ಬಿಜೆಪಿ ಕಾರ್ಯಕಾರಿಣಿಗೆ ಬಂದಿರುವ ಸಿಎಂಗೆ ಕಟೀಲು ದೇವಿಯ ಫಲಕ ಉಡುಗೊರೆ..!
ಮಂಗಳೂರು : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ ಬಾರಿ ಉಡುಪಿಗೆ ಬಂದಾಗ ಪೇಜಾವರ ಶ್ರೀ ಯವರು ಮೋದಿಜೀಯವರಿಗೆ ಶ್ರೀ ಕೃಷ್ಣನ ಮೂರ್ತಿ ಇರುವ ಫಲಕ ನೀಡಿದ್ದರು.
ಆ ಉಡುಗೊರೆ ಮೋದಿಯವರಿಗೆ ಮರೆಯದ ಕಾಣಿಕೆಯಾಗಿತ್ತು.
ಅದೇ ರೀತಿಯಲ್ಲಿ ನಾಳೆ ಮಂಗಳೂರಿನಲ್ಲಿ ನಡೆಸಲಾಗುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸುತ್ತಿರುವ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಮೂರ್ತಿ ಇರುವ ಫಲಕವನ್ನು ನೀಡಲಿದ್ದಾರೆ.
ನಮ್ಮ ಬಿ.ಎಸ್.ಯಡಿಯೂರಪ್ಪನವರಿಗೆ ಅದೊಂದು ಮರೆಯದ ಕಾಣಿಕೆಯಾಗಿ ಬಹಳ ಕಾಲ ನೆನಪಲ್ಲಿ ಉಳಿಯುವಂತಾಗಲಿದೆ.