BELTHANGADY
ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸ್ಮರಣೆಯೊಂದಿಗೆ 24 ವರ್ಷದ ಹಿಂದೆ ಲಾರಿಯೊಂದನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರು ಮುಂದೆ ಉದ್ಯಮಿಯಾಗಿ ಬೆಳೆದು ಇದೀಗ ಮೊದಲ ಬಾರಿಗೆ ಖರೀದಿ ಮಾಡಿದ್ದ ಲಾರಿಯನ್ನೇ ಧರ್ಮಸ್ಥಳದ ಸೇವೆಗೆ ಸಮರ್ಪಣೆ ಮಾಡಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಪರಮ ಭಕ್ತರಾಗಿರುವ ಸಿದ್ಧಾಪುರದ ಬಿ. ನಾಗು ಕುಲಾಲ ಅವರು 2000ರಲ್ಲಿ ದೇವರನ್ನು ಸ್ಮರಿಸಿ, ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಒಂದು ಲಾರಿಯನ್ನು ಖರೀದಿಸಿದ್ದರು. ಅದಕ್ಕೆ ಶ್ರೀ ಮಂಜುನಾಥ ಎಂದು ಹೆಸರು ಇಟ್ಟಿದ್ದರು.
ಅಂದಿನಿಂದ ಅವರ ಅದೃಷ್ಟ ಖುಲಾಯಿಸಿತು. ಕೆಂಪು ಕಲ್ಲು ಕೋರೆಯಲ್ಲಿ ಕಲ್ಲು ಕಡಿಯುವ ಕೆಲಸ ಮಾಡುತ್ತಿದ್ದ ನಾಗು ಕುಲಾಲ ಅವರು ಸ್ವಂತ ಕಲ್ಲು ಕೋರೆ ಆರಂಭಿಸಿದರು. ತಮ್ಮ ಶ್ರಮದ ಫಲವಾಗಿ ಇಂದು 4 ಲಾರಿ ಮತ್ತು 2 ಜೆಸಿಬಿ ಸೇರಿದಂತೆ 6 ವಾಹನ ಹೊಂದಿದ್ದಾರೆ. ಇದೀಗ ಉತ್ತಮ ಸ್ಥಿತಿಯಲ್ಲಿರುವ ಮೊದಲ ಲಾರಿಯನ್ನು ಸಂಪೂರ್ಣವಾಗಿ ಪೈಟಿಂಗ್ ಮಾಡಿ, ದೀಪಾವಳಿಯ ಅಮವಾಸ್ಯೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೊಡುಗೆ ನೀಡಿದ್ದಾರೆ.
BELTHANGADY
ಅಮೃತ ಮಹೋತ್ಸವದ ಸಂಭ್ರಮದಲ್ಲಿ ನೂತನ್ ಕ್ಲೋತ್ ಸೆಂಟರ್; ವಿಶೇಷ ಬಹುಮಾನಗಳ ಕೊಡುಗೆ
ಬೆಳ್ತಂಗಡಿ : ಕಳೆದ 74 ವರ್ಷಗಳಿಂದ ಜಿಲ್ಲೆಯ ಜನರ ಮನೆ ಮಾತನಾಗಿರುವ, ಮಡಂತ್ಯಾರಿನ ನೂತನ್ ಕ್ಲೋತ್ ಸೆಂಟರ್ 75 ನೇ ವರ್ಷಕ್ಕೆ ಕಾಲಿರಿಸಿದೆ. ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ನೂತನ್ ಕ್ಲೋತ್ ಸೆಂಟರ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳ ಮಹಾಪೂರವನ್ನೇ ನೀಡುತ್ತಿದೆ.
ಮದುವೆ ಸೇರಿದಂತೆ ಹಬ್ಬ ಹರಿದಿನಗಳಿಗಾಗಿ ವಿಶೇಷ ವಸ್ತ್ರ ಭಂಡಾರವನ್ನು ಹೊಂದಿರುವ ನೂತನ್ ಕ್ಲೋತ್ ಸೆಂಟರ್ ಜನವರಿ 25 ರ ತನಕ ಈ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಗ್ರಾಹಕರ ಆಯ್ಕೆಗೆ ಒಪ್ಪುವ ವಿವಿಧ ವಿನ್ಯಾಸಗಳ ಬೃಹತ್ ವಸ್ತ್ರ ಸಂಗ್ರಹವನ್ನು ನೂತನ್ ಕ್ಲೋತ್ ಸೆಂಟರ್ ಹೊಂದಿದ್ದು, ಗ್ರಾಹಕರು ಖರೀದಿಸುವ ವಸ್ತ್ರಗಳ ಜೊತೆಗೆ ಹಲವು ಬಹುಮಾನಗಳ ಘೋಷಣೆ ಮಾಡಿದೆ. ಪ್ರತಿ ಮೂರು ಸಾವಿರದ ಖರೀದಿಗೆ ಒಂದು ಕೂಪನ್ ನೀಡಲಾಗುತ್ತಿದ್ದು, ಜನವರಿ 25 ರಂದು ಡ್ರಾ ನಡೆಸಲಾಗುತ್ತದೆ.
ಅದೃಷ್ಟಶಾಲಿ ಗ್ರಾಹಕರಿಗೆ 10 ಗ್ರಾಂ ಚಿನ್ನದ ನಾಣ್ಯ, ಟಿವಿಎಸ್ ಕಂಪೆನಿಯ ಸ್ಕೂಟಿ ಹಾಗೂ 5 ಗ್ರಾಂ ಚಿನ್ನ ಗೆಲ್ಲುವ ಅವಕಾಶ ಇದೆ. ಇಷ್ಟೇ ಅಲ್ಲದೆ, 75 ಗ್ರಾಹಕರಿಗೆ ವಿಶೇಷವಾಗಿ ಸಮಾಧಾನಕರ ಬಹುಮಾನವನ್ನೂ ನೂತನ್ ಕ್ಲೋತ್ ಸೆಂಟರ್ ನೀಡಲಿದೆ. ಇದು 75 ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ತನ್ನ ಗ್ರಾಹಕರಿಗೆ ನೂತನ್ ಕ್ಲೋತ್ ಸೆಂಟರ್ ನೀಡುತ್ತಿರುವ ವಿಶೇಷ ಕೊಡುಗೆಯಾಗಿದೆ.
ಇದನ್ನೂ ಓದಿ : PWD ರಸ್ತೆಯಲ್ಲಿ ನಿಧಿಗಾಗಿ ಶೋಧಕಾರ್ಯ; ವೈರಲ್ ಆದ ಬ್ಯಾನರ್‌ನಿಂದ ಮುಜುರಕ್ಕೀಡಾದ ಇಲಾಖೆ
ಕಳೆದ 74 ವರ್ಷಗಳಲ್ಲಿ ಗ್ರಾಹಕರ ತೃಪ್ತಿಯೇ ತನ್ನ ಉದ್ದೇಶ ಎಂಬಂತೆ ಅತ್ಯುತ್ತಮ ಗುಣಮಟ್ಟದ ಹಾಗೂ ನೂತನ ವಿನ್ಯಾಸಗಳ ವಸ್ತ್ರಗಳನ್ನು ನೂತನ್ ಕ್ಲೋತ್ ಸೆಂಟರ್ ಗ್ರಾಹಕರಿಗೆ ನೀಡಿಕೊಂಡು ಬಂದಿದೆ.
BELTHANGADY
ಬೆಂಗಳೂರಿನಲ್ಲಿ ಬೈಕ್ ಅಪಘಾತ; ಬೆಳ್ತಂಗಡಿ ಮೂಲದ ವಿದ್ಯಾರ್ಥಿ ಸಾ*ವು
ಬೆಂಗಳೂರಿನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಳ್ತಂಗಡಿ ಮೂಲದ ವಿದ್ಯಾರ್ಥಿಯೊಬ್ಬ ಮೃ*ತ ಪಟ್ಟಿದ್ದು ಮತ್ತೋರ್ವ ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟ ಗ್ರಾಮದ ನಿವಾಸಿಯಾಗಿರುವ ತುಷಾರ್ ಮೃತ ವಿದ್ಯಾರ್ಥಿಯಾಗಿದ್ದಾರೆ. ಇವರು ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರಿನ ರಾಮಯ್ಯ ಕಾಲೇಜಿಗೆ ಸೇರಿದ್ದರು. ಇಂದು ಮುಂಜಾನೆ ಬೈಕ್‌ನಲ್ಲಿ ಬೆಳ್ತಂಗಡಿಯ ಬೆಳಾಲ್ ನಿವಾಸಿಯಾಗಿರುವ ಇನ್ನೋರ್ವ ಯುವಕನ ಜೊತೆ ಕಾಲೇಜಿಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಅಪಘಾತದಲ್ಲಿ ತುಷಾರ್ ಮೃತ ಪಟ್ಟಿದ್ದರೆ ಮತ್ತೋರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ತುಷಾರ್ ತಾಯಿ ಉಜಿರೆಯ ಅನುಗ್ರಹ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
BELTHANGADY
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ
ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ಸೇವೆಯಾಟವು ಶ್ರೀ ಮಂಜುನಾಥ ಸ್ವಾಮಿ ಹಾಗೂ ಛತ್ರ ಗಣಪತಿ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮೇಳದ ಯಜಮಾನ ಹರ್ಷೇಂದ್ರ ಕುಮಾರ್ ಅವರ ಶುಭಾಶೀರ್ವಾದಗಳೊಂದಿಗೆ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಅವರು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಶುಭಾರಂಭಗೊಂಡಿತು.
ವ್ಯವಸ್ಥಾಪಕ ಗಿರೀಶ್ ಹೆಗ್ಡೆ ಮತ್ತು ಸಿಬಂದಿ ಉಪಸ್ಥಿತರಿದ್ದರು. ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ ತಿರುಗಾಟದ ಪ್ರಥಮ ಸೇವೆಯಾಟ ನಡೆಯಿತು.
- LATEST NEWS6 days ago
ವಧುವಿನಿಂದ ʼಮೊದಲ ರಾತ್ರಿʼ ನಿರಾಕರಣೆ; ಕಾರಣ ತಿಳಿದು ವರನಿಗೆ ಶಾ*ಕ್
- FILM7 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS4 days ago
ನವ ವಧು ಸಹಿತ ನದಿಗೆ ಹಾರಿದ ಕುಟುಂಬ ; ಸ್ಮ*ಶಾನವಾದ ಮದುವೆ ಮನೆ..!
- LATEST NEWS4 days ago
ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ; ‘ಬುರ್ಖಾ ಬ್ಯಾನ್’ ಸರಕಾರದ ಆದೇಶ