Connect with us

DAKSHINA KANNADA

ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಡಾ. ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಆಹ್ವಾನ: SFI ವಿರೋಧ

Published

on

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ 2021-22 ರ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್.ಎಸ್‌.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಹ್ವಾನವನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ವಿರೋಧ ವ್ಯಕ್ತಪಡಿಸುತ್ತದೆ.


ಕೋಮು ಮತಾಂಧತೆಗೆ ವಿದ್ಯಾರ್ಥಿಗಳು ಬಲಿಯಾಗದಂತೆ ಎಚ್ಚರವಹಿಸುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಇದೆ. ಧರ್ಮಾಧಾರಿತ ತಾರತಮ್ಯ, ಜನಾಂಗ ದ್ವೇಷಕ್ಕೆ ಕುಖ್ಯಾತರಾಗಿರುವ ಪ್ರಭಾಕರ್ ಭಟ್‌ರಂತವರನ್ನು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಲು ಒತ್ತಾಯಿಸುತ್ತದೆ.

ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೋಮುವಾದಿ ಸಂಘಟನೆಗಳು ತಮ್ಮ ಮತೀಯ ಧ್ರುವೀಕರಣದ ಅಜೆಂಡಾಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಸರಕಾರಿ ಶಾಲಾ ವಠಾರಗಳನ್ನು ದುರ್ಬಳಕೆ ಮಾಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.

ಈಗಾಗಲೇ ಉಡುಪಿಯ ಶಾಲೆಯಲ್ಲಿ ಹಿಜಾಬ್ ನಿಂದ ಪ್ರಾರಂಭಗೊಂಡ ವಿಷಯಗಳು ಮತೀಯ ರೂಪ ಪಡೆದು ಕೇಸರಿ ಶಾಲು ಸೇರಿದಂತೆ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಬಿಕೆಗಳಿಗೆ, ಗುಂಪು ಘರ್ಷಣೆಗಳಿಗೆ ಎಡೆಮಾಡಿ ಕೊಟ್ಟಿರುವ ಘಟನೆಗಳು ನಮ್ಮ ಕಣ್ಣ ಮುಂದಿವೆ. ಈಗಾಗಲೇ ಹಿಜಾಬ್ ಕಾರಣಕ್ಕೆ ಬಹಳಷ್ಟು ಶಾಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿ ಪರಿತಪಿಸುತ್ತಿದ್ದಾರೆ. ಇನ್ನೊಂದೆಡೆ ಶಿಕ್ಷಣವನ್ನು ಪಡೆಯಲು ಬರುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತವರ ಪೋಷಕರು ಇಂತಹ ಘಟನೆಗಳಿಂದ ಭೀತಿಗೊಳಗಾಗಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸಬೇಕಾಗಿದ್ದ ಕರ್ನಾಟಕ ರಾಜ್ಯದ ಬಿಜೆಪಿ ಸರಕಾರ ತನ್ನ ಆಡಳಿತ ವೈಫಲ್ಯ ಮರೆಮಾಚಲು ಇಂತಹ ಘಟನೆಗಳಿಗೆ ಕುಮ್ಮಕ್ಕನ್ನು ನೀಡುತ್ತಿದೆ.

ಆ ಕಾರಣಕ್ಕಾಗಿಯೇ ಸಂಘಪರಿವಾರ ಅಲ್ಪ ಸಂಖ್ಯಾತರನ್ನು ಗುರಿಯನ್ನಾಗಿಸಿ ಕೋಮು ಧ್ರುವೀಕರಣ ರಾಜಕಾರಣ ನಡೆಸಲು ಸರಕಾರಿ ಶಾಲೆಗಳಲ್ಲಿ ಪ್ರಾರಂಭಿಸಿ ಇದೀಗ ಕಾಲೇಜು ಕ್ಯಾಂಪಸ್ ಗಳನ್ನು ಮುಂದಿನ ಗುರಿಯನ್ನಾಗಿಸಿವೆ.
ಅಂತಹ ಉದ್ದೇಶದಿಂದಲೇ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವೊಂದಕ್ಕೆ ಉದ್ಘಾಟಕರಾಗಿ ಆಹ್ವಾನಿಸಲಾಗಿದೆ.

ಇದು ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ನಡುವೆ ಪರಸ್ಪರ ಅಪನಂಭಿಕೆಗಳನ್ನು, ಕಂದರಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ. ಈ ರೀತಿ ಕಾಲೇಜು ಕ್ಯಾಂಪಸ್ ಗಳಿಗೆ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ವರ್ತಿಸುವ, ಕೋಮು ಪ್ರಚೋದಿತ ದ್ವೇಷಗಳನ್ನು ಹರಡುವ ಮತ್ತು ಅವೈಜ್ಞಾನಿಕ ಮನೋಭಾನೆಗಳನ್ನು ಬಿತ್ತುವ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ವಿಶ್ವವಿದ್ಯಾನಿಲಯದ ಕಾರ್ಯಕ್ರಮದ ಉದ್ಘಾಟನೆಗೆ ಆಹ್ವಾನಿಸುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್.ಎಫ್.ಐ ದ.ಕ ಜಿಲ್ಲಾ ಸಮಿತಿ ವಿರೋಧಿಸುತ್ತದೆ.

ಇಂತಹ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವಕಾಶ ಮಾಡಿಕೊಟ್ಟ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಪಿ. ಸುಬ್ರಮಣ್ಯ ಯಡಪಡಿತ್ತಾಯರ ನಡೆಯನ್ನು ಖಂಡಿಸುತ್ತದೆ.

ಹಾಗೂ ಜಿಲ್ಲಾಡಳಿತ ದ.ಕ ಜಿಲ್ಲೆಯ ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ, ಕಾಲೇಜು ಕ್ಯಾಂಪಸ್ ಗಳಲ್ಲಿ ಶಾಂತಿ ಕದಡದಂತೆ ಮುಂಜಾಗ್ರತೆಯ ಭಾಗವಾಗಿ ಈ ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ಕಲ್ಲಡ್ಕ ಪ್ರಭಾಕರ ಭಟ್ಟರು ಭಾಗವಹಿಸಲು ಅವಕಾಶ ನೀಡದಂತೆ ಕ್ರಮಕೈಗೊಳ್ಳಲು ಒತ್ತಾಯಿಸುತ್ತದೆ ಎಂದು ಎಸ್.ಎಫ್.ಐ ನ ಜಿಲ್ಲಾ ಮುಖಂಡರಾದ ವಿನಿತ್ ದೇವಾಡಿಗ , ವಿನುಶ ರಮಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

DAKSHINA KANNADA

Mangaluru: ಧಕ್ಕೆಯಲ್ಲಿ ಬ್ಯಾನರ್ ವಿವಾದ – ಮೀನುಗಾರರ ಸಂಘದಿಂದ ಸ್ಪಷ್ಟನೆ

Published

on

ಮಂಗಳೂರು: ಮೀನುಗಾರಿಕಾ ಧಕ್ಕೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಈದ್ ಮಿಲಾದ್ ಬ್ಯಾನರ್ ಕುರಿತು ಹಸಿ ಮೀನುಗಾರರ ಸಂಘ ಸ್ಪಷ್ಟನೆ ನೀಡಿದೆ.

ಹಸಿ ಮೀನು ವ್ಯಾಪಾರಸ್ಥರ ಸಂಘ, ಸದಸ್ಯರು ಅವರರವರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಖಡ್ಡಾಯ ರಜೆ ಹೊಂದುವ ಪೂರ್ವ ನಿರ್ಧರಿತ ಪದ್ಧತಿಯಂತೆ ಈ ಬಾರಿ ಬರುವ ಸೆ. 28 ರಂದು ಮುಸ್ಲಿಮ್ ಭಾಂದವರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಭಾಂದವರು ಖಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆ ಫಲಕ ಅಳವಡಿಸಲಾಗಿರುತ್ತದೆ.

ಅದೇ ರೀತಿಯಲ್ಲಿ ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ,ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಖಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತ ಗೊಳಿಸುವುದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿರುತ್ತದೆ.

ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಶಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಿದ್ದಾರೆ.

ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸಂಘದ ಮೀಲಾದ್ ರಜೆಯ ಪ್ರಕಟನಾ ಫಲಕ ( ಫ್ಲೆಕ್ಸ್ ) ದ ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ.

ಇಂತಹ ತಪ್ಪು ಮಾಹಿತಿ ಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು ಎಂದು ಮಂಗಳೂರು ದಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

DAKSHINA KANNADA

Ullala: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ವ್ಯಕ್ತಿ ಜೀವಾಂತ್ಯ..!

Published

on

ಉಳ್ಳಾಲ: ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಜೀವಾಂತ್ಯ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿಯ ನಿವಾಸಿಯಾಗಿರುವ  ಪ್ರಶಾಂತ್ (44)  ಎಂದು ಗುರುತಿಸಲಾಗಿದೆ.

ಸೆ.24 ರಂದು ಸಂಜೆ ಮನೆಯಿಂದ ಹೊರಟ ಪ್ರಶಾಂತ್ ಅವರು ಇಂದು ಬೆಳಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ ರೈಲ್ವೇ ಹಳಿಯಲ್ಲಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವಿವಾಹಿತರಾಗಿದ್ದ ಪ್ರಶಾಂತ್ ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ.

ಅವರು ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ವೈದ್ಯಕೀಯ ವರದಿಯಿಂದ ಲಭ್ಯವಾಗಿದೆ.

ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ ಐ ಮಧುಚಂದ್ರ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

DAKSHINA KANNADA

2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!

Published

on

ಕಿರುತೆರೆ ನಟಿ ಜ್ಯೋತಿ ರೈ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದು, ಈ ಫೋಟೋಸ್ ಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 

 

ಬೆಂಗಳೂರು : ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ಜ್ಯೋತಿ ರೈ ಅವರ ಪರಿಚಯ ಬಹುತೇಕ ಎಲ್ಲಾ ಕನ್ನಡಿಗರಿಗೆ ಇದೆ. ಸರಿ ಸುಮಾರು 20ಕ್ಕು ಹೆಚ್ಚು ಕನ್ನಡ ಧಾರವಾಹಿಗಳಲ್ಲಿ ನಟಿ ಜನರ ಮನಸ್ಸು ಗೆದ್ದ ಸಹಜ ಸುಂದರಿ ಜ್ಯೋತಿ ರೈ. ಮೂರುಗಂಟು, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆ ಪೂಜೆ, ಕಸ್ತೂರಿ ನಿವಾಸ, ಕಿನ್ನರಿ ಧಾರಾವಾಹಿಗಳನ್ನು ಜನರು ಹೇಗೆ ಮರೆಯಲು ಸಾಧ್ಯ ಅಲ್ವಾ?

ಕೊಡಗಿನಲ್ಲಿ ಹುಟ್ಟಿ ಬೆಳೆದ ಬಂಟ ಸಮುದಾಯದ ನಟಿ ಜ್ಯೋತಿ ರೈ ಓದಿದ್ದು ಪುತ್ತೂರಿನಲ್ಲಿ.8ನೇ ತರಗತಿ ಓದುವಾಗಲೇ ಆಕೆ ಅಪ್ಪನನ್ನು ಕಳೆದುಕೊಂಡರು.ಕಡು ಬಡತನದಲ್ಲಿ ಬೆಳೆದ ಈಕೆ ಅನೇಕ ಸವಾಲುಗಳನ್ನು ಎದುರಿಸಿ ಒಂದು ಎಂಎನ್‌ಸಿ ಕಂಪೆನಿಯಲ್ಲಿ ಕೆಲಸವನ್ನು ಪಡೆದುಕೊಂಡಿದ್ರು.

ಇದಾದ ನಂತರ ಬೆಂಗಳೂರಿಗೆ ಬಂದು ‘ಬರತಾವ ಕಾಲ’ ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿಂದ ಮುಂದೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದರು. ನಿರೂಪಕಿಯಾಗಿಯೂ ಗಮನ ಸೆಳೆದು.20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು .

ಜ್ಯೋತಿ ರೈ 20ನೇ ವಯಸ್ಸಿನಲ್ಲೇ ಮದುವೆ ಆಗಿದ್ದರು.ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ.

ಜ್ಯೋತಿ ರೈ ಅಂದ್ರೆ ಪಕ್ಕಾ ಸಂಪ್ರದಾಯಸ್ಥ ಹೆಣ್ಣು ಮಗಳು. ಹೆಚ್ಚಾಗಿ ಸೀರೆ ಅಥವ ಚೂಡಿದಾರ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿ ರೈ ವೆಸ್ಟ್ರನ್ ಔಟ್ ಫಿಟ್ ಗಳನ್ನು ಚೂಸ್ ಮಾಡೋದು ಬಹಳಾನೆ ಕಮ್ಮಿ.

ಆದ್ರೆ ಆಗ ಜ್ಯೋತಿ ರೈ ಕಂಡು ಇಡೀ ಚಿತ್ರರಂಗವೇ ನಿಬ್ಬೆರಗಾಗಿದೆ.

ಹೌದು ಸೋಷಿಯಲ್ ಮೀಡಿಯಾಗಳಲ್ಲಿ ಒಂದಾದ ಮೇಲೆ ಒಂದರಂತೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಜ್ಯೋತಿ ರೈ. ಅಲ್ಲದೆ Age is Just A Number ಎಂದು ಕೂಡ ಸಾಬೀತುಪಡಿಸಿದ್ದಾರೆ. ತುಂಬಾನೆ ಬೋಲ್ಡ್ ಆಗಿರುವ ಫೋಟೋಸ್ ಅಪ್ಲೋಡ್ ಮಾಡಿ ಇಷ್ಟರ ಮಟ್ಟಿಗೆ ಬದಲಾವಣೆನಾ ಅಂತ ಜನ ಶಾಕ್ ನಲ್ಲಿದ್ದಾರೆ.


ಮೊದಲ ಗಂಡನಿಂದ ದೂರಾಗಿ ಈಗ ಆದ್ರೆ ಇದೀಗ ಶುಕ್ರ, ಮಾತರಾನಿ ಮೌನಮಿದಿ, ಎ ಮಾಸ್ಟರ್ ಪೀಸ್’ ಚಿತ್ರಗಳನ್ನು ನಿರ್ದೇಶಿಸಿದ ಸುಕುಪುರ್ವಜ್ ಅಲಿಯಾಸ್ ಸುರೇಶ್ ಕುಮಾರ್‌ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನುವಂತಹ ಟಾಕ್ಸ್ ಇದೀಗ ಹರಿದಾಡುತ್ತಿವೆ.

ಅಲ್ದೇ ಸುರೇಶ್‌ ಜತೆಗಿರುವ ಫೋಟೊಗಳನ್ನು ನಟಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಿ ಇದೆಲ್ಲಾ ನಿಜ ಇರಬಹುದು ಅಂತ ಹೇಳಲಾಗ್ತಿದೆ.
ಯಾಕಂದ್ರೆ ಜ್ಯೋತಿ ರೈ ಅವರು ಇನ್‌ಸ್ಟಾಗ್ರಾಮ್‌ನಲ್ಲಿ Ask Me Anything Session ನಡೆಸಿದ್ದರು.

ಆ ವೇಳೆ ನೆಟ್ಟಿಗರು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದರಲ್ಲಿ ಬಹಳ ಮುಖ್ಯವಾಗಿ ನೀವು ಸಿಂಗಲ್ ಹಾ??? ಅಂತ ನೆಟ್ಟಿಗರೊಬ್ರು ಪ್ರಶ್ನೆ ಮಾಡಿದ್ರು, ಅದಕ್ಕೆ ಜ್ಯೋತಿ ರೈ ಸುಕುಮಾರ್ ಪೂರ್ವಜ ಅವರನ್ನು ಕೇಳಿ ಅಂತ ಹೇಳಿದ್ರು.

ಎ ಮಾಸ್ಟರ್ ಪೀಸ್ ಎನ್ನುವ ಸಿರೀಸ್‌ನ್ನು ಸುಕುಮಾರ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈಗ ಸುಕುಮಾರ್ ಜೊತೆಗಿನ ಫೋಟೋಗಳನ್ನೇ ಜ್ಯೋತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಲ್ಳುತ್ತಲೇ ಇದ್ದಾರೆ.

Continue Reading

LATEST NEWS

Trending