Connect with us

    DAKSHINA KANNADA

    ಬಸ್ಸು ನಿರ್ವಾಹಕರ ದುರ್ವರ್ತನೆಗೆ ಕೊನೆಯಿಲ್ಲವೇ..!

    Published

    on

    ಮಂಗಳೂರು : ಮಂಗಳೂರು- ತಲಪಾಡಿ ನಡುವೆ ಸಂಚರಿಸುವ ಬಸ್ಸುಗಳ ಸಿಬ್ಬಂದಿ ವರ್ತನೆ ಸುಧಾರಿಸುವಂತೆ ಕಂಡು ಬರುತ್ತಿಲ್ಲ. ಉಡಾಫೆ ವರ್ತನೆ, ಬೇಜವಾಬ್ದಾರಿ ಕರ್ತವ್ಯ ನಿರ್ವಹಣೆ, ಪ್ರಯಾಣಿಕರೊಂದಿಗೆ ಇವರು ನಡೆದುಕೊಳ್ಳುತ್ತಿರುವ ದುರ್ವರ್ತನೆ ಹಾಗೇ ಮುಂದುವರಿದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಶುಕ್ರವಾರ ಸಂಜೆ ಘಟನೆಯೊಂದು ನಡೆದಿದೆ.ಕೊರೊನಾ ಹಿನ್ನೆಲೆಯಲ್ಲಿ ನಡೆದ ಲಾಕ್ ಡೌನ್ ನಂತರ ಬಸ್ಸು ನಿರ್ವಹಣೆ ಕಷ್ಟ ಸಾಧ್ಯ, ತೈಲ ಬೆಲೆ ಗಗನಕ್ಕೇರಿದೆ, ಸಾಮಾಜಿಕ ಅಂತರ ಎಂಬಿತ್ಯಾದಿ ಸಬೂಬು ಹೇಳಿಕೊಂಡು ಬಸ್ ಪ್ರಯಾಣದರವನ್ನು  10ರಿಂದ 15 ರೂಪಾಯಿಗೇರಿಸಲಾಯಿತು. ಸಾಮಾಜಿಕ ಅಂತರವಂತೂ ಇಲ್ವೇ ಇಲ್ಲ. ಪ್ರಯಾಣ ದರ ಏರಿಸಿದರೂ ಏನೂ ತಗಾದೆ ತೆಗೆಯದೆ ಪ್ರಯಾಣಿಕರು ಹಿಡಿಶಾಪ ಹಾಕಿ ದುಡ್ಡು ಕೊಟ್ಟು ಬರುತ್ತಿದ್ದರು.ಬಳಿಕ ಜನಸಾಮಾನ್ಯರಿಗೆ ಹೊರೆಯಾಗದಿರಲಿ ಎಂದು ಚಲೋ ಕಾರ್ಡ್ ಬಳಸಿ 20 ಶೇಕಡಾದಷ್ಟು ಉಳಿಕೆ ಮಾಡಬಹುದು ಎಂದು ಪ್ರಚುರ ಪಡಿಸಿದರು.

    ಇದರಿಂದ ಪ್ರೇರಿತ ಜನತೆ ಚಲೋ ಕಾರ್ಡ್ ಪಡೆದರು. ಆದರೆ ಅದರಲ್ಲೂ ಮೆಶಿನ್ ಸರಿಯಿಲ್ಲ, ನಮ್ಮಲ್ಲಿ ಸೌಲಭ್ಯವಿಲ್ಲ.. ಎಂದುಕೊಂಡು ನಿರ್ವಾಹಕರು ಅದೆಷ್ಟೋ ಪ್ರಯಾಣಿಕರು ಮುಜುಗರ ಅನುಭವಿಸುವಂತೆ ಮಾಡಿದರು.

    ಇತ್ತೀಚಿನ ದಿನಗಳಲ್ಲಂತೂ ಬಸ್ಸಿನ ಕಂಡೆಕ್ಟರ್‌ಗಳು ಪ್ರಯಾಣಿಕರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ.  ಎಪ್ರಿಲ್ 2ರ ಶುಕ್ರವಾರದ ಸಂಜೆ ಸುಮಾರು 645ರ ಪದ್ಮಾ ಬಸ್ಸಲ್ಲಿ ಚಲೋ ಕಾರ್ಡಲ್ಲಿ 12 ರೂ ಟಿಕೆಟ್ ಅಂದ್ರೆ 15 ರೂ ತೆಗೆಯುತ್ತಾರೆ.

    ದುಡ್ಡು ಕೊಟ್ಟು ಟಿಕೆಟ್ ಕೇಳಿದ್ರೆ ಏನು ನೀವು ಇಡೀ ದಿನ ಟಿಕೆಟನ್ನ ಪರ್ಸಲ್ಲೇ ಇಟ್ಟುಕೊಂಡು ಓಡಾಡೋ ಹಾಗೇ ಟಿಕೆಟ್ ಬೇಕು ಅಂತ ಕೇಳ್ತೀರಲ್ಲ, ಯಾರಿಗೂ ಟಿಕೆಟ್ ಕೊಟ್ಟಿಲ್ಲ ಏನಾಯ್ತು ಅವರೆಲ್ಲ ಕೇಳಿದ್ರಾ. ಟಿಕೆಟಲ್ಲೇನಿದೆ ಮಹಾ ಅಂತ ಉದ್ಧಟತನದ ಮಾತನಾಡುತ್ತಿದ್ದಾರೆ.

    ಪ್ರಯಾಣಿಕರು ಬಸ್ಸಿನಲ್ಲಿ ಟಿಕೇಟ್ ಕೇಳೋದು ತಪ್ಪಾ.. ಹಾಗಿದ್ದರೆ ಬಸ್ಸಿನಲ್ಲಿ ಟಿಕೆಟ್ ಕೇಳಿ ಪಡೆಯಿರಿ ಅನ್ನೋ ಬೋರ್ಡ್ ಕೇವಲ ನಾಮ್ ಕಾ ವಾಸ್ತೆಗಾ. ಅಷ್ಟೇ ಸಾಲದೆಂಬಂತೆ ಪದೇ ಪದೇ ಮೈ ಮುಟ್ಟಿ ಟಿಕೆಟ್ ಆಯ್ತಾ ಎಂದು ಕೇಳೋ ದುರ್ವರ್ತನೆ ಬೇರೆ ಹಾಗಿದ್ದರೆ ಇವರ ಅಟ್ಟಹಾಸಕ್ಕೆ ಕೊನೆಯೇ ಇಲ್ಲವೇ..!

    ಅದೆಷ್ಟೋ ಬಾರಿ ವರದಿ   ಬಿತ್ತರವಾಗಿದೆ.  ಅದಕ್ಕೆಂದೇ ಎಷ್ಟೋ ಸಲ ಚಾಲಕ ನಿರ್ವಾಹಕರಿಗೆ ಕಾರ್ಯಾಗಾರಗಳೂ ನಡೆದಿವೆ. ಆದರೂ ಕೆಲ ನಿರ್ವಾಹಕರಿಂದ ಪ್ರಯಾಣಿಕರು ರೋಸಿ ಹೋದ ಘಟನೆಗಳು ಅದೆಷ್ಟೋ ಯಾಕೆ ಪದೇ ಪದೇ ಹೀಗಾಗುತ್ತಿದೆ.

    ಈ ಭಾಗಕ್ಕೆ ಸರ್ಕಾರಿ ಬಸ್ಸುಗಳೂ ಇಲ್ಲ ಅದರ ಬಗ್ಗೆ ಸೊಲ್ಲೆತ್ತಿದರೆ ಖಾಸಗಿ ಬಸ್ಸು ಮಾಲಕರಿಗೆ ಕೋಪ ಬರುತ್ತದೆ ಹಾಗಿದ್ದರೆ ಬಸ್ಸಿನಲ್ಲಾಗುತ್ತಿರುವ ದೌರ್ಜನ್ಯದ ಬಗ್ಗೆ ಎಚ್ಚರಿಕೆ ತೋರಿ ಜನಸಾಮಾನ್ಯರೊಂದಿಗೆ ಸೌಜನ್ಯತೆಯಿಂದ ವರ್ತಿಸುವುದನ್ನು ಹೇಳಿಕೊಡುವುದೊಳಿತು.

    ಇಲ್ಲವೆಂದಾದಲ್ಲಿ   ಜಿಲ್ಲಾಡಳಿತ ಇಲ್ಲಿಗೆ ಸರ್ಕಾರಿ ಬಸ್ಸುಗಳನ್ನು ಹಾಕಿಸಿ ಜನತೆ ನಿರಾಳತೆಯಿಂದ ಸಂಚರಿಸುವಂತಾಗಲಿ ಅನ್ನೋದೆ ಎಲ್ಲರ ಆಶಯ…

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಮಂಗಳೂರು: ಟ್ರಾಯ್‌ನಿಂದ ಕರೆ; 1.71 ಕೋ.ರೂ ವಂಚನೆ

    Published

    on

    ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್‌ ಸಿಮ್‌ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

    ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್‌ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್‌ ನಂಬರ್‌ ರಿಜಿಸ್ಟರ್‌ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್‌ ನೆಪದಲ್ಲಿ ಈ ನಂಬರ್‌ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್‌ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.

    ಅನಂತರ ವಾಟ್ಸಪ್‌ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್‌ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.

    Continue Reading

    DAKSHINA KANNADA

    ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?

    Published

    on

    ಮಂಗಳೂರು/ಆಂಧ್ರಪ್ರದೇಶ: ಭಕ್ತರು ದೇವರಿಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೀರು, ಚಂದನ ಅಥವಾ ಗಂಧದ ಅಭಿಷೇಕ ಮುಂತಾದವುಗಳನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ಆದರೆ, ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಶ್ರೀ ಶಿವದತ್ತ ಸ್ವಾಮಿಜಿ ಭಕ್ತರಿಂದ ಮೆಣಸಿನ ಪುಡಿ ಅಭಿಷೇಕ ಮಾಡಿಸಿಕೊಂಡಿರುವ ಸುದ್ಧಿ ಫುಲ್ ವೈರಲ್ ಆಗುತ್ತಿದೆ.


    ಆಂಧ್ರಪ್ರದೇಶದ ಪ್ರತ್ಯಂಗಿರ ಆಶ್ರಮದಲ್ಲಿ ಈ ವಿಶಿಷ್ಟವಾದ ಅಭಿಷೇಕ ನಡೆದಿದ್ದು, ಸುಮಾರು 100 ಕೆಜಿ ಮೆನಸಿನಕಾಯಿಯನ್ನು ಬಳಸಲಾಗಿದ್ದು, ಇದನ್ನು ಮಾಡುವುದರಿಂದ ಭಕ್ತರ ಕಷ್ಟಗಳು ದೂವಾಗುತ್ತದೆ ಎಂಬ ನಂಬಿಕೆ ಇದೆ. ಪ್ರತ್ಯಂಗಿರಿ ದೇವಿಗೆ ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ದೇವಿಯ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗಿದ್ದು, ಇದನ್ನು ‘ಕರಂ ಅಭಿಷೇಕ’ ಎಂದು ಕೂಡ ಕರೆಯಲಾಗುತ್ತದೆ.

    ಇದನ್ನು ಓದಿ:ಯೂಟ್ಯೂಬ್​ನಲ್ಲಿ ಸಿನಿಮಾ ವಿಮರ್ಶೆ ಮಾಡುವುದರ ಮೇಲೆ ಬಿತ್ತು ನಿಷೇಧ

    ಕಳೆದ 14 ವರ್ಷಗಳಿಂದ ಪ್ರತ್ಯಂಗಿರ ಆಶ್ರಮದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರುತ್ತಿದೆ. ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮೆಣಸಿನ ಪುಡಿ ಸಮರ್ಪಿಸುತ್ತಾರೆ. ಈ ಕ್ರಮ ಭಕ್ತರ ನಂಬಿಕೆಯೋ, ದೇವರ ಪವಾಡವೋ ಗೋತ್ತಿಲ್ಲ, ಆದರೆ ಇಂತಹ ಆಚರಣೆ ಆಧುನಿಕ ಯುಗದಲ್ಲಿ ಎಷ್ಟು ಸರಿ ಎಂಬುವುದು ಚಿಂತಾದಾಯಕ ವಿಷಯವಾಗಿದೆ.

    Continue Reading

    bangalore

    ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?

    Published

    on

    ಮಂಗಳೂರು/ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಸ್ಟಾಪ್ ಆಗುತ್ತಾ ಅನ್ನುವಂತಹ ಭಯ ಯಜಮಾನಿಯರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ, ರಾಜ್ಯದಲ್ಲಿ ಕೆಲವು ದಿನಗಳಿಂದ ಚರ್ಚೆಯಲ್ಲಿರುವ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ.


    ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿ ವಿಚಾರ ಬಾರಿ ಸದ್ದು ಮಾಡುತ್ತಿದೆ. ಇದರ ನಡುವೆ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ರದ್ದಾದರೆ ಅಥವಾ ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ವರ್ಗಾವಣೆಯಾದರೆ 2000 ರೂ. ಬರುತ್ತೋ, ಇಲ್ಲವೋ ಎಂಬುವುದು ರಾಜ್ಯದ ಮಹಿಳೆಯರ ತಲೆನೋವಿಗೆ ಕಾರಣವಾಗಿದೆ.

    ಇದನ್ನು ಓದಿ :ನಾಯಕನಾಗಿ ಕಾಣಿಸಿಕೊಳ್ಳಲಿರುವ ರಜತ್ ಪಾಟಿದಾರ್

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಮೀ ಹೆಬ್ಬಾಳ್ಕರ್, ರಾಜ್ಯದಲ್ಲಿ ಬಿಪಿಎಲ್ ಗೆ ಅರ್ಹವಲ್ಲದ ಸುಮಾರು 80,000 ಕಾರ್ಡುಗಳನ್ನು ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಮಹಿಳೆಯರು ಯಾವುದೇ ರೀತಿಯ ಗೊಂದಲ ಪಡುವುದು ಬೇಡ. ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಜಮೆ ಆಗುವುದು. ತೆರಿಗೆ ಪಾವತಿಸುವವರಿಗೆ ಮಾತ್ರ 2000 ರೂ. ಹಣ ಬರುವುದಿಲ್ಲ. ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾದರೂ ಹಣ ಬರುತ್ತದೆ, ಆದರೆ ಅಂತವರು ತೆರಿಗೆ ಪಾವತಿಸದಿದ್ದರೆ ಮಾತ್ರ ಬರುವುದು ಎಂದು ಹೇಳಿದ್ದಾರೆ.

    Continue Reading

    LATEST NEWS

    Trending