Thursday, August 11, 2022

ಮಲಗಿದಲ್ಲಿಯೇ ಬಾಲಕಿ ಕೊರಳಿಗೆ ಸುತ್ತು ಹಾಕಿ ಕಚ್ಚಿದ ಹಾವು: ಅಸಹಾಯಕನಾದ ಉರಗ ತಜ್ಞ, ಬಾಲಕಿ ಗಂಭೀರ

ವಾರ್ಧಾ: ಮಲಗಿದಲ್ಲಿಯೇ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರಹಾವು ಸುಮಾರು ಎರಡು ಗಂಟೆ ಕೊನೆಗೆ ಆಕೆಯನ್ನು ಕಚ್ಚಿ ಅಲ್ಲಿಂದ ಹೋದ ಭಯಾನಕ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ವರದಿಯಾಗಿದೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.


ನಿನ್ನೆ ಮಧ್ಯರಾತ್ರಿ ಸುಮಾರು 12-1 ಗಂಟೆಗೆ, ಏಳು ವರ್ಷದ ಬಾಲಕಿ ಮಲಗಿದ್ದಾಗ ಈ ಹಾವು ಬಂದಿದೆ. ಅದರ ಬುಸುಗುಡುತ್ತಿದ್ದ ವೇಳೆ ಪಾಲಕರಿಗೆ ಎಚ್ಚರವಾಗಿದೆ. ಅಷ್ಟರಲ್ಲಿಯೇ ಹಾವು ಹೆಡೆ ಎತ್ತಿ ನಿಂತಿದೆ. ಏನು ಮಾಡುವುದು ಎಂದು ತಿಳಿಯದ ಅವರು ಕೂಡಲೇ ಉರಗ ತಜ್ಞನಿಗೆ ಕರೆ ಮಾಡಿದ್ದಾರೆ.


ಆದರೆ ಹೆಡೆ ಒಂದು ಬಿಟ್ಟು ಸಂಪೂರ್ಣ ಹಾವು ಕುತ್ತಿಗೆಗೆ ಸುತ್ತಿಕೊಂಡಿದ್ದರಿಂದ ಆ ಸಮಯದಲ್ಲಿ ಅದನ್ನು ಹಿಡಿಯುವುದು ತಜ್ಞನಿಗೂ ಕಷ್ಟವಾಯಿತು.

ಸ್ವಲ್ಪ ಹತ್ತಿರ ಹೋದರೂ ಹಾವು ಬಾಲಕಿಗೆ ಕಚ್ಚುವ ಸಾಧ್ಯತೆ ಇತ್ತು.

ಆದರೂ ತನ್ನ ಕೈಯಲ್ಲಾದದ್ದನ್ನು ಆತ ಮಾಡಿದರೂ ಹಾವನ್ನು ಹಿಡಿಯಲು ಆಗಲಿಲ್ಲ.
ಎಲ್ಲರೂ ಅಸಹಾಯಕರಾಗಿ ನೋಡುತ್ತಿದ್ದರು.

ಕೂಡಲೇ ಬಾಲಕಿಗೆ ಎಚ್ಚರವಾಗಿಬಿಟ್ಟಿದೆ. ಆಕೆ ಅಲುಗಾಡುತ್ತಿದ್ದಂತೆಯೇ ಹಾವು ಆಕೆಯನ್ನು ಕಚ್ಚಿ ಅಲ್ಲಿಂದ ಸರಸರ ಹರಿದು ಹೋಗಿದೆ.

ಈ ಘಟನೆ ತಿಳಿಯುತ್ತಿದ್ದಂತೆಯೇ ಅಕ್ಕಪಕ್ಕದ ಮನೆಯವರ ಸ್ಥಳಕ್ಕೆ ಬಂದು ಅದರ ವಿಡಿಯೋ ಮಾಡಿದ್ದಾರೆ.

ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಬೇರೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

LEAVE A REPLY

Please enter your comment!
Please enter your name here

Hot Topics

ಅಮೃತ ಮಹೋತ್ಸವ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕು-ಶಾಸಕ ಪೂಂಜಾ

ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತಮಹೋತ್ಸವ ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಜಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಇಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.ಈ ವೇಳೆ ಮಾಧ್ಯಗಳನ್ನು ಉದ್ದೇಶಿಸಿ ಮಾತನಾಡಿದ...

ಮಂಗಳೂರು: ಚಪ್ಪಲಿಯಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಲಕ್ಷ ರೂ ಮೌಲ್ಯದ ಚಿನ್ನ ವಶ

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಂದಿಳಿದ ಕೇರಳ ಮೂಲದ ಪ್ರಯಾಣಿಕನೊಬ್ಬ ಚಪ್ಪಲಿಯಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಆ.10 ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದ ಸ್ಪೈಸ್‌ ಜೆಟ್‌...

ಬೆಳ್ತಂಗಡಿ: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು,ತೆಂಕಕಾರಂದೂರು ಇದರ ವತಿಯಿಂದ ನಡೆಯುವ 35 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್  ಬಳಂಜದಲ್ಲಿ ...