Connect with us

PUTTUR

ಕುಡಿಯುವ ನೀರು ಪಡೆಯುವಲ್ಲಿ ಸ್ವಾವಲಂಬಿಗಳಾಗಲು ಮಳೆ ನೀರು ಕೊಯ್ಲು ಅನಿವಾರ್ಯ: ಮಠಂದೂರು

Published

on

ಮಂಗಳೂರು: ಕುಡಿಯುವ ನೀರು ಯೋಜನೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ ದಿನದ 24 ಗಂಟೆಗಳ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪಡೆಯುವಲ್ಲಿ ಸ್ವಾವಲಂಬಿಗಳಾಗಲು ಮಳೆ ನೀರು ಕೊಯ್ಲು ಅನಿವಾರ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ನಗರಸಭೆಯ ವತಿಯಿಂದ ನಡೆಯಲಿರುವ ನೂತನ ಕಚೇರಿ ಕಟ್ಟಡ ಮತ್ತು ಮಳೆ ನೀರು ಕೊಯ್ಲು ಅಳವಡಿಕೆಯ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ನಗರಸಭೆಯ ವತಿಯಿಂದ ರೂ. 9 ಲಕ್ಷ ವೆಚ್ಚದಲ್ಲಿ ನೂತನ ಮಳೆಕೊಯ್ಲು ಕಾರ್ಯವನ್ನು ಪ್ರಥಮವಾಗಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಮನೆ ನಿರ್ಮಾಣ ಮಾಡುವವರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳುವಂತೆ ಯೋಜನೆ ರೂಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್,ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸದಸ್ಯರಾದ ಪಿ.ಜಿ. ಜಗನ್ನಿವಾಸ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Baindooru

ಪತಿ ಪತ್ನಿ ನಡುವೆ ವಿರಸ..! ರಸ್ತೆಯಲ್ಲಿ ಇಬ್ಬರ ಕಿತ್ತಾಟ..! ಮಧ್ಯೆ ಬಂದ ಯುವಕನ ಮೇಲೆ ಬಿತ್ತು ಕೇಸ್

Published

on

ಬೈಂದೂರು: ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ಪತಿಯ ಮೇಲೆ ಅನ್ಯಕೋಮಿನ ಯುವಕ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಬೈಂದೂರು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ಪತ್ನಿ ಹಾಗೂ ಪತ್ನಿಯ ತಾಯಿ ಪತಿ ಹಾಗೂ ಆತನ ಬಾವ ಹಲ್ಲೆ ನಡೆಸುವಾಗ ಯವಕ ನಮಗೆ ರಕ್ಷಣೆ ನೀಡಿದ್ದಾನೆ ಎಂದಿದ್ದಾರೆ.

sirajuddin

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಮ್ಮಾಯಿ ನಿವಾಸಿಯಾಗಿರುವ ಸುರೇಶ್ ಭಟ್‌ ಎಂಬವರು ತನ್ನ ಪತ್ನಿಯನ್ನು ದಾರಿ ಮಧ್ಯೆ ನಿಲ್ಲಿಸಿ ಮಾತನಾಡುವಾಗ ಪತ್ನಿಯ ಸ್ನೇಹಿತ ಸಿರಾಜುದ್ದೀನ್ ಎಂಬ ಅನ್ಯಕೋಮಿನ ಯುವಕ ತನಗೆ ಹಲ್ಲೆ ನಡೆಸಿರುವುದಾಗಿ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ನ್ಯಾನೋ ಕಾರಿನಲ್ಲಿ ಅನ್ಯ ಕೋಮಿನ ಯುವಕನ ಜೊತೆ ಬರುತ್ತಿರುವುದು ನೋಡಿ ತಾನು ಕಾರು ನಿಲ್ಲಿಸಿ ವಿಚಾರಿಸಿದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಸುರೇಶ್ ಭಟ್‌ ಅವರ ದೂರನ್ನು ಅಲ್ಲಗಳೆದಿರುವ ಪತ್ನಿ ಪ್ರತಿಮಾ ಹಾಗೂ ಅತ್ತೆ ಶಿವಕುಮಾರಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರು ನೀಡಿರುವ ಶಿವಕುಮಾರಿ ತನ್ನ ಮಗಳು ಪ್ರತಿಮಾ ಹಾಗೂ ಪತಿ ಸುರೇಶ್ ಭಟ್‌ ಅವರಿಗೆ ಹಲವು ತಿಂಗಳಿನಿಂದ ಭಿನ್ನಾಬಿಪ್ರಾಯ ಇದ್ದು ಹೀಗಾಗಿ ಮಾನ ಹರಾಜು ಹಾಕಲು ಈ ರೀತಿ ಸುಳ್ಳು ದೂರು ದಾಖಲಿಸಿದ್ದಾರೆ. ಸಿರಾಜುದ್ದೀನ್ ಅಂಬ್ಯುಲೆನ್ಸ್‌ನಲ್ಲಿ ಡ್ರೈವರ್ ಆಗಿದ್ದು, ಕೆಲವೊಮ್ಮೆ ತಮ್ಮ ಕಾರಿಗೂ ಡ್ರೈವರ್ ಆಗಿ ಬರುತ್ತಾನೆ. ನನ್ನ ಮಗ ಹಾಗೂ ಮಗಳನ್ನು ಕರೆದುಕೊಂಡು ಹೋಗಲು ತಾನೇ ಸಿರಾಜುದ್ದಿನ್ ಗೆ ಕರೆ ಮಾಡಿದ್ದೆ. ಹೀಗೇ ನನ್ನ ಮಗ ಮತ್ತು ಮಗಳು ಕಾರಿನಲ್ಲಿ ಹೋಗುವಾಗ ಅವರ ಮೇಲೆ ಸುರೇಶ್ ಭಟ್ ಹಾಗೂ ಆತನ ಭಾವ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಸಿರಾಜುದ್ದೀನ್ ರಕ್ಷಣೆ ನೀಡಿದ್ದಾರೆ. ಆದರೆ ಇದಕ್ಕೆ ಬೇರೆ ಕಥೆ ಕಟ್ಟಿ ಈ ರೀತಿ ಸುಳ್ಳು ದೂರು ನೀಡಲಾಗಿದೆ ಎಂದು ಶಿವಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಹಲ್ಲೆಗೆ ಒಳಗಾದ ಸುರೇಶ್ ಭಟ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಸುಳ್ಳು ದೂರು ಎಂದು ಸುರೇಶ್ ಭಟ್‌ ಅವರ ಅತ್ತೆ ಪ್ರತಿ ದೂರನ್ನು ಅದೇ ಠಾಣೆಗೆ ನೀಡಿದ್ದಾರೆ . ಇದೀಗ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

‘ಹರ್ಷ ಇಲೆಕ್ಟ್ರಾನಿಕ್ಸ್ ಶೋ ರೂಂ’ ನಲ್ಲಿ ಬೆಂಕಿ ಅವಘ*ಡ..!! ಹೊತ್ತಿ ಉರಿದ ಕೋಟ್ಯಾಂತರ ಮೌಲ್ಯದ ಸೊತ್ತು..!!

Published

on

ಪುತ್ತೂರು: ಇಲೆಕ್ಟ್ರೋನಿಕ್ಸ್‌ ಮಳಿಗೆಗಳಲ್ಲಿ ಹೆಸರಾಂತ ಶೋರೂಂಗಳಲ್ಲಿ ಒಂದಾಗಿರುವ ಹರ್ಷದ ಪುತ್ತೂರಿನ ಶೋರೂಂನ ಗೋದಾಮಿನಲ್ಲಿ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಸು*ಟ್ಟು ನಾಶವಾಗಿದೆ.

harsha

ಪುತ್ತೂರಿನ ದರ್ಬೆ ಬಳಿ ಇರುವ ಹರ್ಷ ಶೋರೂಂ ನ ಗೋದಾಮು ಇದಾಗಿದ್ದು, ಇಂದು(ಎ.2) ನಸುಕಿನ ಜಾವ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ್ದು, ಇಲ್ಲಿದ್ದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಇಲೆಕ್ಟ್ರಾನಿಕ್ಸ್ ಉಪಕರಣಗಳು ಧಗಧಗನೆ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದವರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.  ಅಗ್ನಿಶಾಮಕ ದಳದವರಿಗೆ ಪುತ್ತೂರು ನಗರ ಠಾಣಾ ಪೊಲೀಸರು  ಬೆಂಕಿ ನಂದಿಸಲು ಸಹಕರಿಸಿದರು.

ಇದನ್ನೂ ಓದಿ..; ಸ್ವಂತ ಮನೆಯಿಲ್ಲ…ಅರಮನೆಯಲ್ಲಿ ವಾಸ; ಯದುವೀರ್ ಒಡೆಯರ್ ಆಸ್ತಿ ವಿವರ ವೈರಲ್!

 

 

 

Continue Reading

LATEST NEWS

ಆನ್‌ಲೈನ್ ಮೋಸದ ಜಾಲಕ್ಕೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಪುತ್ತೂರಿನ ವೈದ್ಯ..! ಕೇಸ್‌ಗೆ ಭಯಬಿದ್ರಾ ವೈದ್ಯ..!!

Published

on

ಪುತ್ತೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಅರೆಸ್ಟ್‌ ವಾರೆಂಟ್ ಇರುವುದಾಗಿ ಬೆದರಿಕೆ ಹಾಕಿದ ಅನಾಮಿಕರು ವೈದ್ಯರೊಬ್ಬರಿಂದ ಬರೊಬ್ಬರಿ 16.5 ಲಕ್ಷ ರೂ. ಕೊಳ್ಳೆ ಹೊಡೆದಿದ್ದಾರೆ. ಆನ್‌ಲೈನ್ ವಂಚನೆಯ ಹೊಸ ವಿಧಾನವಾಗಿ ಈ ವಂಚನೆ ನಡೆದಿದ್ದು, ಇದಕ್ಕೆ ಪುತ್ತೂರಿನ ವೈದ್ಯರೊಬ್ಬರು ಬಲಿಯಾಗಿದ್ದಾರೆ.

ಘಟನೆಯ ವಿವರ 
ಪುತ್ತೂರಿನ ಬೊಳ್ವಾರು ನಿವಾಸಿಯಾಗಿರುವ ಡಾ.ಚಿದಂಬರ ಅಡಿಗ ಅವರು ಈ ಆನ್‌ಲೈನ್ ದೋಖಾಕ್ಕೆ ಬಲಿಯಾಗಿದ್ದಾರೆ. ಮಾರ್ಚ್‌ 28 ರಂದು ಇವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ತಾನು ದೆಹಲಿಯಿಂದ ಮಾತನಾಡುವುದಾಗಿ ಹೇಳಿದ್ದ. ದೆಹಲಿಯಲ್ಲಿ ನಿಮ್ಮ ವಿರುದ್ಧ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹಾಗೂ ಮಾನವ ಕಳ್ಳಸಾಗಣಿಕ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದ.

ಅಷ್ಟೇ ಅಲ್ಲದೆ, ಅರೆಸ್ಟ್‌ ವಾರೆಂಟ್ ಕೂಡಾ ಇದ್ದು ದೆಹಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು ಎಂದು ಹೇಳಿದ್ದಾನೆ. ಇದರಿಂದ ಆತಂಕಗೊಂಡ ವೈದ್ಯರು ಏನು ಮಾಡಬಹುದು ಅಂತ ದೂರವಾಣಿ ಕರೆ ಮಾಡಿದವನಲ್ಲೇ ಸಲಹೆ ಕೇಳಿದ್ದಾರೆ. ಇದನ್ನೇ ಬಂಡವಾಳ ಮಾಡಿದ ಖದೀಮರು ನಿಮಗೆ ಬರಲು ಆಗದೇ ಇದಲ್ಲಿ ಆನ್‌ಲೈನ್ ಮೂಲಕ ಕೇಸ್ ನಡೆಸಲಾಗುವುದು. ಇದಕ್ಕೆ ಷ್ಯೂರಿಟಿಯಾಗಿ 16.5 ಲಕ್ಷ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾಯಿಸಬೇಕು. ಕೇಸ್ ಮುಗಿದ ಮೇಲೆ ಹಣ ವಾಪಾಸು ಸಿಗಲಿದೆ ಎಂದು ಹೇಳಿದ್ದಾರೆ. ಇನ್ನು ಕೇಸ್ ಇರೋದಕ್ಕೆ ಪೂರಕವಾಗಿ ಒಂದಿಷ್ಟು ದಾಖಲೆಗಳನ್ನೂ ಕೂಡಾ ಡಾ.ಅಡಿಗ ಅವರ ಮೊಬೈಲ್‌ಗೆ ವ್ಯಾಟ್ಸಾಪ್ ಮಾಡಿದ್ದಾರೆ.

ಇದನ್ನೂ ಓದಿ : ಅಬ್ಬಾಬ್ಬಾ..! ಇವನು ಕಳ್ಳ ಮಾತ್ರವಲ್ಲ… ತನಿಖೆಯಲ್ಲಿ ಬಯಲಾಯ್ತು ಭಯಾನಕ ಕೃತ್ಯ……!

ಮೋಸ ಹೋಗಿದ್ದು ಗೊತ್ತಾಗಿದ್ದು ಹೇಗೆ..?

ಕೇಸು ಅಂದ ತಕ್ಷಣ ಏನು ಎತ್ತ ಅಂತ ಯೋಚಿಸದೆ ಡಾ.ಅಡಿಗರು ಅಪರಿಚಿತರು ಹೇಳಿದ ಖಾತೆಗೆ 16.5 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿದ್ದಾರೆ. ಆದ್ರೆ ಸುಲಭವಾಗಿ ಹಣ ಸಿಕ್ಕಾಗ ತಕ್ಷಣ ಇನ್ನಷ್ಟು ಲೂಟಿ ಮಾಡಲು ಆರೋಪಿ ಮತ್ತೆ ಕರೆ ಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಡಾ.ಅಡಿಗ ಅವರಿಗೆ ಅನುಮಾನ ಬಂದಿದೆ. ಹಣ ಕಳೆದುಕೊಂಡ ಬಳಿಕ ಈ ವಿಚಾರವನ್ನ ತನ್ನ ಸ್ನೇಹಿತರ ಜೊತೆ ಹಂಚಿಕೊಂಡಿದ್ದಾರೆ. ಆವಾಗ ಇದೊಂದು ಮೋಸದ ಜಾಲ ಅನ್ನೋ ವಿಚಾರ ಅರಿವಿಗೆ ಬಂದಿದೆ. ಇದೀಗ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಡಾ. ಅಡಿಗ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Continue Reading

LATEST NEWS

Trending