Connect with us

    LATEST NEWS

    ಎಸ್‌.ಎಂ.ಕೃಷ್ಣ ವಿ*ಧಿವಶ ಹಿನ್ನಲೆ ನಾಳೆ ರಾಜ್ಯಾದ್ಯಂತ ಸರಕಾರಿ ರಜೆ ಘೋಷಣೆ !!

    Published

    on

    ಮಂಗಳೂರು/ಬೆಂಗಳೂರು: ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (92) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಸದಾಶಿವನಗರದಲ್ಲಿರುವ ಸ್ವಗೃಹದಲ್ಲಿ ಇಂದು (ಡಿ.10) ನಿ*ಧನರಾಗಿರುವ ಹಿನ್ನಲೆ ಮೂರು ದಿನದಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ. ಶಾಲಾ ಕಾಲೇಜು, ಸರ್ಕಾರಿ ಕಚೇರಿ ಸೇರಿದಂತೆ ನಾಳೆ(ಡಿ.11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.

    ಎಸ್‌ಎಂ ಕೃಷ್ಣ ಪಾ*ರ್ಥೀವ ಶ*ರೀರದ ಅಂತಿಮ ದರ್ಶನ ಪಡೆದ ಡಿಕೆ ಶಿವಕುಮಾರ್ ಬಳಿಕ ಮಾಧ್ಯಮದ ಜೊತೆ ಅಂ*ತ್ಯಸಂಸ್ಕಾರ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ನಾಳೆ(ಡಿ.11) ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದ್ದಾರೆ. ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಶೋ*ಕಾಚರಣೆ ಇರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಸ್‌ಎಂ ಕೃಷ್ಣ ವಿಧಿವಶರಾದ ಬೆನ್ನಲ್ಲೇ ಹುಟ್ಟೂರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಇದೀಗ ಸರ್ಕಾರ ಅಧಿಕೃತವಾಗಿ ರಾಜ್ಯಾದ್ಯಂತ ರಜೆ ಘೋಷಣೆ ಮಾಡಿದೆ.

    ಇದನ್ನೂ ಓದಿ :  ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶ

    ಅಳಿಯ ಸಿದ್ಧಾರ್ಥನ ಸಾವಿನಿಂದ ತೀವ್ರ ನೊಂದಿದ್ದ ಎಸ್‌ಎಂ ಕೃಷ್ಣ :

    ನಾಳೆ ಬೆಳಗ್ಗೆ 8 ಗಂಟೆ ವರೆಗೆ ಬೆಂಗಳೂರಿನ ಮನೆಯಲ್ಲಿ ಎಸ್‌ಎಂ ಕೃಷ್ಣ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಬಳಿಕ 10 ಗಂಟೆಯಿಂದ ಮಧ್ಯಾಹ್ನ ಮೂರು ಗಂಟೆ ವರೆಗೂ ಎಸ್‌ಎಂ ಕೃಷ್ಣ ಹುಟ್ಟೂರು ಮದ್ದೂರಿನಲ್ಲಿ ಅಂ*ತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್ 11ರ ಮಧ್ಯಾಹ್ನ 3 ಗಂಟೆ ನಂತರ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಅಂ*ತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದ ಎಸ್‌ಎಂ ಕೃಷ್ಣ ದಕ್ಷ ಆಡಳಿತ ನೀಡಿದ್ದಾರೆ. ಮಗಳು ಹಾಗೂ ಧರ್ಮ ಪತ್ನಿ ಫೋನ್ ಮಾಡಿ ನೀಡಿದ ತಕ್ಷಣವೇ ಬೆಂಗಳೂರಿಗೆ ಹೊರಟು ಬಂದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಧಿವೇಶನ ಸಂಬಂಧ ಬೆಳಗಾವಿಯಲ್ಲಿದ್ದ ಡಿಕೆ ಶಿವಕುಮಾರ್ ಬೆಂಗಳೂರಿಗೆ ಆಗಮಿಸಿ ಎಂಎಸ್ ಕೃಷ್ಣ ಅಂ*ತಿಮ ದರ್ಶನ ಪಡೆದಿದ್ದಾರೆ.

    DAKSHINA KANNADA

    ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ; ಬಹುಕಾಲದ ಬೇಡಿಕೆ ಈಡೇರಿಕೆ

    Published

    on

    ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ.

    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861 ವಿಮಾನ ಸಿಂಗಾಪುರದಿಂದ 14.25 ಕ್ಕೆ ಹೊರಟು 16.55 ಕ್ಕೆ ಮಂಗಳೂರು ತಲಪುವುದು.

    2025ರ ಜ.21ರಿಂದ ಸಿಂಗಾಪುರಕ್ಕೆ ವಿಮಾನ :

    ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು 2024 ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮಂಗಳೂರು ಮತ್ತು ಸಿಂಗಾಪುರ ನೇರ ವಿಮಾನ ಸಂಪರ್ಕ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಫೆ.1 ರಿಂದ ದಿಲ್ಲಿಗೆ ದಿನನಿತ್ಯ ವಿಮಾನ ಸೌಲಭ್ಯಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1, 2025 ರಿಂದ ಮಂಗಳೂರು ಮತ್ತು ರಾಜಧಾನಿ ದಿಲ್ಲಿ ನಡುವೆ ದೈನಂದಿನ ತಡೆರಹಿತ ವಿಮಾನ ಹಾರಾಟ ಸೌಲಭ್ಯವನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

    Continue Reading

    Ancient Mangaluru

    ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಭೀಕರ ಅಪ*ಘಾತ !

    Published

    on

    ಪುತ್ತೂರು: ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ನಡೆದಿದೆ.

     

    ಕಾರಿನಲ್ಲಿದ್ದವರಿಗೆ ಗಂ*ಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಗೊಂಡವರನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಎಸ್ಎಂ ಕೃಷ್ಣಗೆ ‘ಕರ್ನಾಟಕ ರತ್ನ’ ನೀಡುವಂತೆ ಮನವಿ ಮಾಡಿದ ವಿಪಕ್ಷ ನಾಯಕ

    ಕಾರಿನಲ್ಲಿದ್ದವರು ಉಡುಪಿ ಮೂಲದವರೆಂದು ಮಾಹಿತಿ ತಿಳಿದು ಬಂದಿದೆ. ಕಾರಿನಲ್ಲಿ ಕೆಲ ಪೂಜಾ ಸಾಮಾಗ್ರಿಗಳು ಸೇರಿದಂತೆ ಕುಂಕುಮ ಪ್ರಸಾದಗಳು ಕಂಡುಬಂದಿದೆ.

    Continue Reading

    DAKSHINA KANNADA

    ಉತ್ತಮ ಜನಸ್ಪಂದನೆಯೊಂದಿಗೆ ಮಂಗಳೂರು-ಕಾರ್ಕಳ KSRTC ಸಂಚಾರ ಆರಂಭ

    Published

    on

    ಮಂಗಳೂರು: ಮಂಗಳೂರು ಕಾರ್ಕಳ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಬಸ್ ಪ್ರಾಯೋಗಿಕ ಸಂಚಾರ ಗುರುವಾರ(ಡಿ.12) ದಿಂದ ಆರಂಭವಾಗಿದೆ.

    ಬೆಳಗ್ಗೆ 6-45 ಕ್ಕೆ ಮೊದಲ ಬಸ್ ಹೊರಟಿದ್ದು, ಎರಡನೇ ಬಸ್ 7-15ಕ್ಕೆ ಮಂಗಳೂರಿನಿಂದ ಹೊರಟಿದೆ. ಇದೇ ವೇಳೆ ಕಾರ್ಕಳದಿಂದಲೂ ಎರಡು ಬಸ್ ಮಂಗಳೂರಿಗೆ ಪ್ರಯಾಣ ಆರಂಭಿಸಿದೆ.

     

    ಕೆ.ಎಸ್‌.ಆರ್‌.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌, ‘ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಅವಕಾಶ ನೀಡಿದೆ. ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್‌ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ’ ಎಂದು ವಾದ ಮಂಡಿಸಿದರು. ‘ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್‌ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿದ್ದೇವೆ’ ಎಂದು ಸದಸ್ಯ ಐವನ್‌ ಡಿ’ ಸೋಜಾ ತಿಳಿಸಿದರು.

    ಇದನ್ನೂ ಓದಿ : ಮಂಗಳೂರು-ಕಾರ್ಕಳ ಕೆ.ಎಸ್‌.ಆರ್‌.ಟಿ.ಸಿ ಪ್ರಾಯೋಗಿಕ ಸಂಚಾರಕ್ಕೆ ನಾಳೆ ಚಾಲನೆ !!

     

    ಬಿಜೈ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಬಸ್ ಸಂಚರಿಸಲಿದೆ. ಈ ಬಸ್ ಗಳಿಗೆ ನಾಲ್ಕು ತಿಂಗಳ ತಾತ್ಕಾಲಿಕ‌ ಪರವಾನಗಿ‌ ಲಭಿಸಿದ್ದು, ಮೊದಲ ದಿನವೇ ಬಸ್ ಗಳಿಗೆ ಉತ್ತಮ ಜನ‌ಸ್ಪಂದನೆ ಲಭಿಸಿದೆ.

    Continue Reading

    LATEST NEWS

    Trending