Connect with us

    LATEST NEWS

    ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ನೂಡಲ್ಸ್ ತಿಂದು ಬಾಲಕಿ ಸಾ*ವು

    Published

    on

    ತಮಿಳುನಾಡು: ಆನ್ ಲೈನ್ ನಲ್ಲಿ ನೂಡಲ್ಸ್ ಖರೀದಿಸಿ ತಿಂದು ಬಾಲಕಿ ಸಾ*ವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.

    ತಿರುಚ್ಚಿಯ ತಿರುವೆರುಂಪುರ್ ಮೂಲದ ಸ್ಟೆಫಿ ಜಾಕ್ವೆಲಿನ್ (15) ಮೃ*ತ ಬಾಲಕಿ. ಮಗಳಿಗೆ ನೂಡಲ್ಸ್​​ ಇಷ್ಟವೆಂದು ಬಾಲಕಿಯ ತಾಯಿ ಆನ್‌ಲೈನ್‌ನಲ್ಲಿ ಮಸಾಲೆಯುಕ್ತ ನೂಡಲ್ಸ್ ಅನ್ನು ಆರ್ಡರ್ ಮಾಡಿದ್ದರು. ರಾತ್ರಿ ನೂಡಲ್ಸ್ ತಿಂದು ಮಲಗಿದ ಬಾಲಕಿ ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಏಳಲಿಲ್ಲ ಎನ್ನಲಾಗಿದೆ. ಇದಾದ ಬಳಿಕ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಆದರೆ ವೈದ್ಯರು ಬಾಲಕಿ ಅದಾಗಲೇ ಮೃ*ತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ನಂತರ ಬಾಲಕಿಯ ಶ*ವವನ್ನು ಮರ*ಣೋ*ತ್ತರ ಪರೀಕ್ಷೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ವೇಳೆ ನೂಡಲ್ಸ್ ತಿಂದ ನಂತರ ಬಾಲಕಿ ಮೃ*ತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ಖಚಿತಪಡಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ, ನೂಡಲ್ಸ್ ಅನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಜೀವಕ್ಕೆ ಅಪಾಯವಾಗುತ್ತದೆ. ಏಕೆಂದರೆ ಈ ನೂಡಲ್ಸ್ ಯಾವುದೇ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಇದರಲ್ಲಿ ಸೋಡಿಯಂ ಅಧಿಕವಾಗಿದ್ದು, ಇದು ರಕ್ತದೊತ್ತಡವನ್ನು ಹೆಚ್ಚಿಸಿ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ, ನೂಡಲ್ಸ್ ತಿನ್ನುವುದನ್ನು ತಪ್ಪಿಸಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಹನಿಟ್ರ್ಯಾಪ್ ಆರೋಪಿಗಳ ಸ್ಥಳ ಮಹಜರು..! ಸತ್ತಾರ್ ಮನೆ ಮುಂದೆ ಪ್ರತಿಭಟನೆ..!

    Published

    on

    ಮಂಗಳೂರು : ಹನಿಟ್ರ್ಯಾಪ್ ಪ್ರಕಣದಿಂದ ಮನನೊಂದು ಜೀವಾಂತ್ಯಗೊಳಿಸಿದ್ದ ಉದ್ಯಮಿ ಮುಮ್ತಾಜ್ ಅಲಿಯ ಆರೋಪಿಗಳ ಸ್ಥಳಮಹಜರು ನಡೆಸಲಾಗಿದೆ. ಕಾವೂರು ಮತ್ತು ಸುರತ್ಕಲ್ ಪೊಲೀಸರು ಬಿಗಿ ಭದ್ರತೆಯಲ್ಲಿ ಕೃಷ್ಣಾಪುರದ 7ನೇ ಬ್ಲಾಕ್‌ನಲ್ಲಿರುವ ಪ್ರಮುಖ ಆರೋಪಿ ಸತ್ತಾರ್ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಮುಮ್ತಾಜ್ ಅಲಿ ಬೆಂಬಲಿಗರು ಸತ್ತಾರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

    ಮುಮ್ತಾಜ್ ಅಲಿ ಜೀವಾಂತ್ಯಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಅವರ ಸಹೋದರ ಆರು ಜನರ ವಿರುದ್ಧ ದೂರು ನೀಡಿದ್ದರು. ರಹೆಮತ್ ಎಂಬ ಮಹಿಳೆ ಹಾಗೂ ಆಕೆಯ ಪತಿ ಮತ್ತು ಸತ್ತಾರ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು. ರೆಹಮತ್ ಹಾಗೂ ಶಾಫೀ ಎಂಬ ಆರೋಪಿಗಳನ್ನು ಪೊಲೀಸರು ಬಂಟ್ವಾಳ ತಾಲೂಕಿನ ನಂದಾವರದ ಬಳಿ ಬಂಧಿಸಿದ್ದು, ಆರೋಪಿ ಸತ್ತಾರ್ ಮುಂಬೈಗೆ ಪಲಾಯನ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು. ರಹೆಮತ್ ಹಾಗೂ ಶಾಫೀ ಕೃಷ್ಣಾಪುರದ 7ನೇ ಬ್ಲಾಕ್‌ನಲ್ಲಿರುವ ಸತ್ತಾರ್ ಮನೆಗೆ ಭೇಟಿ ನೀಡಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸತ್ತಾರ್ ಸಹಿತವಾಗಿ ಇನ್ನಿಬ್ಬರು ಆರೋಪಿಗಳನ್ನು ಕೃಷ್ಣಾಪುರದ ಸತ್ತಾರ್ ನಿವಾಸಕ್ಕೆ ಕರೆತರಲಾಗಿತ್ತು.

    ಪೊಲೀಸರು ಸ್ಥಳ ಮಹಜರಿಗೆ ಆಗಮಿಸಿದ ವಿಚಾರ ತಿಳಿಯುತ್ತಿದ್ದಂತೆ ಮುಮ್ತಾಜ್ ಅಲಿಯ ನೂರಾರು ಬೆಂಬಲಿಗರು ಸತ್ತಾರ್ ಮನೆಯ ಮುಂದೆ ಜಾಮಾಯಿಸಿದ್ದಾರೆ. ಈ ವೇಳೆ ಘೋಷಣೆಗಳನ್ನು ಕೂಗಿ ಸತ್ತಾರ್ ಹಾಗೂ ರಹೆಮತ್‌ಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸುರತ್ಕಲ್ ಹಾಗೂ ಕಾವೂರು ಪೊಲೀಸರು ಹೆಚ್ಚಿನ ಭದ್ರತೆಯಲ್ಲಿ ಸ್ಥಳಮಹಜರಿಗೆ ಬಂದಿದ್ದು, ಸತ್ತಾರ್ ಮನೆಯ ಮುಂದೆ ಜಮಾಯಿಸಿದ್ದ ಜನರನ್ನು ನಿಯಂತ್ರಿಸಿದ್ದಾರೆ. ಈ ವೇಳೆ ಕೊಂಚ ಕಾಲ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿತ್ತಾದರೂ, ಪೊಲೀಸರು ಆರೋಪಿಗಳ ಸ್ಥಳಮಹಜರು ನಡೆಸಿ ವಾಪಾಸಾಗಿದ್ದಾರೆ.  ಸಮಾಜ ಸೇವಕನಾಗಿ, ಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಮುಮ್ತಾಜ್ ಅಲಿ ರಹೆಮತ್ ಎಂಬ ಮಹಿಳೆಯ ಕಿರುಕುಳದಿಂದ ಜೀವಾಂತ್ಯಗೊಳಿಸಿದ್ದರು.

     

    Continue Reading

    LATEST NEWS

    ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ

    Published

    on

    ದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವನ್ ಅವರ ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

    ಆಶ್ರಮವನ್ನು ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಸದ್ಗುರು ಜಗ್ಗಿ ವಾಸುದೇವನ್ ಅವರು ‘ಬ್ರೈನ್ ವಾಶ್’ ಮಾಡಲಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಇಶಾ ಫೌಂಡೇಶನ್ ವಿರುದ್ಧ ಆರೋಪಿಸಿದ್ದರು. ಇದೀಗ ಈ ಪ್ಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಗೀತಾ ಮತ್ತು ಲತಾ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ.

    ಆದಾಗ್ಯೂ, ಆದೇಶವು ಈ ಪ್ರಕರಣಕ್ಕೆ ಮಾತ್ರ. ಆಶ್ರಮದಲ್ಲಿ ವೈದ್ಯರೊಬ್ಬರ ಮೇಲೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯದ ಆರೋಪವಿದೆ ಎಂದು ನ್ಯಾಯಾಲಯ ಹೇಳಿದೆ. ಬ್ರೈನ್ ವಾಶ್ ವಿಷಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್, ಆಶ್ರಮದ ಮೇಲೆ ದಾಳಿ ನಡೆಸಿದ ನಂತರ, ‘ಸಂಪೂರ್ಣವಾಗಿ ಅನುಚಿತ’ ರೀತಿಯಲ್ಲಿ ವರ್ತಿಸಿದೆ ಎದು ತಿಳಿಸಿದೆ.

    ಆಶ್ರಮಕ್ಕೆ ಸೇರಿದಾಗ ಅವರಿಬ್ಬರಿಗೂ 27 ಮತ್ತು 24 ವರ್ಷ. ಹೆಣ್ಣುಮಕ್ಕಳಿಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ. ಅವರು ಹೈಕೋರ್ಟಿಗೆ ಹಾಜರಾಗುವ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿಯ ಉದ್ದೇಶವನ್ನು ಪೂರೈಸಲಾಗಿದೆ. ಮುಂದೆ ಯಾವುದೇ ನಿರ್ದೇಶನಗಳ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

    Continue Reading

    BIG BOSS

    BBK11: ಓಪನ್ ಆಗಿದೆ ಬಿಗ್​ಬಾಸ್ ಮನೆಯ ಮುಖ್ಯದ್ವಾರ; ಕ್ಲೈಮ್ಯಾಕ್ಸ್​ನಲ್ಲಿ ಇದೆಯಾ ರೋಚಕ ಟ್ವಿಸ್ಟ್..!

    Published

    on

    ಬಿಗ್​ ಬಾಸ್​… ಆರಂಭದಲ್ಲೇ ರಣಾಂಗಣವಾಗಿ ಬದಲಾಗಿರೋ ಬಿಗ್ ಮನೆ ಅತಿರೇಕದ ಕದನಕ್ಕೂ ಸಾಕ್ಷಿಯಾಗಿದೆ. ಇದುವರೆಗೂ ಚರ್ಚೆಯಾಗುತ್ತಿದ್ದ ರೀತಿಯೇ ರಂಜಿತ್ ಹಾಗೂ ಲಾಯರ್ ಜಗದೀಶ್​ಗೆ ಕಿರುತೆರೆಯ ದೊಡ್ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ. ಹೊರಹೋಗಲು ಡೋರ್ ಓಪನ್ ಆಗಿದೆ.

    ಬಿಗ್‌ಬಾಸ್ ಅಂದ್ರೆ.. ಟಾಸ್ಕ್‌, ಎಲಿಮಿನೇಟ್, ಸೇವ್, ಜಗಳ ಎಲ್ಲ ಮಿಕ್ಸ್​ ಮಸಾಲ ಇದ್ದೇ ಇರುತ್ತೆ. ಆದ್ರೆ, ಈ ಸಲದ ಬಿಗ್‌ಬಾಸ್‌ ಸೀಸನ್ ನೋಡಿದ್ರೆ ಜನಕ್ಕೆ ಇದೇನಪ್ಪ ಬರೀ ಜಗಳ ಅನಿಸುವಂತೆ ಆಗ್ಬಿಟ್ಟಿದೆ. ಆರಂಭದಿಂದ ಬಿಗ್ ಮನೆಯಲ್ಲಿ ಬರೀ ಜಗಳದ್ದೇ ಸದ್ದು. ಅದರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಭಿಮಾನಿಗಳ ಪಾಲಿನ ಕಿಂಗ್ ಜಗದೀಶ್.

    ಆದ್ರೀಗ ಇದೇ ಜಗದೀಶ್, ಜಗಳದ ಜಟಾಪಟಿಯಿಂದ ಬಿಗ್ ಬಾಸ್​ ಮನೆಯಿಂದ ಹೊರಹೋಗೋ ಪರಿಸ್ಥಿತಿ ಬಂದಿದೆ. ಎಪಿಸೋಡ್‌ನಲ್ಲಿ ಬಿಗ್‌ಬಾಸ್‌ ಕಂಟೆಸ್ಟ್‌ಗಳಿಗೆ ಒಂದು ಟಾಸ್ಕ್‌ ಕೊಟ್ಟಿರುತ್ತೆ. ಟಾಸ್ಕ್‌ನಲ್ಲಿ ಗೆದ್ದೋರಿಗೆ ಇಬ್ಬರನ್ನ ಸೇವ್‌ ಮತ್ತು ನಾಮಿನೇಟ್‌ ಮಾಡೋ ಅವಕಾಶ ಇರುತ್ತೆ. ಆದರೆ ನಾಮಿನೇಟ್​ ವೇಳೆ ಜಗಳ ಆಗಿದ್ದೆ ಜಗಳ ಆಗೋಕೆ ಕಾರಣ ಆಗಿದೆ.

    ಈ ವಾರದ ನಾಮಿನೇಟ್‌ ಯಾರು?

    ಆಟ ಆದ ಮೇಲೆ.. ನೇರವಾಗಿ ನಾಮಿನೇಟ್‌ ಆಗಿದ್ದ ಅನುಷಾ.. ಐಶ್ವರ್ಯ, ಮಾನಸ, ಜಗದೀಶ್, ಗೋಲ್ಡ್‌ ಸುರೇಶ್, ಮೋಕ್ಷಿತಾ, ಧನರಾಜ್‌ ಹಾಗೂ ಉಗ್ರಂ ಮಂಜು ಈ ವಾರದ ನಾಮಿನೇಟ್‌ ಅಂತಾ ಬಿಗ್‌ಬಾಸ್ ಅಂತಿಮ ಪಟ್ಟಿಯನ್ನ ಡಿಸ್‌ಪ್ಲೇ ಮಾಡಿದೆ ಅಷ್ಟೇ.. ಅಷ್ಟೋತ್ತು ಆಟ ಆಡಿದವ್ರು ಈಗ ಗುಂಪು ಗುಂಪಾಗಿ ಸಮಜಾಯಿಷಿ ಕೋಡೋಕೆ ಶುರು ಮಾಡಿದರು.

    ಇಷ್ಟೇ ಆಗಿದ್ರೆ ಬಿಗ್‌ಬಾಸ್ ಮನೆ ರಣರಂಗ ಆಗುತ್ತಿರಲಿಲ್ಲ. ಆದ್ರೆ ಈ ಗ್ಯಾಪಲ್ಲಿ ಮಹಿಳಾ ಸ್ಪರ್ಧಿಯೊಬ್ಬರ ಬಗ್ಗೆ ಜಗದೀಶ್ ಹೇಳಿದ ಅದೊಂದು ಮಾತು ದೊಡ್ಡ ರಾದ್ದಾಂತ ಸೃಷ್ಟಿಸಿಬಿಟ್ಟಿತು. ಜಗದೀಶ್ ಆ ವರ್ಡ್‌ ಯೂಸ್‌ ಮಾಡ್ತಿದ್ದಂತೆ ಬಿಗ್‌ಬಾಸ್ ಮಹಿಳಾ ಮಣಿಗಳು ಲಾಯರ್‌ಗೆ ಪ್ರಶ್ನೆ ಮಾಡೋಕೆ ಶುರು ಮಾಡಿದರು.

    ಜಗದೀಶ್​​ ತಪ್ಪಾಗಿ ಮಾತನಾಡಿದ್ರಾ..?

    ಮಾಸನ ಹಾಗೂ ಜಗದೀಶ್ ಮಾತಿನ ಚಕಮಕಿ ವೇಳೇ ರಂಜಿತ್‌ ಬಂದು ಜಗದೀಶ್​​ರನ್ನ ತಳ್ಳಿದ್ದಾರೆ. ಅತ್ತ ಮಹಿಳೆಯರ ಬಗ್ಗೆ ಜಗದೀಶ್​​ ತಪ್ಪಾಗಿ ಮಾತಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನ ಮನೆಯಿಂದ ಹೊರಬರಲು ಬಿಗ್‌ಬಾಸ್‌ ಸೂಚಿಸಿದ್ದು, ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಡೋರ್ ಏನೋ ಓಪನ್ ಆಗಿದೆ. ಆದ್ರೆ, ಯಾರೂ ಹೊರಗೆ ಹೋಗಿರುವುದು ಎನ್ನುವುದು ತೋರಿಸಿಲ್ಲ. ಹೀಗಾಗಿ ಕ್ಲೈಮ್ಯಾಕ್ಸ್ ಇವತ್ತಿನ ಸಂಚಿಕೆಯಲ್ಲಿ ಕಾಣಸಿಗಲಿದೆ.

    Continue Reading

    LATEST NEWS

    Trending