Connect with us

DAKSHINA KANNADA

ಕದ್ರಿ ನಿವಾಸಿಗಳೇ ಎಚ್ಚರ…ನಗರದಲ್ಲಿ ಕಾಡುಕೋಣ ಪ್ರತ್ಯಕ್ಷ.!

Published

on

ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ರಾತ್ರೋ ರಾತ್ರಿ ಕಾಡು ಕೋಣವೊಂದು ಪ್ರತ್ಯಕ್ಷವಾಗಿ ಜನರ ಆತಂಕಕ್ಕೆ ಕಾರಣವಾಗಿದೆ. ನಗರದ ಜನವಸತಿ ಪ್ರದೇಶಗಳಲ್ಲೇ ಈ ಕಾಡು ಕೋಣದ ಓಡಾಟದ ಗುರುತು ಲಭಿಸಿದೆ. ಈ ಬೆನ್ನಲ್ಲೇ ಕೋಣವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ತೀವ್ರ ಕಾರ್ಯಾಚರಣೆಗೆ ಮುಂದಾಗಿದ್ದರೂ ಕೋಣ ಪತ್ತೆಯಾಗದೆ ಜನರು ಆತಂಕಗೀಡಾಗಿದ್ದಾರೆ.

ಮಂಗಳೂರು ನಗರದಲ್ಲಿ ರಾತ್ರೋ ರಾತ್ರಿ ಕಾಡು ಕೋಣವೊಂದು ಪ್ರತ್ಯಕ್ಷವಾಗಿ ಜನರ ನಿದ್ದೆಗೆಡಿಸಿದೆ. ರಸ್ತೆ ಮಧ್ಯದಲ್ಲಿ ಕಾಡು ಕೋಣದ ಓಡಾಟ ಕಂಡು ಜನರು ದಂಗಾಗಿದ್ದಾರೆ. ನಾಯಿಗಳು ಈ ಕಾಡುಕೋಣವನ್ನು ಕಂಡು ಓಡಿಸುವ ಪ್ರಯತ್ನ ಮಾಡಿದೆ. ನಗರದ ಜನವಸತಿ ಪ್ರದೇಶದಲ್ಲೇ ಕಾಡು ಕೋಣವು ಕಾಣ ಸಿಕ್ಕಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಸೋಮವಾರದ ತಡರಾತ್ರಿ ಮಂಗಳೂರಿನ ಕದ್ರಿ ಕೈ ಬಟ್ಟಲು ಪ್ರದೇಶದಲ್ಲಿ ಈ ಕೋಣವು ಸಾರ್ವಜನಿಕರಿಗೆ ಕಂಡು ಬಂದಿದೆ. ಜನರು ಎದುರಾಗಿದ್ದನ್ನು ಕಂಡ ಕೋಣವು ಸ್ಥಳದಿಂದ ಓಡಿ ಹೋಗಿದ್ದು, ಬಳಿಕ ಕದ್ರಿ ಸುತ್ತಮುತ್ತಲಿನ ಗುಡ್ಡದ ಕಾಡು ಪ್ರದೇಶದ ಒಳಗೆ ಅವಿತಿರ ಬಹುದು ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಈ ಕಾಡು ಕೋಣದ ಓಡಾಟದ ದೃಶ್ಯವನ್ನು ಹಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ಇದೇ ವೇಳೆ ನಗರದ ಕದ್ರಿ ಪ್ರದೇಶದ ಹಲವೆಡೆ ಸಿಸಿ ಕ್ಯಾಮೆರಾಗಳಲ್ಲೂ ಈ ದೈತ್ಯಾಕಾರದ ಕಾಡು ಕೋಣದ ಓಡಾಟವು ಸೆರೆಯಾಗಿದೆ. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದು, ಸೋಮವಾರ ರಾತ್ರಿಯಿಂದಲೇ ಕಾಡು ಕೋಣವನ್ನು ಸೆರೆ ಹಿಡಿಯಲು ಕಾರ್ಯಚರಣೆಯನ್ನು ಆರಂಭಿಸಿದ್ದಾರೆ.

ಸೋಮವಾರ ರಾತ್ರಿಯಿಂದಲೇ ಕೋಣದ ಪತ್ತೆಗಾಗಿ ಕಾರ್ಯಚರಣೆ ಆರಂಭವಾಗಿದ್ದು, ಕೋಣ ಓಡಾಟ ನಡೆಸಿದ ಬಗೆಗೆ ಹಲವು ಪ್ರದೇಶಗಳಲ್ಲಿ ಸುಳಿವು ದೊರೆತಿದೆ. ಕೆಲವೊಂದು ಮನೆಗಳ ಕಬ್ಬಿಣದ ಬೇಲಿ ದಾಟಿ, ಕಬ್ಬಿಣದ ಸರಳಿನ ಬೇಲಿ ಹಾರಿ ಬೇಲಿ ಬೆಂಡಾಗಿ ಮುರಿದ ಪರಿಸ್ಥಿತಿಯಲ್ಲಿದೆ. ಇದಲ್ಲದೆ ರಕ್ಷಣಾ ತಂಡದವರಿಗೆ ಕಾಡು ಕೋಣದ ಹೆಜ್ಜೆ ಗುರುತು ಹಾಗೂ ಸೆಗಣಿ ಲಭಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಕಾಡು ಕೋಣಗಳಿರುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.  ಬೆಳಗ್ಗಿನಿಂದ ಸಂಜೆಯವರೆಗೂ ಅಧಿಕಾರಿಗಳು ಕೋಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೆ ಕೋಣ ಪತ್ತೆಯಾಗಿಲ್ಲ. ಡ್ರೋನ್ ಕ್ಯಾಮೆರದ ಮೂಲಕವು ಕೋಣದ ಪತ್ತೆಗಾಗಿ ಹುಡುಕಾಟ ನಡೆದಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ. ಈ ಕಾಡು ಕೋಣಗಳು ಹಗಲಿಗಿಂತ ರಾತ್ರಿ ಹೊತ್ತಿನಲ್ಲೇ ಹೆಚ್ಚು ಓಡಾಟ ನಡೆಸುವ ಕಾರಣದಿಂದಾಗಿ, ಇಂದು ರಾತ್ರಿ ನಗರದ ಗುಡ್ಡ ಗಾಡು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆಯನ್ನ ಮುಂದುವರಿಸಲಿದ್ದಾರೆ.

ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರು ನಗರ ಪ್ರದೇಶದಲ್ಲಿ ಕಾಡು ಕೋಣವೊಂದು ಜನರ ನಿದ್ದೆ ಗೆಡಿಸಿತ್ತು, ಆದರೆ ಅರವಳಿಕೆ ನೀಡಿದ ಕಾರಣ ಆ ಕೋಣವು ಮೃತ ಪಟ್ಟಿತ್ತು. ಹಾಗಾಗಿ ಈ ಬಾರಿ ಕೋಣದ ರಕ್ಷಣೆ ಸಂದರ್ಭ ಅರಿವಳಿಕೆಯನ್ನು ನೀಡದೆ ನಗರ ಪ್ರದೇಶದಿಂದ ಕೋಣಕ್ಕೆ ಸೇಫ್ ಎಕ್ಸಿಟ್ ನೀಡಲಾಗುವುದು ಎಂದು ರಕ್ಷಣಾ ತಂಡದ ಭುವನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ನಗರ ಪ್ರದೇಶಕ್ಕೆ ನುಗ್ಗಿದ್ದ ಕೋಣವನ್ನು ರಕ್ಷಿಸುವ ಕಾರ್ಯಚರಣೆ ಭರದಿಂದ ನಡೆಯುತ್ತಿದೆ. ಯಾವುದೇ ಅಪಾಯ ಸಂಭವಿಸಿದ ಹಾಗೆ ಕೋಣವನ್ನು ಸೆರೆ ಹಿಡಿಯಲೇ ಬೇಕೆಂದು ಅರಣ್ಯ ಇಲಾಖೆ ಪಣ ತೊಟ್ಟಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ. ಅರಣ್ಯ ಇಲಾಖೆಯ ಇಂದಿನ ರಾತ್ರಿಯ ಕಾರ್ಯಚರಣೆ ಫಲ ಕೊಡುತ್ತಾ ಎಂದು ಕಾದು ನೋಡಬೇಕಿದೆ.

 

DAKSHINA KANNADA

ಮಂಗಳೂರು ಮೇಯರ್ ಫೋನ್‌ ಇನ್ ಕಾರ್ಯಕ್ರಮ; ಬಿಲ್‌ಗಳನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಜಾರಿ

Published

on

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಜನರ ಸಮಸ್ಯೆ ಆಲಿಸಲು ಮೇಯರ್ ಇಂದು ಫೋನ್‌ ಇನ್ ಕಾರ್ಯಕ್ರಮ ನಡೆಸಿದ್ದಾರೆ. ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು ಅವರು ಪ್ರತಿ ತಿಂಗಳು ಈ ಫೋನ್ ಇನ್ ಕಾರ್ಯಕ್ರಮ ನಡೆಸಿ ಜನಸ್ನೇಹಿ ಆಡಳಿತ ನೀಡಲು ಪ್ರಯತ್ನಿಸಿದ್ದಾರೆ. ಫೋನ್ ಮೂಲಕ ಬರುವ ದೂರುಗಳನ್ನು ಸ್ವೀಕರಿಸಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಮಸ್ಯೆಯನ್ನು ತಕ್ಷಣ ಬಗೆ ಹರಿಸಲು ಇದರಿಂದ ಸಾಧ್ಯವಾಗಿದೆ. ಕಳೆದ ತಿಂಗಳು ನಡೆದಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸುಮಾರು 27 ದೂರುಗಳಲ್ಲಿ 24 ದೂರುಗಳನ್ನು ತಕ್ಷಣ ಬಗೆ ಹರಿಸಿದ್ದಾರೆ. ಈ ಬಾರಿಯೂ ಕೂಡಾ ಸುಮಾರು 26 ಕರೆಗಳು ಬಂದಿದ್ದು ಬಹುತೇಕ ಕರೆಗಳು ನಗರದ ಸ್ವಚ್ಚತೆ , ಸ್ವಯಂ ಘೋಷಿತ ಆಸ್ತಿ ತೆರಿಗೆ , ಹಾಗೂ ಲೈಸೆನ್ಸ್‌ ವಿಚಾರವಾಗಿತ್ತು.

ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತವನ್ನು ಸುಂದರವಾಗಿಸಿದ್ರೂ ಅಲ್ಲಿ ಅಲೆಮಾರಿ ಕುಟುಂಬಗಳು ನಗರ ಸೌಂದರ್ಯ ಕೆಡಿಸಿರುವ ಬಗ್ಗೆ ದೂರು ಬಂದಿದೆ. ಅವರನ್ನು ಪೊಲೀಸರ ಸಹಾಯದಿಂದ ತೆರವು ಗೊಳಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.

ಅಲ್ಲದೇ, ಆಸ್ತಿ ತೆರಿಗೆ ವಿಚಾರದಲ್ಲಿ ಜನರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಎಲ್ಲಾ ಬಿಲ್‌ಗಳನ್ನು ಆನ್‌ಲೈನ್ ಮೂಲಕ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ನಾಳೆ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಮೇಯರ್ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಜನಸ್ನೇಹಿ ಆಡಳಿತ ನೀಡಲು ಪೋನ್ ಇನ್ ಕಾರ್ಯಕ್ರಮ ಸಹಕಾರಿಯಾಗಿದ್ದು, ಜನರು ಸಮಸ್ಯೆಗಳನ್ನು ಗಮನಕ್ಕೆ ತಂದಾಗ ತಕ್ಷಣ ಕ್ರಮ ಕೈಗೊಳ್ಳಲು ಸಹಕಾರಿ ಆಗುತ್ತದೆ ಎಂದು ಅವರು ಹೇಳಿದ್ದಾರೆ.

Continue Reading

DAKSHINA KANNADA

Mangaluru: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿ ಯುವಮೋರ್ಚಾ

Published

on

ಮಂಗಳೂರು : ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ ಆರೋಪದ ವಿಚಾರವಾಗಿ ಮಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

 


ನಾಸಿರ್ ಹುಸೇನ್ ರಾಜೀನಾಮೆ ನೀಡಬೇಕು ಹಾಗೂ ಘೋಷಣೆ ಕೂಗಿದ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುವ ವಿಚಾರ ತಿಳಿದ ಪೊಲೀಸರು ಕಚೇರಿ ಬಳಿ ಹೆಚ್ಚಿನ ಭದ್ರತೆ ಏರ್ಪಡಿಸಿದ್ದರು.

ಕಾಂಗ್ರೆಸ್ ಕಚೇರಿ ಸುತ್ತ ಬ್ಯಾರಿಕೇಡ್ ಅಳವಡಿಸಿ ಯುವ ಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕದಂತೆ ತಡೆ ಒಡ್ಡಿದ್ದಾರೆ. ಕಚೇರಿ ಬಳಿ ಬಂದು ನಾಸಿರ್ ಹುಸೇನ್ ಹಾಗೂ ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Continue Reading

DAKSHINA KANNADA

ಕಾಗೆ ರಾಷ್ಟ್ರೀಯ ಪಕ್ಷಿಯಾಗಬೇಕಿತ್ತು, ಹಸು ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು- ನಟ ಪ್ರಕಾಶ್ ರಾಜ್

Published

on

ಉಳ್ಳಾಲ: ತೊಕ್ಕೊಟ್ಟಿನಲ್ಲಿ ನಡೆದ ಡಿವೈಎಫ್‌ಐನ 12ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾವೇಶಕ್ಕೆ ಅತಿಥಿಯಾಗಿ ಆಗಮಿಸಿದ ಬಹುಬಾಷಾ ನಟ ಪ್ರಕಾಶ್ ರಾಜ್‌ ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿಯವರನ್ನು ಏಕವಚನದಲ್ಲೇ ಸಂಭೋದಿಸಿ ಟೀಕೆ ಮಾಡಿದ್ದಾರೆ.

ಅಲ್ಲದೇ  ಬಹುಮತ ಎಲ್ಲ ದೇಶದಲ್ಲಿ ನಡೆಯಲ್ಲ, ಪ್ರಕೃತಿಗೆ ಬಹುಮತ ಸರಿಯಲ್ಲ, ಬಹುಮತನೇ ಆಗಬೇಕಾದ್ರೆ ಕಾಗೆ ರಾಷ್ಟ್ರೀಯ ಪಕ್ಷಿಯಾಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

Continue Reading

LATEST NEWS

Trending