Connect with us

LATEST NEWS

ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಪರ್ಸನಲ್ ವಿಡಿಯೋ ಕಾರಣ: ಡಿ.ಕೆ. ಶಿವಕುಮಾರ್

Published

on

ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಪರ್ಸನಲ್ ವಿಡಿಯೋ ಕಾರಣ: ಡಿ.ಕೆ. ಶಿವಕುಮಾರ್

ಕಾರವಾರ : ಪರ್ಸನಲ್ ವಿಡಿಯೋವೊಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಅವರು ಯಾರದ್ದೋ ವೈಯಕ್ತಿಕ ವಿಡಿಯೋವೊಂದನ್ನು ವಿಧಾನಪರಿಷತ್ ಸದಸ್ಯರಿಗೆ ಹಾಗೂ ಸಚಿವರಿಗೆ ಕೊಟ್ಟಿದ್ದ ಮಾಹಿತಿ 2-3 ತಿಂಗಳ ಹಿಂದೆ ಬಂದಿತ್ತು.

ಇದನ್ನು ಮುಂದಿಟ್ಟುಕೊಂಡು ವಿಧಾನಪರಿಷತ್ ಸದಸ್ಯರು, ಸಚಿವರಿಬ್ಬರೂ ಸೇರಿ ಮುಖ್ಯಮಂತ್ರಿ ಹಾಗೂ ಸಂತೋಷ್ ಇಬ್ಬರಿಗೂ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಕೇಳಿದ್ದೆ.

ಅದರ ಸತ್ಯಾಂಶಗಳೇನೆಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.ವಿಡಿಯೋದಲ್ಲಿ ಗುಪ್ತ ಮಾಹಿತಿಯೇನೋ ಅಡಗಿದೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸುವುದು ಸಾಮಾನ್ಯ ವಿಚಾರವಲ್ಲ.

ಹಾಗಾಗಿ ಈ ಕುರಿತು ತನಿಖೆಯಾಗಬೇಕಿದೆ. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು. ಆದರೆ, ಈ ತನಿಖೆಯು ರಾಜ್ಯ ಸರ್ಕಾರದಿಂದ ಆಗಬಾರದು ಎಂದು ತಿಳಿಸಿದ್ದಾರೆ.

DAKSHINA KANNADA

UDUPI : ಕ್ರೈಸ್ತ ಧರ್ಮದ ಪ್ರಚಾರಕ್ಕೆ ಬಂದವರನ್ನು ಬಾ.. ಬಾ.. ಎಂದು ಅಟ್ಟಾಡಿಸಿಕೊಂಡು ಹೋದ ಸ್ಥಳೀಯ

Published

on

ಉಡುಪಿ : ಕ್ರೈಸ್ತ ಧರ್ಮದ ಪ್ರಚಾರಕ್ಕೆ ಬಂದವರನ್ನು ಸ್ಥಳೀಯರೊಬ್ಬರು ಅಟ್ಟಾಡಿಸಿಕೊಂಡು ಹೋದ ಘಟನೆ ಉಡುಪಿ ಜಿಲ್ಲೆ  ಬ್ರಹ್ಮಾವರ ತಾಲೂಕಿನ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಮಹಿಳೆಯರು ಉಪ್ಪಿನಕೋಟೆಯ ಬಳಿ ಕ್ರೈಸ್ತ ಧರ್ಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಧರ್ಭದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಆಕ್ರೋಶಗೊಂಡಿದ್ದಾರೆ.

ಮತಾಂತರ ಮಾಡಲು ಬಂದಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದ ಆತ ಬಳಿಕ ಕೋಲು ಹಿಡಿದು ಅವರನ್ನು ಓಡಿಸಿದ್ದಾರೆ. ಅವ್ಯಾಚ ಶಬ್ಧಗಳಿಂದ ನಿಂದಿಸಿ ಮಹಿಳೆಯರನ್ನು ಓಡಿಸಿದ್ದು, ಹೆದರಿ ಓಡಿದ ಮಹಿಳೆಯರನ್ನು ಬೆನ್ನು ಹತ್ತಿ ಇನ್ನೊಮ್ಮೆ ಈ ಭಾಗಕ್ಕೆ ಭಾರದಂತೆ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ಬಗ್ಗೆ ಸಾಕಷ್ಟು ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

Continue Reading

LATEST NEWS

ಮದುವೆಯ ಕಾರಣ ಕೊಟ್ಟು ಮಹಿಳೆಯನ್ನು ಕೆಲಸದಿಂದ ತೆಗೆಯುವಂತಿಲ್ಲ- ಸುಪ್ರೀಂಕೋರ್ಟ್

Published

on

SUPREME COURT : ಮದುವೆ ಎಂಬುವುದು ಒಬ್ಬ ಹುಡುಗ ಹಾಗೂ ಹುಡುಗೀಯ ಬದುಕಿನಲ್ಲಿ ಅತ್ಯಮೂಲ್ಯ ಕ್ಷಣ. ಜೀವನದಲ್ಲಿ ಒಂದು ಬಾರಿ ಮಾತ್ರ ಮದುವೆ ಆಗುವ ಸೌಭಾಗ್ಯ ಕೂಡಿ ಬಂದಾಗ ಹೆಣ್ಣು ಮಗಳು ತಾಯಿ ಮನೆ ಬಿಟ್ಟು ಗಂಡನ ಮನೆ ಸೇರುವುದು ವಾಡಿಕೆ. ಆದ್ರೆ ಒಬ್ಬಳು ಕೆಲಸ ಮಾಡಿ ಮನೆ ಸಾಗಿಸುವ ಯುವತಿಯನ್ನು ಮದುವೆ ಎಂಬ ಕಾರಣದಿಂದ ಕೆಲಸದಿಂದ ವಜಾ ಮಾಡುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಕೋರ್ಟ್ ನೀಡಿದೆ.
ಹೌದು ಇದು ಅಚ್ಚರಿ ಎನಿಸಿದರೂ ಸತ್ಯ. ಮಹಿಳೆಯೊಬ್ಬರು ಮದುವೆಯಾದರು ಎಂಬುದು ಅವರನ್ನು ಕೆಲಸದಿಂದ ತೆಗೆಯಲು ಬಾರದು ಎಂದು ಸುಪ್ರೀಕೋರ್ಟ್ ಹೇಳಿದೆ. ಸೇನಾ ನರ್ಸಿಂಗ್ ಸೇವೆಯಲ್ಲಿ ಕಾಯಂ ಉದ್ಯೋಗಿಯಾಗಿದ್ದ ಮಹಿಳೆಯನ್ನು ಮದುವೆಯಾದ ಕೂಡಲೇ ಕೆಲಸದಿಂದ ವಜಾಗೊಳಿಸಿದ್ದ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.


1988ರಲ್ಲಿ ಮದುವೆ ಬಳಿಕ ಕೆಲಸದಿಂದ ಬಿಡುಗಡೆಗೊಂಡಿದ್ದ ಕಾಯಂ ಉದ್ಯೋಗಿಗೆ ಮಿಲಿಟರಿ ನರ್ಸಿಂಗ್ ಸರ್ವಿಸ್‌ನಿಂದ 60 ಲಕ್ಷ ರೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸೇನಾಪಡೆಯಲ್ಲಿ ನರ್ಸ್‌ ಆಗಿದ್ದ ಲೆ.ಸೆಲಿನಾ ಜಾನ್‌ ಅವರನ್ನು ಮದುವೆಯಾದ ಕಾರಣಕ್ಕೆ 1988ರಲ್ಲಿ ಉದ್ಯೋಗದಿಂದ ವಜಾ ಮಾಡಲಾಗಿತ್ತು. ಅವರು ಇದನ್ನು ಸೇನಾಪಡೆಯ ನ್ಯಾಯಾಧೀಕರಣದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಧೀಕರಣವು ಸೆಲಿನಾ ಅವರ ಕೆಲಸದ ಅವಧಿಯ ವೇತನ ನೀಡಲು ಸೂಚಿಸಿತ್ತು. ಆದರೆ 1977ರ ಕಾಯ್ದೆಯ ಪ್ರಕಾರ ಮದುವೆಯಾದ ಮಹಿಳೆಯರನ್ನು ಕೆಲಸದಿಂದ ತೆಗೆಯಬಹುದಿತ್ತು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಈ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ವಜಾ ಮಾಡುವುದು ತಪ್ಪು. ಇದು ಮನುಷ್ಯರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಹೀಗಾಗಿ ಇಲ್ಲಿಯವರೆಗೆ ಸೆಲಿನಾ ಎಷ್ಟು ದುಡಿಯುತ್ತಿದ್ದರು ಎಂಬುದನ್ನು ಅಂದಾಜಿಸಿ 60 ಲಕ್ಷ ರು. ಪಾವತಿ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ.

 

Continue Reading

DAKSHINA KANNADA

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ನೂತನ ಧ್ವಜ ಮರ ಸ್ಥಾಪನೆ

Published

on

ಸುರತ್ಕಲ್‍: ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ನೂತನ ಧ್ವಜಮರ ಸ್ಥಾಪನೆ ಫೆ. 21ರಂದು  ಜರಗಿತು.


ಶಿಬರೂರು ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು,ಪೂಜೆ ನೆರವೇರಿದ ಬಳಿಕ ಧ್ವಜಮರವನ್ನು ಪುನರ್ ಸ್ಥಾಪಿಸಲಾಯಿತು.

ಇದೇ ಸಂದರ್ಭ ಎ.22ರಿಂದ 30ರವರೆಗೆ ನಡೆಯುವ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.


ಉಮೇಶ್ ಗುತ್ತಿನಾರ್ ಶಿಬರೂರುಗುತ್ತು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಜಾಲಗುತ್ತು, ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಶೆಟ್ಟಿ, ಸಿ.ಎ ಉದಯಕುಮಾರ್ ಶೆಟ್ಟಿ, ಉದಯ ಸುಂದರ್ ಶೆಟ್ಟಿ, ಯದುನಾರಾಯಣ ಶೆಟ್ಟಿ , ಸುಧಾಕರ ಪೂಂಜ ಸುರತ್ಕಲ್, ಸಿ.ಎ ಸುದೇಶ್ ಕುಮಾರ್ ರೈ, ಬಾಲಕೃಷ್ಣ ಕೊಠಾರಿ,ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಕ್ಷೇತ್ರದ ಸಮಿತಿ ಪ್ರಮುಖರು, ಸಂಬಂಧಪಟ್ಟ ಗುತ್ತು ಮನೆತನದವರು , ಗ್ರಾಮಸ್ಥರು ಭಾಗವಹಿಸಿದ್ದರು

Continue Reading

LATEST NEWS

Trending