Connect with us

    DAKSHINA KANNADA

    ಮಂಗಳೂರು: ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ-ಎಸ್‌ಡಿಪಿಐ ಆಗ್ರಹ

    Published

    on

    ಮಂಗಳೂರು: ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಚೋದನೆ ಮತ್ತು ಹಿಂಸಾಚಾರಕ್ಕೆ ನೇತೃತ್ವ ನೀಡಿದ ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ದಕ್ಷಿಣ ಕ್ಷೇತ್ರ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರದ ವತಿಯಿಂದ ಮಂಗಳೂರಿನ ಕ್ಲಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು.


    ಈ ವೇಳೆ ದ.ಕ ಜಿಲ್ಲಾ ಸಮಿತಿ ಪ್ರಮುಖ ಅಶ್ರಫ್ ಕೆ ಸಿ ರೋಡು ಮಾತನಾಡಿ “ಶಾಂತಿಯುತ ಕರ್ನಾಟಕ ರಾಜ್ಯದ ಅಶಾಂತಿ ಸೃಷ್ಟಿಸಿದ ಕೀರ್ತಿ ಸಲ್ಲಿಕೆ ಇದ್ದರೆ ಅದು ಈಶ್ವರಪ್ಪ ಅವರಿಗೆ ಸಲ್ಲುತ್ತೆ.

    ರಾಜ್ಯದಲ್ಲಿ ಯಾವುದೇ ಗಲಭೆ ಅಥವಾ ಹೆಣ ಇಟ್ಟು ಅಶಾಂತಿ ಸೃಷ್ಟಿ ಆದ್ರೆ ಯೋಚಿಸಬೇಕು ಚುನಾವಣಾ ಪೂರ್ವ ತಯಾರಿಯಾಗಿದೆ.


    ದೇಶದ ಜನರ ಉದ್ಯೋಗ, ಆಹಾರ ಇಲ್ಲದೆ ನರಳಾಟ ಮಾಡಿದ್ರೆ ಇಲ್ಲಿ ಕೇವಲ ಕೋಮು ಭಾವನೆ ಬಿತ್ತುವ ಮೂಲಕ ರಾಜಕೀಯ ಬೇಳೆ ಬೆಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಇಲ್ಲಿ ಇವರ ರಾಜಕೀಯ ಬೇಳೆ ಬೇಯಿಸಲು ಬಡ ಕುಟುಂಬದ ಮಕ್ಕಳು ಸಾಯ್ತಾರೆ.
    ದೇಶದಲ್ಲಿ ಯಾವುದೇ ಧರ್ಮ ಕೊಲ್ಲಲು ಕರೆ ನೀಡಲ್ಲ ಅಂತಾ ಧರ್ಮ ಉಳಿಯಲು ಸಾಧ್ಯವಿಲ್ಲ ಹಿಂದೂ ಧರ್ಮ ಅಪಾಯದಲ್ಲಿ ಇದೆ ಹೇಳ್ತಾರೆ ಎಲ್ಲಿ ಅಪಾಯದಲ್ಲಿ ಇದೆ ಎಂದು ತೋರಿಸಲಿ.

    ವಿದೇಶದಲ್ಲಿ ಮಕ್ಕಳ ಶಾಲಾ ಕಾಲೇಜುನಲ್ಲಿ ವಿದ್ಯಾರ್ಥಿಗಳು ಬಾಹ್ಯ ಆಕಾಶದ ಬಗ್ಗೆ ಚರ್ಚೆ ಸಂಶೋಧನೆ ಮಾಡಿದರೆ ನಮ್ಮ ದೇಶದಲ್ಲಿ ಮಕ್ಕಳ ಕೇಸರಿ ಶಾಲು, ಹಿಂದು ಮುಸ್ಲಿಂ ಎಂದು ಕಚ್ಚಾಟ ಮಾಡುವಂತೆ ಮಾಡಿದ್ದಾರೆ.

    ಜನರನ್ನು ಪ್ರಚೋದಿಸುವ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದವರು ಹೇಳಿದರು. ಈ ವೇಳೆ ಯಾಸಿನ್ ಅರ್ಕುಳ, ಜಲೀಲ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು

    DAKSHINA KANNADA

    ಬೋಳಿಯಾರು ಪ್ರಕರಣದಲ್ಲಿ ಹೊರಗಿನವರು ಮೂಗು ತೂರಿಸಬೇಡಿ : ಸ್ಪೀಕರ್ ಯು.ಟಿ.ಖಾದರ್

    Published

    on

    ಮಂಗಳೂರು : ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯರಲ್ಲದವರು ಮೂಗು ತೂರಿಸಬೇಡಿ. ಬೋಳಿಯಾರು ಅನ್ನೋದು ಸಹೋದರತೆಯಿಂದ ಇರುವ ಊರಾಗಿದ್ದು, ಸಮಸ್ಯೆಯನ್ನು ಊರಿನವರೇ ಬಗೆಹರಿಸಿಕೊಳ್ಳುತ್ತಾರೆ ಎಂದು ಮಂಗಳೂರು ವಿಧಾನಭಾ ಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.


    ಬೋಳಿಯಾರಿನ ವಿಚಾರಕ್ಕೆ ಸಂಬಂಧಿಸಿದಂತೆ ಹೊರಗಿನವರು ಬಾಯಿ ಮುಚ್ಚಿ ಕೂತರೆ ಅದೇ ದೇಶ ಪ್ರೇಮ ಎಂದು ಅವರು ಹೇಳಿದ್ದಾರೆ.

    ಭಾರತ ಮಾತಾ ಕೀ ಜೈ ಅಂತ ಯಾರು ಎಲ್ಲಿ ಬೇಕಾದ್ರೂ ಹೇಳಬಹುದು. ಆದರೆ, ಬೋಳಿಯಾರಿನಲ್ಲಿ ಬೇರೆಯೇ ಘೋಷಣೆ ಆಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದರಲ್ಲಿ ರಾಜಕೀಯ ಮಾಡಿದ್ರೆ ಯಾರಿಗೂ ಒಂದು ಓಟ್ ಕೂಡಾ ಹೆಚ್ಚು ಬರೋದಿಲ್ಲ. ನಾನೀಗ ಸ್ಪೀಕರ್ ಆಗಿರುವ ಕಾರಣ ಯಾವುದೇ ಪಕ್ಷಗಳ ಹೆಸರನ್ನು ಉಲ್ಲೇಖಿಸೋದಿಲ್ಲ. ಆದರೆ, ಅವರು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಪ್ರಕರಣವನ್ನು ರಾಜಕೀಯ ಮಾಡಲು ಹೊರಟ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

    ಈ ವಿಚಾರವನ್ನು ದೊಡ್ಡದು ಮಾಡುವವರೇ ದೊಡ್ಡ ದೇಶದ್ರೋಹಿಗಳಾಗಿದ್ದು, ಪೊಲೀಸರಿಗೆ ಅವರ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ  : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

    99 ಜನ ಒಳ್ಳೆಯವರ ನಡುವೆ ಒಬ್ಬರು ಹಾಳು ಮಾಡುವವರು ಇರ್ತಾರೆ. ಅವರನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಅದು ಬಿಟ್ಟು ತಪ್ಪು ಮಾಡಿದವರನ್ನು ವಿಚಾರಣೆ ಮಾಡಬಾರದು, ಅವರ ಮನೆಗೆ ಹೋಗಬಾರದು ಅಂತ ಪೊಲೀಸರಿಗೆ ಒತ್ತಡ ಹಾಕುವುದು ಸರಿ ಅಲ್ಲ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ.

    Continue Reading

    DAKSHINA KANNADA

    ಬಹುನಿರೀಕ್ಷಿತ ತುಳು ಸಿನಿಮಾ ‘ತುಡರ್’ ಕರಾವಳಿಯಾದ್ಯಂತ ತೆರೆಗೆ

    Published

    on

    ಮಂಗಳೂರು : ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ‘ತುಡರ್’ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಿದೆ. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.


    ಈ ಸಂದರ್ಭ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಚೇರ್ ಮೆನ್ ಗಣೇಶ್ ರಾವ್ ಅವರು, ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಳು ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಿನಿಮಾ ತಂಡವನ್ನು ನೋಡಿದರೆ ಖಂಡಿತ ಈ ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಚಿತ್ರತಂಡದಿಂದ ಇನ್ನಷ್ಟು ಸದಭಿರುಚಿಯ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ ಎಂದು ಶುಭ ಹಾರೈಸಿದರು.

    ನಟ ಅರವಿಂದ್ ಬೋಳಾರ್ ಮಾತನಾಡಿ, ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ. ಯಾಕೆಂದರೆ ಸಿನಿಮಾ ಎಷ್ಟು ದಿನ ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ಆದರೆ ತುಡರ್ ಸಿನಿಮಾ ವೀಕ್ಷಿಸಿದವರು ಚಿತ್ರತಂಡವನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ಹೀಗಾಗಿ ನಮಗೆ ಧೈರ್ಯ ಬಂದಿದೆ. ಈ ಸಿನಿಮಾ ಗೆಲ್ಲಲು ತುಳುವರು ಥಿಯೇಟರ್ ಗೆ ಬಂದು ಸಿನಿಮಾ ನೋಡಬೇಕು ಎಂದರು.
    ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತಾಡಿ, ಸಿನಿಮಾ ಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ಗೆಲ್ಲಲು ತುಳುವರ ಆಶೀರ್ವಾದ ಅಗತ್ಯ ಎಂದರು.

    ವಾಲ್ಟರ್ ನಂದಳಿಕೆ ಮಾತನಾಡಿ, “ಸಿನಿಮಾ ನೋಡಿದವರು ಬಹಳ ಸಮಯದ ಬಳಿಕ ಒಳ್ಳೆಯ ಸಿನಿಮಾ ನೋಡಿದ್ದಾಗಿ ಹೇಳುತ್ತಿದ್ದಾರೆ. ಸಿನಿಮಾ ಖಂಡಿತ ಗೆಲ್ಲಲಿದೆ” ಎಂದರು.

    ವೇದಿಕೆಯಲ್ಲಿ ಭಾರತ್ ಸಿನೆಮಾಸ್ ನ ಬಾಲಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮನೋಹರ್ ಶೆಟ್ಟಿ, ಉದಯ ಪೂಜಾರಿ ಬಲ್ಲಾಳ್ ಬಾಗ್, ಉಮೇಶ್ ರೈ ಪದವು ಮೇಗಿನ‌ಮನೆ, ಸ್ವರಾಜ್ ಶೆಟ್ಟಿ, ನಟ ಸಿದ್ದಾರ್ಥ್ ಶೆಟ್ಟಿ, ನಟಿ ದೀಕ್ಷಾ ಭಿಸೆ, ರೂಪಾ ವರ್ಕಾಡಿ, ನಿರ್ದೇಶಕ ತೇಜೇಶ್ ಪೂಜಾರಿ, ಪ್ರಕಾಶ್ ಮಹಾದೇವನ್, ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ವಿಕಾಸ್ ಪುತ್ರನ್, ಮೋಹನ್ ರಾಜ್, ಪ್ರೇಮ್ ಶೆಟ್ಟಿ ಸುರತ್ಕಲ್, ಹಂಚಿಕೆದಾರ ಸಚಿನ್ ಎಸ್. ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. ಚಿರಾಗ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.

    ಕರಾವಳಿಯಾದ್ಯಂತ ತೆರೆಗೆ :

    ತುಡರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.

    ಇದನ್ನೂ ಓದಿ : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

    ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

    ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾರ್ಥ್ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ‌.

    Continue Reading

    DAKSHINA KANNADA

    ಪಾರ್ಕಿಂಗ್ ವಿಚಾರದಲ್ಲಿ ಚೂರಿ ಇರಿತ..! ವ್ಯಕ್ತಿಗೆ ಗಾಯ, ಆಸ್ಪತ್ರೆಗೆ

    Published

    on

    ಪುತ್ತೂರು:  ಅಂಗಡಿ ಮುಂಭಾಗದಲ್ಲಿ ವಾಹನ ಪಾರ್ಕ್‌ ಮಾಡುವ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ಪುತ್ತೂರು ಕೋರ್ಟ್‌ ರಸ್ತೆಯಲ್ಲಿ ನಡೆದಿದೆ. ಪುತ್ತೂರಿನ ಸದಾಶಿವ ಪೈ ಹಾಗೂ ಗುಣಶೇಖರ ಶೆಟ್ಟಿ ಎಂಬವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಅಗಲ ಕಿರಿದಾಗಿರುವ ಕೋರ್ಟ್‌ ರಸ್ತೆಯಲ್ಲಿ ಸಾಮಾನ್ಯವಾಗಿ ವಾಹನ ಪಾರ್ಕಿಂಗ್ ಸಮಸ್ಯೆ ಇದೆ. ಹೀಗಿರುವಾಗ ಈ ರಸ್ತೆಯಲ್ಲಿನ ಅಂಗಡಿಯೊಂದರ ಮುಂದೆ ಈ ಇಬ್ಬರ ನಡುವೆ ವಾಹನ ಪಾರ್ಕ್ ಮಾಡಿದ ವಿಚಾರವಾಗಿ ಗಲಾಟೆ ಆಗಿದೆ. ಈ ವೇಳೆ ಗುಣಶೇಖರ್ ಸದಾಶಿವ ಪೈ ಅವರಿಗೆ ಚೂರಿಯಿಂದ ಇರಿದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಚೂರಿ ಇರಿತದಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಹಿಡಿದಿದ್ದ ಸದಾಶಿವ ಪೈ ಕೈಗೆ ಗಾಯವಾಗಿದೆ. ಸದಾಶಿವ ಪೈ ಪುತ್ತೂರಿನ ದರ್ಬೆ ನಿವಾಸಿಯಾಗಿದ್ದು, ಪ್ರತಿಷ್ಠಿತ ಜಿಎಸ್‌ಬಿ ಮನೆತನಕ್ಕೆ ಸೇರಿದವರಾಗಿದ್ದು, ಪುತ್ತೂರಿನ ಮುಕ್ರಂಪಾಡಿಯ ಆನಂದಾಶ್ರಮದಲ್ಲಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಇನ್ನು ಚೂರಿಯಿಂದಿ ಇರಿಯಲು ಮುಂದಾಗಿದ್ದ ಗುಣಶೇಖರ್ ಶೆಟ್ಟಿ ಉರಮಾಲ್ ನಿವಾಸಿಯಾಗಿದ್ದು, ಇವರೂ ಕೂಡಾ ಪ್ರತಿಷ್ಠಿತ ಕುಟಂಬದ ವ್ಯಕ್ತಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇಬ್ಬರೂ ಕೂಡಾ 60ರ ಆಸುಪಾಸಿನಲ್ಲಿ ಇರುವ ವ್ಯಕ್ತಿಗಳಾಗಿದ್ದು, ಈ ರೀತಿ ಪಾರ್ಕಿಂಗ್ ವಿಚಾರದಲ್ಲಿ ಕೈ ಕೈ ಮಿಲಾಯಿಸಿ ಚೂರಿ ಇರಿತ ಆಗುವ ಮಟ್ಟಕ್ಕೆ ತಲುಪಿದ ಬಗ್ಗೆ ಜನರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    Continue Reading

    LATEST NEWS

    Trending