Saturday, August 20, 2022

ಗಮನಿಸಿ: ಮಂಗಳೂರಿನಲ್ಲಿ ಕಾಮಗಾರಿ ಹಿನ್ನೆಲೆ 60 ದಿನ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಏ.29 ರಿಂದ ಜೂ.27ರ ವರೆಗೆ 60 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.


ಕಾಮಗಾರಿ ನಡೆಯುವ ವೇಳೆ ಎ.ಬಿ ಶೆಟ್ಟಿ ರಸ್ತೆ ಕಡೆಯಿಂದ ಮುಂದುವರೆದು ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಸಂಚರಿಸದೇ ನೇರವಾಗಿ ಮುಂದುವರೆದು ಹ್ಯಾಮಿಲ್ಟನ್ ಸರ್ಕಲ್ ಮುಖಾಂತರ ಸಂಚರಿಸಲು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics