FILM
ಶಿವಮೊಗ್ಗ: ಕಿರುತೆರೆ ನಟನನ್ನು ಮದುವೆಯಾಗುವುದಾಗಿ ನಂಬಿಸಿ, 6.50 ಲಕ್ಷ ರೂ. ವಂಚಿಸಿದ ನಟಿಯ ಬಂಧನ..!
ಸ್ಯಾಂಡಲ್ ವುಡ್ ನ ಸಹನಟಿಯೊಬ್ಬರು ಕಿರುತೆರೆ ನಟನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಸುಮಾರು 6.50 ಲಕ್ಷ ರೂನಷ್ಟು ಹಣ ವಂಚಿಸಿದ್ದು, ಪ್ರಕರಣದ ವಿರುದ್ಧ ನಟ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದ ಮೇರೆಗೆ ಪೊಲೀಸರು ನಟಿಯನ್ನು ಅವರನ್ನು ಬಂಧಿಸಿದ್ದಾರೆ.
ಶಿವಮೊಗ್ಗ: ಸ್ಯಾಂಡಲ್ ವುಡ್ ನ ಸಹನಟಿಯೊಬ್ಬರು ಕಿರುತೆರೆ ನಟನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಸುಮಾರು 6.50 ಲಕ್ಷ ರೂನಷ್ಟು ಹಣ ವಂಚಿಸಿದ್ದು, ಪ್ರಕರಣದ ವಿರುದ್ಧ ನಟ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದ ಮೇರೆಗೆ ಪೊಲೀಸರು ನಟಿಯನ್ನು ಅವರನ್ನು ಬಂಧಿಸಿದ್ದಾರೆ.
ಶರವಣನ್ ಎಂಬವವರು ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಇವರಿಗೆ ಕನ್ನಡ ಚಿತ್ರರಂಗದ ಸಹ ನಟಿ ಉಷಾ ಅಲಿಯಾಸ್ ಉಷಾ ರವಿಶಂಕರ್ ಅವರ ಪರಿಚಯವಾಗುತ್ತದೆ.
ಬಳಿಕ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ಮದುವೆಯ ನಿರ್ಧಾರ ಸಹ ಮಾಡುತ್ತಾರೆ.
ಅಷ್ಟರಲ್ಲಿ ಉಷಾರವರು ನನಗೆ ಸಮಸ್ಯೆ ಇದೆ ಹಣ ಬೇಕೆಂದು ಶರವಣನ್ರವರ ಬಳಿ ಕೇಳಿದಾಗ ಅವರು, ತಮ್ಮ ಬಳಿ ಹಣ ಇಲ್ಲದೇ ಹೋದಾಗ ಬ್ಯಾಂಕ್ನಲ್ಲಿ ಸಾಲ ಮಾಡಿ, 5 ಲಕ್ಷ ರೂ ನೀಡಿದ್ದಾರೆ.
ಅಲ್ಲದೇ ಇವರ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಪಡೆದು ಉಷಾ ಅದರಲ್ಲೂ ಸಹ ಸುಮಾರು 1.50 ಲಕ್ಷ ರೂದಷ್ಟು ಹಣ ತೆಗೆದುಕೊಂಡಿರುತ್ತಾರೆ.
ಇದಾದ ಬಳಿಕ ಶರವಣನ್ರವರು ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಉಷಾ ನೀಡದೇ ಸತಾಯಿಸಿದ್ದಾರೆ.
ಕೊನೆಗೆ ಶರವಣನ್ ಅವರಿಗೆ ಉಷಾರವರು ಚೆಕ್ ನೀಡಿರುತ್ತಾರೆ. ಆದರೆ ಚೆಕ್ ಸಹ ಬೌನ್ಸ್ ಆಗುತ್ತದೆ ಎಂದು ಶರವಣನ್ ಅವರು ಹೇಳುತ್ತಾರೆ.
ಇದರಿಂದ ಶರವಣನ್ ತಮಗೆ ಮೋಸವಾಗಿದೆ ಎಂದು ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ.
ಬಳಿಕ ಒಟ್ಟು 6.50 ಲಕ್ಷ ರೂನಷ್ಟು ಹಣ ಪಡೆದು ವಾಪಸ್ ಮಾಡದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಶರವಣನ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ನ್ಯಾಯಾಲಯದ ಆದೇಶದ ಮೇರೆಗೆ ಉಷಾ ರವಿಶಂಕರ್ ಅವರನ್ನು ವಂಚನೆ ಪ್ರಕರಣದಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.
FILM
Film: ಹಂದಿ ಮಾಂಸ ಸೇವಿಸಿದ ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು ಶಿಕ್ಷೆ..!
ಟಿಕ್ ಟಾಕ್ ಸ್ಟಾರ್ ಒಬ್ಬರು ಹಂದಿ ಮಾಂಸ ಸೇವಿಸಿದಕ್ಕೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಜಕಾರ್ತ: ಟಿಕ್ ಟಾಕ್ ಸ್ಟಾರ್ ಒಬ್ಬರು ಹಂದಿ ಮಾಂಸ ಸೇವಿಸಿದಕ್ಕೆ ಇಂಡೋನೇಷ್ಯಾ ನ್ಯಾಯಾಲಯವು 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಲೀನಾ ಮುಖರ್ಜಿ (33) ಶಿಕ್ಷೆಗೊಳಗಾದ ಟಿಕ್ ಟಾಕ್ ಸ್ಟಾರ್.
ಲೀನಾ ಮುಖರ್ಜಿ ಅವರು ಬಾಲಿಯಲ್ಲಿ ಕಳೆದ ಮಾರ್ಚ್‌ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್ ಆಗುತ್ತಿದ್ದ ಬೆನ್ನಲೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿದೆ.
ಆ ಕಾರಣದಿಂದ ಲೀನಾ ಮುಖರ್ಜಿಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಹಾಗಾಗಿ ಇದೀಗ ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಲೀನಾ ಮುಖರ್ಜಿಯವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದರೊಂದಿಗೆ 16,245 ಡಾಲರ್ (13.47 ಲಕ್ಷ ರೂ.) ದಂಡ ವಿಧಿಸಿದೆ.
ನಿಗದಿತ ಅವಧಿಯಲ್ಲಿ ದಂಡ ಪಾವತಿಸದೇ ಇದ್ದರೆ ಇನ್ನೂ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್ ಹೇಳಿದೆ.
ಧಾರ್ಮಿಕ ಆಚಾರ-ವಿಚಾರಗಳನ್ನು ನಂಬುವವರು ಹಾಗೂ ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್‌ಬಾಂಗ್ ನ್ಯಾಯಾಲಯವು ತಿಳಿಸಿದೆ.
ಇಸ್ಲಾಮಿಕ್ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ.
FILM
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
ಆ್ಯಮಿ ಜಾಕ್ಸನ್ ಅವರ ಅಚ್ಚರಿಯ ಬದಲಾವಣೆಯನ್ನು ನೋಡಿದ ನೆಟ್ಟಿಗರು ಆ್ಯಮಿ ಮುರ್ಫಿ ಕಾಪಿ ಎನ್ನುತ್ತಿದ್ದಾರೆ. ಚೆನ್ನಾಗಿದ್ದ ಆ್ಯಮಿಗೆ ಏನಾಯ್ತು ಅಂತ ಯೋಚಿಸುತ್ತಿದ್ದಾರೆ.
ಬಹುಭಾಷಾ ನಟಿ ಹಾಗೂ ರೂಪದರ್ಶಿಯೂ ಆಗಿರುವ ಆ್ಯಮಿ ಜಾಕ್ಸನ್ ಕನ್ನಡಿಗರಿಗೆ ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ಗೆ ಜೋಡಿಯಾಗಿ ನಟಿಸಿ ಹೆಸರುವಾಸಿಯಾಗಿದ್ದರು. ಆದ್ರೆ ಈಗಿನ ಆ್ಯಮಿ ಜಾಕ್ಸನ್ ಗೂ ಅಂದಿನ ಆ್ಯಮಿ ಜಾಕ್ಸನ್ ಗೂ ಅಜಗಜಾಂತರ ವ್ಯತ್ಯಾಸವಾಗಿದೆ. ನಿಜಕ್ಕೂ ಕುರೂಪಿ ಆಗೋದ್ರಾ ಎಂಬ ಅನುಮಾನ ಕಾಡದಿರದು.
ಈಗ ತಮ್ಮ ಹೊಸ ಲುಕ್ನಿಂದಾಗಿ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದ್ದಾರೆ.ಅವರ ಫಾಲೋವರ್ಸ ಹಾಗೂ ಫ್ಯಾನ್ಸ್ ಅವರ ಲುಕ್ನಲ್ಲಿ ಹಲವಾರು ಬದಲಾವಣೆಗಳನ್ನು ಗುರುತಿಸಿಕೊಂಡಿದ್ದಾರೆ.
ನಟಿಯ ಹೊಸ ಲುಕ್ನಲ್ಲಿ ಅವರ ಚೀಕ್ ಬೋನ್ಸ್ ಹಾಗೂ ಚಿಕ್ಕ ಕಣ್ಣು ಎಲ್ಲರಿಗೂ ಅಚ್ಚರಿ ಮೂಡಿಸಿದೆ.ಆ್ಯಮಿ ಜಾಕ್ಸನ್ ಅವರ ಈ ಅಚ್ಚರಿಯ ಬದಲಾವಣೆಯನ್ನು ನೋಡಿದ ನೆಟ್ಟಿಗರು ಆ್ಯಮಿ ಮುರ್ಫಿ ಅವರ ಕಾಪಿಯಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.
ಸದ್ಯ ಇದು ಸರ್ಜರಿಯಾ, ಮೇಕಪ್ ಮಾಡಿರೋದಾ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಸುಂದರಿಯಾಗಿದ್ದ ಆ್ಯಮಿ ಈ ರೀತಿಯಾಗಿ ಯಾಕೆ ಕಾಣಿಸಿಕೊಂಡ್ರು. ಮೊದಲಿದ್ದ ಚಾರ್ಮ್ ಈಗ ಕುಂದಿದಂತೆ ಕಾಣುತ್ತಿದ್ದು, ಸ್ಕೆಲಿಟನ್ ರೀತಿ ಕಾಣುತ್ತಿದ್ದಾರೆ.
FILM
ಸಮಂತ ಇನ್ಸ್ಟಾ ಫೀಡ್ ನಲ್ಲಿ ಕಾಣಿಸಿಕೊಂಡ ‘ಗಂಡ’ನ ಫೋಟೋ


- FILM6 days ago
‘ಜವಾನ್’ ಶಾಕಿಂಗ್ ಕಲೆಕ್ಷನ್ – ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ..!
- LATEST NEWS6 days ago
“ಕಚೇರಿ ವೇಳೆಯಲ್ಲಿ ಗಂಟೆ ಗಟ್ಟಲೆ ಕಾಫಿ, ಟೀಗೆ ಹೋಗುವ ಸರ್ಕಾರಿ ನೌಕರರ ವಿರುದ್ದ ಕಠಿಣ ಕ್ರಮ”
- FILM6 days ago
ಸೈಮಾ 2023-ಅತೀ ಹೆಚ್ಚು ಪ್ರಶಸ್ತಿ ಗೆದ್ದು ಬೀಗಿದ ಕನ್ನಡದ “ಕಾಂತಾರ”
- bangalore6 days ago
ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್- ರಿಲೀಸ್ ಡೇಟ್?