Wednesday, December 1, 2021

ಲೈಂಗಿಕ ಕ್ರಿಯೆಗೆ ಸಮ್ಮತಿಸದ  ಪತ್ನಿ ಮೇಲಿನ ಕೋಪಕ್ಕೆ ಪಾಪಿ ಪತಿ ಮಾಡಿದ್ದಾದರೂ ಏನು..?

ಲಕ್ನೋ: ಲೈಂಗಿಕ ಕ್ರಿಯೆಗೆ ಸಮ್ಮತಿಸದ ಪತ್ನಿಯನ್ನು ಪತಿ ಗುಂಡಿಕ್ಕಿ ಕೊಂದು ಮೂವರು ಪುಟ್ಟ ಮಕ್ಕಳನ್ನು ಗಂಗಾ ನಾಲೆಗೆ ಎಸೆದ ನಿಷ್ಕಾರುಣ್ಯ ದುರ್ಘಟನೆ ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿ ನಡೆದಿದೆ.
ಮೇ 24ರ ಸೋಮವಾರ ಪಪ್ಪು ಕುಮಾರ್ ಎಂಬಾತ ತನ್ನ ಪತ್ನಿ ಲೈಂಗಿಕ ಕ್ರಿಯೆಗೆ ಸಮ್ಮತಿಸಿಲ್ಲ ಎನ್ನುವ ಕಾರಣಕ್ಕಾಗಿ ಸಿಟ್ಟಿಗೆದ್ದು ಪತ್ನಿಯನ್ನು ಗುಂಡಿಕ್ಕಿ ಕೊಂದದ್ದಲ್ಲದೆ ಮೂವರು ಪುಟಾಣಿಗಳಾದ (5)ಸಾನಿಯಾ (3)ವಂಶ್ 18ತಿಂಗಳ ಹಸುಗೂಸು ಅರ್ಷಿತಾರನ್ನು ಗಂಗಾ ನಾಲೆಗೆ ಎಸೆದಿದ್ದಾನೆ ಎನ್ನಲಾಗಿದೆ.

ಗುಂಡೇಟಿಗೆ ಬಲಿಯಾದ ದುರ್ದೈವಿಯನ್ನು (35)ಡೋಲಿ ಎಂದು ಗುರುತಿಸಲಾಗಿದೆ.
ಈವರೆಗೆ ಪುಟಾಣಿ ಕಂದಮ್ಮಗಳ ಮೃತದೇಹ ನಾಲೆಯಲ್ಲಿ ಪತ್ತೆಯಾಗಿಲ್ಲ ಎಂದು ಪುರ್ಕಜಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಪತಿ ಮತ್ತು ಪತ್ನಿ ನಡುವೆ ಮನಸ್ತಾಪವುಂಟಾಗಿದ್ದು ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದಲ್ಲಿ ಜೀವ ತೆಗೆಯುವುದಾಗಿ ಪ್ರಾಣ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

ಅದಕ್ಕೆ ಜಗ್ಗದ ಪತ್ನಿಯ ಮೇಲೆ ಕುಪಿತನಾದ ಪಪ್ಪು ಕುಮಾರ್ ಪತ್ನಿಯ ತಲೆಗೆ ಗುಂಡಿಕ್ಕಿ ಕೊಂದಿದ್ದಾನೆ ಬಳಿಕ ಮಕ್ಕಳ ಬಗ್ಗೆ ಯೋಚಿಸಿ ಮೂವರು ಮಕ್ಕಳನ್ನು ನಾಲೆಗೆಸೆದಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಆರೋಪಿ ಪಪ್ಪು ಕುಮಾರ್ ತಲೆಮರೆಸಿಕೊಂಡಿದ್ದು ಮಂಗಳವಾರದಂದು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಕುಟುಂಬದ ಮೂಲಗಳ ಪ್ರಕಾರ ಈತನ ಸಹೋದರನ   ಪತ್ನಿಯಾಗಿದ್ದ ಡೋಲಿ ಆತನ ಮರಣಾನಂತರ ಪಪ್ಪುಕುಮಾರ್ ನನ್ನು ವಿವಾಹವಾಗಿದ್ದಳು ಎನ್ನಲಾಗಿದೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...