ನವದೆಹಲಿ ಎಪ್ರಿಲ್ 30: ಕೊರೊನಾ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಇದೀಗ ಮಾಧ್ಯಮಗಳಲ್ಲೂ ಸಾವು ನೋವಿನ ಸುದ್ದಿಗಳು ಬರಲಾರಂಭಿಸಿದೆ. ಆಜ್ ತಕ್ ಹಿಂದಿ ನ್ಯೂಸ್ ಚಾನೆಲ್ ನ ಹೆಸರಾತ ಸುದ್ದಿವಾಚಕ ರೋಹಿತ್ ಸರ್ದಾನ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಜೀ ನ್ಯೂಸ್ ನ ಸುಧೀರ್ ಚೌದರಿ ತಮ್ಮ ಒಬ್ಬ ಅತ್ಯುತ್ತಮ ಗೆಳೆಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ರೋಹಿತ್ ಸರ್ದಾನ ಅವರಿಗೆ ಎಪ್ರಿಲ್ 25 ರಂದು ಕೊರೊನಾ ಸೊಂಕು ದೃಢಪಟ್ಟಿದ್ದು ಅವರನ್ನು ದೆಹಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.