Connect with us

    LATEST NEWS

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ ಅವರಿಗೆ ಸಿದ್ಧಗಂಗಾ ರಾಷ್ಟ್ರೀಯ ರತ್ನ ಪ್ರಶಸ್ತಿ

    Published

    on

    ಮಂಗಳೂರು : ಬಸವಶ್ರೀ ಫೌಂಡೇಷನ್ (ರಿ.) ಬೆಂಗಳೂರು ಇದರ ೧೫ನೇ ವಾರ್ಷಿಕೋತ್ಸವದ ಪ್ರಯುಕ್ತ ಮಹಾಸಂಗಮ ಸಮಾವೇಶ, ಜನಸ್ಪಂದನ ಹಾಗೂ ಭಗವಾನ್ ಬುದ್ದ, ಶ್ರೀ ಬಸವೇಶ್ವರ, ಡಾ|| ಬಿ.ಆರ್ ಅಂಬೇಡ್ಕರ್ ಮತ್ತು ಡಾ|| ಶಿವಕುಮಾರ ಸ್ವಾಮೀಜಿ ಜಯಂತಿಯ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭವು ಜೂ ೨೧ ರ ಶುಕ್ರವಾರ ಅಪರಾಹ್ನ ೩ ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಲಿದೆ.

    ಈ ಸಮಾರಂಭದಲ್ಲಿ ವಿಶೇಷ ಸೇವೆ ಸಲ್ಲಿಸಿದ ಗಣ್ಯರಿಗೆ “ ಸಿದ್ಧಗಂಗಾ ರಾಷ್ಟ್ರೀಯ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸಾಧನೆಗಾಗಿ ಈ ಪ್ರಶಸ್ತಿಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್‌ರವರು ಆಯ್ಕೆಯಾಗಿದ್ದಾರೆ.

    ಸಹಕಾರ ಕ್ಷೇತ್ರದ ಜೊತೆಗೆ ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಅನೇಕ ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಇವರಿಗೆ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ “ಉತ್ತಮ ಸಹಕಾರಿ ಪ್ರಶಸ್ತಿ”, “ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ”, “ಸಮಾಜ ರತ್ನ ಪ್ರಶಸ್ತಿ””, “ಸಜ್ಜನ – ಚಂದನ ಸದ್ಭಾವನಾ ರಾಜ್ಯ ಪ್ರಶಸ್ತಿ”, “ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ”, “ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ”, “ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -೨೦೨೩ ಪ್ರಶಸ್ತಿ”, “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ” “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”, “ಸಹಕಾರ ರತ್ನ ಪ್ರಶಸ್ತಿ” ಜೊತೆಯಲ್ಲಿ ಸಂಘ -ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಇವರನ್ನು ಹಲವಾರು ಸಹಕಾರ ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.

    ಇದನ್ನೂ ಓದಿ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡುಬಿದ್ರಿ: ಜೂ. 23 ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

    ಸಂಘದ ಸಕ್ರೀಯ ಚಟುವಟಿಕೆಯೊಂದಿಗೆ ಅಧ್ಯಕ್ಷರ ಕ್ರಿಯಾಶೀಲತೆಯು ಉಲ್ಲೇನೀಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಮೂರನೇ ಬಾರಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಇವರು, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ (ನಿ.) ಬೆಂಗಳೂರು ಇದರ ಆಡಳಿತ ಮಂಡಳಿಗೆ ಮೈಸೂರು ವಿಭಾಗದಿಂದ ಕರಾವಳಿ ಕ್ಷೇತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾದವರು. ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ, ಸಹಕಾರಿ ಭಾರತಿ ಮಂಗಳೂರು ನಗರ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ, ದ. ಕ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಂಗಳೂರು ಇದರ ನಿರ್ದೇಶಕರಾಗಿ ಅವಿರೋಧ ಆಯ್ಕೆ, ದ.ಕ. ಜಿಲ್ಲಾ ಸಗಟು ಮಾರಾಟ ಸಹಕಾರ ಸಂಘ ಇದರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

    FILM

    ಒಂದೇ ಹಾಡಿನಲ್ಲಿ 700 ಮಂದಿ ಬ್ಯಾಕ್ ಡ್ಯಾನ್ಸರ್ಸ್; ಯಾವ ಚಿತ್ರದಲ್ಲಿ ಗೊತ್ತಾ!?

    Published

    on

    ಮಂಗಳೂರು/ಮುಂಬೈ : ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಛವ್ವಾ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಛತ್ರಪತಿ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿದರೆ, ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.


    ಡ್ಯಾನ್ಸ್ ಮಾಡುವಾಗ ಸಾಮಾನ್ಯವಾಗಿ 50 – 100 ಮಂದಿ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಬರೋಬ್ಬರಿ 700 ಮಂದಿ ಕಾಣಿಸಿಕೊಂಡರೆ? ಹೀಗೊಂದು ಅಪರೂಪದ ದೃಶ್ಯ ‘ಛವ್ವಾ’ಸಿನಿಮಾದಲ್ಲಿ ಮೂಡಿ ಬಂದಿದೆ. ಎ.ಆರ್. ರೆಹಮಾನ್ ಕಂಪೋಸ್ನಲ್ಲಿ ಈ ಹಾಡು ಮೂಡಿದ್ದು, ಇದರ ಶೂಟ್ಗೆ ಸಿದ್ಧತೆ ನಡೆದಿದೆ.
    ಮರಾಠಿ ಜಾನಪದ ಮ್ಯೂಸಿಕ್ನಲ್ಲಿ ಈ ಹಾಡು ಮೂಡಿ ಬರುತ್ತಿದೆ. ರಾಜರ ಕಾಲವನ್ನು ರೀ ಕ್ರಿಯೇಟ್ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ ಡ್ಯಾನ್ಸರ್ಗಳು ಇರಲಿದ್ದಾರೆ. ವಿಜಯ್ ಗಂಗೂಲಿ ಅವರು ಈ ಹಾಡಿಗೆ ಕೊರಿಯೋಗ್ರಾಫಿ ಮಾಡುತ್ತಿದ್ದಾರೆ.
    ಈ ಸಿನಿಮಾದ ಕಥೆ 1681ರ ಕಾಲಘಟ್ಟದ್ದಾಗಿದೆ. ಇದಕ್ಕಾಗಿಯೇ ಬೃಹತ್ ಸೆಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರ ಡಿಸೆಂಬರ್ 6 ರಂದು ರಿಲೀಸ್ ಆಗಲಿದ್ದು, ಅದೇ ದಿನ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಕೂಡ ರಿಲೀಸ್ ಆಗುತ್ತಿರೋದು ವಿಶೇಷ.

    Continue Reading

    LATEST NEWS

    ಹ್ಯಾರಿಪಾಟರ್‌ ಖ್ಯಾತಿಯ ಹಾಲಿವುಡ್‌ ನಟಿ ಮ್ಯಾಗಿ ಸ್ಮಿತ್‌ ವಿಧಿವಶ

    Published

    on

    ಹಾಲಿವುಡ್‌ನ ಜನಪ್ರಿಯ ನಟಿ ಹ್ಯಾರಿಪಾಟರ್‌ ಖ್ಯಾತಿಯ ನಟಿ ಮ್ಯಾಗಿ ಸ್ಮಿತ್ ಅವರು ಇಹಲೋಕ ತ್ಯಜಿಸಿದ್ದಾರೆ.

    ಆಸ್ಕರ್ ಪ್ರಶಸ್ತಿ ವಿಜೇತ ನಟಿ ಮ್ಯಾಗಿ ಸ್ಮಿತ್ ಅವರು ಇಬ್ಬರೂ ಮಕ್ಕಳು ಮತ್ತು ಐದು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮ್ಯಾಗಿ ಸ್ಮಿತ್ ಅವರು ಸೆ.27ರಂದು ನಿಧನರಾಗಿದ್ದು, ಕುಟುಂಬ ಮೂಲಗಳು ಅಧಿಕೃತ ಪಡಿಸಿದೆ.

    ಶಾಸಕ ಮುನಿರತ್ನ ಮನೆಗೆ ಐಟಿ ಅಧಿಕಾರಿಗಳ ದಾಳಿ

    ಮ್ಯಾಗಿ ಸ್ಮಿತ್ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 60ರ ದಶಕದಿಂದ ಸಿನಿಮಾಗಳಲ್ಲಿ ನಟಿಸುವುದ್ದಕ್ಕೆ ಆರಂಭಿಸಿದ್ದ ಮ್ಯಾಗಿ ಸ್ಮಿತ್ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇವರ ವೃತ್ತಿ ಬದುಕಿನಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ.

    Continue Reading

    LATEST NEWS

    ಶೀಘ್ರವೇ ಗೃಹಲಕ್ಷ್ಮಿ ಹಣ, ಯೋಜನೆ ನಿಲ್ಲುವ ಮಾತೇ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌

    Published

    on

    ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ನಿರಂತರ ಪ್ರಕ್ರಿಯೆ ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಕೊಡುಗೆ ಏನು ಎಂದು ಸಚಿವರು ಪ್ರಶ್ನಿಸಿದ ಹೆಬ್ಬಾಳ್ಕರ್‌ ನಾನು ಎಂದಿಗೂ ಪಂಚಮಸಾಲಿ ಮೀಸಲಾತಿ ಪರವಾಗಿದ್ದೇನೆ. 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.

    ಮುರುಗೇಶ್ ನಿರಾಣಿ ಅವರು ಅಧಿಕಾರದಲ್ಲಿದ್ದಾಗ ಸಮುದಾಯದ ಬಗ್ಗೆ ಯೋಚಿಸಲಿಲ್ಲ. ಈಗ ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ಮೀಸಲಾತಿ ನೀಡಲಿ ಎಂಬುದೇ ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

    Continue Reading

    LATEST NEWS

    Trending