ಚಿಕ್ಕೋಡಿ: ಯುವಕನೊಬ್ಬ ಮತ್ತೋರ್ವ ಯುವಕನ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸದ್ಯ ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಮತ್ತೊಬ್ಬ ಯುವಕನ ಮೇಲೆ ರೇಪ್ ಮಾಡಿದ ವಿಲಕ್ಷಣ ಘಟನೆ ನಡೆದಿದೆ.
ಬಸ್ಗಾಗಿ ಕಾಯುತ್ತಿದ್ದ ಯುವಕನಿಗೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಮೇಲೆ ಹತ್ತಿಸಿಕೊಂಡ ಕಾಮುಕನೊಬ್ಬ ಮಾರ್ಗಮಧ್ಯೆ ನಿರ್ಜನ ಪ್ರದೇಶದಲ್ಲಿ ಬಲವಂತವಾಗಿ ಅನೈಸರ್ಗಿಕ ಸಂಭೋಗ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.
ನೊಂದ ಯುವಕ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅತ್ಯಾಚಾರಿ ಆರೋಪಿ ರಾಜು ನೀಲವ್ವ ಆಚಾರಟ್ಟಿ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.