Connect with us

    DAKSHINA KANNADA

    ಮಂಗಳೂರು: ಮನಪಾ ನೂತನ ಆಯುಕ್ತರಾಗಿ ರವಿಚಂದ್ರ ನಾಯಕ್ ನೇಮಕ

    Published

    on

    ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಸಿ.ಎಲ್.ಆನಂದ್ ಅವರನ್ನು ವರ್ಗಾವಣೆಗೊಳಿಸಿ, ನೂತನ ಆಯುಕ್ತರಾಗಿ ರವಿಚಂದ್ರ ನಾಯಕ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದೀಗ ನೇಮಕಗೊಂಡಿರುವ ರವಿಚಂದ್ರ ನಾಯಕ್ ಅವರು ಪ್ರಸ್ತುತ ಶಿವಮೊಗ್ಗ ತುಂಗಾ ಮೇಲ್ದಂಡೆಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು. ಮಂಗಳೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ರವಿಚಂದ್ರ ನಾಯಕ್ ಅವರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ, ಮಂಗಳೂರು ಉಪವಿಭಾಗಾಧಿಕಾರಿಯಾಗಿದ್ದರು. ಆನಂದ್ ಅವರಿಗೆ ಯಾವ ಹುದ್ದೆ ನೀಡಲಾಗಿದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

    DAKSHINA KANNADA

    ಕೇರಳದಲ್ಲಿ ಅಮೀಬಾ ಸೋಂಕಿಗೆ ನಾಲ್ಕು ಮಕ್ಕಳು ಬಲಿ..! ದ.ಕ ಜಿಲ್ಲೆಯಲ್ಲೂ ಹೈ ಅಲರ್ಟ್..!

    Published

    on

    ಮಂಗಳೂರು: ಕೇರಳದಲ್ಲಿ ಅಮೀಬಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಸೃಷ್ಠಿಯಾಗಿದೆ. ಕೇರಳದಲ್ಲಿ ಇದೂವರೆಗೂ ನಾಲ್ಕು ಮಕ್ಕಳು ಅಮೀಬಾ ಸೋಂಕಿಗೆ ಬಲಿಯಾಗಿದ್ದಾರೆ. ಗಡಿನಾಡು ದ.ಕ ಜಿಲ್ಲೆಗಳಲ್ಲೂ ಅಮೀಬಾ ಸೋಂಕಿನ ಹಿನ್ನೆಲೆ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದು, ಆರೋಗ್ಯ ಇಲಾಖೆಯಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.


    ಕಲುಷಿತ ನೀರಿನಲ್ಲಿರುವ ಪರಾವಲಂಬಿಯಲ್ಲದ ಅಮೀಬಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತದೆ. ಮೂಗಿನ ಮೂಲಕ ನಮ್ಮ ಶರೀರ ಸೇರುವ ಸೂಕ್ಷ್ಮಾಣು ಜೀವಿ, ಮೆದುಳಿನ ಅಂಗಾಂಶಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಇದರಿಂದ ಸಾವು ಕೂಡ ಸಂಭವಿಸುತ್ತದೆ. ಕಲುಷಿತ ನೀರಿನಲ್ಲಿಈಜಾಡುವವರಿಗೆ ಈ ಸೋಂಕು ಹರಡುತ್ತದೆ. ಮಳೆ ನೀರು, ನಿಂತ ನೀರುಗಳಿಂದ ಈ ಸೋಂಕು ಹರಡುವ ಸಾಧ್ಯತೆ ಇದೆ. ಮುಕ್ತ-ಜೀವಂತ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

    ಕೇರಳದಲ್ಲಿ ಅಮೀಬಾ ಕಾಯಿಲೆಗೆ 3 ಮಕ್ಕಳ ಬಲಿ..!

    ಕೇರಳದಲ್ಲಿ ಅಮೀಬಾ ಸೋಂಕು ಹಿನ್ನಲೆ ಮುಖ್ಯಮಂತ್ರಿ ಪಿಣರಾಯಿ ತುರ್ತು ಸಭೆ ಕರೆದಿದ್ದಾರೆ. ಕಲುಷಿತ ನೀರುಗಳಲ್ಲಿ ಈಜಾಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇನ್ನು ಈಜುವಾಗ ಮೂಗಿನ ಕ್ಲಿಪ್‌ಗಳನ್ನು ಹಾಕುವಂತೆ ಸೂಚನೆ ನೀಡಿದ್ದಾರೆ. ಈಜುಕೊಳದಲ್ಲಿ ಕ್ಲೋರಿನೇಷನ್ ಆಗಿರಬೇಕು. ಈ ಸೋಂಕಿಗೆ ಮಕ್ಕಳೇ ಬಲಿಯಾಗುತ್ತಿರುವುದರಿಂದ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

    Continue Reading

    DAKSHINA KANNADA

    ಮಂಗಳೂರು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು(ಜು.8)ರಜೆ

    Published

    on

    ಮಂಗಳೂರು : ಮಂಗಳೂರು ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ತಾಲೂಕಿನ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಜು.8ರಂದು ರಜೆ ಘೋಷಿಸಲಾಗಿದೆ.


    ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಮಂಗಳೂರು ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಂಗಳೂರು ತಹಶೀಲ್ದಾರ್ ರಜೆ ಘೋಷಿಸಿ ಆದೇಶಿಸಿದ್ದಾರೆ.

    Continue Reading

    BANTWAL

    ಕಳ್ಳತನಕ್ಕೆ ವೃದ್ಧೆಯ ಕತ್ತು ಹಿಸುಕಿದ ಕಿರಾತಕರು..!

    Published

    on

    ಮಂಗಳೂರು : ಕಿಟಕಿಯ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು ವೃದ್ಧೆಯ ಕತ್ತು ಹಿಸುಕಿ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡೂರು ಗ್ರಾಮದ ಬಲಿಪಗುಳಿ ಎಂಬಲ್ಲಿ  ನಡೆದಿದೆ.

    ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರು ಅಜ್ಜಿಯನ್ನು ಘಾಸಿಗೊಳಿಸಿ ಚಿನ್ನಾಭರಣ ಲೂಟಿದ್ದಾರೆ. ಮನೆಯ ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72)ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಚಿನ್ನ ಕಸಿದು ಪರಾರಿಯಾಗಿದ್ದಾರೆ.

    ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಸೊಸೆ ಐಸಮ್ಮಾ ಅವರಿಗೆ ಈ ವಿಚಾರ ಬೆಳಗ್ಗೆ ಅರಿವಿಗೆ ಬಂದಿದೆ. ಬೆಳಗ್ಗೆ ಎದ್ದು ಅತ್ತೆಯನ್ನು ಎಚ್ಚರಿಸಲು ಬಂದಾಗ ಅತ್ತೆ ಐಸಮ್ಮಾ ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು. ಏನೋ ತೀವೃ ಅಸೌಖ್ಯ ಎಂದು ಶಂಕಿಸಿ ಮನೆಯವರು, ನೆರೆಯ ಸಂಬಂದಿಕರಿಗೆ ಮಾಹಿತಿ ನೀಡಿದ್ದಾರೆ. ಸಂಬಂದಿಗಳು ಬಂದು ನೋಡಿದಾಗ ಕಿಟಕಿಯ ಸರಳು ತುಂಡರಿಸಿರುವುದು ಮತ್ತು ಮಹಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಇದಾದ ಬಳಿಕ ಮನೆಯವರು ಮತ್ತಷ್ಟು ಪರಿಶೀಲಿಸಿದಾಗ ಅಜ್ಜಿಯ ಕಿವಿಯೋಲೆಗಳು ಕಳ್ಳತನ ಆಗಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಮೂಲಕ ಪರಿಶೀಲನೆ ನಡೆಸಲಾಗಿದೆ. ಗಾಯಗೊಂಡ ವೃದ್ಧೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲೈಮಾನ್ ಸಹೋದರ ಇಬ್ರಾಹಿಂ ನೀಡಿದ ದೂರಿನಂತೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    Trending