Connect with us

    DAKSHINA KANNADA

    ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ

    Published

    on

    ಶಿವಮೊಗ್ಗ/ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ನಗರದ ಗೋಪಿ ಸರ್ಕಲ್‍ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಅವರು ತೀವ್ರ ಹೃದಯಾಘಾತ ಉಂಟಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ. ಮೃತರ ಸ್ವಗ್ರಾಮ ಮತ್ತೂರಿಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ.

     

    ವಾಹನ ಜಾಥಾ, ಅಭಿನಂದನಾ ಕಾರ್ಯಕ್ರಮ ಮುಂದೂಡಿಕೆ

    ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್ ರವರ ನಿಧನದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಡೆಯಬೇಕಿದ್ದ ವಾಹನ ಜಾಥಾ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

    DAKSHINA KANNADA

    ಅತ್ತಾವರ: ಮಳೆಗೆ ಧರೆಗುರುಳಿದ ಬೃಹತ್ ಮರ

    Published

    on

    ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅತ್ತಾವರ ಕಾಪ್ರಿಗುಡ್ಡದ ಬ್ರಿಟ್ಟೋಲೇನ್ ಬಳಿ ವಾಣಿಜ್ಯ ಸಂಕೀರ್ಣದ ತಳಪಾಯದ ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಮೇಲ್ಭಾಗದಲ್ಲಿದ್ದ ಬೃಹತ್ ಮರವೊಂದು ಬುಡ ಸಹಿತ ಉರುಳಿ ಬಿದ್ದಿದೆ.

    ಮಳೆಯ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿದ್ದ ಕಾರಣ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    Continue Reading

    DAKSHINA KANNADA

    ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು?

    Published

    on

    ಮಂಗಳೂರು: ಪೋಷಕರು ಅಥವಾ ಮನೆಯವರು ಚಹಾ, ಕಾಫಿ ಕುಡಿಯುವುದು ನೋಡಿ ಮಕ್ಕಳು ತಮಗೂ ಕೊಡಿ ಎಂದು ಹಟ ಮಾಡುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಿಂದ ಚಹಾ, ಕಾಫಿ ಕೊಡಬಹುದು ಎಂದು ಸಂದಿಗ್ಧತೆ ಪೋಷಕರಲ್ಲಿ ಇರುವುದು ಸಹಜ. ಮಕ್ಕಳಿಗೆ ಈ ಪಾನೀಯವನ್ನು ಕೊಡುವ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ.

    ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಕಾರ 12 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾ, ಕಾಫಿ ಕೊಡಬಾರದು ಹಾಗೂ ಎನರ್ಜಿ ಡ್ರಿಂಕ್ ಕೂಡ ನೀಡುವಂತಿಲ್ಲ. 12 ರಿಂದ 18 ವರ್ಷ ಮಕ್ಕಳು 100 ಮಿಲಿ ಗ್ರಾಂ ನಷ್ಟು ಕೆಫಿನ್ ಹೊಂದಬಹುದು.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಅವರ ಹೃದಯ, ಮೆದುಳು, ಮೂತ್ರಪಿಂಡ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಕೆಫಿನ್ ಅಂಶ ಇರುವ ಚಹಾ ಮತ್ತು ಕಾಫಿ ಮಾತ್ರವಲ್ಲು ಚಾಕೊಲೇಟ್ ಪಾನೀಯಗಳು, ಬೇಕರಿ ಐಟಂಗಳು, ಕುಕ್ಕೀಸ್ ಇತ್ಯಾದಿಗಳು ಕೂಡ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡುವಂತಿಲ್ಲ.

    12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಫಿನ್ ನೀಡುವುದರಿಂದ ಇದು ಅವರ ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

    Continue Reading

    DAKSHINA KANNADA

    ಮುಳುಗಿದ ಪಡೀಲ್ ಅಂಡರ್ಪಾಸ್ – ಸಂಚಾರ ಸ್ಥಗಿತ

    Published

    on

    ಮಂಗಳೂರು: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆ ಜನತೆಯನ್ನು ಚಂಡಿ ಹಿಡಿಸಿ ಬಿಟ್ಟಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಬಿರುಸು ಪಡೆದುಕೊಂಡಿದ್ದು ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

    ನಗರದ ಹಲವು ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದ್ದು, ಜನರು ಪರದಾಡುವಂತಾಗಿದೆ. ನಗರದ ಪಡೀಲ್ – ಬಜಾಲ್ ಸಂಪರ್ಕಿಸುವ ರಸ್ತೆಯ ಅಂಡರ್ಪಾಸ್‌ ನೀರಿನಿಂದ ತುಂಬಿ ಮುಳುಗಿ ಹೋಗಿದೆ. ಇಂದು ಬೆಳಿಗ್ಗೆ ಅಂಡರ್‌ಪಾಸ್‌ ಕೆಳಭಾಗದಲ್ಲಿ ನೀರು ತುಂಬಿಕೊಂಡಿದ್ದು ಜನ ಸಂಚರಿಸಲಾಗದೇ ತೊಂದರೆ ಅನುಭವಿಸಿದರು.

    ಕಾರೊಂದು ನೀರಿನಲ್ಲಿ ಬರಲಾಗದ ಸ್ಥಿತಿಯಲ್ಲಿದ್ದು ಬಳಿಕ ಸ್ಥಳೀಯರು ವಾಹನವನ್ನು ದೂಡಿಕೊಂಡು ಬಂದು ಮೇಲೆ ತಂದಿದ್ದಾರೆ. ಪಡೀಲ್‌ – ಬಜಾಲ್‌ ಸಂಪರ್ಕಿಸುವ ಈ ಅಂಡರ್ಪಾಸ್‌ ಪ್ರತೀ ಮಳೆಗಾಲದ ಸಂದರ್ಭದಲ್ಲೂ  ಜನ ಕಂಗೆಡುತ್ತಿದ್ದಾರೆ.

    Continue Reading

    LATEST NEWS

    Trending