Connect with us

FILM

ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿಗೆ ಚಿತ್ರೋತ್ಸವ ಪ್ರಶಸ್ತಿಯ ಗರಿ…

Published

on

ಕಾಂತಾರ ಮೂಲಕ ಎಲ್ಲರ ಮನಸ್ಸು ಗೆದ್ದ ರಿಷಬ್ ಶೆಟ್ಟಿ ಹಾಗೂ ‘777 ಚಾರ್ಲಿ’ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ರಕ್ಷಿತ್‍ ಶೆಟ್ಟಿ ಇಬ್ಬರಿಗೂ ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಲಭಿಸಿದೆ.

 

ಬೆಂಗಳೂರು : ರಿಷಭ್‍ ಶೆಟ್ಟಿ ‘ಐಕಾನಿಕ್‍ ಡೈರೆಕ್ಟರ್’ ಹಾಗೂ ರಕ್ಷಿತ್‍ ಶೆಟ್ಟಿಗೆ ‘ಟ್ರೆಂಡಿಂಗ್‍ ಆ್ಯಕ್ಟರ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಳೆದ ವರ್ಷ ತಮ್ಮ ವಿಭಿನ್ನ ಪ್ರಯತ್ನದಿಂದ ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ‘ಕಾಂತಾರ’ ಖ್ಯಾತಿಯ ರಿಷಭ್‍ ಶೆಟ್ಟಿ ಈಗ ‘ಐಕಾನಿಕ್‍ ಡೈರೆಕ್ಟರ್’ ಆಗಿ ಹೊರಹೊಮ್ಮಿದ್ದಾರೆ.

ಇನ್ನು, ‘777 ಚಾರ್ಲಿ’ ಚಿತ್ರದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ರಕ್ಷಿತ್‍ ಶೆಟ್ಟಿ ‘ಟ್ರೆಂಡಿಂಗ್‍ ಆ್ಯಕ್ಟರ್’ ಆಗಿದ್ದಾರೆ. ಅವರಿಬ್ಬರಿಗೂ ಇಂಥದ್ದೊಂದು ಪ್ರಶಸ್ತಿಗೆ ಭಾಜನರಾಗಿರುವುದು ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ.


ಇನ್ನೋವೇಟೀವ್‍ ಫಿಲಂ ಅಕಾಡೆಮಿ ಮತ್ತು ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಶರವಣ ಪ್ರಸಾದ್‍, ಮಾರತ್‍ಹಳ್ಳಿಯ ಇನ್ನೋವೇಟೀವ್‍ ಮಲ್ಟಿಪ್ಲೆಕ್ಸ್ ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ 6ನೇ ಇನ್ನೋವೇಟೀವ್‍ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಐ.ಎ.ಎಸ್‍ ಅಧಿಕಾರಿ ಅಪೂರ್ವ ಚಂದ್ರ ಭಾಗವಹಿಸಿ, ಚಿತ್ರೋತ್ಸವವನ್ನು ಉದ್ಘಾಟಿಸಿದರು.

ಚಿತ್ರೋತ್ಸವದ ಅಧ್ಯಕ್ಷ ರಾಕ್‍ಲೈನ್‍ ವೆಂಕಟೇಶ್‍, ಫಿಲಂ ಫೆಡರೇಶನ್‍ ಆಫ್‍ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್ಕರ ಮತ್ತು ಹಲವು ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ರಕ್ಷಿತ್‍ ಶೆಟ್ಟಿ ಮತ್ತು ರಿಷಭ್‍ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರಿಷಭ್‍ ಶೆಟ್ಟಿ, ‘’ಕಾಂತಾರ’ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು ಮತ್ತು ಜನಪ್ರಿಯತೆ ಇವೆಲ್ಲವೂ ಸಲ್ಲಬೇಕಾಗಿರುವುದು ಕನ್ನಡಿಗರಿಗೆ.

ಅವರು ಈ ಚಿತ್ರಕ್ಕೆ ಅದ್ಭುತ ಯಶಸ್ಸು ಕೊಟ್ಟು ಅಲ್ಲಿಂದ ಅದು ಬೇರೆಬೇರೆ ಭಾಷೆಗಳಿಗೆ ತಲುಪಿತು. ಹಾಗಾಗಿ, ಕನ್ನಡಿಗರಿಗೆ ಚಿರಋಣಿ ಎಂದರು.

FILM

ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ

Published

on

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಧಾರವಾಹಿಯ ನಟ ಧಾರವಾಹಿಗೆ ಆಯ್ಕೆಯಾದ ತಮ್ಮ ಅಭಿಪ್ರಾಯವನ್ನು ಕೊನೆಗೂ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ವರುಣ್ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಜನಪ್ರಿಯತೆ ಪಡೆದುಕೊಂಡವರು. ಅಲ್ಲದೇ ಇತ್ತೀಚೆಗೆ ಗರ್ಲ್ ಫ್ರೆಡ್ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು.

ಇದೀಗ ಸೀರಿಯಲ್ ಗೆ ಆಯ್ಕೆಯಾದ ಬಗ್ಗೆ ಮಾತನಾಡಿರುವ ನಟ ವರುಣ್ ಆರಾಧ್ಯ “ದೀಪಾವಳಿ ಹಬ್ಬದ ಊಟ ಮುಗಿಸಿಕೊಂಡು ಮಲಗಿಕೊಂಡಿದ್ದೆ. ರಾತ್ರಿ 12.30ಗೆ ಕರೆ ಮಾಡಿ ಸೀರಿಯಲ್‌ನಲ್ಲಿ ನಟಿಸುವ ಇಂಟ್ರೆಸ್ಟ್‌ ಇದ್ಯಾ. ಅವಕಾಶ ಇದೆ ಎಂದು ಫೋನ್ ಮಾಡಿದರು. ರಾತ್ರಿ ಆ ಸಮಯದಲ್ಲಿ ಮಾಡಿದಕ್ಕೆ ನಾನು ಗಾಬರಿ ಆಗಿದೆ ಆ ಸಮಯದಲ್ಲಿ ಆಡಿಷನ್‌ಗೆ ಬರೆಲು ಹೇಳಿದರು. ನನ್ನ ಸ್ನೇಹಿತರನ್ನು ಕರೆದುಕೊಂಡು ನಾಗರಭಾವಿಯಲ್ಲಿ ನಿರ್ದೇಶಕರಾದ ರಾಮ್‌ಜೀ ಹೇಳಿದ ಸ್ಥಳಕ್ಕೆ ಹೋದೆ. ಕೈಗೆ ಒಂದು ಸ್ಕ್ರಿಪ್ಟ್‌ ಕೊಟ್ಟರು ಆಡಿಷನ್ ಮಾಡಿದೆ.

ಮಧ್ಯರಾತ್ರಿ 2.30ಕ್ಕೆ ಸೆಲೆಕ್ಟ್‌ ಆಗಿರುವೆ ಎಂದು ಹೇಳಿದರು. ನಾನು ಫುಲ್ ಶಾಕ್ ಆಗಿಬಿಟ್ಟಿ..ಅಲ್ಲದೆ ಬೆಳಗ್ಗೆನಿಂದ ಶೂಟಿಂಗ್ ಎಂದು ಹೇಳಿದರು. ಅಷ್ಟೊತ್ತರಲ್ಲಿ ಮನೆಗೆ ಬಂದು ಅಕ್ಕ ಮತ್ತು ಅಮ್ಮ ಮಲಗಿದ್ದರು, ಅವರನ್ನು ಎಬ್ಬಿಸಿ ಸೆಲೆಕ್ಟ್‌ ಅನ್ನೋ ವಿಚಾರ ಹೇಳಿದೆ. ಬೆಳಗ್ಗೆ ಶೂಟಿಂಗ್ ಇತ್ತು…ಹೇರ್ ಕಟ್ ಮಾಡಿಸಬೇಕು ಮತ್ತು ಗಡ್ಡ ಟ್ರಿಮ್ ಮಾಡಬೇಕು ಎಂದು ಹೇಳಿದರು ಅದೂ ಮಾಡಿಸಿಕೊಂಡು ಬೆಳಗ್ಗೆ ಶೂಟಿಂಗ್ ಸ್ಥಳಕ್ಕೆ ಹೋದೆ ಮರು ದಿನವೇ ಪ್ರಸಾರ ಮಾಡಲು ಶುರು ಮಾಡಿದ್ದರು. ಮೊದಲ ದೃಶ್ಯವೇ ಮದುವೆ ಮನೆ ಸೀನ್ ಅಗಿತ್ತು ಎಂದಿದ್ದಾರೆ.

Continue Reading

bengaluru

ಅನಿಮಲ್ ಸಿನಿಮಾ ನೋಡಿದ್ರಾ..? ನಟಿಯರ ಹಾಟ್ ಸೀನ್ ವೈರಲ್..!

Published

on

Film: ಬಾಲಿವುಡ್ ನ ಅನಿಮಲ್ ಸಿನಿಮಾ ಈಗಾಗಲೆ ಬಿಡುಗಡೆಗೊಂಡು ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಬೆನ್ನಲೆ ಆ ಚಿತ್ರದಲ್ಲಿ ಕಾಣಿಸಿಕೊಂಡ ಹಸಿಬಿಸಿ ಸೀನ್ ಗಳು ವೈರಲ್ ಆಗ್ತಾ ಇದೆ.

ಆ ಸಿನಿಮಾದಲ್ಲಿ ನಟನಾಗಿ ರಣಬೀರ್ ಜೊತೆ ನಟಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲವೊಂದು ದೃಶ್ಯಗಲ್ಲಿ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರ ವಿಡಿಯೋಗಳು ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ತೃಪ್ತಿ ದಿಮ್ರಿಯ ನಟಿಯ ಫಾಲೋವರ್ಸ್ ಸಂಖ್ಯೆಯು 1.5 ಮಿಲಿಯನ್ ಗೆ ತಲುಪಿದೆ.

ಅನಿಮಲ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ನಟಿಯ ಪಾತ್ರದಿಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗ್ತ ಇದೆ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಯು ಹಾಟ್ ಸೀನ್ ಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಡಿ. 1ರಂದು ತೆರೆಗೆ ಬಂದ ಬೆನ್ನಲೆ ಸಿನಿಮಾದ ಅಬ್ಬರ ಮೇಲಕ್ಕೇರಿದೆ. ಈ ಸಿನಿಮಾ ರಿಲೀಸ್ ಆದ ಬೆನ್ನಲೆ ದಿನಕ್ಕೆ 100 ಕೋಟಿ ಕಲೆಕ್ಷನ್ ಪಡೆದಿದ್ದು, ಮೂರು ದಿನದ ಒಟ್ಟು ಕಲೆಕ್ಷನ್ 300ಕೋಟಿಯಾಗಿದೆ.

Continue Reading

bangalore

Bigboss: ನಾಯಿ ಮರಿಯಾದ ಬಿಗ್ ಬಾಸ್ ಸಂಗೀತಾ

Published

on

Bigboss: ಬಿಗ್ ಬಾಸ್ ನಲ್ಲಿ ಸಂಗೀತಾ ಅವರು ಕೆಲವೊಂದು ಟಾಸ್ಕ್ ನಲ್ಲಿ ತೆಗೆದುಕೊಂಡ ನಿರ್ಧಾರ ಫ್ಯಾನ್ಸ್ ಗಳಿಗೆ ಹಿಡಿಸಲಿಲ್ಲ. ಅಲ್ಲಿಂದ ಅವರ ಫ್ಯಾನ್ ಫಾಲೊವರ್ಸ್ ನ ಸಂಖ್ಯೆ ಸುಮಾರು 11 ಸಾವಿರಕ್ಕೂ ಅಧಿಕ ಇಳಿಕೆಯಾಗಿದೆ.

ಕಾರ್ತಿಕ್ ನ ಗುಂಪಿನಲ್ಲಿದ್ದ ಸಂಗೀತಾ ಬಳಿಕ ವಿನಯ್ ತಂಡಕ್ಕೆ ಸೇರಿದ್ದಳೂ. ಇದೀಗ ವಾಪಸು ಕಾರ್ತಿಕ್ ಗುಂಪಿಗೆ ಸೇರಿಕೊಂಡಿದ್ದಾಳೆ.
ಆದರೂ ಕೂಡ ಸಂಗೀತನ ಫ್ಯಾನ್ಸ್ ಗಳಿಗೆ ಈಗ ಸಂಗೀತನ ನಡೆತೆಗಳು ಇಷ್ಟ ಆಗುತ್ತಿಲ್ಲ.

ಇದೀಗ ಬಿಗ್ ಬಾಸ್ ನಲ್ಲಿ ನೀಡಿರುವ ಟಾಸ್ಕ್ ನಲ್ಲಿ ಎಲ್ಲ ಸ್ಪರ್ಧಿಗಳಿ ಒಂದೊಂದು ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ಸಂಗೀತಾಗೆ ಅಳುವ ನಾಯಿಮರಿಯಂತಹ ಟಾಸ್ಕ್ ಸಿಕ್ಕಿದ್ದು, ನಾಯಿಯಂತೆ ಅದರ ಧ್ವನಿಯಂತೆ ಅನುಕರಣೆ ಮಾಡಿದ್ದಾರೆ.

ಇದಕ್ಕೆ ತುಕಾಲಿ ಸಂತೋಷ್ ಸಾಥ್ ನೀಡಿದ್ದಾರೆ. ಅಲ್ಲದೇ ಬಿಗ್ಗ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್​ ಮತ್ತು ವರ್ತೂರ್​ ಸಂತೋಷ್​​ಗೆ ಬಿಗ್​ ಬಾಸ್​​ ಸಂಗೀತಾ ಮತ್ತು ಕಾರ್ತಿಕ್​ ಅವರನ್ನು ಅನುಕರಿಸುವ ಟಾಸ್ಕ್​ ನೀಡಿದ್ದರು. ಅದರಂತೆ ಇಬ್ಬರೂ ಕೂಡ ಆ ಪಾತ್ರವನ್ನು ಭಿನ್ನವಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ನಕ್ಕು ನಗಿಸಿದ್ದಾರೆ. ಅಲ್ಲದೆ ಸಂಗೀತಾ ಶೃಂಗೇರಿಗೆ ಕರೆಕ್ಟ್ ಆಗಿ ಟಾಂಗ್ ಕೊಟ್ಟಿದ್ದಾರೆ.

 

Continue Reading

LATEST NEWS

Trending