Connect with us

LATEST NEWS

ಕ್ರಿಕೆಟಿಗ ರಿಷಬ್‌ ಪಂತ್‌ ರಕ್ಷಿಸಿದ ಜನರಿಗೆ ಬಹುಮಾನ ಘೋಷಣೆ..!

Published

on

ನವದೆಹಲಿ :  ಕಾರು ಅಪಘಾತಕ್ಕೊಳಗಾಗಿದ್ದ ಕ್ರಿಕೆಟಿಗ ರಿಷಬ್‌ ಪಂತ್‌ ಅವರನ್ನು ರಕ್ಷಿಸಿದ ಜನರನ್ನು ʼಗುಡ್ ಸಮರಿಟನ್ʼ ಯೋಜನೆಯಡಿಯಲ್ಲಿ ಗೌರವಿಸಲಾಗುವುದು ಮತ್ತು ಬಹುಮಾನ ನೀಡಲಾಗುವುದು ಎಂದು ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ ಅಶೋಕ್‌ ಕುಮಾರ್‌ ಅವರು ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಡಿಸೆಂಬರ್ 30 ರಂದು ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಭೀಕರ ಅಪಘಾತಕ್ಕೊಳಗಾದರು.

ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡು ರಸ್ತೆ ಪಕ್ಕ ಬಿದ್ದು ನರಳುತ್ತಿದ್ದ ಪಂತ್‌ ಅವರನ್ನು ಜನರು ರಕ್ಷಿಸಿದ್ದರು.

ಇದೀಗ ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಸಹಾಯ ಮಾಡಿದ ದಾರಿಹೋಕರನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.

ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಿಷಬ್ ಪಂತ್ ಕಾರು ಅಪಘಾತವಾಗಿತ್ತು.

ಘಟನೆಯ ಸಂದರ್ಭದಲ್ಲಿ ಸಹಾಯ ಮಾಡಲು ಮುಂದೆ ಬಂದ ಹರಿಯಾಣ ರೋಡ್‌ವೇಸ್ ಚಾಲಕರು ಮತ್ತು ನಿರ್ವಾಹಕರು ಹಾಗು ಇತರೆ ಸ್ಥಳೀಯ ಜನರನ್ನು ʼಗುಡ್ ಸಮರಿಟನ್ ಯೋಜನೆಯಡಿ ಗೌರವಿಸಲಾಗುವುದು ಮತ್ತು ಬಹುಮಾನ ನೀಡಲಾಗುವುದು ಎಂದು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕಾರಿಗಳು ಸಹ ತಿಳಿಸಿದ್ದಾರೆ.

ರಸ್ತೆ ಅಪಘಾತದ ನಂತರ, ಯಾವುದೇ ವ್ಯಕ್ತಿಗೆ ಮೊದಲ ಗಂಟೆ ಸುವರ್ಣ ಅವಧಿಯಾಗಿರುತ್ತದೆ. ಅದು ಜೀವನದ ನಿರ್ಣಾಯಕ ಘಟ್ಟ.

ಒಂದು ಗಂಟೆಯೊಳಗೆ ಸಂತ್ರಸ್ತರಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿರುತ್ತದೆ.

ಸಾಮಾನ್ಯ ಜನರಲ್ಲಿ ಈ ಸಾಮಾಜಿಕ ನಡವಳಿಕೆಯನ್ನು ಉತ್ತೇಜಿಸಲು, ಉತ್ತಮ ಸಮರಿಟನ್ ಯೋಜನೆ ಜಾರಿಗೊಳಿಸಲಾಗಿದೆ.

ಶುಕ್ರವಾರ ಮುಂಜಾನೆ, ರಿಷಬ್ ಪಂತ್ ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಹಮ್ಮದ್‌ಪುರ ಝಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಒಬ್ಬರೇ ಇದ್ದ ಪಂತ್ ಅವರ ಬೆನ್ನು, ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಾಗ ಪಂತ್ ಅವರು ತಮ್ಮ ಕಾರನ್ನು ಚಲಾಯಿಸುತ್ತಿದ್ದರು.

FILM

ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

Published

on

ಉಡುಪಿ: ಇಂದು ಬೆಳಂಬೆಳಗ್ಗೆ ರಾಜಕೀಯ ನಾಯಕರು,  ಜನಸಾಮಾನ್ಯರು ಮತಗಟ್ಟೆಗೆ ಬಂದು ಮತ ಚಲಾಯಿಸಿದರೆ ಉಡುಪಿಯ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ.

ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 197 ಕ್ಕೆ ಆಗಮಿಸಿ ಮತ ಚಲಾಯಿಸಿದರು. ರಕ್ಷಿತ್ ಶೆಟ್ಟಿ ಮನೆಯ ಮುಂಭಾಗದಲ್ಲೇ ಇರುವ ಮತಗಟ್ಟೆಗೆ ಕುಟುಂಬ ಸಹಿತರಾಗಿ ಬಂದು ಮತದಾನ ಮಾಡಿದರು. ರಕ್ಷಿತ್ ಶೆಟ್ಟಿ ಈ ಸಂದರ್ಭದಲ್ಲಿ ಸೆಲೆಬ್ರೆಟಿಯನ್ನು ಕಂಡ ಇತರ ಮತದಾರರು ಹರ್ಷಚಿತ್ತರಾಗಿ ಸೆಲ್ಫೆ ಕ್ಲಿಕಿಸಲು ಮುಂದಾದ ಘಟನೆ ನಡೆಯಿತು.

Continue Reading

DAKSHINA KANNADA

ಬೈಕ್-ಕಾರು ನಡುವೆ ಅಪ*ಘಾತ; ಓರ್ವ ಮೃ*ತ್ಯು

Published

on

ಅರಂತೋಡು: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪ*ಘಾತದಲ್ಲಿ ಬೈಕ್‌ನ ಹಿಂಬದಿ ಸವಾರ ಮೃ*ತಪಟ್ಟ ಘಟನೆ ಸಂಪಾಜೆ ಕಲ್ಲುಗುಂಡಿ ಸಮೀಪ ದೊಡ್ಡಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.


ಮತದಾನ ಮಾಡಲು ಊರಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದ್ದು ಡಿ*ಕ್ಕಿಯ ರಭಸಕ್ಕೆ ಬೈಕ್‌ನ ಹಿಂಬದಿ ಸವಾರನಿಗೆ ಗಂಭೀರ ಗಾಯಗೊಂಡು ಮೃ*ತಪಟ್ಟರೆ ಇನ್ನೋರ್ವನಿಗೆ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃ*ತರ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.

Continue Reading

LATEST NEWS

ಅಯೋಧ್ಯೆಯ ಅಂಗಳದಲ್ಲಿ ಶೂಟಿಂಗ್ ಮಾಡಿದ ಮೊಟ್ಟ ಮೊದಲ ಕನ್ನಡ ಸೀರಿಯಲ್ ಇದು?

Published

on

ಮಹಿಳೆಯರಿಗೆ ಸೀರಿಯಲ್ ನೋಡುವುದಂದರೆ ಒಂತಾರ ಹುಚ್ಚು. ಮನೆಯಲ್ಲೇ ಇರುವ ಮಹಿಳೆಯರು ಕೆಲವೊಮ್ಮೆ ಬೆಳಗ್ಗೆಯಿಂದ ಸಂಜೆಯವರೆಗೆ ಟಿವಿಯಲ್ಲಿ ಸೀರಿಯಲ್ ನೋಡುತ್ತಾ ಇರುತ್ತಾರೆ. ಸೀರಿಯಲ್ ನೋಡೊದು ಮಾತ್ರ ಅಲ್ಲ ಅದರ ಬಗ್ಗೆ ಸಂವಾದ ಕೂಡ ಮನೆಯವರಲ್ಲಿ ಮಾಡುತ್ತಾ ಇರುತ್ತಾರೆ.

ಈ ನಡುವೆ ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ದೇಶದ ಜನರು ತುಂಬಾ ಸಂತೋಷದಲ್ಲಿದ್ದಾರೆ. ಅದೆಷ್ಟೋ ಜನ ಹಿಂದೂಗಳ ಕನಸು ನನಸಾದ ಕ್ಷಣ ಎಂದು ಹೇಳಬಹುದು. ಒಮ್ಮೆಯಾದ್ರೂ ಅಯೋಧ್ಯೆಗೆ ಹೋಗಿಬರಬೇಕು ಅಂತಾ ಪ್ಲಾನ್ ಅಂತೂ ಮಾಡ್ತಾ ಇರೋದು ಕಂಡಿತ. ಕೆಲವರು ಹೋಗಿ ಬಂದಿದ್ದಾರೆ ಕೂಡ ಆದರೆ ಇನ್ನು ಕೆಲವರು ಇನ್ನು ಹೋಗಬೇಕು. ಇದುವರೆಗೆ ಅಯೋಧ್ಯೆ ರಾಮಮಂದಿರದಲ್ಲಿ ಯಾವೂದೇ ರೀತಿದ ಫಿಲ್ಮ್ ಶೂಟಿಂಗ್, ಸೀರಿಯಲ್, ಕಿರುಚಿತ್ರ ಯಾವೂದು ಶೂಟಿಂಗ್ ಆಗಲಿಲ್ಲ. ಆದರೇ ಇದೇ ಮೊದಲ ಬಾರಿಗೇ ಕನ್ನಡ ಸೀರಿಯಲ್ ಇಂಡಸ್ಟ್ರಿಯಲ್ಲಿ ಕನ್ಯಾದಾನ ಸೀರಿಯಲ್ ಹೊಸ ದಾಖಲೆ ಬರೆದಿದೆ.

ಉದಯ ಟಿವಿಯಲ್ಲಿ ಪ್ರಸಾರವಾಗೋ ಕನ್ಯಾದಾನ ಧಾರಾವಾಹಿ ಈಗ ಹೊಸ ದಾಖಲೆ ಬರೆದಿದ್ದಾರೆ. ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಅಯೋಧ್ಯೆಯಲ್ಲಿ ಚಿತ್ರೀಕರಣಗೊಂಡ ಮೊಟ್ಟ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಗೆ ಕನ್ಯಾದಾನ ಧಾರಾವಾಹಿ ಪಾತ್ರವಾಗಿದೆ.

ಜನವರಿ 22ರಂದು ಅಂದ್ರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಇಲ್ಲಿಯವೆರೆಗೂ ಯಾವುದೇ ಸಿನಿಮಾವಾಗ್ಲಿ, ಅಥವಾ ಸೀರಿಯಲ್ ಆಗ್ಲಿ ಶೂಟ್ ಮಾಡಿರಲಿಲ್ಲ. ಆದ್ರೆ, ಕನ್ಯಾದಾನ ಧಾರವಾಹಿ ತಂಡ ಫಸ್ಟ್‌ಟೈಮ್‌ ಅಯೋಧ್ಯೆಗೆ ಹೋಗಿ ಚಿತ್ರೀಕರಣ ಮಾಡಿದೆ.

ಈ ಸೀರಿಯಲ್‌ನಲ್ಲಿ ಬಹುತೇಕ ಪಾತ್ರಗಳು ಒಂದಲ್ಲ ಒಂದು ಸಮಸ್ಯೆ ಎದುರಿಸ್ತಿವೆ. ಹಾಗಾಗಿ ರಾಮನ ದರ್ಶನ ಪಡೆದು ಆ ಕಷ್ಟಗಳಿಂದ ಹೊರಬರಬೇಕು ಎಂದು ನಿರ್ಧರಿಸಿ, ರಾಮಮಂದಿರಕ್ಕೆ ಹೋಗಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯಲ್ಲಿ ಶೂಟಿಂಗ್ ಮಾಡಿರೋ ಬಗ್ಗೆ ಸೀರಿಯಲ್​ ತಂಡ ಸಂತಸ ಹಂಚಿಕೊಂಡಿದೆ.

Continue Reading

LATEST NEWS

Trending