Connect with us

LATEST NEWS

ನರಶಸ್ತ್ರಚಿಕಿತ್ಸಕರು ನನ್ನ ತಲೆಬುರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಲು ಪ್ರಯತ್ನಿಸಿದರು…ಎಂದ ಸದ್ಗುರು! ಏನಾಯ್ತು ಸದ್ಗುರುಗೆ? ಈಗ ಹೇಗಿದ್ದಾರೆ?

Published

on

ಸದ್ಗುರು ಜಗ್ಗಿ ವಾಸುದೇವ್ ಅವರು ಮೆದುಳು ರಕ್ತಸ್ರಾವದಿಂದಾಗಿ ದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಅವರ ಇಶಾ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದೂ ಹೇಳಿದೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸದ್ಗುರುಗಳು ತಮ್ಮ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಕೊಂಡೇ ತಮಾಷೆಯ ಮಾತುಗಳನ್ನು ಆಡಿದ್ದಾರೆ. “ಅಪೋಲೋ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕರು ನನ್ನ ತಲೆಬುರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಲು ಪ್ರಯತ್ನಿಸಿದರು. ಆದರೆ ಅವರಿಗೆ ಏನೂ ಕಾಣಲಿಲ್ಲ. ಸಂಪೂರ್ಣವಾಗಿ ಖಾಲಿಯಾಗಿದೆ” ಎಂದಿದ್ದಾರೆ.

“ನಾನು ದೆಹಲಿಯಲ್ಲಿದ್ದೇನೆ, ತಲೆಬುರುಡೆಗೆ ಬ್ಯಾಂಡೇಜ್ ಮಾಡಲಾಗಿದೆ ಆದರೆ ಯಾವುದೇ ಹಾನಿ ಇಲ್ಲ” ಎಂದು ಅವರು ಹೇಳಿದ್ದಾರೆ.

ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು :


ಸದ್ಗುರು ಜಗ್ಗಿ ವಾಸುದೇವ್ ಕಳೆದ ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ನೋವಿನ ತೀವ್ರತೆಯ ಹೊರತಾಗಿಯೂ, ಅವರು ತಮ್ಮ ವೇಳಾಪಟ್ಟಿ ಮತ್ತು ಚಟುವಟಿಕೆಗಳನ್ನು ಮುಂದುವರೆಸಿದ್ದರು. 8 ಮಾರ್ಚ್ 2024 ರಂದು ಮಹಾಶಿವರಾತ್ರಿ ಆಚರಣೆಗಳಲ್ಲಿ ಕೂಡ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

ಮಾರ್ಚ್ 14 ರಂದು ದೆಹಲಿಗೆ ಆಗಮಿಸಿದಾಗ ಮಧ್ಯಾಹ್ನದ ವೇಳೆಗೆ ತಲೆನೋವು ತೀವ್ರವಾಯಿತು ಎಂದು ಫೌಂಡೇಶನ್ ಹೇಳಿದೆ, “ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಡಾ ವಿನಿತ್ ಸೂರಿ ಅವರ ಸಲಹೆಯ ಮೇರೆಗೆ ಸದ್ಗುರು ತುರ್ತು ಎಂಆರ್ ಐಗೆ ಒಳಗಾಗಿದ್ದರು, ಅದರಲ್ಲಿ ಮೆದುಳಿನಲ್ಲಿ ಭಾರೀ ರಕ್ತಸ್ರಾವ ಆಗುತ್ತಿರುವುದು ಗೊತ್ತಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಆದರೂ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸದೆ ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದರು ಎಂದು ಪ್ರಕಟಣೆಯಲ್ಲಿ ಹೇಳಿದೆ.
ಮಾರ್ಚ್ 17 ರಂದು, ಸದ್ಗುರುಗಳು ತಮ್ಮ ಎಡಗಾಲಿನ ದೌರ್ಬಲ್ಯ ಮತ್ತು ನಿರಂತರ ವಾಂತಿಯೊಂದಿಗೆ ಉಲ್ಬಣಗೊಳ್ಳುವ ತಲೆನೋವಿನ ಬಗ್ಗೆ ದೂರು ನೀಡಿದ್ದರಿಂದ ಅವರ ಸ್ಥಿತಿಯು ಹದಗೆಟ್ಟಿತು.

“ಕೊನೆಗೆ ಅವರನ್ನು ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಮೆದುಳಿನ ಊತದಲ್ಲಿ ಗಮನಾರ್ಹ ಹೆಚ್ಚಳ ಮತ್ತು ಮೆದುಳನ್ನು ಒಂದು ಬದಿಗೆ ಮಾರಣಾಂತಿಕವಾಗಿ ಬದಲಾಯಿಸುವುದನ್ನು ಬಹಿರಂಗಪಡಿಸಿತು. ಅವರ ತಲೆಬುರುಡೆಯಲ್ಲಿ ರಕ್ತಸ್ರಾವವನ್ನು ನಿವಾರಿಸಲು ಅವರು ದಾಖಲಾದ ಕೆಲವೇ ಗಂಟೆಗಳಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಗುರು ಶಸ್ತ್ರಚಿಕಿತ್ಸೆಯ ನಂತರ ವೆಂಟಿಲೇಟರ್‌ನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಯಿತು” ಎಂದು ಹೇಳಲಾಗಿದೆ.

BELTHANGADY

ಕಾಂಗ್ರೆಸ್ ಹಿರಿಯ ಮುಖಂಡ ವಸಂತ ಬಂಗೇರ ವಿಧಿವಶ

Published

on

ಬೆಳ್ತಂಗಡಿ: ಕಾಂಗ್ರೆಸ್ ಹಿರಿಯ ಮುಖಂಡ ಬೆಳ್ತಂಗಡಿ ಮಾಜಿ ಶಾಸಕ, ಸಚಿವ ವಸಂತ ಬಂಗೇರ(79 ವ) ಇಂದು(ಮೇ.8) ಸಂಜೆ 4 ಗಂಟೆಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಇವರು ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

vasanth bangera

ಮುಂದೆ ಓದಿ..; ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

1946 ಜನವರಿ 15 ರಂದು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದಲ್ಲಿ ಜನಿಸಿದ ಇವರು ದಿ. ಕೇದೆ ಸುಬ್ಬ ಪೂಜಾರಿ ಹಾಗೂ ದಿ. ದೇವಕಿ ದಂಪತಿ ಪುತ್ರ. 1972 ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 1983 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 1985 ರಲ್ಲಿ ಮತ್ತೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1989 ರಲ್ಲಿ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಮತ್ತೆ 1994 ರಲ್ಲಿ  ಜೆಡಿಎಸ್‌ನಿಂದ ಸ್ಪರ್ಧಿಸಿ ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸುಮಾರು 52 ವರ್ಷಗಳ ಕಾಲ ರಾಜಕೀಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಎಂಟು ಬಾರಿ ಸ್ಪರ್ಧಿಸಿ ಐದು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ ಸೇವೆಸಲ್ಲಿಸಿದ್ದ ಬಂಗೇರರು, ಶ್ರೀ ಗುರುನಾರಾಯಣ ಸೇವಾ ಸಂಘದ ಗೌರವಾಧ್ಯಕ್ಷರಾಗಿ, ಗುರುದೇವ ಕಾಲೇಜಿನ ಅಧ್ಯಕ್ಷರಾಗಿ, ಗುರುದೇವ ಸಹಕಾರಿ ಸಂಘದ ಸ್ಥಾಪಕರಲ್ಲಿ ಓರ್ವರಾಗಿ ಕೊಡುಗೈ ದಾನಿಯಾಗಿಯಾಗಿದ್ದರು. ಮೃತರು ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಇಬ್ಬರು ಪುತ್ರಿಯರು, ಬಂಧು ವರ್ಗದವರನ್ನು ಅಗಲಿದ್ದಾರೆ.

ಮೇ. 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Continue Reading

FILM

ಪ್ರತಿಷ್ಟಿತ ಮೆಟ್ ಗಾಲ ಸಮಾರಂಭದಲ್ಲಿ ಮಿಂಚಿದ ಆಲಿಯಾ ಭಟ್; ಆಲಿಯಾ ವಿಶಿಷ್ಟ ಉಡುಗೆಗೆ ಬೆರಗಾದ್ರು ಫ್ಯಾನ್ಸ್

Published

on

ಜಗತ್ತಿನ ವಿವಿಧ ಮನರಂಜನಾ ಕ್ಷೇತ್ರಗಳಲ್ಲಿ ತೊಡಗಿರುವ ಗಣ್ಯರು ಭಾಗಿಯಾಗುವ ಪ್ರತಿಷ್ಠಿತ ಮೆಟ್ ಗಾಲ ಸಮಾರಂಭದಲ್ಲಿ ಈ ಬಾರಿ ಆಲಿಯಾ ಭಟ್ ತನ್ನ ವಿಶಿಷ್ಟ ಉಡುಗೆಯ ಮೂಲಕ ಗಮನ ಸೆಳೆದಿದ್ದಾರೆ. ಅವರು ಸಬ್ಯಸಾಚಿ ಮುಖರ್ಜಿ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅವರ ಲುಕ್‌ಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ. ಅವರ ಸೊಗಸಾದ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


ದೇಸಿ ಉಡುಪಿಗೂ ಟ್ರೇನ್ ವಿನ್ಯಾಸ:

ತಿಳಿ ನೀಲಿ, ಬಿಳಿ ಮಿಶ್ರಿತ ಸುಂದರ ಸೀರೆಯಲ್ಲಿದ್ದ ಉದ್ದನೆಯ ಟ್ರೇನ್ ಸೆರಗು ಸೀರೆಗೆ ಮೆರುಗು ನೀಡಿತ್ತು. ಸಾಮಾನ್ಯವಾಗಿ ಗೌನ್ ಗೆ ಇಂತಹ ಟ್ರೇನ್ ವಿನ್ಯಾಸಗೊಳಿಸಲಾಗುತ್ತದೆ. ದೇಸಿ ಉಡುಪಿಗೂ ಟ್ರೇನ್ ವಿನ್ಯಾಸಗೊಳಿಸಿ ಕಂಟೆಂಪರರಿ ಸ್ಪರ್ಶ ನೀಡಬಹುದು ಎಂದು ಆಲಿಯಾ ಭಟ್ ತೋರಿಸಿದ್ದಾರೆ.


‘ಗಾರ್ಡನ್ ಆಫ್ ಟೈಮ್’ ಡ್ರೆಸ್ ಕೋಡ್ ಗೆ ಅನುಗುಣವಾಗಿ ತಿಳಿ ಗುಲಾಬಿ ಎಂಬ್ರಾಯ್ಡರಿ ಹೂವು, ತಿಳಿ ಹಸಿರು ಎಲೆ, ಬಳಿಗಳ್ಳ ವಿನ್ಯಾಸವಿದೆ. ಸೀರೆಗೊಪ್ಪುವ ಹರಳು ಖಚಿತ ಬ್ಲೌಸ್, ಕಿವಿಗೆ ದೊಡ್ಡ ಇಯರಿಂಗ್ಸ್, ಬೈತಲೆಗೆ ಹರಳಿನ ಆಭರಣ ಧರಿಸಿದ್ದು ಮತ್ತಷ್ಟು ಮೆರುಗು ನೀಡಿತ್ತು.

ಇದನ್ನೂ ಓದಿ : ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!

ಆಲಿಯಾ ಪಾವತಿಸಿದ್ದು ಎಷ್ಟು?


ಮೆಟ್ ಗಾಲಾ ಫ್ಯಾಶನ್ ಹೆಸರಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಸೋಮವಾರದಂದು ನಡೆಯುವ ನಿಧಿ ಸಂಗ್ರಹಣೆ ಕಾರ್ಯಕ್ರಮವಾಗಿದೆ. ಇಲ್ಲಿ ಭಾಗವಹಿಸುವವರು ಪ್ರತಿ ಟಿಕೆಟ್‌ಗೆ ಪ್ರತಿ ವ್ಯಕ್ತಿಗೆ USD 75,000 ವೆಚ್ಚವಾಗುತ್ತದೆ, ಇದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ ಸುಮಾರು ರೂ. 63 ಲಕ್ಷ ರೂ.ಗಳಾಗುತ್ತವೆ. ಪ್ರತಿ ಸಂಪೂರ್ಣ ಟೇಬಲ್‌ನ ಬೆಲೆ ಸುಮಾರು USD 350,000, ಇದು ಸುಮಾರು ರೂ. 2 ಕೋಟಿ 92 ಲಕ್ಷವಾಗುತ್ತದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಯಾವುದೇ ಕಂಪನಿಯ ಮೂಲಕ ಹೋದರೆ, ಅವರ ವೆಚ್ಚವನ್ನು ಆ ಕಂಪನಿಗಳೇ ಭರಿಸುತ್ತವೆ.

ಆದರೆ, ವೈಯಕ್ತಿಕವಾಗಿ ಹೋದಾಗ ವ್ಯಕ್ತಿಯೇ ತಮ್ಮ ಟಿಕೆಟ್‌ಗಾಗಿ ಪಾವತಿಸುತ್ತಾರೆ. ಹೀಗಾಗಿ, ಆಲಿಯಾ ಭಟ್ ಕನಿಷ್ಠ 63 ಲಕ್ಷ ರೂ.ನಿಂದ 2 ಕೋಟಿ ರೂ.ವರೆಗೆ ಈ ಪ್ರದರ್ಶನದಲ್ಲಿ ಭಾಗವಹಿಸಲು ಸ್ವತಃ ಪಾವತಿಸಿದ್ದಾರೆ. ಈ ಬಾರಿ ಆಲಿಯಾ ಎರಡನೇ ಬಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Continue Reading

LATEST NEWS

ಹೆಚ್.ಡಿ.ರೇವಣ್ಣಗೆ ಬಿಗ್ ಶಾಕ್; 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

Published

on

ಬೆಂಗಳೂರು : ಸದ್ಯ ಪ್ರಜ್ವಲ್ ರೇವಣ್ಣ, ರೇವಣ್ಣ ಕೇಸ್ ಭಾರೀ ಸದ್ದು ಮಾಡುತ್ತಿದೆ. ಅತ್ತ ಲೈಂ*ಗಿಕ ದೌರ್ಜ*ನ್ಯ ನಡೆಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶದಿಂದ ಪ್ರಜ್ವಲ್ ರೇವಣ್ಣ ಎಸ್ಕೇಪ್ ಆಗಿದ್ದರೆ, ಇತ್ತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸಂತ್ರಸ್ತ ಮಹಿಳೆಯೊಬ್ಬರನ್ನು ಅಪಹರಿಸಿದ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಬಂಧನವಾಗಿತ್ತು. ಬಂಧಿಸಿದ ಎಸ್ ಐಟಿ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೂ ಪಡೆದಿದ್ದರು.

ಮೇ. 8 ರ ವರೆಗೆ ಎಸ್ ಐ ಟಿ ವಶಕ್ಕೆ ಕೋರ್ಟ್ ನೀಡಿತ್ತು. ಇಂದು ರೇವಣ್ಣ ಎಸ್ ಐ ಟಿ ವಶದ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಇದನ್ನೂ ಓದಿ  : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ

ವಿಚಾರಣೆ ನಡೆಸಿದ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

Continue Reading

LATEST NEWS

Trending