ಮಂಗಳೂರು: ಮಂಗಳೂರಿನಲ್ಲಿ ಕೋವಿಡ್ ಕಾರಣದಿಂದಾಗಿ ಮೃತಪಟ್ಟ 12 ಮಂದಿಗೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಸಂಪ್ರದಾಯದಂತೆ ಸೋಮನಾಥನ ಸನ್ನಿಧಿಯಲ್ಲಿ ಅವರ ಚಿತಾಭಸ್ಮವನ್ನು ಸಮುದ್ರಕ್ಕೆ ಬಿಡಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸೋಮನಾಥೇಶ್ವರ ದೇವಸ್ಥಾನದ ಸಮುದ್ರ ತೀರದಲ್ಲಿ ತಿಲಹೋಮ ನಡೆಸಿ ಚಿತಾಭಸ್ಮ ಸಮುದ್ರಕ್ಕೆ ಬಿಡಲಾಯಿತು.
ಈ ಸಂದರ್ಭ ಮಾತನಾಡಿದ ಕಟೀಲ್ ರಾಜ್ಯದ ಕಂದಾಯ ಸಚಿವರಾದ ಆರ್.ಅಶೋಕ್ ನೇತೃತ್ವದಲ್ಲಿ ಮೃತ ನಿರ್ಗತಿಕರ ಅಂತರಾತ್ಮಗಳಿಗೆ ಮೋಕ್ಷಪ್ರದ ಆಗಬೇಕು.
ನಿರ್ಗತಿಕರು ಮಾತ್ರವಲ್ಲದೇ ಕುಟುಂಬಸ್ಥರು ಬಾರದ ಮಂದಿಯ ಆತ್ಮಕ್ಕೆ ಸದ್ಗತಿ ಸಿಗುವ ಉದ್ದೇಶದಿಂದ ಕಾರ್ಯ ನಡೆಸಿದ್ದರು.ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 12 ಮಂದಿ ಮೃತಪಟ್ಟಿದ್ದಾರೆ.
ಅವರ ಆತ್ಮಕ್ಕೆ ಮೋಕ್ಷ ಸಿಗುವಂತೆ ಪ್ರಾರ್ಥಿಸಿ ಎಲ್ಲರ ಚಿತಾಭಸ್ಮವನ್ನು ಸೋಮೇಶ್ವರದ ಸಮುದ್ರಕ್ಕೆ ಸಮರ್ಪಣೆ ಮಾಡಲಾಗಿದೆ ಎಂದರು.