Monday, July 4, 2022

ಬಂಟ್ವಾಳದಲ್ಲಿ ಗಂಧದ ಮರ ಮಾರಾಟಕ್ಕೆ ಯತ್ನಿಸುತ್ತಿದ್ದವರ ಬಂಧನ

ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳಿಬ್ಬರನ್ನು  ಕಲ್ಲಡ್ಕದ ವೀರಕಂಭದಲ್ಲಿ ವಲಯ ಆರಣ್ಯಾಧಿಕಾರಿಗಳು ಬಂಧಿಸಿದ ಘಟನೆ ನಡೆದಿದೆ.

ಕಾರ್ಯಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪಾತೂರು ನಿವಾಸಿ ಇಬ್ರಾಹಿಂ, ಹಾಗೂ ಇರಾ ಗ್ರಾಮದ ಮೊಯಿದ್ದೀನ್ ಬಂಧಿತ ಆರೋಪಿಗಳು‌. ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ತಲೆಮರೆಸಿಕೊಂಡ ಆರೋಪಿಗಳು‌. ಬಂಧಿತರಿಂದ ಅಂದಾಜು ಮೂರು ಲಕ್ಷ ಮೌಲ್ಯ ದ ಗಂಧದ ಮರದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪದಾರ್ಥಕ್ಕೆ ಉಡ ಮಾಂಸ 

ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಆರೋಪಿಗಳು ಕಾಡು ಪ್ರಾಣಿಯಾದ ಉಡ ವೊಂದನ್ನು ಹಿಡಿದು ಪದಾರ್ಥ ಮಾಡಲು ತಯಾರಿ ನಡೆಸುತ್ತಿದ್ದರು.

ಈ ವೇಳೆ ಆ ಪ್ರಾಣಿಯನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಸ್ಪಷ್ಟವಾದ ಮಾಹಿತಿ ತನಿಖೆಯ ಬಳಿಕ ತಿಳಿಯಬೇಕಾಗಿದೆ. ಆರೋಪಿಗಳ ಬಂಧಿಸಿದ ಅರಣ್ಯಾಧಿಕಾರಿಗಳು ವಿಚಾರಣೆ ಕಾರ್ಯ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕಣಿವೆಗೆ ಉರುಳಿದ ಶಾಲಾ ಬಸ್‌: 16 ವಿದ್ಯಾರ್ಥಿಗಳು ಕೊನೆಯುಸಿರು

ಕುಲು: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ ಕಣಿವೆಗೆ ಉರುಳಿ ಬಿದ್ದ ಪರಿಣಾಮ 16 ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.‘ಸಾಯಿಂಜ್‌ಗೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 8.30ರ...

ಉಡುಪಿಯ ಸಿನಿ ಶೆಟ್ಟಿಗೆ ಒಲಿದ ‘2022 ನೇ ಮಿಸ್ ಇಂಡಿಯಾ’ ಕಿರೀಟ

ಮುಂಬೈ: 2022ನೇ ಸಾಲಿನ ಮಿಸ್ ಇಂಡಿಯಾ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ಉಡುಪಿಯ ಮೂಲದ ಇನ್ನಂಜೆಯ ನಿವಾಸಿಯಾಗಿರುವ ಸಿನಿ ಶೆಟ್ಟಿಯವರು ಮಿಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಈ ಕಾರ್ಯಕ್ರಮವು ನಿನ್ನೆ ಸಂಜೆ ಮುಂಬೈನ...

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ 'ತುಳು ಕೂಟ ಸಿಡ್ನಿ'ಯು ಜು.17ರಂದು ಸಿಡ್ನಿಯಲ್ಲಿ 'ಆಟಿಡ್‌ ಒಂಜಿ ದಿನ' ಆಯೋಜಿಸಿದೆ.ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ...