LATEST NEWS
ಬಜರಂಗದಳ ಘಟಕ ಮುಖಂಡ ಸಚಿನ್ ನೇ*ಣಿಗೆ ಶರಣು : ಕಾರಣ ನಿಗೂಢ
Published
3 months agoon
By
NEWS DESK2ಪುತ್ತೂರು: ಬಜರಂಗದಳ ಘಟಕದ ಸುರಕ್ಷಾ ಪ್ರಮುಖ್ ಸಚಿನ್ ಯು(27) ನೇ*ಣು ಬಿಗಿದು ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ.
ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾಗಿರುವ ಸಚಿನ್ ಕೆಯ್ಯೂರು ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇ*ಣು ಹಾಕಿಕೊಂಡಿದ್ದಾರೆ.
ಆತ್ಮ*ಹ*ತ್ಯೆಗೆ ಕಾರಣ ತಿಳಿದುಬಂದಿಲ್ಲ. ಇನ್ನು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.
LATEST NEWS
ಎಚ್ಚರ!! ಪ್ರೀತಿ ಪಾತ್ರರ ಸಾವೇ ಟಾರ್ಗೆಟ್; ಸೈಬರ್ ಕ್ರೈಂನಲ್ಲಿ ಅಂತ್ಯಸಂಸ್ಕಾರ
Published
6 minutes agoon
22/11/2024ಮಂಗಳೂರು/ನವದೆಹಲಿ: ಭಾವನೆ, ನೋವು, ದುಃಖಗಳನ್ನೇ ಟಾರ್ಗೆಟ್ ಮಾಡಿ ವಂಚಕರು ನಡೆಸುವ ಹೊಸ ಸೈಬರ್ ಕ್ರೈಂ ಈ ಅಂತ್ಯಸಂಸ್ಕಾರ ಸೈಬರ್ ಕ್ರೈಂ ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲೇ ಈ ಸೈಬರ್ ಕ್ರೈಂ ನಡೆಯುತ್ತದೆ. ನಗರ ಪ್ರದೇಶಗಳಲ್ಲಿನ ಬದುಕಿಗೆ ಸಮಯವಿಲ್ಲ. ಎಲ್ಲವನ್ನೂ ನಿಭಾಯಿಸಲು, ನಿರ್ವಹಿಸಲು ಆಪ್ತರು, ನೆರಮನೆಯವರ ಸಹಾಯವಿರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕೆಲ ಹೊಣೆಗಾರಿಕೆಯನ್ನು ಎಜೆನ್ಸಿಗಳ ಕೈಗೆ ವಹಿಸಲಾಗತ್ತವೆ. ಈ ಪೈಕಿ ಅಂತ್ಯಸಂಸ್ಕಾರ ನಡೆಸಲು ನಗರ ಪ್ರದೇಶದಲ್ಲಿ ಖಾಸಗಿ ಎಜೆನ್ಸಿಗಳಿವೆ. ಈ ಎಜೆನ್ಸಿಗಳು ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಸುತ್ತದೆ. ಅಂತಿಮ ವಿಧಿ ವಿಧಾನಗಳು, ಪೂಜಾ ಕೈಂಕರ್ಯ, ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಾರೆ.
ಈ ಸೈಬರ್ ಕ್ರೈಂ ಹೇಗೆ ನಡೆಯುತ್ತವೆ ?
ಸೈಬರ್ ಕ್ರೈಂ ಭೂತ ಯಾವ ರೂಪದಲ್ಲಿ ವಕ್ಕರಿಸಲಿದೆ ಅನ್ನೋದೇ ತಿಳಿಯಲ್ಲ. ಮೋಸ ಹೋದ ಬಳಿಕವಷ್ಟೇ ಇದೊಂದು ಸೈಬರ್ ಕ್ರೈಂ ಆಗಿತ್ತು ಅನ್ನೋದು ಅಂದಾಜಾಗುವುದು. ಪ್ರತಿ ಗಂಟೆಯಲ್ಲಿ ಲಕ್ಷಾಂತರ ಸೈಬರ್ ಕ್ರೈಂ ಪ್ರಕರಣಗಳು ಪತ್ತೆಯಾಗಿ, ದೂರು ದಾಖಲಾಗುತ್ತಿದೆ. ಹೊಸ ಹೊಸ ವಿಧಾನದಲ್ಲಿ ವಂಚಕರು ಮೋಸ ಮಾಡುತ್ತಿದ್ದಾರೆ. ಅಮಾಯಕರು, ಎಚ್ಚರವಹಿಸಿ ಹೆಜ್ಜೆ ಇಟ್ಟರೂ ಹೇಗೋ ಬಲಿಯಾಗುತ್ತಿದ್ದಾರೆ.
ಅಂತ್ಯಸಂಸ್ಕಾರ ಸೈಬರ್ ಕ್ರೈಂ ಎಂದರೇನು?
ಅಂತ್ಯಸಂಸ್ಕಾರ ನಡೆಸುವ ಹಲವು ಎಜೆನ್ಸಿಗಳ ಜಾಹೀರಾತು, ನಂಬರ್ ಸುಲಭವಾಗಿ ಸಿಗುತ್ತದೆ. ನಾವು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ಎಜೆನ್ಸಿಗೆ ಕರೆ ಮಾಡಿ ಅಂತ್ಯಸಂಸ್ಕಾರ ನಡೆಸಬೇಕು ಎಂದು ಕೇಳಿಕೊಂಡ ತಕ್ಷಣವೇ ಮಾಹಿತಿ ಪಡೆದು ಲಿಂಕ್ ಕಳುಹಿಸಿದ್ದಾರೆ. ಅದರಲ್ಲಿ ನಾವು ಹೆಸರು, ವಿಳಾಸ, ಮೃತಪಟ್ಟವರ ಹೆಸರು, ಧರ್ಮ, ಗೋತ್ರ, ಅಂತ್ಯಸಂಸ್ಕಾರ ಸಂಪ್ರದಾಯದ ಬಗ್ಗೆ ಮಾಹಿತಿ ನೀಡಿರುತ್ತೇವೆ. ನಂತರ 5,000 ರೂಪಾಯಿ ಅಥವಾ ಅಡ್ವಾನ್ಸ್ ಮೊತ್ತವನ್ನು ಪಾವತಿಸಿದಾಗ ಒಂದು ಮೆಸೇಜ್ ಬರಲಿದೆ. ಅಂತ್ಯಸಂಸ್ಕಾರ ನಡೆಸುವ ಪೂಜಾರಿ ಹೆಸರು, ಘಳಿಗೆ ಸೇರಿದಂತೆ ಎಲ್ಲದರ ಮೆಸೇಜ್ ಬರುತ್ತವೆ. ಇದೇ ವೇಳೆ ಬಂದ ಒಟಿಪಿ ಒಟಿಪಿಯನ್ನು ಎಜೆನ್ಸಿ ಮಂದಿ ಕೇಳುತ್ತಾರೆ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ.
ಅಂತ್ಯಸಂಸ್ಕಾರವನ್ನೇ ಟಾರ್ಗೆಟ್ ಮಾಡಿ ಹಲವು ಸೈಬರ್ ಕ್ರೈಂ ದಾಖಲಾಗಿದೆ. ಈ ಕುರಿತು ಎಚ್ಚರಿಕೆ ಸಂದೇಶ ನೀಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರತಿ ವ್ಯವಹಾರಕ್ಕೂ ಮುನ್ನ ಯೋಚಿಸಿ, ತಾಳ್ಮೆ ವಹಿಸಿ ಮುನ್ನಡೆಯಬೇಕು ಯಾವುದೇ ಕಾರಣಕ್ಕೂ ಅನಾಮಿಕರು ಕಳುಹಿಸುವ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ. ಒಟಿಪಿ ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು.
ಮುಂಬಯಿ: 18ನೇ ಆವೃತ್ತಿಯ ಐಪಿಎಲ್‌ನ ವೇಳಾಪಟ್ಟಿ ಬಹಿರಂಗವಾಗಿದೆ. ಕ್ರೀಡಾ ವೆಬ್‌ಸೈಟ್ ಒಂದರಲ್ಲಿ ಮುಂದಿನ ಮೂರು ವರ್ಷಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಐಪಿಎಲ್ ಸಹಿತ ಪ್ರಮುಖ ಕ್ರೀಡಾಕೂಟಗಳ ನೇರ ಪ್ರಸಾರ ಮಾಡುವ ಇಎಸ್‌ಪಿಎನ್ ಟಿವಿ ವಾಹಿನಿಗೆ ಸೇರಿದ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಎಂಬ ವೆಬ್‌ಸೈಟ್ ಐಪಿಎಲ್ ವೇಳಾಪಟ್ಟಿಯನ್ನು ಬಹಿರಂಗಗೊಳಿಸಿದೆ. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ ಮುಂದಿನ ಆವೃತ್ತಿಯ ಐಪಿಎಲ್ ಮಾರ್ಚ್ 14ರಿಂದ ಆರಂಭವಾಗಲಿದ್ದು, ಮೇ 25ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಟೂರ್ನಿಗೆ ತೆರೆಬೀಳಲಿದೆ. ಇದರ ಜೊತೆಗೆ ಮುಂದಿನ ಎರಡು ಆವೃತ್ತಿಗಳ ವೇಳಾಪಟ್ಟಿಯ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, 2026ರಲ್ಲಿ ಐಪಿಎಲ್ ಟೂರ್ನಿ ಮಾರ್ಚ್ 15 ರಿಂದ ಮೇ 31ರವರೆಗೆ ನಡೆದರೆ, 2027ರ ಐಪಿಎಲ್ ಮಾರ್ಚ್ 14ರಿಂದ ಮೇ 30ರವರೆಗೆ ನಡೆಯಲ್ಲಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲ ಫ್ರಾಂಚೈಸಿಗಳಿಗೆ ಬಿಸಿಸಿಐ, ಇ-ಮೇಲ್ ಮುಖಾಂತರ ವೇಳಾಪಟ್ಟಿ ರವಾವಿಸಿದೆ. ಮುಂದಿನ ಮೂರು ಆವೃತ್ತಿಗಳ ಆರಂಭ ಮತ್ತು ಅಂತ್ಯದ ಬಗ್ಗೆ ಮಾತ್ರ ಮಾಹಿತಿ ಹೊರಬಿದ್ದಿದ್ದು, ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಹೊರಬೀಳಬೇಕಿದೆ. ಕಳೆದ ಮೂರು ಆವೃತ್ತಿಗಳಂತೆ ಮುಂದಿನ ಆವೃತ್ತಿಯಲ್ಲೂ 74 ಪಂದ್ಯಗಳು ನಡೆಯಲಿವೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಹೇಳಿಕೊಂಡಿದೆ.
ಇದಕ್ಕೂ ಮೊದಲು 2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಜ್ಜಾಗಿದೆ. ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ 574 ಆಟಗಾರರ ಬಿಡ್ಡಿಂಗ್ ನಡೆಯಲಿದೆ.
ಮಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಕುರಿತು ಆರೋಪಿಸಿ 1.71 ಕೋ.ರೂ ವಂಚಿಸಿರುವ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ನ.11 ರಂದು ಅಪರಿಚಿತ ವ್ಯಕ್ತಿಯೋರ್ವರು ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದು, ‘ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದೆ, ಮುಂಬೈನ ಅಂಧೇರಿ ಯ ಮೂಲಕ ಕಾನೂನು ಬಾಹಿರ ಚಟುವಟಿಕೆ ನಡೆದಿದೆ . ಮಾರ್ಕೆಟಿಂಗ್ ನೆಪದಲ್ಲಿ ಈ ನಂಬರ್ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿರುವ ಕುರಿತು ಎಫ್‌ಐಆರ್ ದಾಖಲಾಗಿದೆ. ಈಗಲೇ ನೀವು ಅಂಧೇರಿ ಠಾಣೆಯನ್ನು ಸಂಪರ್ಕ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಎರಡು ಮೊಬೈಲ್ ಸೇವೆಯನ್ನು ಕೊನೆಗಳಿಸಲಾಗುವುದು’ ಎಂದು ಹೇಳಿದ್ದಾರೆ.
ಅನಂತರ ವಾಟ್ಸಪ್ ಮೂಲಕ ವೀಡಿಯೋ ಕರೆ ಮಾಡಿದ್ದು, ನ.13 ರಿಂದ 19 ರ ನಡುವೆ 53 ಲಕ್ಷ, 74 ಲಕ್ಷ ರೂ, 44 ಲಕ್ಷ ರೂ, ಹೀಗೆ ಒಟ್ಟು 1.71 ಕೋ.ರೂ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ದೂರುದಾರರು ಅಮೆರಿಕಾದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ವಾಪಾಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ವಾಸ ಮಾಡುತ್ತಿದ್ದರು. ಉದ್ಯೋಗದ ಮೂಲಕ ಉಳಿತಾಯ ಮಾಡಿದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ.
LATEST NEWS
ಭಜನಾ ಗುರು ಅಶೋಕ್ ನಾಯ್ಕ್ ಕಳಸಬೈಲ್ ಗೆ ‘ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’
ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !?
ಪ್ರೊಡಕ್ಷನ್ ನಂಬರ್ 1 ತುಳು ಸಿನಿಮಾದ ಭಾಗ 1ರ ಮುಹೂರ್ತ ಸಮಾರಂಭ
ಪ್ರತಿವರ್ಷ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರು ಯಾವುದು ಗೊತ್ತಾ ??
‘ಓಲಾ ಎಲೆಕ್ಟ್ರಿಕ್ ಕಂಪನಿ’ಯಿಂದ 500 ಉದ್ಯೋಗಿಗಳು ವಜಾ
ಯಜಮಾನಿಯರಿಗೆ ಸ್ಟಾಪ್ ಆಗುತ್ತಾ ಗೃಹಲಕ್ಷ್ಮಿ ಹಣ ?
Trending
- LATEST NEWS2 days ago
ಪ್ರತಿದಿನ ಈ ಹಣ್ಣನ್ನು ತಿಂದರೆ ತೂಕ ಕಡಿಮೆಯಾಗುತ್ತೆ!
- LATEST NEWS4 days ago
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ; ಹಣದ ಸಮಸ್ಯೆಯೇ ಬರುವುದಿಲ್ಲ..!
- BIG BOSS5 days ago
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
- LATEST NEWS2 days ago
ಡೇಟಿಂಗ್ಗೆ 11,650 ರೂ. , ಫೋಟೋಗೆ 760 ರೂ. ಕ್ಯಾಶ್ ರಿವಾರ್ಡ್: ಟೆಕ್ ಕಂಪನಿ