Connect with us

LATEST NEWS

ಮಣಿಪಾಲ: ನಿಷೇಧಿತ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಲಾ ಸ್ಟೂಡೆಂಟ್‌ ಅರೆಸ್ಟ್‌

Published

on

ಮಣಿಪಾಲ: ನಿಷೇಧಿತ ಮಾದಕ ದ್ರವ್ಯ ಮೆಥಾಂಪೆಟಮೆನ್‌ ನನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ನಿಭೀಷ್ (23), ಅಮಲ್‌ (22) ಬಂಧಿತ ವಿದ್ಯಾರ್ಥಿಗಳು

ಘಟನೆ ವಿವರ

ಮಣಿಪಾಲ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಈಶ್ವರ ನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಮೆಥಾಂಪೆಟಮೆನ್‌ನನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು  ಮಾದಕ ದ್ರವ್ಯ ಸಹಿತ ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಇನ್ನೊಬ್ಬ ಆರೋಪಿ ಅಪ್ಸಿನ್‌ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ಬಂಧಿತ ವಿದ್ಯಾರ್ಥಿಗಳಿಂದ 35 ಸಾವಿರ ಮೌಲ್ಯದ 7.3 ಗ್ರಾಂ ಮೆಥಾಂಪೆಟಮೆನ್‌ (MDMA) ಮಾದಕ ದ್ರವ್ಯ, 1.25 ಲಕ್ಷ ರೂ ಮೌಲ್ಯದ ಡ್ಯೂಕ್‌ ಬೈಕ್‌ ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

LATEST NEWS

ಈಜಲು ಹೋದ ಅಣ್ಣ ನೀರು*ಪಾಲು.! ತಂಗಿಯ ವೀಡಿಯೋದಲ್ಲಿ ಸೆರೆಯಾಯ್ತು ಅಣ್ಣನ ಸಾ*ವಿನ ಕೊನೆ ಕ್ಷಣ..!

Published

on

ಕೋಲಾರ: ಕೃಷಿ ಹೊಂಡದಲ್ಲಿ ಈಜುತ್ತಿರುವುದನ್ನು ತಂಗಿ ವೀಡಿಯೋ ಮಾಡುತ್ತಿದ್ದಾಗಲೇ ಸಹೋದರ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ನಾಗವಾಳ ಗ್ರಾಮದಲ್ಲಿಈ ಘಟನೆ ನಡೆದಿದೆ.

swim death

ಮುಂದೆ ಓದಿ..; ಈ ಸರ್ವಾಧಿಕಾರಿಗೆ ಬೇಕಂತೆ ವರ್ಷಕ್ಕೆ 25 ಕನ್ಯೆಯರು..!! ಏನಿದು ಕಾಮಕಾಂಡ?

ಮೈಸೂರಿನ ರಾಘವೇಂದ್ರ ನಗರ ನಿವಾಸಿ ಗೌತಮ್(26 ವ) ಮೃತ ದುರ್ದೈವಿ. ಗೌತಮ್ ತನ್ನ ತಂದೆಯ ಊರು ವೇಮಗಲ್ ಸಮೀಪದ ನಾಗಾವಾಳಕ್ಕೆ ಬಂದಿದ್ದರು. ಈ ವೇಳೆ ಕುಟುಂಬ ಸದಸ್ಯರು ಹಾಗೂ ತಂಗಿಯ ಜೊತೆ ಕೃಷಿ ಹೊಂಡದ ಬಳಿ ಹೋಗಿದ್ದಾರೆ.  ಅಲ್ಲಿ ತಂಗಿಯ ಬಳಿ ವೀಡಿಯೋ ಮಾಡಲು ಮೊಬೈಲ್ ಕೊಟ್ಟು ಹೊಂಡಕ್ಕೆ ಈಜಲು ಧುಮುಕಿದ್ದಾರೆ. ಸರಿಯಾಗಿ ಈಜಲು ಗೊತ್ತಿರದ ಗೌತಮ್ ನೀರಿಗೆ ಧುಮುಕಿದ್ದು, ಇತ್ತ ತಂಗಿ ಈಚೆ ಬಾ ಎಂದು ಕೂಗುವುದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ. ನೋಡು ನೋಡುತ್ತಿದ್ದಂತೆ ಗೌತಮ್ ನೀರಲ್ಲಿ ಮುಳುಗಿ ಉಸಿರು ಚೆಲ್ಲಿದ್ದಾರೆ. ಇನ್ನು ಈ ವೀಡಿಯೋದಲ್ಲಿ ಗೌತಮ್ ನೀರಿನಲ್ಲಿ ಮುಳುಗುವ ದೃಶ್ಯ ಸೆರಯಾಗಿದೆ. ಈ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

FILM

ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ‘ಗಬ್ಬರ್ ಸಿಂಗ್’ ತುಳು ಚಲನಚಿತ್ರ ಬಿಡುಗಡೆ

Published

on

ಉಡುಪಿ : ಬಹು ನಿರೀಕ್ಷಿತ ತುಳು ಚಿತ್ರ “ಗಬ್ಬರ್ ಸಿಂಗ್” ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆ ಸಮಾರಂಭವೂ ನಡೆಯಿತು.

ತೊಟ್ಟಂ ಚರ್ಚ್ ನ ಧರ್ಮಗುರು ಫಾದರ್ ಡೆನಿಸ್ ಡೆಸಾ, ಶಂಕರಪುರದ ಸಾಯಿ ಈಶ್ವರ ಗುರೂಜಿ, ಮಿಯಾರ್ ಮಸೀದಿಯ ಮೌಲ್ವಿ  ಅಬುಲ್ ಹಸನ್, ರಾಜಕೀಯ ಮುಖಂಡರಾದ ಗೀತಾಂಜಲಿ ಸುವರ್ಣ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಸರಳಾ ಕಾಂಚನ್, ಶಿಲ್ಪಾ ಭಟ್, ಉಡುಪಿ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಚಿತ್ರದ ಕಲಾವಿದರಾದ ವೀಣಾ ಎಸ್ ಶೆಟ್ಟಿ, ಸಂದೀಪ್ ಭಕ್ತ, ಆದ್ಯ, ಚಂದ್ರಹಾಸ್ ಕಪ್ಪೆಟ್ಟು, ಕಿಶೂ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್ ಗೊನ್ಸಾಲ್ವಿಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದನ್ನೂ ಓದಿ : ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು

‘ಗಬ್ಬರ್ ಸಿಂಗ್’ ಚಿತ್ರವು ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಕಥೆ ಮತ್ತು ಚಿತ್ರಕಥೆಯನ್ನು ಸತೀಶ್ ಪೂಜಾರಿ ಬಾರ್ಕೂರು ರಚಿಸಿದ್ದು, ಪ್ರದೀಪ್ ನಿರ್ದೇಶನವಿದೆ. ತುಳು ಚಿತ್ರರಂಗದ ಹೆಸರಾಂತ ನಟರುಗಳು ಈ ಚಿತ್ರದಲ್ಲಿ ಪಾತ್ರವಾಗಿದ್ದಾರೆ.

Continue Reading

LATEST NEWS

ಆಭರಣ ಮಳಿಗೆಯಲ್ಲಿ ಎಸಿ ಸ್ಫೋಟ; ಮೂವರಿಗೆ ಗಂ*ಭೀರ ಗಾಯ

Published

on

ಬಳ್ಳಾರಿ :ಎಸಿ ಸ್ಫೋ*ಟಗೊಂಡ ಪರಿಣಾಮ ಮೂವರು ಗಂ*ಭೀರವಾಗಿ ಗಾ*ಯಗೊಂಡಿರುವ ಘಟನೆ ಬಳ್ಳಾರಿಯ ಕಲ್ಯಾಣ್ ಜ್ಯುವೆಲರ್ಸ್‍ನಲ್ಲಿ ನಡೆದಿದೆ. ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಬೆಂಗಳೂರು ರಸ್ತೆಯಲ್ಲಿರುವ ಮಳಿಗೆಯಲ್ಲಿ ಈ ಅವಘ*ಡ ಸಂಭವಿಸಿದೆ. ಏಕಾಏಕಿ ಎಸಿ ಬ್ಲಾ*ಸ್ಟ್ ಆದ ಪರಿಣಾಮ ಮಳಿಗೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಇದನ್ನೂ ಓದಿ : ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!

ಸ್ಫೋ*ಟದ ತೀವ್ರತೆಗೆ ಕಿಟಕಿ ಗಾಜುಗಳು ಒಡೆದು ಹೋಗಿವೆ. ಘಟನೆಯಿಂದಾಗಿ ಮಳಿಗೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಸ್ಫೋ*ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Continue Reading

LATEST NEWS

Trending