Connect with us

    LATEST NEWS

    ಪಾರ್ಲಿಮೆಂಟ್‌ನಲ್ಲಿ ಸ್ಮೋಕ್‌ ಬಾಂ*ಬ್ ಪ್ರಕರಣ: ಆರೋಪಿಗಳಿಗೆ ಖಲಿಸ್ಥಾನ್ ನಂಟು..!?

    Published

    on

    ನವದೆಹಲಿ : 2023 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್‌ ಅಧಿವೇಶನಕ್ಕೆ ನುಗ್ಗಿ ಆತಂಕ ಸೃಷ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ. ಪಾರ್ಲಿಮೆಂಟ್ ಒಳಕ್ಕೆ ನುಗ್ಗಿದ್ದ ಇಬ್ಬರು ಯುವಕರು ಘೋಷಣೆ ಕೂಗಿ ಕೈನಲ್ಲಿ ಸ್ಮೋಕ್‌ ಬಾಂ*ಬ್‌ ಹಿಡಿದು ಆತಂಕ ಸೃಷ್ಟಿ ಮಾಡಿದ್ದರು.


    ಇದೇ ವೇಳೆ ಪಾರ್ಲಿಮೆಂಟ್ ಹೊರಗೆ ಕೂಡ ಒಂದು ಯುವತಿ ಹಾಗೂ ಮೂವರು ಯುವಕರು ಇದೇ ರೀತಿ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಮೈಸೂರು ಮೂಲದ ಮನೋರಂಜನ್ ಎಂಬ ಯುವಕನೂ ಭಾಗಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರ ಪಿಎ ಅವರಿಂದ ಪಾಸ್ ಪಡೆದುಕೊಂಡಿದ್ದ.

    ಪನ್ನುನ್ ನೀಡಿದ್ದ ಹೇಳಿಕ ಹಂಚಿಕೊಂಡಿದ್ದ ಆರೋಪಿಗಳು :

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಲಾಗಿದೆ. ಚಾರ್ಜ್‌ ಶೀಟ್‌ನಲ್ಲಿ ಈ ಆರೋಪಿಗಳಿಗೆ ಖಲಿಸ್ಥಾನ ಹೋರಾಟಗಾರರ ಜೊತೆ ಸಂಪರ್ಕ ಇರುವುದಾಗಿ ಅನುಮಾನ ವ್ಯಕ್ತಪಡಿಸಲಾಗಿದೆ. ಖಾಲಿಸ್ತಾನ ಹೋರಾಟದ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ನೀಡಿದ್ದ ಹೇಳಿಕೆಯೊಂದನ್ನು ಆರೋಪಿಗಳು ಹಂಚಿಕೊಂಡಿದ್ದೇ ಈ ಅನುಮಾನಕ್ಕೆ ಕಾರಣವಾಗಿದೆ.

    “ಭಾರತದ ಪಾರ್ಲಿಮೆಂಟ್‌ ಅಲ್ಲಾಡಿಸಲಾಗುವುದು” ಎಂದು ಹೇಳಿಕೆ ನೀಡಿದ್ದ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯನ್ನು ಆರೋಪಿಗಳು ಹಂಚಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.

    ಪ್ರಮುಖ ಆರೋಪಿಯಾಗಿರುವ ಮೈಸೂರಿನ ಮನೋರಂಜನ್ ಮೊಬೈಲ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯ ವಿಡಿಯೋ ಲಿಂಕ್ ಪೊಲೀಸರಿಗೆ ಸಿಕ್ಕಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಈ ಪ್ರಕರಣದಲ್ಲಿ ಆರೋಪಿಯ ಮೊಬೈಲ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯ ವಿಡಿಯೋ ಲಿಂಕ್ ಸಿಕ್ಕಿರುವುದನ್ನು ಚಾರ್ಜ್‌ ಶೀಟ್‌ನಲ್ಲಿ ನಮೂದಿಸಲಾಗಿದೆ.
    ಈ ವೀಡಿಯೋವನ್ನು ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೂ ಈ ಹೇಳಿಕೆಗೂ ಸಂಬಂಧ ಇರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಿ ಸಪ್ಲಿಮೆಂಟರಿ ಚಾರ್ಜ್‌ ಶೀಟ್‌ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

    ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖ ಇರುವ ಪ್ರಮುಖ ವಿಚಾರ :

    ಚಾರ್ಜ್‌ ಶೀಟ್‌ನಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರೂ ಕೂಡಾ ಉಲ್ಲೇಖಿಸಲಾಗಿದ್ದು, ಪಾಸ್ ಅವರ ಹೆಸರಿನಲ್ಲಿ ಪಡೆದುಕೊಂಡಿರುವುದನ್ನು ದೆಹಲಿ ಪೊಲೀಸರು ಖಚಿತ ಪಡಿಸಿದ್ದಾರೆ.

    ಪಾರ್ಲಿಮೆಂಟ್ ಒಳಗೆ ನುಸುಳಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಅವರು ಧರಿಸಿದ್ದ ಶೂ ಎರಡು ಲೇಯರ್‌ನ ಸೋಲ್ ಹೊಂದಿದ್ದು, ಅದರ ನಡುವೆ ಸ್ಮೋಕ್ ಬಾಂಬ್ ಇರಿಸಿದ್ದರು. ಹೀಗಾಗಿ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಾರದೆ ಅವರ ಅಮಾನತು ಆಗಿತ್ತು.

    ಇದನ್ನೂ ಓದಿ : ಬಿಳಿ ಅಕ್ಕಿ vs ಕೆಂಪಕ್ಕಿ: ನಿಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು

    ಸಾಗರ್ ಶರ್ಮಾ ಹಾಗೂ ಮನೋರಂಜನ್‌ ಇಬ್ಬರೂ ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ. ಉಳಿದವರು ಕೇವಲ ಒಂದು ವರ್ಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿದ್ದಾರೆ. ಆರೋಪಿಗಳ ಲ್ಯಾಪ್‌ಟಾಪ್ ಮೊಬೈಲ್‌ ನ ಎಫ್‌ಎಸ್‌ಎಲ್‌ ವರದಿ ಬಂದಿದ್ದು, ಅದನ್ನೂ ಸಪ್ಲಿಮೆಂಟರಿ ಚಾರ್ಜ್‌ ಶೀಟ್‌ನಲ್ಲಿ ನಮೂದಿಸಲಾಗುವುದು ಎಂದು ಹೇಳಲಾಗಿದೆ.

    ಅರೋಪಿಗಳಾದ ಮನೋರಂಜನ್ ಹಾಗೂ ಯುವತಿ ನೀಲಂ ಪದವೀಧರರಾಗಿದ್ದು ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದವರಾಗಿದ್ದಾರೆ. ಉಳಿದ ನಾಲ್ವರು ಆರೋಪಿಗಳು ಹತ್ತನೆ ತರಗತಿ ಪಾಸ್ ಆದವರಾಗಿದ್ದು, ಬಿಪಿಎಲ್ ಕುಟುಂಬದವರು ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    LATEST NEWS

    ಕೊತ ಕೊತ ಅಂತ ಕುದಿಯುತ್ತೆ ಈ ನದಿ! ಇದರ ಹಿಂದಿನ ರಹಸ್ಯ ಇಲ್ಲಿದೆ

    Published

    on

    ಶನಾಯ್-ಟಿಂಪಿಷ್ಕಾ ನದಿ ಇನ್ನಿತರ ನದಿಗಳಿಗಿಂತ ಭಿನ್ನವಾಗಿದ್ದು ಈ ನದಿಯ ನೀರು ಕುದಿಯುತ್ತಿರುತ್ತದೆ. ಏಕೈಕ ಕುದಿಯುವ ನದಿಯಾಗಿರುವ ಶನಾಯ್-ಟಿಂಪಿಷ್ಕಾ ಪೆರುವಿನ ಅಮೆಜಾನ್‌ನಲ್ಲಿದೆ. ಪೆರುವಿನಲ್ಲಿರುವ ಅಮೆಜಾನ್ ಮಳೆಕಾಡಿನ ಮಧ್ಯಭಾಗದಲ್ಲಿ ಹರಿಯುವ ಶನಾಯ್ ನದಿ, ನೈಸರ್ಗಿಕ ವಿಸ್ಮಯ ಎಂದೆನಿಸಿದ್ದು, ವಿಜ್ಞಾನಿಗಳನ್ನು, ಪರಿಶೋಧಕರನ್ನು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

    ವಿಶ್ವದ ಏಕೈಕ ಕುದಿಯುವ ನದಿ

    ಅಮೆಜಾನ್ ನದಿಯ ಈ ಗಮನಾರ್ಹ ಉಪನದಿಯು 6.4 ಕಿಲೋಮೀಟರ್ (4.0 ಮೈಲುಗಳು) ಉದ್ದವನ್ನು ವ್ಯಾಪಿಸಿದೆ. ಇದು ವಿಶ್ವದ ಏಕೈಕ ಕುದಿಯುವ ನದಿ ಎಂದು ಹೆಸರುವಾಸಿಯಾಗಿದೆ. ನದಿಯ ನೀರು 45 ಡಿಗ್ರಿ ಸೆಲ್ಸಿಯಸ್‌ನಿಂದ 100 ಡಿಗ್ರಿ ಸೆಲ್ಸಿಯಸ್‌ವರೆಗೆ ಸುಡುವ ತಾಪಮಾನವನ್ನು ಹೊಂದಿದೆ. ಸೂರ್ಯನ ಶಾಖದಿಂದ ಕುದಿಯುವ ನೀರು ಎಂಬ ಅರ್ಥವನ್ನು ಶನಯ್-ಟಿಂಪಿಷ್ಕಾ ಹೆಸರು ಒಳಗೊಂಡಿದೆ.

    ಕೆಲವು ಭಾಗ ಬಿಸಿಯಾಗಿದೆ

    ಇನ್ನು ಈ ನೀರಿನಲ್ಲಿ ಇಳಿದು ಸ್ನಾನ ಮಾಡುವುದೇ ಅಸಂಭವ ಎಂಬುದು ನಿಮ್ಮ ಮನಸ್ಸಿನಲ್ಲಿದ್ದರೆ ನಿಮ್ಮ ಅನಿಸಿಕೆ ತಪ್ಪು ಏಕೆಂದರೆ ಸಂಪೂರ್ಣ ನದಿಯ ನೀರು ಕುದಿಯುತ್ತಿಲ್ಲ ಕೆಲವು ಭಾಗ ಮಾತ್ರವೇ ಬಿಸಿ ನೀರನ್ನೊಳಗೊಂಡಿದೆ ಆದರೆ ಮುಳುಗು ಹಾಕಲು ಈ ನದಿಯಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ನದಿಯ ಬಿಸಿಯಿಂದ ಬೆಚ್ಚಗಿನ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ಅನುಭವ ನಿಮಗುಂಟಾಗುತ್ತದೆ. ನೀರು ಕುದಿಯುತ್ತಿರುವ ಅನಿಸಿಕೆ ನಿಮಗುಂಟಾಗುತ್ತದೆ. ಇನ್ನು ಇಲ್ಲಿ ಯಾವುದೇ ಜಲಚರಗಳು ವಾಸಿಸುತ್ತಿಲ್ಲ ಏಕೆಂದರೆ ನದಿಯ ನೀರು ಕುದಿಯುತ್ತಿರುವ ಕಾರಣ ಯಾವುದೇ ಜೀವಿಗಳು ನೀರನಲ್ಲಿ ವಾಸಿಸುತ್ತಿಲ್ಲ.

    ವೈಜ್ಞಾನಿಕ ಸತ್ಯವೇನು?

    ವೈಜ್ಞಾನಿಕವಾಗಿ, ಮಳೆನೀರು ಅಮೆಜಾನ್ ಮಳೆಕಾಡಿನ ಮೇಲ್ಮೈಗೆ ನುಸುಳಿದಂತೆ, ಅದು ಭೂಮಿಯ ಹೊರಪದರದಲ್ಲಿ ಆಳದಲ್ಲಿ ಅನುಸರಿಸುತ್ತದೆ ಭೂಶಾಖದ ಗ್ರೇಡಿಯಂಟ್ ಕಾರಣದಿಂದಾಗಿ ನೀರನ್ನು ಗಮನಾರ್ಹವಾಗಿ ಬಿಸಿಮಾಡಲಾಗುತ್ತದೆ.

    Continue Reading

    FILM

    ದರ್ಶನ್ ಸರ್ ನನಗೆ ಗುರು ಸಮಾನರು…ಧರ್ಮೋ ರಕ್ಷತಿ ರಕ್ಷಿತಃ… ಎಂದ ನಟಿ ರಚಿತಾ ರಾಮ್; ಹೇಳಿದ್ದೇನು?

    Published

    on

    ಬೆಂಗಳೂರು : ರೇಣುಕಾಸ್ವಾಮಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಬಂಧನವಾಗಿದೆ. ಇತ್ತ ನಟ, ನಟಿಯರು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದಾರೆ. ಇದೀಗ ರಚಿತಾ ರಾಮ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    “ಧರ್ಮೋ ರಕ್ಷತಿ ರಕ್ಷಿತಃ” ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನಮಸ್ಕಾರ..ಈ ನೋಟ್‌ನ ನಾನು ನಟಿಯಾಗಿ ಅಲ್ಲ ಸಾಮನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತಿಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು..! ಎಂದಿದ್ದಾರೆ.

    ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು.

    ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ.

    ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್‌ ಸರ್‌ ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್‌ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾರದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ನಟ ದರ್ಶನ್ ಮತ್ತೊಬ್ಬ ಮ್ಯಾನೇಜರ್ ಆತ್ಮಹ*ತ್ಯೆ!? ಡೆ*ತ್ ನೋಟ್ ನಲ್ಲಿ ಏನಿದೆ!?

    ದರ್ಶನ್ ಹಾಗೂ ರಚಿತಾ ರಾಮ್ ಜೊತೆಯಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ತನ್ನ ಸಿನಿ ಜರ್ನಿ ಆರಂಭಿಸಿದ್ದೇ ದರ್ಶನ್ ಜೊತೆಗೆ, ಅದೂ ‘ಬುಲ್ ಬುಲ್’ ಚಿತ್ರದ ಮೂಲಕ. ಅಂಬರೀಶ, ಜಗ್ಗುದಾದಾ, ಕ್ರಾಂತಿ ಚಿತ್ರಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು.

    Continue Reading

    LATEST NEWS

    ‘ಜೆಲ್ಲಿ ಮೀನು’ ಕುಟುಕಿ ಮೀನುಗಾರ ಸಾವು..!

    Published

    on

    ಕಾರವಾರ: ಇಲ್ಲಿನ ದೇವಬಾಗ್‌ನಲ್ಲಿ ಜೆಲ್ಲಿ ಮೀನು ಕಚ್ಚಿ ಮೀನುಗಾರ ಸಾವನಪ್ಪಿರುವ ಘಟನೆ ನಡೆದಿದೆ. ಮೀನುಗಳಲ್ಲಿ ಜೆಲ್ಲಿ ಮೀನು ನೋಡಲು ಬಲು ಸುಂದರ. ಹೆಚ್ಚಾಗಿ ಮೀನುಗಳು ಯಾರಿಗೂ ಹಾನಿಯುಂಟು ಮಾಡುವುದಿಲ್ಲ.  ಆದರೆ ಈ ಮೀನು ಅತ್ಯಂತ ವಿಷಕಾರಿಯಾಗಿದೆ. ಜೆಲ್ಲಿ ಮೀನು ಪ್ರತಿಯೊಂದನ್ನು ತನ್ನ ಕಾಲಿನ ಮೂಲಕ ಗ್ರಹಿಸುತ್ತದೆ. ಅದರ ಮೂಲಕವೇ ಶತ್ರುಗಳಿಗೆ ಕುಟುಕುತ್ತದೆ. ಈಗೇನಾದರೂ ಆದಲ್ಲಿ ಆ ವ್ಯಕ್ತಿ ಬದುಕುಳಿಯುವುದು ಬಹಳ ವಿರಳ.

    ಕಾರವಾರ ದೇವಬಾಗ್‌ನ ಸಮುದ್ರ ತೀರದಲ್ಲಿ ಮೀನುಗಾರನ ಬಲೆಯಲ್ಲಿ ಜೆಲ್ಲಿ ಮೀನು ಕಂಡುಬಂದಿದೆ. ಮೀನುಗಾರ ಕೃಷ್ಣ ಎಂಬಾತ ಮೀನನ್ನು ಬಲೆಯಿಂದ ಬಿಡಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಇದಾದ ಕೆಲವೇ ಕೆಲವು ಸಮಯದಲ್ಲಿ ಕೃಷ್ಣರವರ ಕಣ್ಣು, ಮೈ ಉರಿಯಲು ಆರಂಭಿಸಿದೆ. ಭಯಭೀತರಾದ ಮೀನುಗಾರ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    Read More..;  ಹಾವು ಕಚ್ಚಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ..!

    ಏನಿದು ಜೆಲ್ಲಿ ಫಿಷ್?

    ಈ ಮೀನಿಗೆ ಕನ್ನಡದಲ್ಲಿ ಅಂಬಲಿ ಮೀನು, ಲೋಳೆ ಮೀನು ಎಂದೆಲ್ಲಾ ಕರೀತಾರೆ. ಸಮುದ್ರದಲ್ಲಿ ಆಮೆಗಳು ಮತ್ತು ದೊಡ್ಡ ಮೀನುಗಳು ಜೆಲ್ಲಿ ಮೀನುಗಳನ್ನು ತಿನ್ನುತ್ತವೆ. ಕರಾವಳಿಯಲ್ಲಿ ಅಪರೂಪದ ಹಾಗೂ ಬೃಹತ್ ಗಾತ್ರದ ಜೆಲ್ಲಿ ಫಿಶ್ ಸಮುದ್ರ ಸಂಶೋಧಕಿಯೊಬ್ಬರು ಸಂಶೋಧನೆ ನಡೆಸುವ ವೇಳೆ ಕಣ್ಣಿಗೆ ಬಿದ್ದಿದೆ. ಈ ಮೀನು ಸುಮಾರು 1.5ಮೀ. ಉದ್ದವಿದೆ.

    Continue Reading

    LATEST NEWS

    Trending