Saturday, August 20, 2022

ಹೃದಯಾಘಾತದಿಂದ ಕೊನೆಯುಸಿರೆಳೆದ ಬಹುಮುಖ ಪ್ರತಿಭೆ ರವೀಂದ್ರನಾಥ್ ಶೆಟ್ಟಿ..

ಮಂಗಳೂರು:ಕೊರೊನಾ ಭೀತಿಯ ನಡುವೆ ಹೃದಯಾಘಾತವೂ ಹೆಚ್ಚುತ್ತಿದೆ ಇದಕ್ಕೆ ಯುವ ಪೀಳಿಗೆ ತುತ್ತಾಗುತ್ತಿದೆ. ಮಂಗಳೂರಿನ  ಕೆನರಾ ಪ್ರೌಢ ಶಾಲೆ ಉರ್ವಾದ ಅಧ್ಯಾಪಕ ಬಹುಮುಖ ಪ್ರತಿಭೆ ರವೀಂದ್ರನಾಥ ಶೆಟ್ಟಿ ಅವರು ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ. ಮೂಲತಃ ಬಾಕ್ರಬೈಲಿನವರಾಗಿರುವ ರವೀಂದ್ರನಾಥ್ ಶೆಟ್ಟಿ ಕೆನರಾ ಪ್ರೌಢ ಶಾಲೆಯಲ್ಲಿ ಸುಮಾರು 2 ದಶಕಗಳಿಂದ ಅಧ್ಯಾಪಕರಾಗಿದ್ದರು. ಎಂಎ, ಎಂಫಿಲ್ ಪದವೀಧರರಾಗಿದ್ದು, ಎನ್‌ಸಿಸಿ ಅಧಿಕಾರಿಯೂ ಆಗಿದ್ದರು. ಎನ್‌ಸಿಸಿಯ ಸಾಧನೆಗಾಗಿ ಹತ್ತು ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಹವ್ಯಾಸಿ ಯಕ್ಷಗಾನ ಮತ್ತು ರಂಗಭೂಮಿ ಕಲಾವಿದರಾಗಿದ್ದ ಅವರು, ಉತ್ತಮ‌ ಕಾರ್ಯಕ್ರಮ‌‌ ನಿರ್ವಾಹಕರೂ ಆಗಿ ಜನಮೆಚ್ಚುಗೆ ಗಳಿಸಿದ್ದರು.ಪತ್ನಿ ದಿವ್ಯಾ, ಮೂರು ವರ್ಷದ ಮಗು ಸೇರಿದಂತೆ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ರವೀಂದ್ರನಾಥ ಅವರ ಅಗಲುವಿಕೆಗೆ ಕೆನರಾ ಪ್ರೌಢ ಶಾಲೆ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿ ಬಳಗ ತೀವ್ರ ಕಂಬನಿ ಮಿಡಿದಿದ್ದಾರೆ. ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು.

LEAVE A REPLY

Please enter your comment!
Please enter your name here

Hot Topics