋದು, ಬ್ಯಾಗ್ ಇಡುವ ದೃಶ್ಯ ಕಾಣಲು ಸಿಗುತ್ತದೆ.
    ಆದರೆ, ಇಲ್ಲೊಬ್ಬ ಸೀಟಿಗಾಗಿ ಕಿಟಕಿಯಿಂದ ಬಸ್ ಏರಲು ಹೋಗಿ ಅವಾಂತರವಾಗಿದೆ. ಸದ್ಯ ಆ ವಿದ್ಯಾರ್ಥಿಯ ಎಡವಟ್ಟಿನ ವೀಡಿಯೋ ವೈರಲ್ ಆಗುತ್ತಿದೆ.

    ಸೀಟ್ ಗಾಗಿ ಎಡವಟ್ಟು :
    ಈ ವೈರಲ್ ದೃಶ್ಯ ನಡೆದಿರೋದು ಮಹಾರಾಷ್ಟ್ರದಲ್ಲಿ. ಅವನು ಮಾಮೂಲಿನಂತೆ ಬಾಗಿಲಿನಿಂದ ಬಸ್ ಏರಬಹುದಿತ್ತು. ಆದರೆ, ಸರ್ಕಸ್ ಮಾಡಲು ಹೋಗಿ ಎಡವಟ್ಟಾಗಿದೆ.

    ಇದನ್ನೂ ಓದಿ : ವಿದ್ಯುತ್ ಇಲ್ಲದೆ ಪರದಾಡುತ್ತಿರುವ ಮಲೆನಾಡು: ಮೊಬೈಲ್ ಫುಲ್ ಚಾರ್ಜ್‌ಗೆ 60 ರೂ., ಹಾಲ್ಫ್‌ಗೆ 40 ರೂ.
    ಆ ವಿದ್ಯಾರ್ಥಿ ಕಿಟಕಿಯ ಮೂಲಕ ಬಸ್ ಏರಿದ್ದಾನೆ. ಆದರೆ, ಕಿಟಕಿ ಸಮೇತ ಕೆಳಗೆ ಬಿದ್ದಿದ್ದಾನೆ.

    ರೋಹಿತ್‌ (avaliyapravasi) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಸೀಟ್ ಗಾಗಿ ವಿದ್ಯಾರ್ಥಿ ಕಿಟಕಿ ಏರುವ ಸರ್ಕಸ್ ಮಾಡಿದ್ದಾನೆ. ಕಿಟಕಿ ಗ್ಲಾಸ್ ಸರಿಸಿ ಒಳ ಹೋಗಲು ಪ್ರಯತ್ನಿಸುತ್ತಿದ್ದಂತೆ, ಕಿಟಕಿ ಸಹಿತ ಕೆಳಗೆ ಬಿದ್ದಿದ್ದಾನೆ. ಈ ವೀಡಿಯೋವನ್ನು ಅಲ್ಲೇ ಇದ್ದ ಇನ್ನೊಂದು ಬಸ್ ನಲ್ಲಿದ್ದ ವ್ಯಕ್ತಿ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

    ಜುಲೈ 22 ರಂದು ಈ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.

    Continue Reading

    LATEST NEWS

    Trending