Wednesday, October 5, 2022

ಮತ್ತೆ ಕರಾವಳಿಯಲ್ಲಿ ರೆಡ್ ಅಲರ್ಟ್: ಸಮುದ್ರಕ್ಕಿಳಿಯದಂತೆ ಸೂಚನೆ

ಮಂಗಳೂರು: ಮುಂದಿನ 48 ಗಂಟೆಗಳ ಅವಧಿಯಲ್ಲಿ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾನುವಾರ ತನಕ ಕರಾವಳಿಯಾದ್ಯಂತ ರೆಡ್‌ ಅಲರ್ಟ್‌ ಜಾರಿಯಲ್ಲಿತ್ತು. ಇದುವರೆಗೆಇದೀಗ ಹವಾಮಾನ ಇಲಾಖೆಯು ಪರಿಷ್ಕೃತ ಮುನ್ಸೂಚನೆಯನ್ನು ನೀಡಿದ್ದು, ಜುಲೈ 12ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಜಾರಿಯಲ್ಲಿ ಇರುತ್ತದೆ ಎಂದು ತಿಳಿಸಿದೆ.


ಇಂದು ಬೆಳಗ್ಗಿನ 8.30 ರ ವರೆಗಿನ 24 ಗಂಟೆಗಳ ಅವಧಿಯಲ್ಲಿ ಕಾರ್ಕಳ ತಾಲೂಕು ಕುಚ್ಚೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 228.5 ಮಿಲಿ ಮೀಟರ್‌ ಮಳೆಯಾಗಿದ್ದು ಇದು ರಾಜ್ಯದಲ್ಲಿಯೇ ಗರಿಷ್ಠವಾಗಿದೆ. ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ಅತ್ಯಧಿಕ ಎಂದರೆ 59.1 ಮಿಲಿ ಮೀಟರ್‌ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಗರಿಷ್ಠ 111.9 ಮಿಲಿ ಮೀಟರ್‌ ಮಳೆ ಬಂದಿದೆ.

ಈ ಸಂದರ್ಭದಲ್ಲಿ ಬಿರುಗಾಳಿಯ ವೇಗವು ಪ್ರತಿ ಘಂಟೆಗೆ 45-55 ಕಿ.ಮೀ. ಇರಲಿದೆ. ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಧಾರಾಕಾರ ಮಳೆಯ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಉಭಯ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ಕಳೆದ 5 ದಿನಗಳಿಂದ ರಜೆ ನೀಡಲಾಗಿತ್ತು. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತವೆ.

ತಗ್ಗು ಪ್ರದೇಶಗಳು ಜಲಾವೃತದ ಅಪಾಯದಲ್ಲಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗಲು 88 ಕಡೆ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇಂದು ಬಂಟ್ವಾಳ ತಾಲೂಕಿನಲ್ಲೂ ಬಿರುಸಾದ ಮಳೆ ಬಂದಿದೆ. ಇಂದು ದಿನವಿಡೀ ಮೋಟ ಕವಿದ ವಾತಾವರಣವಿದ್ದು, ಮಂಗಳೂರು ನಗರ ಮತ್ತು ಹೊರ ವಲಯದಲ್ಲಿ ಬೆಳಗ್ಗಿನಿಂದ ಬಿಟ್ಟು ಬಿಟ್ಟು ಧಾರಾಕಾರ ಮಳೆ ಬಂದಿದೆ.

ಮಂಗಳೂರಿನ ದೇರೆಬೈಲ್‌ನ ಬೋರುಗುಡ್ಡೆಯಲ್ಲಿ ಭೂಕುಸಿತ ಸಂಭವಿಸಿ ಗುಡ್ಡದಲ್ಲಿರುವ ಕೆಲವು ಮನೆಗಳು ಆತಂಕ ಎದುರಿಸುತ್ತಿವೆ. ಇಲ್ಲಿ ಸುಮಾರು 60 ಮನೆಗಳಿದ್ದು, ಈ ಪೈಕಿ ಗುಡ್ಡದ ಬದಿಯಲ್ಲಿ 10 ಮನೆಗಳಿವೆ. ಬಜ್ಜೋಡಿ ಬಳಿ ಗುಡ್ಡ ಕುಸಿದು ಮನೆಯೊಳಗೆ ನೀರು ನುಗ್ಗಿದೆ.

ಜಪ್ಪಿನಮೊಗರು, ಎಕ್ಕೂರು, ಪಂಪ್‌ವೆಲ್‌ನ ಕೆಲವೆಡೆ ಮಳೆ ನೀರು ಹರಿದು ಸಮಸ್ಯೆಯಾಗಿತ್ತು. ಶರವು ದೇಗುಲ, ಕೆ.ಎಸ್‌. ರಾವ್‌ ರಸ್ತೆ, ಕೊಟ್ಟಾರ ಮುಂತಾದೆಡೆ ಮಳೆ ನೀರು ರಸ್ತೆಯಲ್ಲಿ ಹರಿದಿತ್ತು. ಉಳ್ಳಾಲದ ಕೆರೆಬೈಲ್‌ನಲ್ಲಿ ಗುಡ್ಡ ಕುಸಿದು 5 ಮನೆಗಳ ಜನರನ್ನು ಸ್ಥಳಾಂತರಿಸಲಾಯಿತು. ಗುರುಪುರದಲ್ಲಿ ಗುಡ್ಡ ಕುಸಿದ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಲಾಗಿದೆ.

ಮೂಲ್ಕಿಯ ಶಾಂಭವಿ ನದಿ ಪಾತ್ರದ 250 ಎಕರೆ ಜಮೀನಿಗೆ ಮಳೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ. ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 19 ಮನೆಗಳಿಗೆ ಭಾಗಶಃ ಹಾಗೂ 2 ಮನೆಗಳಿಗೆ ಪೂರ್ಣ ಹಾನಿಯಾಗಿದೆ. ನಿರಂತರ ಧಾರಾಕಾರ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ವೇಣೂರಿನ ಫಲ್ಗುಣಿ ನದಿಯಲ್ಲಿ ಇಂದು ಅಪರಿಚಿತ ಶವವೊಂದು ತೇಲಿ ಬಂದಿದೆ.

ಮಳೆಯ ಪ್ರವಾಹಕ್ಕೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪುಣಚ ಗ್ರಾಮ ವ್ಯಾಪ್ತಿಗೊಳಪಡುವ ದೇವಿನಗರ-ಕಲ್ಲಾಜೆ-ಮಡ್ಯಾರಬೆಟ್ಟು-ಆಜೇರು ಮೂಲಕ ಸಾರ್ಯಕ್ಕೆ ಸಾಗುವ ರಸ್ತೆಯ ಮಡ್ಯಾರಬೆಟ್ಟು ಕಿರು ಸೇತುವೆಯೊಂದು ಮಳೆ ನೀರಿನ ಪ್ರವಾಹದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ಈ ಸೇತುವೆಯನ್ನು ಬಳಸುವ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.


ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಡುವ ಪ್ರದೇಶದ ಈ ಸೇತುವೆಯನ್ನು 2013-2014 ರಲ್ಲಿ ಸಂಸದರ 5 ಲಕ್ಷ ರೂ. ಹಾಗೂ ಜಿ.ಪಂ.ನ 3 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗಿತ್ತು. ಹತ್ತು ವರ್ಷ ತುಂಬುವುದರೊಳಗೆ ಮಳೆ ನೀರಿಗೆ ಆಹುತಿಯಾಗಿದೆ. ಇದರಿಂದಾಗಿ ಆಜೇರು ಭಾಗದಿಂದ ಪುಣಚಕ್ಕೆ ಬರುವ, ಕಲ್ಲಾಜೆಯಿಂದ ಸಾಜ ಮೂಲಕ ಪುತ್ತೂರು ಹಾಗೂ ಇತರೆಡೆಗಳಿಗೆ ಸಾಗುವ ಜನರ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.

ಈ ಪ್ರದೇಶದಲ್ಲಿಯ ನಿತ್ಯ ಸಂಚಾರಿಗಳಿಗೆ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಸಂಪರ್ಕ ಕಡಿತಗೊಂಡಿರುವುದರಿಂದ ಸಂಕಟ ಪಡುವಂತಾಗಿದೆ. ಇದಲ್ಲದೇ ಪುಣಚ ಗ್ರಾಮದ ಕಲ್ಲಾಜೆ, ಮಲೆತ್ತಡ್ಕ, ಪೊಯ್ಯಮೂಲೆ ಇನ್ನಿತರ ಪ್ರದೇಶಗಳಲ್ಲಿಯೂ ಮಳೆಹಾನಿ ಸಂಭವಿಸಿದ್ದು ಮನೆ, ಕೃಷಿಭೂಮಿಗಳಿಗೆ ಹಾನಿಯಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷರು,ವಾರ್ಡ್ ಸದಸ್ಯರು, ಪಿಡಿಒ,ಗ್ರಾಮ ಕರಣಿಕರೊಂದಿಗೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಗತ್ಯ ತುರ್ತು ಕ್ರಮ ಕೈಗೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಇಳಿಯಬೇಕಾಗಿದ್ದ ದುಬಾಯಿ -ಮಂಗಳೂರು ಸ್ಪೈಸ್‌ ಜೆಟ್‌ ವಿಮಾನವನ್ನು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮೊದಲು ಕೊಯಮುತ್ತೂರಿಗೆ ಹಾಗೂ ಬಳಿಕ ಅಲ್ಲಿಂದ ಕೊಚ್ಚಿನ್‌ಗೆ ತಿರುಗಿಸಲಾಗಿತ್ತು.

LEAVE A REPLY

Please enter your comment!
Please enter your name here

Hot Topics

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...

ಮಹಾನವಮಿ ಸಂಭ್ರಮ: ಕಟೀಲು ಕ್ಷೇತ್ರದಲ್ಲಿ ಮಹಾ ರಂಗ ಪೂಜೆ

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಮಹಾ ರಂಗ ಪೂಜೆ ನಡೆಯಿತು. ಆರು ನೂರಕ್ಕೂ ಹೆಚ್ಚು ವಿಶಿಷ್ಟ ಆರತಿಗಳಿಂದ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆದ ಮಹಾಪೂಜೆಯನ್ನು...

Breaking: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನ..!

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಇದರಲ್ಲಿದ್ದ ಓರ್ವ ಪೈಲೆಟ್‌ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.