Connect with us

    LATEST NEWS

    ಮದುವೆ ನಿರಾಕರಣೆ; ಕಿರುತೆರೆ ನಟಿ ಮನೆಯಲ್ಲೇ ಯುವಕ ಆತ್ಮ*ಹತ್ಯೆಗೆ ಶರಣು

    Published

    on

    ಮಂಗಳೂರು/ಬೆಂಗಳೂರು: ಮದುವೆಯಾಗಲು ಕಿರುತರೆ ನಟಿಯೊಬ್ಬಳು ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ಮನನೊಂದು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


    ಈವೆಂಟ್ ಮ್ಯಾನೇಜ್‌ ಮೆಂಟ್‌ನಲ್ಲಿ ಡೆಕೊರೇಟ್ ಕೆಲಸ ಮಾಡುತ್ತಿದ್ದ ಮದನ್‌ (25) ಮೃ*ತಪಟ್ಟ ಯುವಕ ಎಂದು ಗುರುತಿಸಲಾಗಿದೆ.
    ಕಿರುತೆರೆಯಲ್ಲಿ ಸಹನಟಿಯಾಗಿ ವೀಣಾ ಕೆಲಸ ಮಾಡುತ್ತಿದ್ದು, ಸೀರಿಯಲ್ ಸೆಟ್‌ನಲ್ಲೇ ಇಬ್ಬರ ಪರಿಚಯವಾಗಿತ್ತು. ಅವರ ಸ್ನೇಹ ಮುಂದುವರೆಯುತ್ತಿದ್ದಂತೆ ಸಲುಗೆ ಬೆಳೆಸಿಕೊಂಡು ಇಬ್ಬರು ಲೀವಿಂಗ್ ರಿಲೇಶನ್‌ ಬೆಳೆಸಿಕೊಂಡಿದ್ದರು.


    ಕೆಲ ಸಮಯದ ಬಳಿಕ, ಮದುವೆಯಾಗುವಂತೆ ಮದನ್ ಬಳಿ ಒತ್ತಾಯಿಸಿದ್ದಳು. ಬೇರೆ ಹುಡುಗರ ಜೊತೆಯೂ ಅವಳು ಆತ್ಮೀಯಳಾಗಿದ್ದಳು ಎಂಬ ಕಾರಣಕ್ಕೆ ಅವನು ನಿರಾಕರಿಸಿದ್ದ.
    ಆದರೆ, ನಿನ್ನೆ (ಅ.1) ವೀಣಾ ಮದನ್‌ನ್ನು ಮನೆಗೆ ಬರ ಮಾಡಿಸಿ ಇಬ್ಬರೂ ಚೆನ್ನಾಗಿ ಕುಡಿದು ಪಾರ್ಟಿ ಮಾಡಿದ್ದಾರೆ. ಆ ಮಧ್ಯೆ ಮದುವೆ ಪ್ರಸ್ತಾಪವಾಗಿತ್ತು. ಮದನ್‌ ಸ್ವತಃ ಮದುವೆಯಾಗುವಂತೆ ಕೇಳಿದಾಗ, ವೀಣಾ ‘ಆಗುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾಳೆ.
    ಇದರಿಂದ ಮನನೊಂದ ಮದನ್ ವಾಶ್ ರೂಮಿಗೆ ಹೋಗಿಬರುವೆ ಎಂದು ಹೇಳಿ , ಅಲ್ಲಿಯೇ ನೇ*ಣು ಬಿಗಿ*ದು ಆತ್ಮ*ಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
    ಹುಲಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೀಣಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಯುದ್ಧದ ಕಾರ್ಮೋಡ..! ಗಲ್ಫ್‌ ದೇಶದ 90 ಲಕ್ಷ ಭಾರತೀಯರಿಗೆ ಆತಂಕ..!

    Published

    on

    ನವದೆಹಲಿ : ಇಸ್ರೇಲ್ ಮೇಲಿನ ಇರಾನ್ ದಾಳಿಯಿಂದ ಕೊಲ್ಲಿ ರಾಷ್ಟ್ರಗಳ ಮೇಲೆ ಆತಂಕದ ಕರಿಛಾಯೆ ಮೂಡಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇದೇ ಮೊದಲು ಅಲ್ಲವಾದ್ರೂ, ಇದೀಗ ನಡೆಯುತ್ತಿರುವ ವಿದ್ಯಮಾನ ಇಂತಹ ಆತಂಕಕ್ಕೆ ಕಾರಣವಾಗಿದೆ.
    ಗಾಜಾ, ಹೆಜ್ಬುಲ್ಲಾ ಮತ್ತು ಹೌತಿಗಳ ಮೇಲಿನ ನಿರಂತರ ದಾಳಿಗೆ ಪ್ರತೀಕಾರವಾಗಿ ಇರಾನ್ ಇಸ್ರೆಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅಕ್ಟೋಬರ್ 1 ರ ರಾತ್ರಿ 200ಕ್ಕೂ ಹೆಚ್ಚು ಕ್ಷಿಪಣಿಗಳ ಮೂಲಕ ಇಸ್ರೇಲ್‌ನ ನಿಗದಿತ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆದಿದೆ. ಇರಾನ್ ಮಾಡಿರುವ ಈ ದಾಳಿಗೆ ಅಮೆರಿಕಾ ಪ್ರತಿಕ್ರಿಯೆ ನೀಡಿದ್ದು, ಇರಾನ್‌ಗೆ ತಕ್ಕ ಶಾಸ್ತಿ ಮಾಡುವ ಎಚ್ಚರಿಕೆ ಕೂಡ ನೀಡಿದೆ. ಇದು ಈಗ ಆತಂಕ ಸೃಷ್ಟಿಸಿದ್ದು, ಇದು ದೊಡ್ಡ ದುರಂತಕ್ಕೆ ನಾಂದಿ ಹಾಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಇದು ಎರಡು ದೇಶದ ನಾಗರಿಕರು ಮಾತ್ರವಲ್ಲದೆ, ಇಡೀ ಗಲ್ಫ್‌ ದೇಶ ಹಾಗೂ ವಿಶ್ವಕ್ಕೆ ವ್ಯಾಪಿಸಬಹುದಾದ ಯುದ್ಧವಾಗಿ ಬದಲಾಗಬಹುದಾದ ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಗಲ್ಫ್‌ ರಾಷ್ಟ್ರದಲ್ಲಿರುವ 90 ಲಕ್ಷ ಭಾರತೀಯರ ಬದುಕಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

    ತಜ್ಞರ ಪ್ರಕಾರ, ಅಮೆರಿಕ ಇಸ್ರೇಲ್‌ಗೆ ಬೆಂಬಲ ನೀಡದೇ ಇದ್ದಲ್ಲಿ ಇಸ್ರೇಲ್ ಸ್ಥಿತಿ ಗಂಭೀರವಾಗಬಹುದು. ಯಾಕಂದ್ರೆ, ಬಹುತೇಕ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ವಿರುದ್ಧವಾಗಿದ್ದು ಇಸ್ರೇಲ್‌ ನಾಶಕ್ಕಾಗಿ ಕಾಯುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಇಸ್ರೇಲ್‌, ಹಮಾಸ್, ಹಿಜ್ಬುಲ್ಲಾ ಮತ್ತು ಹೌತಿಗಳ ಜೊತೆಗೆ ಹೋರಾಡಿ ಬೇಸತ್ತು ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಮದ್ಯ ಪ್ರವೇಶ ಮಾಡುವುದು ಖಚಿತ ಎಂದು ಅಂದಾಜಿಸಲಾಗಿದೆ. ಹಾಗೊಂದು ವೇಳೆ ಅಮೆರಿಕಾ ಮಧ್ಯ ಪ್ರವೇಶ ಮಾಡಿದ್ರೆ ಈ ಯುದ್ಧ ದೀರ್ಘಕಾಲದವರೆಗೆ ಮುಂದುವರಿಯಬಹುದು. ಇದರಿಂದ ಜಗತ್ತಿನ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

    ಇರಾನ್-ಇಸ್ರೇಲ್ ಯುದ್ಧ ಎಷ್ಟು ಅಪಾಯಕಾರಿ?

    ಇಸ್ರೇಲ್ ಬೆಂಬಲಕ್ಕೆ ಅಮೆರಿಕಾ ಬಂದಲ್ಲಿ ಕೊಲ್ಲಿ ರಾಷ್ಟ್ರದಲ್ಲಿರುವ ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ನಡೆಸಲಿದೆ. ಈ ಬಗ್ಗೆ ಇರಾನ್ ಈಗಾಗಲೇ ಸ್ಪಷ್ಟ ಸಂದೇಶವನ್ನು ಅಮೆರಿಕಾಗೆ ರವಾನಿಸಿದೆ. ಇರಾನ್ ಕೊಲ್ಲಿ ರಾಷ್ಟ್ರದ ಅಮೆರಿಕ ನೆಲೆ ಮೇಲೆ ದಾಳಿ ನಡೆಸಿದ್ರೆ, ಅದು ಸಂಪೂರ್ಣ ಗಲ್ಫ್‌ ದೇಶಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ತೈಲ ಪೂರೈಕೆಯ ವ್ಯತ್ಯಯದ ಜೊತೆಗೆ ಜನರ ಉದ್ಯೋಗ, ಪ್ರಾಣಕ್ಕೂ ಅಪಾಯ ಎದುರಾಗುವ ಆತಂಕ ಇದೆ.

    Continue Reading

    LATEST NEWS

    ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ..!

    Published

    on

    ಮಂಗಳೂರು: ನವರಾತ್ರಿ ಹಬ್ಬ ಸನ್ನಿಹಿತವಾಗುತ್ತಿರುವಂತೆ ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಹಬ್ಬಕ್ಕಾಗಿ ದೂರದೂರಿನಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಅದರಲ್ಲೂ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸು ವವರಿಗೆ ಖಾಸಗಿ ಬಸ್‌ನಲ್ಲಿ ಅತೀ ಹೆಚ್ಚಿನ ದರ 3,500 ರೂ. ಇದೆ.

    ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್‌ ದರ ಏರಿಕೆ ಮಾಮೂಲಿಯಾಗಿದೆ. ಈ ಹಿಂದೆ ಗೌರಿ-ಗಣಪತಿ ಹಬ್ಬದ ಸಮಯದಲ್ಲೂ ಬಸ್‌ ಟಿಕೆಟ್‌ ದರ ಏರಿಕೆ ಮಾಡಲಾಗಿತ್ತು. ಇದೀಗ ನವರಾತ್ರಿ ಹಬ್ಬಕ್ಕೂ ದರ ಏರಿಕೆ ಮುಂದುವರಿದಿದೆ.

    ವಾರಾಂತ್ಯ ದಲ್ಲಿ ಬಂದಿರುವು ದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್‌ ದರ ಹೆಚ್ಚಳಕ್ಕೆ ಕಾರಣವಾಗಿದೆ. ಅ.10ರಿಂದಲೇ ಕೆಲ ಖಾಸಗಿ ಬಸ್‌ಗಳ ಟಿಕೆಟ್‌ ದರಲ್ಲಿ ಏರಿಕೆಯಾಗಿದ್ದು ಹಬ್ಬ ಮುಗಿದು ವಾಪಸ್‌ ಬರುವವರೆಗೂ ದರ ಏರಿಕೆ ಬಿಸಿ ಮುಟ್ಟಲಿದೆ.
    ಮಂಗಳೂರು ದಸರಾ ಕಣ್ತುಂಬಿಕೊಳ್ಳಲು ಸಾಮಾನ್ಯವಾಗಿ ದೂರ ದೂರಿನಿಂದ ಸಾರ್ವಜನಿಕರು ಆಗಮಿಸುತ್ತಾರೆ. ಈ ಬಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 3ರಿಂದ 14ರ ವರೆಗೆ ಮಂಗಳೂರು ದಸರಾ ನಡೆಯಲಿದೆ. ಅ. 13ರಂದು ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಜರಗಲಿದೆ. ಈ ಬಾರಿ ಅ. 12 ಎರಡನೇ ಶನಿವಾರ ಮತ್ತು ಅ.13 ರವಿವಾರ ಇದ್ದ ಕಾರಣ ಅ.11ರಂದೇ ಬೆಂಗಳೂರು, ಮೈಸೂರು ಸಹಿತ ವಿವಿಧ ಕಡೆಗಳಿಂದ ಊರಿಗೆ ಜನ ಹೊರಡುತ್ತಾರೆ. ಇದನ್ನೇ ಬಂಡವಾಳವಾಗಿರಿಸಿದ ಖಾಸಗಿ ಬಸ್‌ಗಳು ಟಿಕೆಟ್‌ ದರ ಮೂರು ಪಟ್ಟು ಹೆಚ್ಚಿಸಿದೆ.

    ಎಲ್ಲಿಗೆ ಎಷ್ಟು ದರ ಏರಿಕೆ?

    ಖಾಸಗಿ ಬಸ್‌ಗಳಲ್ಲಿ ಅ. 11ರಂದು ಬೆಂಗಳೂರಿನಿಂದ ಮಂಗಳೂರಿಗೆ ಅತೀ ಹೆಚ್ಚಿನ ದರ 3,500 ರೂ. ಇದೆ. ಅದೇ ರೀತಿ, ಮಂಗಳೂರಿನಿಂದ ಮೈಸೂರಿಗೆ 1,200 ರೂ., ಬಳ್ಳಾರಿಗೆ 950 ರೂ., ಬಾಗಲಕೋಟೆ 1,500 ರೂ., ಕೊಪ್ಪಳ 2,600 ರೂ., ವಿಜಯಪುರ 1,500 ರೂ. ಇದೆ. ಹಬ್ಬಕ್ಕೆ ಕೆಲ ದಿನ ಬಾಕಿ ಇರುವಾಗಿನಿಂದಲೇ ಏರುಗತಿಯಲ್ಲಿ ಸಾಗಿರುವ ಬಸ್‌ ಪ್ರಯಾಣ ದರ ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಆದರೆ ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣ ದರ ಸದ್ಯಕ್ಕೆ ಏರಿಕೆಯಾಗಿಲ್ಲ. ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಕಾರ್ಯಾಚರಿಸುವ ಹೆಚ್ಚುವರಿ ಬಸ್‌ಗಳಿಗೆ ಮಾಮೂಲಿ ದರಕ್ಕಿಂತ ಹೆಚ್ಚಿನ ದರ ಇರುತ್ತದೆ.

    ವಿಮಾನ ಟಿಕೆಟ್‌ ದರದಲ್ಲಿ ತುಸು ಹೆಚ್ಚಳ

    ನವರಾತ್ರಿ ಸಮಯದಲ್ಲಿ ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೆ ಹೋಲಿಕೆ ಮಾಡಿದರೆ, ವಿಮಾನ ಟಿಕೆಟ್‌ ದರದಲ್ಲಿ ಭಾರೀ ಏರಿಕೆ ಕಂಡುಬಂದಿಲ್ಲ. ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 2,999 ರೂ. ಇದ್ದು ಅ. 11ರಂದು 3,239 ರೂ.ಗೆ ಏರಿಕೆ ಕಂಡಿದೆ. ರೈಲು ಪ್ರಯಾಣದಲ್ಲಿ ಟಿಕೆಟ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಈಗಾಗಲೇ ಟಿಕೆಟ್‌ ಭರ್ತಿಯಾಗಿದ್ದು, ಅನೇಕ ಮಂದಿ ವೈಟಿಂಗ್‌ ಲಿಸ್ಟ್‌ನಲ್ಲಿ ಇದ್ದಾರೆ.

    Continue Reading

    LATEST NEWS

    ಅಪ್ಪನ ಚಿತೆಗೆ ಕೊಳ್ಳಿ ಇಡೋಕೆ ಎರಡೂವರೆ ಲಕ್ಷ ಕೇಳಿದ ಮಗ

    Published

    on

    ಭೋಪಾಲ್: ಮಧ್ಯಪ್ರದೇಶದ ಶಾದೋಲ್ ಎಂಬಲ್ಲಿ ಪುತ್ರನೋರ್ವ ತಂದೆಯ ಚಿತೆಗೆ ಬೆಂಕಿ ಇಡಲು ನಿರಾಕರಿಸಿದ್ದಾನೆ. ತಂದೆಯ ಚಿತೆಗೆ ಕೊಳ್ಳಿ ಇಡಬೇಕಾದರೆ 2.5 ಲಕ್ಷ ರೂಪಾಯಿ ನೀಡಬೇಕೆಂದು ಮಗ ಡಿಮ್ಯಾಂಡ್ ಮಾಡಿದ್ದನು. ಊರಿಗೆ ಬಂದು ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸು ಎಂದು ತಾಯಿ ಫೋನ್‌ನಲ್ಲಿ ಗೊಗರೆದು ಕೇಳಿಕೊಂಡರೂ ಮಗ ಕೇಳಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಮಗ ಬರಲು ಒಪ್ಪದಿದ್ದಾಗ ಪತ್ನಿಯೇ ಚಿತೆಗೆ ಬೆಂಕಿ ಇರಿಸಿದ್ದಾರೆ.

    ಮಧ್ಯಪ್ರದೇಶದ ಬ್ಯೌಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಛಿಯಾನಾ ಟೋಲಾ 11ನೇ ವಾರ್ಡ್‌ನಲ್ಲಿ ಘಟನೆ ನಡೆದಿದೆ. 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 10 ದಿನದ ಹಿಂದೆ ರಾಮ್ ಸ್ವರೂಪ್ ಬರ್ಮನ್ ಎಂಬವರು ಸಾ*ವನ್ನಪ್ಪಿದ್ದರು. ಮಗನಿಗೆ ಕರೆ ಮಾಡಿದ ತಾಯಿ, ನಿಮ್ಮ ತಂದೆ ಮೃ*ತರಾಗಿದ್ದು, ಬಂದು ಅಂತ್ಯಕ್ರಿಯೆ ನೆರವೇರಿಸು ಎಂದು ಹೇಳಿದ್ದರು. ಇದಕ್ಕೆ ಊರಿನಲ್ಲಿರುವ ಮನೆ ಮಾರಾಟ ಮಾಡಿ, ಎರಡೂವರೆ ಲಕ್ಷ ಹಣ ಖಾತೆಗೆ ಜಮೆ ಮಾಡಿದ ನಂತರವೇ ಅಲ್ಲಿಗೆ ಬರುವೆ ಎಂದು ಹೇಳಿದ್ದಾನೆ. ತಾಯಿ, ಕುಟುಂಬಸ್ಥರು ಮತ್ತು ಗ್ರಾಮದ ಹಿರಿಯರು ಎಷ್ಟೇ ಬುದ್ಧಿವಾದ ಹೇಳಿದರೂ ಮಗ ಯಾರ ಮಾತನ್ನೂ ಕೇಳಿಲ್ಲ.

    ಅಂತ್ಯಕ್ರಿಯೆ ನಡೆಸಲು ಒಪ್ಪದಿದ್ದಾಗ ಮೃ*ತ ವ್ಯಕ್ತಿಯ ಮಡದಿ ಪಾರ್ವತಿ ತಾವೇ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ನಿರ್ಧರಿಸಿದರು. ಶವ ಸಾಗುವ ಮಾರ್ಗದಲ್ಲಿ ತಾವೇ ಮುಂದೆ ಕೊಳ್ಳಿ ಹಿಡಿದುಕೊಂಡು ಸ್ಮಶಾನದವರೆಗೆ ಬಂದಿದ್ದಾರೆ. ಸ್ಮಶಾನಕ್ಕೆ ಬಂದ್ಮೇಲೆಯೂ ತುಂಬಾ ಸಮಯದವರೆಗೆ ಮಗನ ಆಗಮನಕ್ಕಾಗಿ ಇಡೀ ಊರು ಕಾದಿತ್ತು. ಕೊನೆಗೆ ತಾವೇ ಎಲ್ಲಾ ವಿಧಿವಿಧಾನ ಪೂರೈಸಿ ಗಂಡನ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಇಡೀ ಗ್ರಾಮ ಪಾರ್ವತಿ ಅವರಿಗೆ ಸಾಥ್ ನೀಡಿತ್ತು.

    ಅಂತ್ಯಕ್ರಿಯೆ ಮುಗಿಸಿದ ಬಳಿಕ 10ನೇ ದಿನದ ಕಾರ್ಯವರೆಗೂ ಮಗ ಆಗಮಿಸುವ ನಿರೀಕ್ಷೆಯುಲ್ಲಿ ಮಹಿಳೆ ಇದ್ದರು. 10ನೇ ದಿನದ ಕಾರ್ಯಕ್ರಮ ಮುಗಿಸಿದ ನಂತರ ಹೆಣ್ಣು ಮಕ್ಕಳೊಂದಿಗೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಪಾರ್ವತಿ ಅವರು, ಮಗನ ವಿರುದ್ಧ ದೂರು ದಾಖಲಿಸಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ರಾಮ್ ಸ್ವರೂಪ್ ಬರ್ಮನ್ ಮತ್ತು ಪಾರ್ವತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗನಿದ್ದಾನೆ. ಮದುವೆ ಬಳಿಕ ತಂದೆ-ತಾಯಿ ಜೊತೆ ಹಣಕಾಸಿನ ವಿಚಾರವಾಗಿ ಮಗ ಮನೋಜ್ ಜಗಳ ಮಾಡುತ್ತಿದ್ದನು. ನಂತರ ಪೋಷಕರಿಂದ ದೂರವಾಗಿ ಬ್ಯೌಹಾರಿಯ ಬಾಡಿಗೆ ಮನೆಯಲ್ಲಿ ಪತ್ನಿ ಜೊತೆ ಮನೋಜ್ ವಾಸವಾಗಿದ್ದನು. ಊರಿಗೆ ಬಂದಾಗಲೂ ಹಣದ ವಿಷಯಕ್ಕಾಗಿಯೇ ಪೋಷಕರ ಜೊತೆ ಮನೋಜ್ ಜಗಳ ಮಾಡುತ್ತಿದ್ದನು ಎಂದು ವರದಿಯಾಗಿದೆ.

    Continue Reading

    LATEST NEWS

    Trending