Connect with us

    LATEST NEWS

    ದಯಾನಂದ ಕಟೀಲ್ ಗೆ ಉತ್ತಮ ಶಿಕ್ಷಕ ಪ್ರಶಸ್ತಿ

    Published

    on

    ಪುತ್ತೂರು: ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ ಇವರು ಕೊಡಮಾಡುವ 2024-25 ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಂಗಳೂರು ಶಾರದಾ ವಿದ್ಯಾಲಯದ ದಯಾನಂದ ಕಟೀಲ್ ಇವರು ಭಾಜನರಾಗಿದ್ದಾರೆ.

    ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಬೆಂಗಳೂರಿನ ಜುದ್ದಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಪ್ರಶಸ್ತಿ ಪ್ರಧಾನ ಮಾಡಿದರು. ಇದರ ಜೊತೆಗೆ ಜಿಲ್ಲೆಯ 7 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ವಿಹೆಚ್‌ಪಿ ಭೂಮಿ ಪೂಜೆಯಲ್ಲಿ ಪುತ್ತೂರು ಶಾಸಕ..! ಚರ್ಚೆ ಹುಟ್ಟುಹಾಕಿದ ಅಶೋಕ್‌ ರೈ..!

    Published

    on

    ಪುತ್ತೂರಿನಲ್ಲಿ ನಡೆದ ಸಂಘ ಪರಿವಾರದ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯಲ್ಲಿ ಶಾಸಕ ಹಾಗೂ ಮಾಜಿ ಶಾಸಕಿ ಇಬ್ಬರೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ವೇದಿಕೆ ಏರಿ ಗೌರವ ಕೂಡಾ ಸ್ವೀಕರಿಸಿದ್ದಾರೆ.

    ಸೈದ್ಧಾಂತಿಕವಾಗಿ ಕಾಂಗ್ರೆಸ್ ಪ್ರಭಲವಾಗಿ ವಿರೋಧಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಈ ಇಬ್ಬರು ಭಾಗವಹಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಭಾಗವಹಿಸಿದ ಇಬ್ಬರೂ ಸಂಘದ ನಿಷ್ಠಾವಂತರಾಗಿದ್ದು, ಕಾರಣಾಂತರದಿಂದ ಕಾಂಗ್ರೆಸ್‌ ಸೇರ್ಪಡೆಯಾದವರು ಎಂಬುದು ಇಲ್ಲಿ ಗಮನಾರ್ಹ. ಇದೇ ಕಾರಣಕ್ಕೆ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದ್ದು, ಅವಧಿ ಮುಗಿದ ಮೇಲೆ ಅಶೋಕ್‌ ರೈ ಮತ್ತೆ ಬಿಜೆಪಿ ಸೇರಲಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ.

    ಬಿಜೆಪಿ ಟಿಕೇಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆಯ ಸಮೀಪದಲ್ಲಿ ಕಾಂಗ್ರೆಸ್ ಸೇರಿ ಅಶೋಕ್ ಕುಮಾರ್ ರೈ ಟಿಕೇಟ್ ಗಿಟ್ಟಿಸಿಕೊಂಡಿದ್ದರು. ಬಳಿಕ ಪುತ್ತೂರಿನಲ್ಲಿ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದ ಶಾಸಕರಾಗಿಯೂ ಆಯ್ಕೆ ಆಗಿದ್ದರು. ಆದ್ರೆ ಪುತ್ತೂರಿನಲ್ಲಿ ಸ್ವಂತ ಬಲದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಅಶೋಕ್ ಕುಮಾರ್ ರೈ ಬಲ ತುಂಬುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಇಂಬು ನೀಡುವಂತೆ ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಏರಿ ಕೇಸರಿ ಶಾಲು ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ವಲಯ ಮಾತ್ರವಲ್ಲದೆ ಬಿಜೆಪಿ ವಲಯದಲ್ಲೂ ಭಾರಿ ಚರ್ಚೆಗಳು ಆರಂಭವಾಗಿದೆ.

    Continue Reading

    DAKSHINA KANNADA

    ಸುಳ್ಯ – ರಿಕ್ಷಾ ಬೈಕ್ ಡಿಕ್ಕಿ: ಬಾಲಕಿಗೆ ಗಾಯ

    Published

    on

    ಸುಳ್ಯ: ರಿಕ್ಷಾ ಮತ್ತು ಬೈಕ್‌ ಪರಸ್ಪರ ಡಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿನಿಯ ಕಾಲಿಗೆ ಗಾಯವಾಗಿದ ಘಟನೆ  ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ನಡೆದಿದೆ.

    ಘಟನೆಯ ಹಿನ್ನಲೆ ಸಿಟ್ಟಿಗೆದ್ದ ಬಾಲಕಿಯ ತಂದೆ ಆಟೋ ಚಾಲಕನಿಗೆ ಥಳಿಸಿದ ಘಟನೆ ಮಂಗಳವಾರ ( ಅ.22) ಸಂಜೆ ನಡೆದಿದೆ.

    ಪೆರಾಜೆಯ ಬೈಕ್‌ ಸವಾರ ಸುಳ್ಯದ ಖಾಸಗಿ ಶಾಲೆಯಿಂದ ತಮ್ಮ ಮಗಳನ್ನು ಕರೆ ತರುವ ವೇಳೆ ಜ್ಯೋತಿ ವೃತ್ತದ ಜಂಕ್ಷನ್‌ ಪಕ್ಕದಿಂದ ಬಂದ ಆಟೋ ರಿಕ್ಷಾ ಬೈಕಿಗೆ ತಾಗಿದ್ದು, ರಿಕ್ಷಾ ತಾಗಿ ವಿದ್ಯಾರ್ಥಿನಿಯ ಪಾದಕ್ಕೆ ಗಾಯವಾಗಿದೆ.

    ಈ ವೇಳೆ ವಿದ್ಯಾರ್ಥಿನಿಯ ತಂದೆ ಮತ್ತು ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಕೈಕೈಮಿಲಾಯಿಸಿಕೊಂಡರು. ಹೊಡೆದಾಟದಲ್ಲಿ ಆಟೋ ಚಾಲಕನಿಗೆ ಮುಖಕ್ಕೆ ಗಾಯವಾಗಿ ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೈಕ್‌ ಚಾಲಕನ ವಿರುದ್ಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು, ಗಾಯಾಳು ವಿದ್ಯಾರ್ಥಿನಿಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    Continue Reading

    LATEST NEWS

    ವಿಶಿಷ್ಟ ಪ್ರೇಮ ಕಥೆ: ಒಬ್ಬನ ಪ್ರೇಮ ಬಲೆಯಲ್ಲಿ ಇಬ್ಬರು ಗೆಳತಿಯರು

    Published

    on

    ಮಂಗಳೂರು/ ಗೋರಖ್‌ಪುರ : ಇಬ್ಬರು ಅಪ್ರಾಪ್ರ ವಯಸ್ಕ ಸ್ನೇಹಿತೆಯರು ಒಬ್ಬನನ್ನೇ ಪ್ರೀತಿಸಲು ಪ್ರಾರಂಭಿಸಿ, ಆತನೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶ ಗೋರಖ್‌ಪುರದಲ್ಲಿ ನಡೆದಿದೆ. ಇದೊಂದು ವಿಚಿತ್ರವೂ, ವಿಶಿಷ್ಟವೂ ಆದ ಪ್ರೇಮಕಥೆಯಾಗಿದೆ.

    12 ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಸ್ನೆಹಿತರು ಒಬ್ಬನನ್ನೇ ಪ್ರಿತಿಸುತ್ತಿದ್ದರು. ಓರ್ವಾಕೆ ಯುವತಿಯ ತಾಯಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲಿಸರು ಯುವತಿಯ ಮೊಬೈಲನ್ನು ನಿಗಾದಲ್ಲಿಟ್ಟು ಸಿಸಿ ಕ್ಯಯಾಮರಾಗಳನ್ನು ಪರಿಶಿಲಿಸಿದ್ದಾರೆ.

    ಓರ್ವ ಯುವತಿ ಹಾಗೂ ಆ ಯುವನಷ್ಟೇ ಪ್ರೀತಿ ಮಾಡುತ್ತಿದ್ದರು. ಈಕೆ ತನ್ನ ಪ್ರೇಮಿಯನ್ನು ಭೇಟಿಯಾಗುವ ವೇಳೆ ಸ್ನೇಹಿತೆಯನ್ನು ಕರೆದುಕೊಂಡು ಬರುತ್ತಿದ್ದಳು. ಕೊನೆಗೆ ಆ ಸ್ನೇಹಿತೆಯೂ ಕೂಡ ಯುವಕನ ಪ್ರೇಮದ ಬಲೆಗೆ ಬಿದ್ದಿದ್ದಳು.
    ಯುವತಿಯರು ಪೊಲೀಸರಿಗೆ, “ನಮ್ಮ ಪ್ರೀತಿಗೆ 3 ವರ್ಷ ಕಳೆಯಿತು. ನಾವು ಜೀವನಪುರ್ತಿ ಒಟ್ಟಿಗೆ ಬಾಳಬೇಕೆಂದು ಬಯಸುತ್ತೇವೆ” ಎಂದು ಹೇಳಿದರೆ, ಯುವಕ ಪೊಲೀಸರಿಗೆ “ನಾವು ಮೊದಲು ಲಕ್ನೋಗೆ ತಲುಪಿದೆವು ಮತ್ತು ಅಲ್ಲಿಂದ ಬಿಹಾರಕ್ಕೆ ಹೋದೆವು. ಆಧಾರ್‌ ಕಾರ್ಡ್ ತೋರಿಸಬೇಕಾದ ಕಾರಣ ಹೊಟೇಲ್‌ನಲ್ಲಿ ಉಳಿದುಕೊಂಡಿರಲಿಲ್ಲ” ಎಂದಿದ್ದಾನೆ.

    ಮೂವರನ್ನೂ ಬಿಹಾರದ ಗೋಪಾಲ್‌ಗಜ್‌ನಲ್ಲಿ ಬಂಧಿಸಲಾಗಿದೆ.

    Continue Reading

    LATEST NEWS

    Trending