Connect with us

    LATEST NEWS

    40 ಮಕ್ಕಳಿದ್ದ ಸ್ಕೂಲ್​ ಬಸ್​​ ಅಪ*ಘಾತ.. ಕಾರು ಪುಡಿ*ಪುಡಿ

    Published

    on

    ಹರಿಯಾಣದ ಹಿಸ್ಸಾರ್​​ನಲ್ಲಿ 40 ಮಕ್ಕಳಿದ್ದ ಶಾಲಾ ಬಸ್ ಹಲವು ವಾಹನಗಳಿಗೆ ಡಿ*ಕ್ಕಿ ಹೊಡೆದು, ಭಾರೀ ಅನಾ*ಹುತ ಸೃಷ್ಟಿಯಾಗಿದೆ.

    ದೆಹಲಿಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿದ್ದ ಬಸ್ ಭಾರೀ ಮಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ವೇಗವಾಗಿ ಚಲಿಸುತ್ತಿತ್ತು. ಚಾಲಕನಿಗೆ ನಿಯಂತ್ರಿಸಲು ಸಾಧ್ಯವಾಗದೇ ಶಾಲಾ ವಾಹನ ಕಾರಿಗೆ ಡಿ*ಕ್ಕಿ ಹೊಡೆದಿದೆ. ಆ ಕಾರು ಮುಂದೆ ಹೋಗುತ್ತಿದ್ದ ಕಂಟೇನರ್​​ಗೆ ಗುದ್ದಿದೆ.

    ಕಂಟೇನರ್​​​​ ನಿಧಾನವಾಗಿ ಚಲಿಸುತ್ತಿದ್ದ ಪರಿಣಾಮ ಪ್ರಾಣ*ಹಾನಿಯಾಗಿಲ್ಲ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಪ್ರಾಣಾ*ಪಾಯದಿಂದ ಪಾರಾಗಿದ್ದಾರೆ. ಡಿ*ಕ್ಕಿ ಹೊಡೆದ ರಭಸಕ್ಕೆ ಕಾರಿನ ಎಡಭಾಗ ನಜ್ಜುಗುಜ್ಜಾಗಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    DAKSHINA KANNADA

    ಮಂಗಳೂರು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು(ಜು.8)ರಜೆ

    Published

    on

    ಮಂಗಳೂರು : ಮಂಗಳೂರು ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ತಾಲೂಕಿನ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಜು.8ರಂದು ರಜೆ ಘೋಷಿಸಲಾಗಿದೆ.


    ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮಂಗಳೂರು ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಂಗಳೂರು ತಹಶೀಲ್ದಾರ್ ರಜೆ ಘೋಷಿಸಿ ಆದೇಶಿಸಿದ್ದಾರೆ.

    Continue Reading

    BANTWAL

    ಕಳ್ಳತನಕ್ಕೆ ವೃದ್ಧೆಯ ಕತ್ತು ಹಿಸುಕಿದ ಕಿರಾತಕರು..!

    Published

    on

    ಮಂಗಳೂರು : ಕಿಟಕಿಯ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು ವೃದ್ಧೆಯ ಕತ್ತು ಹಿಸುಕಿ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡೂರು ಗ್ರಾಮದ ಬಲಿಪಗುಳಿ ಎಂಬಲ್ಲಿ  ನಡೆದಿದೆ.

    ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು ಅಜ್ಜಿಯನ್ನು ಘಾಸಿಗೊಳಿಸಿ ಚಿನ್ನಾಭರಣ ಲೂಟಿದ್ದಾರೆ. ಮನೆಯ ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72)ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಚಿನ್ನ ಕಸಿದು ಪರಾರಿಯಾಗಿದ್ದಾರೆ.

    ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಸೊಸೆ ಐಸಮ್ಮಾ ಅವರಿಗೆ ಈ ವಿಚಾರ ಬೆಳಗ್ಗೆ ಅರಿವಿಗೆ ಬಂದಿದೆ. ಬೆಳಗ್ಗೆ ಎದ್ದು ಅತ್ತೆಯನ್ನು ಎಚ್ಚರಿಸಲು ಬಂದಾಗ ಅತ್ತೆ ಐಸಮ್ಮಾ ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು. ಏನೋ ತೀವೃ ಅಸೌಖ್ಯ ಎಂದು ಶಂಕಿಸಿ ಮನೆಯವರು, ನೆರೆಯ ಸಂಬಂದಿಕರಿಗೆ ಮಾಹಿತಿ ನೀಡಿದ್ದಾರೆ. ಸಂಬಂದಿಗಳು ಬಂದು ನೋಡಿದಾಗ ಕಿಟಕಿಯ ಸರಳು ತುಂಡರಿಸಿರುವುದು ಮತ್ತು ಮಹಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಇದಾದ ಬಳಿಕ ಮನೆಯವರು ಮತ್ತಷ್ಟು ಪರಿಶೀಲಿಸಿದಾಗ ಅಜ್ಜಿಯ ಕಿವಿಯೋಲೆಗಳು ಕಳ್ಳತನ ಆಗಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಮೂಲಕ ಪರಿಶೀಲನೆ ನಡೆಸಲಾಗಿದೆ. ಗಾಯಗೊಂಡ ವೃದ್ಧೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲೈಮಾನ್ ಸಹೋದರ ಇಬ್ರಾಹಿಂ ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    ಕತ್ತೆಗೂ ಒಂದು ಕಾಲ..! ಈ ದೇಶದ ಆರ್ಥಿಕತೆಗೆ ಕತ್ತೆಯೇ ಆಸರೆ..!

    Published

    on

    ಮಂಗಳೂರು :  ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಪಾಕಿಸ್ತಾನ ಸಾಲದ ಸುಳಿಯಲ್ಲಿ ನಲುಗಿ ಹೋಗಿದೆ. ಆದ್ರೆ ಸೂಕ್ತ ಆರ್ಥಿಕ ನೀತಿಯನ್ನು ಜಾರಿ ಮಾಡದ ಪಾಕಿಸ್ತಾನ ಆರ್ಥಿಕ ನಷ್ಟದಿಂದ ಹೊರಬರಲು ದೇಶದಲ್ಲಿ ಕತ್ತೆ ಸಾಕಾಣಿಕೆಗೆ ಉತ್ತೇಜನ ನೀಡಿದೆ. ಇದರಿಂದ ಪಾಕಿಸ್ತಾನದಲ್ಲಿ ದಿನದಿಂದ ದಿನಕ್ಕೆ ಕತ್ತೆಗಳ ಸಂಖ್ಯೆ ಏರಿಕೆಯಾಗ್ತಾ ಇದು ಜನರ ಆರ್ಥಿಕ ಪರಿಸ್ಥಿತಿ ಚೇತರಿಸುತ್ತಿದೆಯಂತೆ.

    ಕತ್ತೆಯ ಸಂಖ್ಯೆ ಏರಿಕೆ ಕಾರಣ ಇದು..!

    ಪಾಕಿಸ್ತಾನದಲ್ಲಿ ಕಳೆದೊಂದು ವರ್ಷದಲ್ಲಿ ಕತ್ತೆಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು, ದೇಶದ 80 ಲಕ್ಷ ಜನ ಈ ಕತ್ತೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕತ್ತೆಗಳಿಂದಾಗಿಯೇ ತನ್ನ ವಿದೇಶಿ ವಿನಿಮಯ ಹೆಚ್ಚಿಸಿಕೊಂಡಿರುವ ಪಾಕಿಸ್ತಾನ, ದೇಶದ ಆರ್ಥಿಕ ಸುಧಾರಣೆಗೆ ಮುಂದಾಗಿದೆ. ಚೀನಾ ದೇಶದಲ್ಲಿ ಪಾಕಿಸ್ತಾನದ ಕತ್ತೆಗಳಿಗೆ ಬೇಡಿಕೆ ಇದ್ದು, ಪಾಕಿಸ್ತಾನ ಈ ಕತ್ತೆಗಳನ್ನು ಚೀನಾ ದೇಶಕ್ಕೆ ರಪ್ತು ಮಾಡುತ್ತಿದೆ. ಈ ರಪ್ತಿನಿಂದಾಗಿ ಪಾಕಿಸ್ತಾನದ ಜನರ ಗಳಿಕೆಯಲ್ಲಿ 40% ಹೆಚ್ಚಳವಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಮಹಮ್ಮದ್ ಔರಂಗಜೇಬ್ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 15 ಕೋಟಿ ಜಾನುವಾರುಗಳಿವೆ. ಅವುಗಳಲ್ಲಿ ಸರಿ ಸುಮಾರು 59 ಲಕ್ಷ ಕತ್ತೆಗಳೇ ಇದೆ ಅಂತೆ.


    ಜಗತ್ತಿನ ಕತ್ತೆಗಳ ದೊಡ್ಡ ಆಮದುದಾರ ದೇಶ ಚೀನಾ..!

    ಚೀನಾ ದೇಶದಲ್ಲಿ ಕತ್ತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಜಗತ್ತಿನ ಹಲವು ದೇಶಗಳಿಂದ ಕತ್ತೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದೀಗ ಪಾಕಿಸ್ತಾನ ಕತ್ತೆಗಳನ್ನು ಚೀನಾ ದೇಶಕ್ಕೆ ರಪ್ತು ಮಾಡುವ ಮೂರನೇ ದೊಡ್ಡ ದೇಶವಾಗಿದೆ. ಚೀನಾದಲ್ಲಿ ಕತ್ತೆಗಳಿಂದ ಔಷಧ ತಯಾರಿ ಸೇರಿದಂತೆ ಕತ್ತೆ ಹಾಲು, ಮಾಂಸ ಹಾಗೂ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಇನ್ನು ಕತ್ತೆ ಮಾಂಸ ಚೀನಾ ದೇಶದ ಜನಪ್ರೀಯ ಸ್ಟ್ರೀಟ್ ಫುಡ್‌ಗಳಲ್ಲಿ ಒಂದಾಗಿದೆ.

    Continue Reading

    LATEST NEWS

    Trending