Connect with us

ಕೇರಳ

ತಂದೆಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಾಲಕ!

Published

on

ಕಾಸರಗೋಡು : ತಂದೆಯ ವಿರುದ್ಧ 7 ವರ್ಷದ ಬಾಲಕನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ತನ್ನ ತಂದೆ ಕೈಕಾಲುಗಳಿಗೆ ಹಲವು ಬಾರಿ ಹೊಡೆದಿದ್ದಾನೆ ಎಂಬುದು ಬಾಲಕನ ಆರೋಪ. ಈ ಬಗ್ಗೆ ಆತ ತನ್ನ ತಾಯಿಯ ಜೊತೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾನೆ.

ದ ಜುವೈನಲ್ ಜಸ್ಟೀಸ್ ಕಾಯ್ದೆ ಪ್ರಕಾರ ತಂದೆ ವಿರುದ್ಧ ಕೇಸು ದಾಖಲಿಸಿದ್ದಾನೆ ಎಂದು ವರದಿಯಾಗಿದೆ.

LATEST NEWS

ಕೇರಳದಲ್ಲಿ ಬಹಿರಂಗವಾಗಿ ಕಾಣಿಸಿದ ನಕ್ಸಲರ ತಂಡ; ಚುನಾವಣೆ ಬಹಿಷ್ಕಾರಕ್ಕೆ ಕರೆ

Published

on

ಕೇರಳ : ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಿಮಲೆ ಅರಣ್ಯದಲ್ಲಿ ನಕ್ಸಲರು ಇದ್ದಾರೆ ಅನ್ನೋ ಅನುಮಾನ ಬಲವಾಗಿತ್ತು. ಹೀಗಾಗಿ ಕೇರಳದ ನಕ್ಸಲ್ ನಿಗ್ರಹ ತಂಡ ನಿರಂತರ ಕೂಂಬಿಂಗ್ ನಡೆಸಿತ್ತು. ಆದ್ರೆ, ನಕ್ಸಲರ ಸುಳಿವು ಪತ್ತೆಯಾಗದ ಕಾರಣ ಕೂಂಬಿಂಗ್ ನಿಲ್ಲಿಸಲಾಗಿತ್ತು. ಆದ್ರೆ, ಇದೀಗ ಲೋಕಸಭಾ ಚುನಾವಣೆ ವೇಳೆ ಮತ್ತೆ ನಕ್ಸಲರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದಾರೆ.


ಚುನಾವಣೆ ಬಹಿಷ್ಕರಿಸಲು ಸೂಚನೆ :

ಮಾವೋವಿಸ್ಟ್ ಜಿಂದಾಬಾದ್ ಎಂಬ ಘೋಷಣೆ ಕೂಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟು ನಾಲ್ವರ ತಂಡ ಚುನಾವಣೆಗೆ ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ. ಗ್ರಾಮಸ್ಥರ ಜೊತೆ ಮಾತನಾಡಿ ಕಳೆದ ನಲುವತ್ತು ವರ್ಷದಿಂದ ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಸರ್ಕಾರ ಗಮನಿಸಿಲ್ಲ. ಇಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಕಷ್ಟ ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಈ ತಂಡದಲ್ಲಿ ಕೇರಳ ರಾಜ್ಯಕ್ಕೆ ಬಹಳಷ್ಟು ವರ್ಷಗಳಿಂದ ತಲೆ ಮರೆಸಿಕೊಂಡಿರುವ ನಕ್ಸಲರು ಇದ್ದರು ಅನ್ನೋ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್ ಇದ್ದು, ಇಲ್ಲಿನ ಕೂಲಿ ಕಾರ್ಮಿಕರ ಜೊತೆ ನಕ್ಸಲರು ಮಾತುಕತೆ ನಡಿಸಿದ ವಿಡಿಯೋ ಈಗ ಪೊಲೀಸರಿಗೆ ಲಭ್ಯವಾಗಿದೆ.

ಇದನ್ನೂ ಓದಿ : ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದರೂ ಏನೂ ಮಾತನಾಡದೆ ಶಸಸ್ತ್ರರಾಗಿದ್ದ ನಕ್ಸಲರು ಮಕ್ಕಿಮಲೆ ಕಾಡಿನೊಳಗೆ ಹೋಗಿ ಕಣ್ಮರೆ ಆಗಿದ್ದಾರೆ.

 

Continue Reading

DAKSHINA KANNADA

ಬತ್ತೇರಿ ಹೆಸರು ‘ಗಣಪತಿ ವೆಟ್ಟಂ’… ಟೀಕೆಗೆ ಗುರಿಯಾದ ಸುರೇಂದ್ರನ್ ಹೇಳಿಕೆ.

Published

on

ಮಂಗಳೂರು ( ವಯನಾಡು ) : ದೇವರ ನಾಡು ಎಂದೇ ಬಿಂಬಿತವಾಗಿರುವ ಕೇರಳದಲ್ಲಿ ಬಿಜೆಪಿ ತನ್ನ ಕಮಲ ಅರಳಿಸಲು ಸರ್ವ ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ, ಈ ಗುರಿಯನ್ನು ಸಾಧಿಸುವುದು ಬಿಜೆಪಿಗೆ ಸವಾಲಿನಂತಿದೆ. ಆದರೆ, ಕೇರಳದಲ್ಲಿ ಪಕ್ಷವು ಧಾರ್ಮಿಕ ನೆಲೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದು, ಈಗ ಎಲ್ಲಾ ಪಕ್ಷಗಳ ಟೀಕೆಗೆ ಗುರಿಯಾಗಿದೆ.

ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ನೀಡಿರುವ ಹೇಳಿಕೆ ಕೇರಳದಲ್ಲಿ ವಿವಾದ ಹುಟ್ಟು ಹಾಕಿದೆ. ವಯನಾಡಿನ ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸಲು ಸೂಚಿಸಿದ್ದಕ್ಕಾಗಿ ಸುರೇಂದ್ರನ್ ಎಲ್ಲಾ ರಾಜಕೀಯ ಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನರೇಂದ್ರ ಮೋದಿಯವರ ಮೂಲಕ ಒತ್ತಡ ಹಾಕಿಸಿ ಬತ್ತೇರಿ ಹೆಸರು ಬದಲಾಯಿಸುವುದಾಗಿ ಹೇಳಿದ್ದಾರೆ.

                ಕೇರಳ ಬಿಜೆಪಿ ರಾಜ್ಯಾಧ್ಯಕ್ಷ. ವಯನಾಡು ಲೋಕಸಭಾ ಅಭ್ಯರ್ಥಿ

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಸುರೇಂದ್ರನ್, ಸುಲ್ತಾನ್ ಬತ್ತೇರಿಯ ನಿಜವಾದ ಹೆಸರು  ‘ಗಣಪತಿ ವೆಟ್ಟಂ’ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಅವರು ಅದೇ ಹೆಸರಿನಿಂದ ಕರೆಯುತ್ತಿರುವುದಾಗಿ ಹೇಳಿದ್ದು, ಮೋದಿಯವರ ನೆರವಿನೊಂದಿಗೆ ಗಣಪತಿ ವಟ್ಟಂ ಎಂದು ಮರುನಾಮಕರಣ ಮಾಡಿಸುವುದಾಗಿ ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಲೀಗ್ ಶಾಸಕ ಪಿ.ಕೆ.ಕುಂಞಲಿ ಕುಟ್ಟಿ ಸುರೇಂದ್ರ ಹೇಳಿಕೆಗೆ ತೆಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸುರೇಂದ್ರನ್ ಗೆಲ್ಲುವ ಅಭ್ಯರ್ಥಿ ಅಲ್ಲ… ಹಾಗೊಂದು ವೇಳೆ ಗೆದ್ದರೂ ಬತ್ತೇರಿ ಹೆಸರು ಬದಲಾಯಿಸಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.

                          ಸುಲ್ತಾನ್ ಬತ್ತೇರಿಯಲ್ಲಿನ ಜೈನ ಮಂದಿರ

ಹೆಸರು ಬದಲಾವಣೆ ವಿಚಾರ ಬಿಜೆಪಿಯ ಕೋಮುವಾದಿ ಅಜೆಂಡಾ ಆಗಿದೆ. ವನ್ಯ ಜೀವಿ ಕಾನೂನಗಳಲ್ಲಿನ ಸಮಸ್ಯೆಯಿಂದ ಹೊರತಾಗಿ ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ನೀಡಲಾಗಿದೆ ಎಂದು ಸಿಪಿಎಂ ಹೇಳಿದೆ. ಇದು ಕೇರಳ ಎಂಬುದು ಎಲ್ಲರಿಗೂ ಗೊತ್ತಿದೆ, ಇಲ್ಲಿ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲು ಸಾದ್ಯವಿಲ್ಲ ಎಂದು ಹೇಳಿದೆ. ಆದ್ರೆ ಕೇರಳದಲ್ಲಿ ಅಸ್ಥಿತ್ವ ಹಿಡಿಯಲು ಬಿಜೆಪಿ ಇಂತಹ ಧರ್ಮ ಧ್ವೇಶದ ಹೇಳಿಕೆ ನೀಡುತ್ತಿದೆ ಎಂದು ಸಿಪಿಎಂ ಸೇರಿದಂತೆ ಹಲವು ಪಕ್ಷಗಳ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

Continue Reading

LATEST NEWS

ಕೇರಳದಲ್ಲಿ ಮತ್ತೊಂದು ಘಟನೆ…! ಎರಡು ಮಕ್ಕಳ ಜೊತೆ ತಾಯಿ ಜೀ*ವಾಂತ್ಯ…!

Published

on

ಕಾಸರಗೋಡು: ಇಬ್ಬರು ಮಕ್ಕಳಿಗೆ ವಿಷ ನೀಡಿ ಕತ್ತು ಹಿಸುಕಿ ಮಕ್ಕಳನ್ನು ಕೊಂ*ದು  ತಾಯಿ ತನ್ನ ಕೈ ನರ ಕತ್ತರಿಸಿಕೊಂಡು ನೇಣು ಬಿಗಿದುಕೊಂಡ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಚಿಮೇನಿಯಲ್ಲಿ ನಡೆದಿದೆ.

suicide

ಮೃತರು ತಾಯಿ ಸಜನಾ, ಹಾಗೂ ಮಕ್ಕಳಾದ ಗೌತಮ್(9ವ) ಹಾಗೂ ತೇಜಸ್(6ವ) ಎಂದು ತಿಳಿದುಬಂದಿದೆ.  ಮೃತ ಸಜನಾ ಪೆರಿಂಗೋವ್‌ ವಯಕ್ಕರ ಪಂಚಾಯತ್‌ನಲ್ಲಿ ಉದ್ಯೋಗಿಯಾಗಿದ್ದರು. ಅವರ ಪತಿ ಟಿ.ಎಸ್.ರಂಜಿತ್‌ ಕೆಎಸ್‌ಇಬಿ ಇಲಾಖೆಯಲ್ಲಿ ಇಂಜೀನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ(ಎ.9) ಮದ್ಯಾಹ್ನದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಸಜನರ ಮಾವ ಶಿವಸಂಕರನ್‌ ಮದ್ಯಾಹ್ನ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಫೋರೆನ್ಸಿಕ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತ ಮಕ್ಕಳು ಚಿಮೇನಿ ವಿವೇಕಾನಂದ ಶಾಲೆಯಲ್ಲಿ 3 ನೇ ಹಾಗೂ ಎಲ್‌ಕೆಜಿಯಲ್ಲಿ ಕಲಿಯುತ್ತಿದ್ದಾರೆ.   ಸಜನಾಳ ಈ ಕೃತ್ಯಕ್ಕೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಆರ್ಥಿಕ ಮುಗ್ಗಟ್ಟು ಅಥವಾ ಕೌಟುಂಬಿಕ ಕಲಹ ಈ ಘಟನೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ..; ಮಗುವಿನ ಹ*ತ್ಯೆ ನಡೆಸಿ ತಾಯಿಯೂ ಆತ್ಮಹ*ತ್ಯೆ..!

ಕಳೆದ ದಿನಗಳ ಹಿಂದೆ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಂ*ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ನಡೆದಿತ್ತು. ಕೈಯ ನರವನ್ನು ತುಂಡರಿಸಿ ಮನೆಯ ಪಕ್ಕ ಮರವೊಂದುಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಮಗುವಿನ ಸಾವಿನಿಂದಾಗಿ ಕಾಸರಗೋಡಿನ ಜನತೆ ಬೆಚ್ಚಿಬಿದ್ದಿದ್ದರು. ಇದೀಗ ಅದೇ ಮಾದರಿಯ ಮತ್ತೊಂದು ಘಟನೆ ಸಂಭವಿಸಿರುವುದು ಆಘಾತಕ್ಕೆ ಕಾರಣವಾಗಿದೆ.

ವಿಡಿಯೋ ನೋಡಿ

Continue Reading

LATEST NEWS

Trending