Connect with us

FILM

ಮತ್ತಷ್ಟು ಕ್ಷೀಣಿಸಿದ ಹಿರಿಯ ನಟ ಶಿವರಾಂ ಆರೋಗ್ಯ: ಅನೇಕ ನಟ-ನಟಿಯರಿಂದ ಭೇಟಿ

Published

on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಸದ್ಯ ಅವರ ಮಿದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿ ತಲುಪಿದ್ದಾರೆ. ಆರೋಗ್ಯ ಇನ್ನಷ್ಟು ಕ್ಷೀಣಿಸಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಹದಗೆಡುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸರ್ಜರಿ ನಡೆಸುವಷ್ಟು ಅವರು ಚೇತರಿಕೆ ಕಂಡಿಲ್ಲ.

ಅವರಿಗೆ ಈಗ 84 ವರ್ಷ ವಯಸ್ಸು. ಶೀಘ್ರದಲ್ಲೇ ವೈದ್ಯರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ.
ಚಂದನವನದ ಅನೇಕ ಹಿರಿಯ ನಟ-ನಟಿಯರು ಬಂದು ಶಿವರಾಂ ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ.

ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ.

ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರ ಅನುಭವ 6 ದಶಕಗಳಿಗೂ ಹೆಚ್ಚು.
ಶಿವರಾಂ ಬಗ್ಗೆ ಶಿವಣ್ಣ ಹೇಳಿದ್ದೇನು?
ಶಿವರಾಂ ಅವರನ್ನು ನೋಡಲು ಶಿವರಾಜ್​ಕುಮಾರ್​ ಭೇಟಿ ನೀಡಿದ್ದರು. ಡಾ. ರಾಜ್​ಕುಮಾರ್ ಕುಟುಂಬ​ದ ಜತೆ ಶಿವರಾಂ ಅವರಿಗೆ ಆಪ್ತ ಒಡನಾಟ ಇದೆ. ಆ ಬಗ್ಗೆ ಶಿವಣ್ಣ ಮಾತನಾಡಿದ್ದರು. ‘ಅವರ ಫ್ಯಾಮಿಲಿಗೆ ಧೈರ್ಯ ಹೇಳುತ್ತೇನೆ.

ನಾನು ಕೂಡ ಅವರ ಕುಟುಂಬದ ಸದಸ್ಯ ಆಗಿರುವುದರಿಂದ ನಮಗೂ ಎಲ್ಲರೂ ಧೈರ್ಯ ಹೇಳಬೇಕು. ಒಂದು ತಿಂಗಳ ಹಿಂದಷ್ಟೇ ತಮ್ಮನನ್ನು ಕಳೆದುಕೊಂಡಿದ್ದೇನೆ. ದೇವರು ಪದೇಪದೇ ಯಾಕೆ ಈ ರೀತಿ ನೋವು ಕೊಡುತ್ತಾನೆ ಅಂತ ನಮಗೂ ಅರ್ಥ ಆಗುವುದಿಲ್ಲ’ ಎಂದಿದ್ದರು ಶಿವಣ್ಣ.

FILM

‘ಲಕ್ಷ್ಮೀ ನಿವಾಸ’ ಧಾರವಾಹಿ ನಟ ದೀಪಕ್ ಸುಬ್ರಹ್ಮಣ್ಯ ಎಷ್ಟು ಕ್ಯೂಟ್ ಅಲ್ವಾ?

Published

on

FILM : ದಾಸ ಪುರಂದರ ಧಾರವಾಹಿ ಯಾರಿಗೆಲ್ಲಾ ಗೊತ್ತು? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿ ವಿಭಿನ್ನ ಚಿತ್ರಕಥೆ ಮೂಲಕ ಹಾಗೂ ಕಲಾವಿದರ ಅಭಿನಯದ ಮೂಲಕ ಜನ ಮನ ಗೆದ್ದ ಧಾರವಾಹಿ ಆಗಿತ್ತು.ಇದೇ ಧಾರವಾಹಿಯಲ್ಲಿ ಪುರಂದರದಾಸರ ಪಾತ್ರ ಮಾಡಿದ್ದ ದೀಪಕ್ ಸುಬ್ರಹ್ಮಣ್ಯ ತಮ್ಮ ಪಾತ್ರದಲ್ಲಿ ತಲ್ಲೀನರಾಗಿ ಅಭಿನಯಿಸಿ ಮನೆ ಮಾತಾಗಿದ್ರು.

ಆದ್ರೆ ಈಗ ಸಂಪೂರ್ಣವಾಗಿ ಬದಲಾಗಿ ಮಾರ್ಡನ್ ಆಗಿ ಬದಲಾಗಿದ್ದಾರೆ. ಅವರೇ ಇವರ ಎಂಬ ಅನುಮಾನ ಮೂಡಿದೆ. ಅಷ್ಟು ಬದಲಾವಣೆಯಾಗಿದ್ದಾರೆ.

ಇದೀಗ ಹೊಚ್ಚ ಹೊಸ ಧಾರವಾಹಿ ಲಕ್ಷ್ಮೀ ನಿವಾಸ ಧಾರವಾಹಿ ಮೂಲಕ ಎಂಟ್ರಿ ಕೊಟ್ಟಿರುವ ದೀಪಕ್ ಸುಬ್ರಹ್ಮಣ್ಯ ಹ್ಯಾಂಡ್ಸಂ ಆಗಿ ಕಾಣುತ್ತಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿರುವ ದೀಪಕ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಪುರದಂರನಾಗಿ ನೋಡಿದ ದೀಪಕ್ ಅವರಿಗೂ ಸೂಟು ಬೂಟು ಹಾಕಿ ಟಿಪ್ ಟಾಪ್ ಆಗಿ ಕಾಣಿಸಿಕೊಂಡಿರುವ ದೀಪಕ್ ಅವರನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.ಇದ್ಯಾರೋ K ಡ್ರಾಮಾ ನಟನ ರೀತಿ ಇದ್ದಾರಲ್ವಾ? ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ.

Continue Reading

FILM

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ದೀಪಿಕಾ ಪಡುಕೋಣೆ

Published

on

Film: ಬಾಲಿವುಡ್ ನ ರಣವೀರ್ ಸಿಂಗ್ – ದೀಪಿಕಾ ಪಡುಕೋಣೆ ತಮ್ಮ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಪ್ರಗ್ನೆನ್ಸಿ ಖಚಿತ ಪಡಿಸಿ. ಸೆಪ್ಟಂಬರ್ ನಲ್ಲಿ ಮಗುವಿನ ಆಗಮನ ಎಂದು ಬರೆದುಕೊಂಡಿದ್ದಾರೆ. ದೀಪಿಕಾ ಈಗ 2 ತಿಂಗಳ ಗರ್ಭಿಣಿ ಎನ್ನಲಾಗಿದೆ. ದೀಪಿಕಾ ಕುಟುಂಬ ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿರಲಿಲ್ಲ. ಅಧಿಕೃತವಾಗಿ ಇಂದು ಅನೌನ್ಸ್ ಮಾಡಿದ್ದಾರೆ.

Continue Reading

FILM

ಸ್ಯಾಂಡಲ್​ವುಡ್​ ಹಿರಿಯ ನಟ ಕೆ. ಶಿವರಾಮ್ ಇನ್ನಿಲ್ಲ..!

Published

on

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ, ರಾಜಕಾರಣಿ ಮತ್ತು ಮಾಜಿ ಐಎಎಸ್​ ಅಧಿಕಾರಿ ಕೆ ಶಿವರಾಮ್​ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶಿವರಾಮ್ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದರು. ಇವರ ಸಾವು ಸಾಕಷ್ಟು ಅಭಿಮಾನಿಗಳಿಗೆ ನೋವು ತರಿಸಿದೆ.

Continue Reading

LATEST NEWS

Trending