Connect with us

DAKSHINA KANNADA

ಎಪ್ರಿಲ್ 10 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ: ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶ..!

Published

on

ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶಿವ ಕ್ಷೇತ್ರ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 10 ರಿಂದ 10 ದಿನ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು,  ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.

ಎಪ್ರಿಲ್ 10 ರಂದು ಬೆಳಿಗ್ಗೆ 9.25 ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಎಪ್ರಿಲ್‌ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಭೇಟಿ, ಎಪ್ರಿಲ್ 17 ರಂದು ಸಿಡಿಮದ್ದು ಪ್ರದರ್ಶನ ಹಾಗು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಡೆಯಲಿದೆ ಎಂದರು.

ಈ ಬಾರಿ ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವ ಭಕ್ತಾಧಿಗಳಿಗೆ ಮಾತ್ರ ವರುಣ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದ ಅವರು ದೇವರ ಬ್ರಹ್ಮರಥ ಎಳೆಯುವ ಸೇವಾಕರ್ತರಿಗೂ ವಸ್ತ್ರಸಂಹಿತೆ ಕಡ್ಡಾಯವಾಗಿದೆ.

ಜಾತ್ರೆ ನಡೆಯುವ ಹತ್ತು ದಿನವೂ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆಯಲ್ಲೇ ದೇವಸ್ಥಾನಕ್ಕೆ ಬರಬೇಕು ಎನ್ನುವುದು ಸಮಿತಿಯ ಆಗ್ರಹವಾಗಿದೆ ಎಂದು ಅವರು ಹೇಳಿದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಅತಿಯಾದ ಇಂಟರ್ನೆಟ್ ಬಳಕೆಯಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳು

Published

on

ಮಂಗಳೂರು: ಇಂದು ಮೊಬೈಲ್ ಇಲ್ಲದೇ ದಿನವಿಲ್ಲ. ಮೊಬೈಲ್ ಇದ್ದರೂ ಅದರಲ್ಲಿ ಇಂಟರ್ನೆಟ್ ಇಲ್ಲದೇ ಇದ್ದರೆ ಚಡಪಡಿಕೆ. ಅದರಲ್ಲೂ ಮಕ್ಕಳು ಅತಿಯಾದ ಇಂಟರ್ನೆಟ್ ಬಳಕೆಯ ಪರಿಣಾಮಗಳ ಬಗ್ಗೆ ಎಲ್ಲೆಡೆಯೂ ಮಾತುಗಳಾಗುತ್ತಿದೆ. ಕೊರೋನಾ ನಂತರ ಮೊಬೈಲ್ ಬಳಕೆ ಅನಿವಾರ್ಯವಾಯಿತು. ಈಗ ಸಾಮಾನ್ಯ ಜನರೂ ಸ್ಮಾರ್ಟ್‌ ಫೋನ್ ಬೇಕು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿಸಿತು.

ಮೊಬೈಲ್ ಸಿಕ್ಕ ತಕ್ಷಣ ಇಂಟರ್ನೆಟ್ ಅಥವಾ ಡಾಟಾಗಳೂ ಅಗತ್ಯವಾಗಿದೆ. ಈಗ ಆ ಡಾಟಾ ಬಳಕೆಯೇ ಮಕ್ಕಳ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಮೊಬೈಲ್ ಇದ್ದರೆ ಮಕ್ಕಳು ಎಲ್ಲವನ್ನೂ ವೀಕ್ಷಣೆ ಮಾಡುತ್ತಾರೆ. ಇದರ ಪರಿಣಾಮ ಮಕ್ಕಳು ತಮ್ಮ ಪ್ರಾಯಕ್ಕಿಂತ ಹೆಚ್ಚಿನ ತಿಳುವಳಿಕೆಯನ್ನು ಪಡೆಯುತ್ತಾರೆ. ಇದು ಶಿಕ್ಷಣದ ಮೇಲಿನ ನಿರಾಸಕ್ತಿಗೆ ಕಾರಣವಾಗಬಹುದು.

 

ಮಿತಿಮೀರಿದ ಇಂಟರ್ನೆಟ್ ಬಳಕೆಯ ಪರಿಣಾಮ:

ಮಾನಸಿಕ ಆತಂಕ ಹೆಚ್ಚಾಗುತ್ತಿದೆ:

ಈಗಿನ ಬಹುತೇಕ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಸ್ನೇಹಿತರ ಗುಂಪನ್ನು ಕಟ್ಟಿಕೊಂಡು ಅದರಲ್ಲಿ ಬ್ಯುಸಿಯಾಗಿರುತ್ತಾರೆ. ತಾವು ಪೋಸ್ಟ್ ಮಾಡುವಾಗ ಅತ್ಯುತ್ತಮ ಗುಣಮಟ್ಟದ ಪಿಚ್ಚರ್ ಅಪ್ಲೋಡ್ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹಲವರು ಒಳ್ಳೆಯ ಕಾಮೆಂಟ್ ಗಳನ್ನು ಹಾಕಿದರೆ ಇನ್ನು ಕೆಲವರು ಕಾಲೆಳೆಯುವ ಮೆಸೇಜ್ ಕಳುಹಿಸುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಮಾನಸಿಕ ಖಿನ್ನತೆ ಎದುರಾಗುವುದು ಖಂಡಿತ.

ನಿದ್ರಾಹೀನತೆ ಸಮಸ್ಯೆ:

ಇಂದು ಸಾಮಾಜಿಕ ಜಾಲತಾಣಗಳು ಯುವಕರ-ಯುವತಿಯರ ಮೇಲೆ ಪ್ರಭಾವ ಬೀರಿವೆ. ಅರ್ಧ ರಾತ್ರಿಯಲ್ಲಿ ನಿದ್ರೆಯಿಂದ ಎದ್ದು ಫೋನ್ ನೋಡುತ್ತಾರೆ. ತಾವು ಹಾಕಿದ ಪೋಸ್ಟ್‌ನ ಕಾಮೆಂಟ್ಸ್, ಲೈಕ್ಸ್ ಗಳನ್ನು ನೋಡಿ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಇದರಿಂದ ಅವರ ರಾತ್ರಿಯ ನಿದ್ರೆ ಹಾಳಾಗುತ್ತದೆ. ಹೀಗೆ ನಿದ್ರೆಯ ಗುಣಮಟ್ಟ ಕಡಿಮೆ ಆಗುವುದರ ಜೊತೆಗೆ ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ.

ಸಂವಹನ ಸಂಪೂರ್ಣ ಕಡಿಮೆಯಾಗುತ್ತದೆ:

ಸ್ಮಾರ್ಟ್ ಫೋನ್ ಯುಗ ಆರಂಭವಾದ ನಂತರ ಮಕ್ಕಳು ಒಬ್ಬರನ್ನೊಬ್ಬರು ನೇರವಾಗಿ ನೋಡದೆ ಇದ್ದರೂ ಕೇವಲ ಫೋನ್ ಸಂಭಾಷಣೆಯ ಮೂಲಕ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಇದರಿಂದ ತಮ್ಮ ಮನೆಯಲ್ಲಿರುವ ಪೋಷಕರ ಜೊತೆ, ಅಕ್ಕ – ಪಕ್ಕದಲ್ಲಿರುವ ಗೆಳೆಯರ ಜೊತೆ, ಮನೆಗೆ ಬಂದು ಹೋಗುವ ಬಂಧು ಮಿತ್ರರ ಜೊತೆ ಹೆಚ್ಚು ಬೆರೆಯಲು ಕಷ್ಟ ಆಗುತ್ತದೆ. ಹೀಗಾಗಿ ನಿಜ ಜೀವನವನ್ನು ಇಂದಿನ ಯುವ ಜನತೆ ಸಂಪೂರ್ಣವಾಗಿ ಬೆರೆತುಕೊಳ್ಳುವುದನ್ನು ಮರೆಯುತ್ತಿದ್ದಾರೆ.

ಆರೋಗ್ಯ ಸಮಸ್ಯೆಗಳು:

ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆಯು ವಿದ್ಯಾರ್ಥಿಗಳಲ್ಲಿ ಕಣ್ಣಿನ ಆಯಾಸ, ಕುತ್ತಿಗೆ ಮತ್ತು ಬೆನ್ನು ನೋವುಗಳನ್ನು ನಿರ್ಮಾಣ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಇದರೊಂದಿಗೆ ವಿವಿಧ ಆರೋಗ್ಯ ಸಮಸ್ಯೆ ಸಹ ಕಾಣಿಸಿಕೊಳ್ಳುತ್ತವೆ. ಅದೆಲ್ಲಕ್ಕೂ ಪ್ರಮುಖವಾಗಿ ಜಡ ಜೀವನಶೈಲಿಗೆ ಇದು ಕಾರಣವಾಗಬಹುದು. ದೈಹಿಕ ಚಟುವಟಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

ಹಾಗಾಗಿ ಶಿಕ್ಷಣತಜ್ಞರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‌ಗಳನ್ನು ಜವಾಬ್ದಾರಿಯುತವಾಗಿ ಬಳಸಲು ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಆಫ್‌ಲೈನ್ ಚಟುವಟಿಕೆಗಳು ಮತ್ತು ಮುಖಾಮುಖಿ ಸಂವಹನಗಳನ್ನು ನಡೆಸುವುದು ಅತ್ಯಗತ್ಯವಾದ ಕೆಲಸವಾಗಿದೆ.

Continue Reading

BELTHANGADY

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬಂಧನ..! ಶಾಸಕ ಪೂಂಜಾ ಪ್ರತಿಭಟನೆ

Published

on

ಬೆಳ್ತಂಗಡಿ : ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತೋರಾತ್ರಿ ಬಂಧಿಸಿದ್ದಾರೆ. ಆದ್ರೆ, ಈ ಬಂಧನವನ್ನು ವಿರೋಧಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಡೀ ರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗಕ್ಕೆ ಮೇ 18 ರ ಸಂಜೆ ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರ ಜೊತೆಯಲ್ಲಿ ದಾಳಿಯನ್ನು ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದ್ದು, ಸ್ಥಳದಿಂದ ಒಂದು ಹಿಟಾಚಿ, ಕಂಪ್ರೆಸರ್, ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ವೇಳೆ ಈ ಅಕ್ರಮ ಗಣಿಗಾರಿಕೆ ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರದ್ದು ಎಂದು ಗೊತ್ತಾಗಿತ್ತು.

ಅಕ್ರಮ ಗಣಿಗಾರಿಕೆ ಸಾಬೀತಾದ ಹಿನ್ನೆಲೆಯಲ್ಲಿ ರಾತೋ ರಾತ್ರಿ ಶಶಿರಾಜ್ ಶೆಟ್ಟಿ ಅವರ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಶಶಿರಾಜ್ ಶೆಟ್ಟಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ರು. ಆದ್ರೆ, ಶಾಸಕರ ಮಾತಿಗೆ ಒಪ್ಪದ ಪೊಲೀಸರು ಆರೋಪಿಯ ವಿರುದ್ಧ ಎಫ್‌ ಐ ಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಿತರಾದ ಶಾಸಕ ಪೂಂಜಾ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

ಪೊಲೀಸರ ಮೇಲೆ ಕಾಂಗ್ರೆಸ್ ಏಜೆಂಟರ ಆರೋಪ :

ರಾತೋರಾತ್ರಿ ಮನೆಗೆ ನುಗ್ಗಿದ ಪೊಲೀಸರು ಅಕ್ರಮದಲ್ಲಿ ಭಾಗಿಯಾಗದ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಶಾಸಕ ಪೂಂಜಾ ಆರೋಪಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರ್ಕಾರ ಬಂದಾಗ ನೋಡಿಕೊಳ್ಳುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

Continue Reading

DAKSHINA KANNADA

‘ಆರ್‌ಸಿಬಿ’ ಸೂಪರ್‌ ಕಮ್‌ಬ್ಯಾಕ್..! ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

Published

on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕಡೆ ಮಳೆಯ ಆರ್ಭಟ. ಇನ್ನೊಂದು ಕಡೆ ಸತತ 7 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ಕನಸಲ್ಲಿದ್ದ ತಂಡಕ್ಕೆ ಈ ಪದ್ಯ ಅದೃಷ್ಟವನ್ನು ತಂದುಕೊಟ್ಟಿದೆ. ಒಂದು ಕಡೆ ಪ್ಲೇ ಆಫ್ ಗೆ ಹೋಗಲು ರನ್ ಮಾತ್ರ ಅಲ್ಲ, ನಿಗದಿತ ರನ್ನಿನ ಒಳಗಡೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಕಟ್ಟಿ ಹಾಕಬೇಕಿತ್ತು.

 

ಅದೃಷ್ಟ ಹೊತ್ತು ತಂದ ಮಳೆರಾಯ

ಇನ್ನು ವಿಶೇಷ ಅಂದ್ರೆ ಬೆಂಗಳೂರಿನ ಹಲವು ಕಡೆ ಮಳೆರಾಯನ ಆರ್ಭಟ ಜೋರಾಗಿತ್ತು. ಎಡೆಬಿಡದೆ ಸುರಿದ ಮಳೆಯಿಂದ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.  ಅದೃಷ್ಟ ಅಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವಲ್ಪ ಹೊತ್ತಷ್ಟೇ ಮಳೆ ಸುರಿದಿದೆ. ಇದು ಮಳೆರಾಯನ ಕೃಪೆಯೆಂದೇ ನೆಟ್ಟಿಗರು ಹೇಳುತ್ತಿದ್ದಾರೆ. ಒಂದು ವೇಳೆ ಮಳೆಯಬ್ಬರ ಜೋರಾಗಿದ್ದು ಪಂದ್ಯ ಮಳೆಗೆ ಆಹುತಿಯಾಗಿದ್ದರೆ ಆರ್‌ಸಿಬಿ ಒಂದು ಆಂಕ ಪಡೆದು ಪಂದ್ಯಕೂಟದಿಂದ ನಿರ್ಗಮಿಸಬೇಕಾಗಿತ್ತು.

ಪ್ಲೇಆಫ್ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಮ್ಯಾಚ್​ನಲ್ಲಿ ಸೋಲುಣಿಸಿ ಇದೀಗ ಟಾಪ್-4 ಹಂತಕ್ಕೇರಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಆರ್​ಸಿಬಿ ಗ್ರೇಟೆಸ್ಟ್ ಕಂಬ್ಯಾಕ್ ಮಾಡಿದೆ. ಆರ್ಸಿಬಿ ಫ್ಯಾನ್ಸ್ ಗಳ ಹರ್ಷ ಹೇಳತೀರದು. ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

ಇನ್ನೂ ಈ ರೋಚಕ ಪಂದ್ಯ ವನ್ನು ವೀಕ್ಷಿಸಲು ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್, ಕಾಂತಾರ ಸಿನೆಮಾ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಇನ್ನೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡು ಚಿಯರ್‌ ಅಪ್ ಮಾಡಿದ್ದು, ಕ್ಯಾಮೆರಾ ಕಣ್ಣಿಗೆ ಇಬ್ಬರೂ ಪೋಸ್ ನೀಡಿದ್ದಾರೆ. ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಆರ್‌ಸಿಬಿ ಫ್ಯಾನ್‌ ಆಗಿದ್ದು ನಿನ್ನೆಯ ಪಂದ್ಯ ವನ್ನು ವೀಕ್ಷಣೆ ಮಾಡಿದ್ದಾರೆ.

ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ನ ಮಹಿಳಾ ತಂಡ ಈ ಬಾರಿಯ ಟ್ರೋಫಿಯನ್ನು ತಂದುಕೊಟ್ಟಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಮಹಿಳಾ ತಂಡ ಜರ್ಸಿಯನ್ನು ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.

ಇನ್ನು ಎಲಿಮಿನೇಟರ್​ ಪಂದ್ಯಕ್ಕೆ ಅರ್ಹತೆ ಪಡೆದಿರುವ ಆರ್​ಸಿಬಿ ಪಾಲಿಗೆ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಜಯ ಗಳಿಸಿದರೆ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್​ಗೇರಲಿದೆಯಾ ಎಂದು ಕಾದು ನೋಡಬೇಕಿದೆ.

Continue Reading

LATEST NEWS

Trending