Connect with us

    LATEST NEWS

    SHOCKING NEWS : ಮತ್ತೆ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನ

    Published

    on

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳ ಹಾವಳಿ ಹೆಚ್ಚಾಗುತ್ತಿದ್ದು, ಪೀಣ್ಯದಲ್ಲಿ ವಾಸವಿದ್ದ ಮೂವರು ಪಾಕಿಸ್ತಾನಿ ಪ್ರಜೆಗಳನ್ನು ಗುರುವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


    ಕೆಲವು ದಿನಗಳ ಹಿಂದೆ ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ನಾಲ್ವರನ್ನು ಬಂಧಿಸಿಲಾಗಿತ್ತು. ಇದೀಗ ಪೀಣ್ಯದಲ್ಲಿ ಗಂಡ, ಹೆಂಡತಿ ಮತ್ತು ಅವರ ಮಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಕೂಡಾ ಜಿಗಣಿಯಲ್ಲಿದ್ದಂತೆ ನಕಲಿ ಗುರುತಿನ ಚೀಟಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.
    ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಇತರರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    LATEST NEWS

    ಮತ್ತೆ ಕುಮಾರ ಪರ್ವತ ಚಾರಣ ಪ್ರಾರಂಭ

    Published

    on

    ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 ಗುರುವಾರದಿಂದ ಮರು ಪ್ರಾರಂಭವಾಗಿದೆ.

    ಕುಮಾರ ಪರ್ವತ ಚಾರಣಕ್ಕೆ ಜ.26 ಹಾಗೂ 27 ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದು, ಇದೇ ಕಾರಣದಿಂದ ಜನದಟ್ಟಣೆಯೂ ಉಂಟಾಗಿತ್ತು. ಆದ್ದರಿಂದ ನಿರ್ದಿಷ್ಟ ಸಂಖ್ಯೆಯ ಚಾರಣಿಗರು ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1 ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು.

    Continue Reading

    LATEST NEWS

    ಕಿಸ್ ಕೊಡಲು ಮೂರು ರೂಲ್ಸ್ ನೀಡಿದ ಯುವತಿ; ಯಾಕಾಗಿ ಗೊತ್ತಾ ?

    Published

    on

    ಮಂಗಳೂರು : ದಾಂಪತ್ಯ ಜೀವನವು ಸುಖಕರವಾಗಿ ಸಾಗಬೇಕಾದರೆ ಬಿಸಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತು ಸುರಕ್ಷತೆಯ ಭಾವವನ್ನು ಕಟ್ಟಿಕೊಡುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಒಂದು ಈ ಚುಂಬನ. ಮುತ್ತು ಎಂದ ಕೂಡಲೇ ಎಲ್ಲರಲ್ಲೂ ಮುಜುಗರವೊಂದು ಕಾಡುತ್ತದೆ. ದೈಹಿಕ ಆರೋಗ್ಯ ಹಾಗೂ ಉತ್ತಮ ಹಾರ್ಮೋನ್ಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಚುಂಬನ ಸಹಕಾರಿಯಾಗಿದೆ. ಆದರೆ ಬೋಸ್ಟನ್ ಮೂಲದ ಟಿಕ್ಟಾಕ್ ಬಳಕೆದಾರರಲ್ಲಿ ಒಬ್ಬರಾಗಿರುವ 25 ವರ್ಷದ ಕ್ಯಾರೋಲಿನ್ ಕ್ರೇ ಕ್ವಿನ್ ಎಂಬ ಯುವತಿಯು ತನ್ನನ್ನು ಚುಂಬಿಸುವ ಸಂಗಾತಿಗೆ ಮೂರು ಕಟ್ಟುನಿಟ್ಟಾದ ನಿಯಮವನ್ನು ಹಾಕಿದ್ದು, ಇದರ ಹಿಂದಿನ ಕಾರಣವನ್ನು ಸ್ವತಃ ಆಕೆಯೇ ಹೇಳಿಕೊಂಡಿದ್ದಾಳೆ.


    ಆಕೆ ವಿಡಿಯೋದಲ್ಲಿ ತಾನು ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ (ಎಂಸಿಎಎಸ್) ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾಳೆ. ಈ ಕಾಯಿಲೆಯ ಗಂಭೀರತೆಯಿಂದ ರಕ್ಷಿಸಿಕೊಳ್ಳಲು, ಸಂಗಾತಿಗೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದ್ದಾಳೆ.
    ಮೂರು ನಿಯಮಗಳು :
    ಕ್ಯಾರೋಲಿನ್ ಕ್ವಿನ್ ಮೂರು ನಿಯಮಗಳನ್ನು ವಿವರಿಸಿದ್ದು, “ಮೊದಲ ನಿಯಮವೆಂದರೆ, ನನ್ನನ್ನು ಚುಂಬಿಸುವ 24 ಗಂಟೆಗಳ ಮೊದಲು ಆರು ಪ್ರಮುಖ ಅನಾಫಿಲ್ಯಾಕ್ಟಿಕ್ ಅಲರ್ಜಿಗೆ ಕಾರಣವಾಗುವ ಏನನ್ನೂ ತಿನ್ನಬಾರದು. ಎರಡನೆಯ ನಿಯಮವೆಂದರೆ, ನನ್ನನ್ನು ಚುಂಬಿಸುವ ಮೂರು ಗಂಟೆಗಳ ಮೊದಲು ಯಾವುದೇ ಆಹಾರವನ್ನು ಸೇವಿಸಬಾರದು. ಮೂರನೆಯ ನಿಯಮದಲ್ಲಿ ತನ್ನನ್ನು ಚುಂಬಿಸುವ ಮುನ್ನ ಸಂಗಾತಿಯೂ ಬ್ರಷ್ ಮಾಡುವುದು ಅವಶ್ಯಕ” ಎಂದಿದ್ದಾಳೆ.


    ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎಂದರೇನು?
    ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, 1.50 ಲಕ್ಷ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ರಕ್ತ ಕಣಗಳು, ಆಹಾರ ಹಾಗೂ ಇತರ ಪರಿಸರ ಪ್ರಚೋದಕಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವ ಅಸ್ವಸ್ಥತೆಯಾಗಿದೆ. ರೋಗ ಪೀಡಿತ ವ್ಯಕ್ತಿಯು ಬಹುತೇಕ ಎಲ್ಲದರಿಂದಲೂ ಅಲರ್ಜಿಗೊಳಗಾ ಗುತ್ತಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಈ ರೋಗದಿಂದ ಬಳಲುವ ವ್ಯಕ್ತಿಯ ಜೀವಕ್ಕೆ ಮಾರಕವಾಗಬಹುದು.
    ಕ್ಯಾರೋಲಿನ್ ಆರೋಗ್ಯ ಸ್ಥಿತಿಗತಿ:
    ವರದಿಗಳ ಪ್ರಕಾರ, ಅವಳ ಅನಾರೋಗ್ಯವು ತುಂಬಾ ಗಂಭೀರವಾಗಿದೆ. ಓಟ್ ಮೀಲ್ ಹಾಗೂ ಪೌಷ್ಟಿಕಾಂಶಯುಕ್ತ ಈ ಎರಡು ರೀತಿಯ ಆಹಾರವನ್ನು ಮಾತ್ರ ಸೇವಿಸಬಹುದು. ಇನ್ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ಅಲರ್ಜಿಯಾಗುತ್ತದೆ. ಆಕೆಗೆ ಅಲರ್ಜಿಯಾಗುವ ಆಹಾರ ಸೇವಿಸಿದ ವ್ಯಕ್ತಿಗೆ ಮುತ್ತು ಕೊಟ್ಟರೆ ಅದು ಅವಳ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತದೆ. ಹೀಗಾಗಿ ಜೀವ ಉಳಿಸಿಕೊಳ್ಳುವ ಸಲುವಾಗಿ ಈ ಕೆಲವು ನಿಯಮಗಳನ್ನು ಹಾಕಿಕೊಂಡಿದ್ದಾಳೆ.

    Continue Reading

    LATEST NEWS

    ಕಂದಕಕ್ಕೆ ಬಿದ್ದು ಕಾಡಾನೆ ಮೃ*ತ್ಯು

    Published

    on

    ಮೈಸೂರು: ಕಂದಕಕ್ಕೆ ಬಿದ್ದು ಕಾಡಾನೆ ಮೃ*ತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಕೆಲ್ಲುಪುರ ಗ್ರಾಮದ ಮಲ್ಲಹಳ್ಳಿ ಬಳಿ ನಡೆದಿದೆ.

    ಘಟನೆಯಲ್ಲಿ ಸುಮಾರು 40 ವರ್ಷದ ಗಂಡು ಆನೆ ಕಂದಕಕ್ಕೆ ಬಿದ್ದು ಮೃ*ತಪಟ್ಟಿದೆ.

    ಮಲ್ಲಹಳ್ಳಿ ಗ್ರಾಮದ ಬಳಿ ಆನೆಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಆನೆ ಕಂದಕಗಳನ್ನು ನಿರ್ಮಾಣ ಮಾಡಲಾಗಿತ್ತು. ಆಹಾರ ಅರಸಿ ಬರುತ್ತಿದ್ದ ವೇಳೆ ಕಂದಕಕ್ಕೆ ಬಿದ್ದಿದೆ. ಕಾಡಿನಿಂದ ನಾಡಿಗೆ ಬರಲು ಯತ್ನಿಸಿರುವ ಆನೆ ಕಂದಕಕ್ಕೆ ಬಿದ್ದು ಸಾ*ವನ್ನಪ್ಪಿದೆ.

    Continue Reading

    LATEST NEWS

    Trending