Connect with us

LATEST NEWS

ಎರಡು ಗ್ಯಾಂಗ್‌ ವೈಷಮ್ಯದಿಂದ ಕಾಂಗ್ರೆಸ್‌ ನಾಯಕನ ಕೊಲೆಯಾಗಿದೆ: ಪಂಜಾಬ್‌ ಡಿಜಿಪಿ

Published

on

ಚಂಡೀಗಢ: ಕಾಂಗ್ರೆಸ್‌ ನಾಯಕ ಹಾಗೂ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯು ಎರಡು ಗ್ಯಾಂಗ್‌ಗಳ ನಡುವಿನ ವೈಷಮ್ಯದಿಂದಾಗಿ ನಡೆದಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿ.ಕೆ.ಭಾವರಾ ಹೇಳಿದ್ದಾರೆ.


ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಮತ್ತು ಲಕ್ಕಿ ಪಟಿಯಾಲಾ ಗ್ಯಾಂಗ್‌ ನಡುವೆ ವೈಷಮ್ಯವಿದೆ.

ವಿಕ್ಕಿ ಮಿಧುಖೇರಾ ಹತ್ಯೆಗೆ ಪ್ರತೀಕಾರವಾಗಿ ಸಿಧು ಮೂಸೆವಾಲಾ ಹತ್ಯೆಯಾದಂತೆ ಕಾಣುತ್ತಿದೆ’ ಎಂದು ತಿಳಿಸಿದ್ದಾರೆ.

ಮೂಸೆವಾಲಾ ಹತ್ಯೆ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಭಾವರಾ ಮಾಹಿತಿ ನೀಡಿದ್ದಾರೆ.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಹಚರ, ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಮೂಸೆವಾಲಾಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್‌ ಸರ್ಕಾರ ಶನಿವಾರ ಹಿಂಪಡೆದಿತ್ತು. ಇದಾದ 24 ಗಂಟೆಗಳಲ್ಲಿ ಅವರ ಹತ್ಯೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Click to comment

Leave a Reply

Your email address will not be published. Required fields are marked *

LATEST NEWS

Udupi: ಕೆಟ್ಟು ನಿಂತಿದ್ದ ಲಾರಿಗೆ ಕಾರು ಢಿಕ್ಕಿ-ಕಾರು ಚಾಲಕ ದುರ್ಮರಣ..!

Published

on

ಉಡುಪಿ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದು, ಕಾರು ಚಾಲಕ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮೃತಪಟ್ಟ ಕಾರು ಚಾಲಕ ನಾಗೇಶ್ (70) ಎಂದು ಗುರುತಿಸಲಾಗಿದೆ. ಕಾಪುವಿನ ಮೆಸ್ಕಾಂ ಕಚೇರಿಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಅವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕಾಪು ಪಿ.ಎಸ್.ಐ. ಅಬ್ದುಲ್ ಖಾದರ್, ಕ್ರೈಂ ಪಿ.ಎಸ್.ಐ. ಪುರುಷೋತ್ತಮ್ ಹಾಗೂ ಸಿಬಂದಿ ಮತ್ತು ಹೆದ್ದಾರಿ ಗಸ್ತು ಪಡೆಯವರು ತೆರಳಿ ಅಪಘಾತದಲ್ಲಿ ಸಿಲುಕಿದ್ದ ಕಾರು ಮತ್ತು ಲಾರಿಯನ್ನು ತೆರವುಗೊಳಿಸಿದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಮಂಗಳೂರು : ಕಾಂಗ್ರೆಸ್ ಭಯೋತ್ಪಾದಕರ ಪರವಾಗಿರೋ ಪಕ್ಷ : ನಳಿನ್ ಕುಮಾರ್ ಕಟೀಲ್ ಆಕ್ರೋಶ

Published

on

ಮಂಗಳೂರು : ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಘೋಷಣೆ ಹಾಕೋದು ಕಂಡು ಬಂದಿದೆಯಾದ್ರೂ ಘೋಷಣೆ ಹಾಕಿದವರ ಬಂಧನ ಆಗುವುದು ಕಾಣುತ್ತಿಲ್ಲ. ರಾಜ್ಯದ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಎರಡೂ ಕೂಡಾ ಈ ವಿಚಾರಕ್ಕೆ ವಿರೋಧ ಕೂಡಾ ವ್ಯಕ್ತಪಡಿಸಿಲ್ಲ. ಇದರಿಂದ ಕಾಂಗ್ರೆಸ್‌ ಮಾನಸಿಕತೆ ಹಾಗೂ ತುಷ್ಠೀಕರಣಕ್ಕಾಗಿ ದೇಶದ್ರೋಹಿಗಳಿಗೂ ಬೆಂಬಲ ನೀಡುತ್ತದೆ ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ಇದೆ ಅನ್ನೋದು ಈ ಹಿಂದೆಯೂ ಸಾಬೀತಾಗಿದ್ದು, ಕಳೆದ ಬಾರಿ ಗೆದ್ದಾಗ ವಿಜಯೋತ್ಸವದಲ್ಲಿ ಬೆಳಗಾವಿ ಉತ್ತರ ಕನ್ನಡದಲ್ಲಿ ಪಾಕಿಸ್ತಾನ ಧ್ವಜ ಬಳಕೆ ಮಾಡಿದ್ದರು. ಅವರನ್ನೂ ಬಂಧಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನಿಷ್ಟ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಆದ್ರೂ ಇದನ್ನು ಖಂಡಿಸ ಬೇಕಿತ್ತಾದ್ರೂ ಅವರೂ ಮೌನವಾಗಿದ್ದಾರೆ. ಅವರೂ ಪಾಕಿಸ್ತಾನ ಪರ ಇದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಹೀಗಾಗಿ ತಕ್ಷಣ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಪಾಕ್ ಪರ ಘೋಷಣೆಯ ವಿಚಾರ ಬಿಜೆಪಿ ಜೆಡಿಎಸ್ ಮಾಡಿಲ್ಲ. ಮಾಧ್ಯಮಗಳು ವರದಿ ಮಾಡಿದ್ದನ್ನೂ ನಾವು ಗಮನಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಧ್ಯಮದ ಮೇಲೆ ಸರ್ಕಾರಕ್ಕೆ ನಂಬಿಕೆ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Continue Reading

DAKSHINA KANNADA

ಮಂಗಳೂರು ಮೇಯರ್ ಫೋನ್‌ ಇನ್ ಕಾರ್ಯಕ್ರಮ; ಬಿಲ್‌ಗಳನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿ

Published

on

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಜನರ ಸಮಸ್ಯೆ ಆಲಿಸಲು ಮೇಯರ್ ಇಂದು ಫೋನ್‌ ಇನ್ ಕಾರ್ಯಕ್ರಮ ನಡೆಸಿದ್ದಾರೆ. ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು ಅವರು ಪ್ರತಿ ತಿಂಗಳು ಈ ಫೋನ್ ಇನ್ ಕಾರ್ಯಕ್ರಮ ನಡೆಸಿ ಜನಸ್ನೇಹಿ ಆಡಳಿತ ನೀಡಲು ಪ್ರಯತ್ನಿಸಿದ್ದಾರೆ. ಫೋನ್ ಮೂಲಕ ಬರುವ ದೂರುಗಳನ್ನು ಸ್ವೀಕರಿಸಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆಯನ್ನು ತಕ್ಷಣ ಬಗೆ ಹರಿಸಲು ಇದರಿಂದ ಸಾಧ್ಯವಾಗಿದೆ. ಕಳೆದ ತಿಂಗಳು ನಡೆದಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸುಮಾರು 27 ದೂರುಗಳಲ್ಲಿ 24 ದೂರುಗಳನ್ನು ತಕ್ಷಣ ಬಗೆ ಹರಿಸಿದ್ದಾರೆ. ಈ ಬಾರಿಯೂ ಕೂಡಾ ಸುಮಾರು 26 ಕರೆಗಳು ಬಂದಿದ್ದು ಬಹುತೇಕ ಕರೆಗಳು ನಗರದ ಸ್ವಚ್ಚತೆ , ಸ್ವಯಂ ಘೋಷಿತ ಆಸ್ತಿ ತೆರಿಗೆ , ಹಾಗೂ ಲೈಸೆನ್ಸ್‌ ವಿಚಾರವಾಗಿತ್ತು.

ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತವನ್ನು ಸುಂದರವಾಗಿಸಿದ್ರೂ ಅಲ್ಲಿ ಅಲೆಮಾರಿ ಕುಟುಂಬಗಳು ನಗರ ಸೌಂದರ್ಯ ಕೆಡಿಸಿರುವ ಬಗ್ಗೆ ದೂರು ಬಂದಿದೆ. ಅವರನ್ನು ಪೊಲೀಸರ ಸಹಾಯದಿಂದ ತೆರವು ಗೊಳಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.

ಅಲ್ಲದೇ, ಆಸ್ತಿ ತೆರಿಗೆ ವಿಚಾರದಲ್ಲಿ ಜನರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಎಲ್ಲಾ ಬಿಲ್‌ಗಳನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಮೇಯರ್ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಜನಸ್ನೇಹಿ ಆಡಳಿತ ನೀಡಲು ಪೋನ್ ಇನ್ ಕಾರ್ಯಕ್ರಮ ಸಹಕಾರಿಯಾಗಿದ್ದು, ಜನರು ಸಮಸ್ಯೆಗಳನ್ನು ಗಮನಕ್ಕೆ ತಂದಾಗ ತಕ್ಷಣ ಕ್ರಮ ಕೈಗೊಳ್ಳಲು ಸಹಕಾರಿ ಆಗುತ್ತದೆ ಎಂದು ಅವರು ಹೇಳಿದ್ದಾರೆ.

Continue Reading

LATEST NEWS

Trending