Connect with us

    LATEST NEWS

    ಹೈವೇಯಲ್ಲಿ ದರೋಡೆ; 1 ಕೋಟಿ ದೋಚಿದ ಕಳ್ಳರು

    Published

    on

    ಮಂಗಳೂರು/ತುಮಕೂರು: ದುಡಿದು ತಿನ್ನುವ ವಯಸ್ಸಿನಲ್ಲಿ ಸೋಮಾರಿಗಳಂತೆ ಅಡ್ಡ ದಾರಿ ಹಿಡಿದು ಯವ ಸಮುದಾಯ ಹಾಳಾಗುತ್ತಿರುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾರು ಅಡ್ಡಗಟ್ಟಿ ಒಂದು ಕೋಟಿ ಹಣವನ್ನ ಕಳ್ಳರು ದೋಚಿದ ಘಟನೆ ತುಮಕೂರು ತಾಲ್ಲೂಕಿನ ನೆಲಹಾಳ್‌ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿನ್ನೆ(ಶನಿವಾರ) ನಡೆದಿದೆ.


    1 ಕೋಟಿ ಹಣ ದರೋಡೆ:
    ಬೆಳಗಿನ ಜಾವ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು 350 ಕೆ.ಜಿ ಬೆಳ್ಳಿ ಗಟ್ಟಿ, 1 ಕೋಟಿ ಹಣ ದರೋಡೆ ಮಾಡಿದ್ದಾರೆ.
    ತಮಿಳುನಾಡಿನ ಸೇಲಂ ನಗರದ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ಗೆ ಸೇರಿದ ಹಣ ಮತ್ತು ಬೆಳ್ಳಿಯನ್ನ ದರೋಡೆ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದು ಬಂದಿದೆ.

    ದರೋಡೆ ಮಾಡಿ ಚಿನ್ನ,ಬೆಳ್ಳಿಯೊಂದಿಗೆ ಪರಾರಿ:
    ಅನಿಲ್‌ ಅವರ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್‌, ವಿನೋದ್‌ ಜೊತೆಯಲ್ಲಿದ್ದರು. ನೆಲಹಾಳ್ ಬಳಿ ಮೂರು ಕಾರುಗಳಲ್ಲಿ ಬಂದ ಏಳೆಂಟು ಕಳ್ಳರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ತಕ್ಷಣ ಕಾರಿನಿಂದ ಇಳಿದು ಬಾಲಾಜಿ, ಗಣೇಶ್‌, ವಿನೋದ್‌ ಕಳ್ಳರಿಂದ ಎಸ್ಕೇಪ್‌ ಆಗಿದ್ದಾರೆ.
    ಅನಿಲ್‌ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದ ಕಳ್ಳರು, ಸ್ವಲ್ಪ ದೂರ ಕರೆದೊಯ್ದು ಕೋರ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜೇನಹಳ್ಳಿ ಬಳಿ ಅನಿಲ್‌ ಮತ್ತು ಕಾರನ್ನು ಬಿಟ್ಟು ಪರಾರಿಯಾಗಿರುವ ಕಳ್ಳರು‌. ಹಣ ಮತ್ತು ಬೆಳ್ಳಿ ಗಟ್ಟಿಗಳೊಂದಿಗೆ ಪರಾರಿಯಾಗಿದ್ದಾರೆ.
    ಈ ಸಂಬಂಧ ಅನಿಲ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಅನಿಲ್‌ ತಮಿಳುನಾಡಿನ ಸೇಲಂನಲ್ಲಿ ಹತ್ತು ವರ್ಷದಿಂದ ಬೆಳ್ಳಿ ಆಭರಣ ಮಾರಾಟ ಮಳಿಗೆ ವ್ಯಾಪಾರ ಮಾಡುತ್ತಿದ್ದಾರೆ.
    ಕಳ್ಳರು ಎಲ್ಲಿಂದ ಬಂದಿದ್ದರು, ಬೆಳ್ಳಿ ಗಟ್ಟಿ ಸಾಗಿಸುತ್ತಿರುವ ಮಾಹಿತಿ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸಂಸದ ಯದುವೀರ್ ಭೇಟಿ

    Published

    on

    ಉಡುಪಿ : ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮೈಸೂರು – ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಇಂದು (ಸೆ.29) ಭೇಟಿ ನೀಡಿ ದೇವರ ದರ್ಶನ ಪಡೆದರು.


    ಅದಾದ ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಂದ ಆಶೀರ್ವಾದ ಹಾಗೂ ಮಂತ್ರಾಕ್ಷತೆ ಪಡೆದರು.


    ಬಿಜೆಪಿ ವತಿಯಿಂದ ಕುಂಜಿಬೆಟ್ಟು ಶಾರದ ಮಂಟಪದಲ್ಲಿ ನೆರವೇರಿದ ಬಿಜೆಪಿ ಸಾಹಿತ್ಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿದರು.

    Continue Reading

    LATEST NEWS

    ಕಳ್ಳನನ್ನು ಹಿಡಿಯಲು ಹೋಗಿ ತಮ್ಮ ಪ್ರಾ*ಣಕ್ಕೆ ಕುತ್ತು ತಂದುಕೊಂಡ ಪೊಲೀಸರು

    Published

    on

    ಮಂಗಳೂರು/ತುಮಕೂರು ಕಳ್ಳನನ್ನ ಟ್ರೇಸ್ ಮಾಡುವ ಭರದಲ್ಲಿ ಪೊಲೀಸರು ತಮ್ಮ ಪ್ರಾ*ಣಕ್ಕೆ ಕು*ತ್ತು ತಂದುಕೊಂಡ ಘಟನೆ ನಡೆದಿದೆ.  ಕಳ್ಳನನ್ನ ಟ್ರೇಸ್ ಮಾಡುವಾಗ ಪೊಲೀಸರ ಕಾರು ಅಪಘಾ*ತಕ್ಕೀಡಾಗಿರುವ ಘಟನೆ ಆಂಧ್ರಪ್ರದೇಶದ ಮಣೂರು ಬಳಿ ನಡೆದಿದೆ.  ಪರಿಣಾಮ ತುಮಕೂರಿನ ಮಧುಗಿರಿ ಠಾಣೆಯ ಮೂವರು ಪೊಲೀಸರಿಗೆ ಗಂ*ಭೀರ ಗಾಯಗಳಾಗಿವೆ.

    ಮಧುಗಿರಿ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್‌ ಗಂ*ಭೀರ ಗಾ*ಯಗೊಂಡವರು.

    ಏನಿದು ಟ್ರೇಸ್ ಕೇಸ್?

    ಶನಿವಾರ(ಸೆ.28) ಮಧುಗಿರಿ ಪಟ್ಟಣದಲ್ಲಿ ಮಹಿಳೆಯ 70 ಗ್ರಾಂ ಚಿನ್ನದ ಸರ ಎಗರಿಸಿ ಖದೀಮನೊಬ್ಬ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ಮಧುಗಿರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದ‌‌ರು.

    ಕಳ್ಳನ ಜಾಡು ಹಿಡಿದು ಹೊರಟಿದ್ದ ಮಧುಗಿರಿ ಪೊಲೀಸರು ಕಳ್ಳನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದಾಗ, ಸ್ಟೇರಿಂಗ್ ಲಾಕ್ ಆಗಿ ಪ*ಲ್ಟಿ ಹೊಡೆದಿದೆ.

    ಇದನ್ನೂ ಓದಿ : ಪತ್ನಿಯನ್ನೇ ಕೊಂ*ದ ಕ್ರೂ*ರ ಪತಿ

    ಪರಿಣಾಮ ಪೊಲೀಸ್‌ ಸಿಬ್ಬಂದಿಯ ಕಣ್ಣು, ತಲೆ, ಕೈ, ಕಾಲುಗಳಿಗೆ ಗಂಭೀ*ರ ಗಾ*ಯಗಳಾಗಿವೆ. ಗಾ*ಯಗೊಂಡ ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಪೊಲೀಸರು ಪ್ರಾ*ಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

    Continue Reading

    dehali

    5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮ*ಹತ್ಯೆ

    Published

    on

    ಮಂಗಳೂರು/ದೆಹಲಿ: ಇತ್ತೀಚೆಗೆ ಆತ್ಮ*ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸಾ*ವಿಗೆ ಶರಣಾಗುವುದನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಇದೀಗ 19 ವರ್ಷದ ವಿದ್ಯಾರ್ಥಿನಿ ಕಟ್ಟಡದ 5ನೇ ಮಹಡಿಯಿಂದ ಹಾ*ರಿ ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ನಿನ್ನೆ (ಸೆ.28) ಮಧ್ಯಾಹ್ನ ನಡೆದಿದೆ.


    ಅವಳ ಯಾವುದೇ ಸೂ*ಸೈಡ್ ನೋಟ್ ಪತ್ತೆಯಾಗಿಲ್ಲ. ಕೇವಲ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಕೆ ಆರು ಅಂತಸ್ತಿನ ಕಟ್ಟಡದ ಐದನೇ ಮಹಡಿಯಲ್ಲಿ ನಿಂತಿರುವುದು ಕಂಡುಬಂದಿದೆ.
    ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿನಿಯನ್ನು ಬಾತ್ರಾ ಆಸ್ಪತ್ರೆಗೆ ಕರೆದೊಯ್ದು ನಂತರ ಮಜೀದಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ವೇಳೆ ಆಕೆ ಸಾವ*ನ್ನಪ್ಪಿದ್ದಾಳೆ.ಘಟನಾ ಸ್ಥಳದಲ್ಲಿ ಕ್ರೈಂ ತಂಡ ಪರಿಶೀಲನೆ ನಡೆಸಿದ್ದು, ಮೃ*ತದೇಹವನ್ನು ಮರ*ಣೋತ್ತರ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಪ್ರ*ಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    Continue Reading

    LATEST NEWS

    Trending