Connect with us

LATEST NEWS

ಕೆಜಿಎಫ್‌-2 ಸಿನಿಮಾ ವೀಕ್ಷಣೆ ವೇಳೆ ಕಾಲು ತಾಗಿದ್ದಕ್ಕೆ ಥಿಯೇಟರ್‌ನಲ್ಲೇ ಶೂಟೌಟ್‌

Published

on

ಹಾವೇರಿ: ಕೆಜಿಎಫ್‌-2 ಸಿನಿಮಾ ವೀಕ್ಷಣೆ ವೇಳೆ ಕಾಲು ತಾಗಿದ್ದಕ್ಕೆ ಚಿತ್ರಮಂದಿರದಲ್ಲೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಯುವಕನೊರ್ವ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದಿದೆ.


ಗಾಯಗೊಂಡವನನ್ನ ವಸಂತಕುಮಾರ ಶಿವಪುರ (27) ಎಂದು ಗುರುತಿಸಲಾಗಿದೆ.

ಯುವಕನ ಹೊಟ್ಟೆಯ ಭಾಗ ಮತ್ತು ಕಾಲಿಗೆ ಗುಂಡು ತಗುಲಿದೆ. ದುಷ್ಕರ್ಮಿಯೋರ್ವ ತನ್ನ ರಿವಾಲ್ವಾರ್ ನಿಂದ ಮೂರು ಸುತ್ತು ಯುವಕನ ಮೇಲೆ ಗುಂಡು ಹಾರಿಸಿದ್ದಾನೆ.

ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಈ ದುರ್ಘಟನೆ ನಡೆದಿದೆ. ಗಾಯಾಳುವಿಗೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌.

ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಎಸ್ಪಿ ಹನುಮಂತರಾಯ ಖಚಿತಪಡಿಸಿದ್ದಾರೆ. ಚಿತ್ರವೀಕ್ಷಣೆ ವೇಳೆ ಕಾಲು ತಗುಲಿದೆ ಎಂಬ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಬಳಿಕ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Click to comment

Leave a Reply

Your email address will not be published. Required fields are marked *

FILM

ಬಹುಭಾಷಾ ಖ್ಯಾತ ಗಾಯಕ ಪಂಕಜ್ ಉದಾಸ್ ನಿಧನ..!

Published

on

Film: ಬಾಲಿವುಡ್ ಚಿತ್ರರಂಗದ ಹೆರಾಂತ ಗಾಯಕ ಹಾಗೂ ಜಝಲ್ ಮಾಂತ್ರಿಕ ಪಂಕಜ್ ಉದಾಸ್ ನಿಧನ ಹೊಂದಿದರು.


ಪಂಕಜ್ ಉದಾಸ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕನ್ನಡದ ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಹಾಡನ್ನು ಹಾಡಿದ್ದಾರೆ. ಪಂಕಜ್ ಉದಾಸ್ ನಿಧನಕ್ಕೆ ಬಾಲಿವುಡ್, ಗಝಲ್ ಪ್ರೇಮಿಗಳ ಕಂಬನಿ ಮಿಡಿದಿದ್ದಾರೆ.

Continue Reading

LATEST NEWS

ಒಂದೇ ವಾರದಲ್ಲಿ ಚಿಕಿತ್ಸೆಗೆಂದು ಬಂದ 3 ಮಹಿಳೆಯರು ಸಾವು

Published

on

ತುಮಕೂರು : ತುಮಕೂರಿನ ಪಾವಗಡ ತಾಯಿ ಮಕ್ಕಳ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಒಂದೇ ವಾರದಲ್ಲಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ನಡೆದಿದೆ.ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜವಂತಿ ಗ್ರಾಮದ ಅಂಜಲಿ (25), ಬ್ಯಾಡನೂರು ಗ್ರಾಮದ ನರಸಮ್ಮ (40), ವೀರಲಗೊಂದಿ ಗ್ರಾಮದ ಅನಿತಾ (30) ಸಾವನ್ನಪ್ಪಿದ್ದಾರೆ.

ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅನಿತಾ ಫೆ.22ರಂದು, ಅಂಜಲಿ ಎಂಬ ಮಹಿಳೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಫೆಬ್ರವರಿ 24ರಂದು, ಹಾಗೂ ಫೆಬ್ರವರಿ 25ರಂದು ನರಸಮ್ಮ ಎಂಬಾಕೆ ಸಾವನ್ನಪ್ಪಿದ್ದರು. ಸದ್ಯ ಮೃತ ಮಹಿಳೆಯ ಕುಟುಂಬಸ್ಥರು ಪಾವಗಡ ಪಟ್ಟಣದಲ್ಲಿ ಬಳ್ಳಾರಿ ರಸ್ತೆ ತಡೆದು ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Continue Reading

LATEST NEWS

ಧಗ ಧಗನೆ ಹೊತ್ತಿ ಉರಿದ ಬೋರ್‌ವೆಲ್ ಲಾರಿಗಳು ಸಂಪೂರ್ಣ ಭಸ್ಮ..!

Published

on

ದಾವಣಗೆರೆ: ನೀರಿಗಾಗಿ ಕೊಳವೆ ಬಾವಿ ಕೊರೆಯುತ್ತಿದ್ದ ಎರಡು ಬೋರ್‌ವೆಲ್‌ ವಾಹನಗಳು ಹೊತ್ತಿ ಉರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಕುಕ್ಕುವಾಡ ಗ್ರಾಮದ ಕೊಳೇನಹಳ್ಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಬೋರ್‌ವೆಲ್ ಕೊರೆಯಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಒಂದು ಲಾರಿಗೆ ಬೆಂಕಿ ತಗುಲಿದ್ದು, ಬಳಿಕ ಅದು ಮತ್ತೊಂದು ಲಾರಿಗೂ ವ್ಯಾಪಿಸಿದೆ. ಎರಡೂ ಲಾರಿಗಳು ಧಗಧಗ ಹೊತ್ತಿ ಉರಿದಿದ್ದು, ಬೆಂಕಿ ನಂದಿಸಲಾಗದೆ ಸ್ಥಳೀಯರು ಪರದಾಡಿದ್ದಾರೆ. ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿಗಳೆರಡೂ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಬೋರ್‌ವೆಲ್ ಲಾರಿಗಳಿಗೆ ಅಷ್ಟೊಂದು ತೀವೃತೆಯಲ್ಲಿ ಬೆಂಕಿ ಹೇಗೆ ಹತ್ತಿಕೊಂಡಿತು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಒಣ ಹುಲ್ಲಿದ್ದ ಕೃಷಿ ಭೂಮಿಗೆ ಬೆಂಕಿ ಹಬ್ಬಿ ದೂರದಲ್ಲಿ ನಿಂತಿದ್ದ ಇನ್ನೊಂದು ಲಾರಿಗೂ ಬೆಂಕಿ ತಗುಲಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Continue Reading

LATEST NEWS

Trending