Connect with us

LATEST NEWS

ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌

Published

on

ಮಂಗಳೂರು: ಯಾರಿಗೊತ್ತು ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.


ಇಂದು ಕುತ್ತಾರಿನ ಕೊರಗಜ್ಜ ಕ್ಷೇತ್ರದ ನಡೆ ಸಮಾರೋಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು.

ಒಂದಲ್ಲ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು.

ಇದು ಯಾಕೆ ಅಂತ ನಾನು ಈ ಬಗ್ಗೆ ಸ್ಪಷ್ಟೀಕರಣ ಕೊಡ್ತೇನೆ. ಈ ಮೂರು ಬಣ್ಣದ ಧ್ವಜ ಯಾರು ನಿರ್ಮಾಣ ಮಾಡಿದ್ದು, ಇದಕ್ಕೆ ಮೊದಲು ಯಾವ ಧ್ವಜ ಇತ್ತು.

ಮೊದಲು ಬ್ರಿಟಿಷರ ಧ್ವಜ ಇತ್ತು, ಅದಕ್ಕೂ ಮೊದಲು ಹಸಿರು ನಕ್ಷತ್ರ, ಚಂದ್ರನ ಧ್ವಜ ಇತ್ತು. ಅಕಸ್ಮಾತ್ ರಾಜ್ಯಸಭೆ, ಪಾರ್ಲಿಮೆಂಟ್ ನಲ್ಲಿ ಮೂರನೆಯವರ ಬಹುಮತ ಪಡೆದ್ರೆ ಧ್ವಜ ಬದಲು ಮಾಡಬಹುದು.

ಧ್ವಜ ಬದಲು ಮಾಡೋಕೆ ಆಗಲ್ಲ ಅಂತ ಏನೂ ಇಲ್ಲ. ಹೀಗೆಯೇ ಮುಂದುವರೆದ್ರೆ ಹಿಂದೂ ಸಮಾಜ ಒಟ್ಟಾಗುತ್ತೆ. ಆಗಲೇ ಬೇಕು. ರಘಪತಿ ರಾಘವ ರಾಜರಾಮ್‌ ಈಶ್ವರ ಅಲ್ಲಾ ತೇರೆ ನಾಮ್‌ ಎಂಬ ಭಜನೆ ತುಂಡು ಮಾಡಿದವರು ಕಾಂಗ್ರೆಸ್‌ನವರು. ಬ್ಯಾರಿಗಳು ಹೇಳಿದ್ರಾ ಈಶ್ವರ್‌ ಅಲ್ಲಾ ತೇರೆ ನಾಮ್‌. ಬ್ಯಾರಿಗಳು ಹೇಳಿದ್ರು ಈಶ್ವರ್‌ ಅಲ್ಲವೇ ಅಲ್ಲಾ ಅಂದ್ರು.

ಬ್ಯಾರಿಗಳು ಭಜನೆ ಹೇಳಿದ್ದು ಕೇಳಿದ್ರಾ. ಇವತ್ತು ಕಾಶ್ಮೀರ ಫೈಲ್ಸ್ ನಲ್ಲಿ ನೀವು ನೋಡೋದು ಸಣ್ಣ ತುಂಡಷ್ಟೇ. ಲಕ್ಷ ಲಕ್ಷ ಹಿಂದೂಗಳನ್ನು ಹತ್ಯೆ ಮಾಡಿದರು. ಕಾಡುಮೃಗದಂತೆ ಅತ್ಯಾಚಾರ ಮಾಡಿದರು. ಹಸುಗಳನ್ನು ಕಡಿದರು.

ದೇವಸ್ಥಾನ, ಮಠ ಮಂದಿರ ಉರುಳಿಸಿದರು. ಗೊತ್ತಾ ಇತಿಹಾಸ. ಇಂತಹ ಬರ್ಬರ ಹತ್ಯೆ ಮಾಡಿದಾಗ ಹೇಡಿ, ದುರ್ಬಲ,ಷಂಡ ಕಾಂಗ್ರೆಸ್‌ ಒಪ್ಪಿಕೊಂಡಿತು.

ಇವತ್ತು ಅದೇ ರೀತಿ ಹಿಜಾಬ್‌ ಬಂದಿದೆ. ಅವರಿಗೆ ಕಿತಾಬ್‌ ಬೇಡ ಹಿಜಾಬ್‌ ಬೇಡ ಎಂದು ಹೇಳಿದರು.

‘ಬೈಬಲ್, ಕುರಾನ್ ನಿಮ್ಮ ನಿಮ್ಮ ಮನೆಗಳಲ್ಲಿ ಇಟ್ಟುಕೊಳ್ಳಿ’

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬೈಬಲ್, ಕುರಾನ್ ನಿಮ್ಮ ನಿಮ್ಮ ಮನೆಗಳಲ್ಲಿ ಇಟ್ಟುಕೊಳ್ಳಿ. ಎಲ್ಲರನ್ನು ಕೊಲ್ಲು ಎಂದು ಹೇಳುವ ಕುರಾನ್ ಹಾಗೂ ಬೈಬಲ್ ಗೆ ವಿಶ್ವ ಹಿಂದೂ ಪರಿಷತ್ ನ ಬಹಿಷ್ಕಾರ ಇದೆ ಎಂದು ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದ್ದಾರೆ.
ಭಗವದ್ಗೀತೆ ಇಡೀ ಶಾಲೆಗಳಲ್ಲಿ, ಎಲ್ಲರ ಮನೆ ಮನೆಗಳಲ್ಲಿ ನಡೆಯಬೇಕು. ಅದು ಈ ದೇಶದ ಅಂತಃಸತ್ವ ಎಂದಿದ್ದಾರೆ. ಗುಜರಾತಿನಂತೆ ಕರ್ನಾಟಕ ರಾಜ್ಯದ ಶಾಲೆಗಳಲ್ಲೂ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸಿ. ಗುಜರಾತಿನ ಶಾಲೆಗಳಲ್ಲಿ ಭಗವದ್ಗೀತೆ ಕಲಿಕೆ ಆರಂಭವಾಗಿದೆ.ಕರ್ನಾಟಕದ ಶಾಲೆಗಳಲ್ಲೂ ಸರಕಾರ ಭಗವದ್ಗೀತೆ ಕಲಿಸಲು ಮುಂದಾಗಿರುವುದು ಒಳ್ಳೆಯ ಕಾರ್ಯ. ಹಳೆಯ ಕಾಲವಾದ ಹಿಜಾಬಿನೆಡೆಗೆ ಹೋಗದೆ ಕಿತಾಬಿನ ಕಡೆಗೆ ಹೋಗೋಣ ಎಂದು ಕರೆ ನೀಡಿದ್ದಾರೆ.

DAKSHINA KANNADA

ಯುವರಾಜ್ ಸಿಂಗ್ ಹಳೇ ಸೀಕ್ರೆಟ್ ಬಯಲು..! ರೋಹಿತ್ ಶರ್ಮಾ ಹೇಳಿದ ಕಥೆ..!

Published

on

ಮಂಗಳೂರು ( ಮುಂಬೈ ) : ಕಪಿಲ್ ಶರ್ಮಾ ಅವರ ಸ್ಟ್ಯಾಂಡ್‌ ಅಪ್ ಕಾಮಿಡಿ ಶೋದಲ್ಲಿ ಕಟ್ ಮಾಡಿದ್ದ ಸೀನ್‌ ಒಂದು ಈಗ ರಿಲೀಸ್ ಆಗಿದೆ. ಎರಡು ವಾರಗಳ ಹಿಂದೆ ಕ್ರಿಕೆಟರ್ ರೋಹಿತ್‌ ಶರ್ಮಾ ಮತ್ತು ಶ್ರೇಯಸ್ಸ ಐಯ್ಯರ್ ಜೊತೆ ಕಪಿಲ್ ಶರ್ಮಾ ಶೋದಲ್ಲಿ ಭಾಗವಹಿಸಿದ್ದರು. ಆದ್ರೆ ಶೋದಲ್ಲಿ ಟೆಲಿಕಾಸ್ಟ್‌ ಆಗದೇ ಇದ್ದ ಕೆಲವೊಂದು ಸೀಕ್ರೆಟ್ ಈಗ ಬಯಲಾಗಿದೆ.

ಐಪಿಎಲ್‌ ಪಂದ್ಯಾಟದ ನಡುವೆಯೂ ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಕೆಕೆಆರ್‌ ಕ್ಯಾಪ್ಟನ್‌ ಶ್ರೇಯಸ್ ಐಯ್ಯಾರ್ ಕಾಮಿಡಿ ಶೋದಲ್ಲಿ ಭಾಗವಹಿಸಿದ್ದಾರೆ. ಇನ್ನು 2024 ರ ಅಂತ್ಯದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡ ತೊರೆಯುವ ಸಾಧ್ಯತೆ ಇದೆ ಅಂತ ಚರ್ಚೆಗಳು ನಡಿತಾ ಇದೆ. ಹಾರ್ದಿಕ್ ಪಾಂಡ್ಯ ಜೊತೆಗಿನ ಭಿನ್ನಾಭಿಪ್ರಾಯದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಇಷ್ಟೆಲ್ಲಾ ಇರುವಾಗಲೇ ರೋಹಿತ್ ಶರ್ಮಾ ಕಾಮಿಡಿ ಶೋದಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗಳಿಗೆ ಖುಷಿ ನೀಡಿದ್ದಾರೆ.

ಕಪಿಲ್ ಶರ್ಮಾರ ಸ್ಟ್ಯಾಂಡ್ ಅಪ್ ಕಾಮಿಡಿ ಶೋದಲ್ಲಿ ರೋಹಿತ್ ಶರ್ಮಾ ಹಾಗೂ ಶ್ರೆಯಸ್ ಅಯ್ಯಾರ್ ಭಾಗವಹಿಸಿದ್ದಾರೆ. ಈಗಾಗಲೇ ಇದರ ಎಪಿಸೋಡ್ ಪ್ರಸಾರವಾಗಿದ್ದು, ಅದರಲ್ಲಿ ಪ್ರಸಾರ ಆಗದೇ ಇದ್ದ ಕೆಲವೊಂದು ವಿಚಾರವನ್ನು ಕಪಿಲ್ ಶರ್ಮಾ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅನ್‌ ಎಡಿಟೆಡ್ ಎಪಿಸೋಡ್ ಶನಿವಾರ ಪ್ರಸಾರ ಮಾಡೋದಾಗಿ ಹೇಳಿದ್ದಾರೆ.

ಕಪಿಲ್ ಶರ್ಮಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಯುವರಾಜ್ ಸಿಂಗ್ ಅವರ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾ ಸೇರಿದಾಗ ಯುವರಾಜ್ ಸಿಂಗ್ ತನ್ನ ಜೊತೆ ಹೇಗೆ ವರ್ತಿಸಿದ್ರು ಅಂತ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ಸೀನಿಯರ್ ಆಟಗಾರರಂತೆ ಪೋಸ್ ನೀಡಿ ಜ್ಯೂನಿಯರ್ ಆಟಗಾರರ ಮುಂದೆ ಬಿಲ್ಡಪ್ ಕೊಡ್ತಾ ಇದ್ರು ಅಂದಿದ್ದಾರೆ. ಆಟಗಾರರ ಬಸ್‌ ನಲ್ಲಿ ಯುವರಾಜ್ ಅವರ ಸೀಟಿನಲ್ಲಿ ಕುಳಿತ ನನ್ನನ್ನು ಬರೇ ಕಣ್ ಸನ್ನೆಯಿಂದಲೇ ಸೀಟ್‌ನಿಂದ ಎಬ್ಬಿಸಿದ ಘಟನೆಯನ್ನು ವಿವರಿಸಿದ್ದಾರೆ. ಈ ಎಪಿಸೋಡ್ ಬಹಳಷ್ಟು ಕುತೂಹಲ ಕೆರಳಿಸಿದ್ದು , ರೋಹಿತ್ ಶರ್ಮಾ ಫ್ಯಾನ್ಸ್‌ ಎಪಿಸೋಡ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Continue Reading

LATEST NEWS

Watch Video..ಓಪನ್ ಆಗಿ ಡ್ರೆಸ್ ಕಳಚಿದ ಹುಡುಗಿ..! ಅಂಗಡಿಯವನಿಗೆ ಶಾಕ್‌..!

Published

on

ಮಂಗಳೂರು/ದೆಹಲಿ: ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿಯೇ ಇದೆ. ಮೆಟ್ರೋ, ರೈಲ್ವೇ ಸ್ಟೇಷನ್​​​​​ ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಸಾರ್ವಜನಿಕರನ್ನು ಮುಜುಗರಕ್ಕೀಡು ಮಾಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ನಗುತ್ತರಿಸುತ್ತವೆ. ಕೆಲವು ದುಃಖಕ್ಕೀಡು ಮಾಡುತ್ತವೆ. ಇನ್ನೂ ಕೆಲವುಗಳಂತೂ ಅಸಭ್ಯವಾಗಿರುತ್ತವೆ.ಇದೀಗಾ ಅಂತದ್ದೇ ವಿಲಕ್ಷಣ ಘಟನೆಯೊಂದು ದೆಹಲಿಯ ಪಾಲಿಕಾ ಬಜಾರ್‌ನಲ್ಲಿ ನಡೆದಿದೆ.

ಸದ್ಯ ಈ ಮಹಿಳೆಯ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಈ ನಡತೆಗೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಮಹಿಳೆಯೊಬ್ಬಳು ಪಾಲಿಕಾ ಬಜಾರ್‌ನ ಬಟ್ಟೆ ಅಂಗಡಿಗೆ ಹೋಗಿ ಹೊಸ ಬಟ್ಟೆಯನ್ನು ಖರೀದಿಸಿ ಟ್ರಯಲ್ ನೋಡಲೆಂದು ಟ್ರಯಲ್‌ ರೂಮ್‌ಗೆ ಹೋಗುವ ಬದಲು ಬಟ್ಟೆ ಅಂಗಡಿಯ ಪುರುಷ ಸಿಬ್ಬಂದಿಗಳ ಮುಂದೆಯೇ ಬಟ್ಟೆ ಬಿಚ್ಚಿ ಹೊಸ ಬಟ್ಟೆ ತೊಟ್ಟು ಟ್ರಯಲ್ ಮಾಡಿದ್ದಾಳೆ.

ಇಷ್ಟೇ ಅಲ್ಲದೇ ಬಟ್ಟೆ ಬಿಚ್ಚಿರುವುದನ್ನು ವಿಡಿಯೋ ರೆಕಾರ್ಡ್​​ ಕೂಡ ಮಾಡಿದ್ದಾಳೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​​ ಆಗಿದ್ದು, ಮಹಿಳೆಯ ರೀಲ್ಸ್​​​ ಹುಚ್ಚಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Continue Reading

FILM

45 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ

Published

on

ಮಂಗಳೂರು(ಮುಂಬೈ): ಮಂಗಳೂರಿನ ಚೆಲುವೆ ಪೂಜಾ ಹೆಗ್ಡೆ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿ ನಟಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದಾರೆ. ಐಷಾರಾಮಿ ಮನೆ ಖರೀದಿ ಮಾಡಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗ್ತಿದೆ. ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆ ಖರೀದಿ ಮಾಡಿದ್ದಾರೆ.

ಟಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲೀಲಾ ಹವಾ ಜಾಸ್ತಿ ಆದ್ಮೇಲೆ ಬಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರುತ್ತಿದ್ದಂತೆ ಈಗ ತೆಲುಗಿನಲ್ಲಿಯೂ ನಟಿಗೆ ಕರೆ ಬರುತ್ತಿದೆ.

ಶಾಹಿದ್ ಕಪೂರ್ ಜೊತೆ ಹೊಸ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ನಾಗಚೈತನ್ಯ ಮುಂಬರುವ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ನಾನಿ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿದೆ.

Continue Reading

LATEST NEWS

Trending