FILM
ಸಮಸ್ಯೆ ಆಗಿದೆ, ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗ್ತೀನಿ; ಶಿವರಾಜ್ ಕುಮಾರ್
ನಟ ಶಿವರಾಜ್ಕುಮಾರ್ ಅವರಿಗೆ 60 ವರ್ಷದ ಮೇಲಾಗಿದೆ. ಈಗಲೂ ಅವರು ಫಿಟ್ ಆಗಿದ್ದಾರೆ. ಅವರು ಆರೋಗ್ಯಕರ ಡಯಟ್ ಫಾಲೋ ಮಾಡುತ್ತಾರೆ. ನಿತ್ಯ ಶೂಟಿಂಗ್ನಲ್ಲಿ ಭಾಗವಹಿಸುತ್ತಾರೆ. ಸದ್ಯ ಅವರು ‘ಭೈರತಿ ರಣಗಲ್’ ಚಿತ್ರದ ಪ್ರಮೋಷನ್ನಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ತಮಗೆ ಅನಾರೋಗ್ಯ ಆಗಿರೋದು ಹೌದು ಎಂದಿರುವ ಅವರು, ಶಸ್ತ್ರಚಿಕಿತ್ಸೆಗಾಗಿ ಅಮೆರಿಕ ತೆರಳೋದಾಗಿ ಹೇಳಿದ್ದಾರೆ.
ಸುದ್ದಿ ಮನೆ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದ್ದಾರೆ. ಅಲ್ಲಿ ಅವರು ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನನೂ ಮನುಷ್ಯನೇ. ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅವರು.
‘ಟ್ರೀಟ್ಮೆಂಟ್ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್ ಶಿವಣ್ಣ ಬರ್ತಾರೆ’ ಎಂದಿದ್ದಾರೆ ಅವರು.
ಶಿವರಾಜ್ಕುಮಾರ್ ಅವರು ತಮ್ಮ ನಿರ್ಮಾಪಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಮುಂದೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡಿದ್ದಾರೆ. ‘ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ. ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ. ಇದೆಲ್ಲ ಇನ್ನೆರಡು ತಿಂಗಳು ಅಷ್ಟೇ’ ಎಂದಿದ್ದಾರೆ ಅವರು.
ಶಿವರಾಜ್ಕುಮಾರ್ ಅವರು ಯಾವ ರೀತಿಯ ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ. ಆದರೆ, ಯಾವುದೋ ಗಂಭೀರ ಸಮಸ್ಯೆಯನ್ನು ಅವರು ಎದುಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಬೇಗೆ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ತ ನವೆಂಬರ್ 15ರಂದು ರಿಲೀಸ್ ಆಗಲಿದೆ.
FILM
ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕ್ರಿಕೆಟಿಗ ಕೆ.ಎಲ್.ರಾಹುಲ್
ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಎಲ್ ರಾಹುಲ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.
ದಂಪತಿ Instagram ನಲ್ಲಿ ಜಂಟಿಯಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಸುಂದರ ಆಶೀರ್ವಾದ 2025ರಲ್ಲಿ ಬರಲಿದೆ’ ಎಂದು ಅಥಿಯಾ ದಂಪತಿ ಪೋಷಕರಾಗುತ್ತಿರುವ ಖುಷಿಯ ಸುದ್ದಿಯನ್ನು ತಿಳಿಸಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ಕಳೆದ ವರ್ಷ ಜನವರಿ 23ರಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಹಲವು ವರ್ಷಗಳ ಪ್ರೀತಿಗೆ ವಿವಾಹದ ಬೆಸುಗೆ ಬೆಸೆದಿದ್ದರು.
ಇದನ್ನು ಓದಿ:ಇನ್ಮುಂದೆ ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!
FILM
ಖ್ಯಾತ ಕಿರುತೆರೆ ನಟ ಹಠಾತ್ ಸಾ*ವು
ಮಂಗಳೂರು/ಮುಂಬೈ : ‘ದಾದಗಿರಿ 2’ ರಿಯಾಲಿಟಿ ಶೋ ವಿಜೇತ ಕಿರುತೆರೆ ಖ್ಯಾತಿಯ ನಟ ನಿತಿನ್ ಚೌಹಾಣ್ ( 35) ಗುರುವಾರ (ನ.7) ಮುಂಬೈನಲ್ಲಿ ನಿ*ಧನರಾದರು.
ನಿತಿನ್ ಚೌಹಾಣ್ ಎಂಟಿವಿ ಶೋಗಳಾದ ‘ಸ್ಪ್ಲಿಟ್ಸ್ವಿಲ್ಲಾ 5’, ‘ಜಿಂದಗಿ ಡಾಟ್ ಕಾಮ್’, ‘ಕ್ರೈಮ್ ಪೆಟ್ರೋಲ್’ ಮತ್ತು ‘ಫ್ರೆಂಡ್ಸ್’ ನಲ್ಲಿ ಮಿಂಚಿದ್ದಾರೆ. ಕೊನೆಯ ಬಾರಿಗೆ 2022 ರಲ್ಲಿ SAB ಟಿವಿಯ ‘ತೇರಾ ಯಾರ್ ಹೂನ್ ಮೈನ್’ ನಲ್ಲಿ ಕಾಣಿಸಿಕೊಂಡಿದ್ದು ಹಠಾತ್ ಸಾ*ವನ್ನಪ್ಪಿರುವ ಸುದ್ಧಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ನಿತಿನ್ ಅವರ ಸಾವನ್ನು ಅವರ ಸಹ ನಟರಾದ ಸುದೀಪ್ ಸಾಹಿರ್ ಮತ್ತು ಸಯಂತನಿ ಘೋಷ್ ನಟನ ಸಾ*ವಿನ ಸುದ್ಧಿಯನ್ನು ಖಚಿತಪಡಿಸಿದ್ದಾರೆ. ಆದರೆ, ಇದನ್ನು ಬಿಟ್ಟು ಬೇರೆ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ವಿಭೂತಿ ಠಾಕೂರ್ ನಿತಿನ್‌ರವರ ಮಾಜಿ ಸಹನಟನಾಗಿದ್ದು, ಅವರು ತಮ್ಮ ಪೋಸ್ಟ್ ನಲ್ಲಿ, ‘ನಿತಿನ್ ಚೌಹಾಣ್ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ವಿಭೂತಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿತಿನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದು ‘ದೇವರು ನಿಮ್ಮ ಆ*ತ್ಮಕ್ಕೆ ಚಿರಶಾಂತಿ ನೀಡಲಿ. ನಾನು ನಿಜವಾಗಿಯೂ ಆ*ಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ. ನಿಮ್ಮ ಕುಟಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ಅನುಗ್ರಹಿಸಲಿ’ ಎಂದು ಬರೆದಿದ್ದಾರೆ.
ಮಗನ ಪಾರ್ಥಿವ ಶರೀರವನ್ನು ಸಂಗ್ರಹಿಸಲು ನಿತಿನ್ ತಂದೆ ಮುಂಬೈ ತಲುಪಿದ್ದು, ಸದ್ಯ ಮೃ*ತರ ತಂದೆ ಅಥವಾ ಕುಟುಂಬಸ್ಥರಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಪೊಲೀದರು ಘಟನೆ ಕುರಿತು ಸೂಕ್ಷ್ಮ ತನಿಖೆ ನಡೆಸುತ್ತಿದ್ದಾರೆ.
FILM
‘ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ, ಅಷ್ಟು ಆತುರ ಅವರಲ್ಲಿತ್ತು’ : ಅಮಲಾ ಪೌಲ್ ಯಾಕೆ ಹೀಗಂದ್ರು ಗೊತ್ತಾ ?
‘ನನ್ನ ಗಂಡನನ್ನು ಭೇಟಿಯಾದ ಒಂದು ತಿಂಗಳಲ್ಲೇ ನಾನು ಗರ್ಭಿಣಿಯಾದೆ. ಅಷ್ಟು ಆತುರ ಅವರಲ್ಲಿತ್ತು’ ಎಂದಿದ್ದಾರೆ ಅಮಲಾ ಪೌಲ್. ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಲವ್, ಮದುವೆ ಹಾಗೂ ಮಗುವಿನ ಮಾತನಾಡುತ್ತಾ ನಟಿ ಹೀಗೆ ಹೇಳಿದ್ದಾರೆ.
ಕನ್ನಡದ ಹೆಬ್ಬುಲಿ ಚಿತ್ರದ ನಟಿ, ಮಲಯಾಳಂ ಬೆಡಗಿ ನಟಿ ಅಮಲಾ ಪೌಲ್ ಇದೀಗ ಸಖತ್ ಸುದ್ದಿಯಾಗುತ್ತಿದ್ದಾರೆ. ಅವರು ತಮ್ಮ ಗಂಡನ ಬಗ್ಗೆ ಹೇಳಿರುವ ಹೇಳಿಕೆ ವೈರಲ್ ಆಗುತ್ತಿದ್ದು, ಸಾಮಾನ್ಯವಾಗಿ ಯಾರೂ ತಮ್ಮ ಗಂಡನ ಬಗ್ಗೆ ಹಾಗೆ ಹೇಳಿಕೊಳ್ಳೋದಿಲ್ಲ! ಅದೇನು ಸಂಗತಿಯೆ ಅಲ್ಲ ಎನ್ನಬಹುದು.
ಆದರೆ ಅಮಲಾ ಪೌಲ ಹೇಳಿಕೆಯನ್ನು ಕೇಳಿ ಕೆಲವರು ಮುಸಿಮುಸಿ ನಕ್ಕರೆ ಇನ್ನೂ ಕೆಲವರು ‘ಅವೆಲ್ಲವನ್ನೂ ಯಾರಾದ್ರೂ ಮೀಡಿಯಾ ಮುಂದೆ ಹೇಳ್ತಾರಾ?’ ಅಂತ ಅವರಿಗೆ ಬಾಯಿಗೆ ಬಂದಂತೆ ಬೈಯ್ತಿದಾರೆ.
ಯಾರೋ ಒಬ್ಬರ ಅಮಲಾ ಪೌಲ್ ಮಾತಿಗೆ ‘ಕೆಲವು ಹೆಣ್ಮಕ್ಕಳಿಗೆ ಏನ್ ಹೇಳ್ಬೇಕು ಏನ್ ಹೇಳ್ಬಾರ್ದು ಅಂತಾನೇ ಗೊತ್ತಾಗಲ್ಲ ಗುರುವೇ. ಸ್ಟಾರ್ಸ್ ಅನ್ನೋ ಕಾರಣಕ್ಕೆ ಇವೆಲ್ಲಾ ಹೇಳ್ಕೋಬೇಕಾ? ಛೀ, ಥೂ ಅಸಹ್ಯ’ ಎಂದಿದ್ದಾರೆ. ಕೆಲವರು ಹಣೆ ಚಚ್ಚಿಕೊಳ್ಳುತ್ತಿರುವ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಮೊದಲ ಗಂಡನಾ ಅಥವಾ ಎರಡನೇ ಗಂಡನಾ ಅಷ್ಟು ಆತುರಗಾರ?’ ಎಂದು ಕೇಳಿದ್ದಾರೆ. ಆದರೆ, ಅದಕ್ಕಿನ್ನೂ ಅಮಲಾ ಉತ್ತರ ಕೊಟ್ಟಿರಲಿಕ್ಕಿಲ್ಲ!
ಮಲಯಾಳಂ ಮೂಲದ ನಟಿ ಅಮಲಾ ಪೌಲ್ ಅವರು ಹೆಚ್ಚಾಗಿ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಲಾ ನಟಿ ಮಾತ್ರವಲ್ಲದೇ ನಿರ್ಮಾಪಕಿಯೂ ಹೌದು. ಇದೀಗ 33 ವರ್ಷದ ಹೊಸ್ತಿಲಿಗೆ ಕಾಲಿಟ್ಟಿರುವ ಅಮಲಾ ಪೌಲ್ ಅವರು 2014ರಲ್ಲಿ ಎಎಲ್ ವಿಜಯ್ ಎಂಬವರೊಂದಿಗೆ ವಿವಾಹ ಮಾಡಿಕೊಂಡು 2017ರಲ್ಲಿ ಡಿವೋರ್ಸ್ ತೆಗೆದುಕೊಂಡಿದ್ದಾರೆ.
ಬಳಿಕ, 2023ರಲ್ಲಿ ಜಗತ್ ದೇಸಾಯಿ ಅವರೊಂದಿಗೆ ಮತ್ತೆ ವಿವಾಹ ಮಾಡಿಕೊಂಡಿದ್ದಾರೆ. ಮದುವೆ ಅನ್ನುವುದು ಅವರವರ ವೈಯಕ್ತಿಕ. ಆದರೆ, ಹೀಗೆಲ್ಲಾ ಹೇಳವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
- DAKSHINA KANNADA7 days ago
ಮಂಗಳೂರು: ನೇತ್ರಾವತಿ ಸೇತುವೆ ಬಳಿ ಭೀಕರ ಅ*ಪಘಾತ; ಓರ್ವ ಮೃ*ತ್ಯು, ಮತ್ತೋರ್ವ ಗಂಭೀರ
- LATEST NEWS3 days ago
ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ನಲ್ಲಿ ಮಹಿಳೆಯ ಶ*ವ ಪತ್ತೆ; ತನಿಖೆ ವೇಳೆ ಬಯಲಾಯ್ತು ಸತ್ಯ!
- FILM3 days ago
ಕೋರ್ಟ್ ಮೆಟ್ಟಿಲೇರಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
- LATEST NEWS5 days ago
ಮಹಿಳೆಯರಿಗೆ ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ 450 ರೂ.ಗೆ ಗ್ಯಾಸ್ ಸಿಲಿಂಡರ್