Friday, July 1, 2022

‘ಅಕ್ಷಯ ತೃತೀಯದಂದು ಹಿಂದೂಗಳ ಜ್ಯುವೆಲ್ಲರ್ಸ್‌ನಲ್ಲಿಯೇ ಚಿನ್ನ ಖರೀದಿಸಿ’

ಬಾಗಲಕೋಟೆ: ಮೇ ತಿಂಗಳಿನಲ್ಲಿ ಇರುವ ಅಕ್ಷಯ ತೃತೀಯಕ್ಕೆ ಹಿಂದೂ ಜ್ಯುವೆಲ್ಲರ್ಸ್ ಮಳಿಗೆಗಳಲ್ಲಿ ಖರೀದಿ ಮಾಡಿ. ರಾಜ್ಯದಲ್ಲಿ ಇರುವ ಕೇರಳ ಮೂಲದ ಮುಸ್ಲಿಂರ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಸಬೇಡಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.


ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂರ ಚಿನ್ನಾಭರಣ ಅಂಗಡಿಗಳಿವೆ. ಹಿಂದೂಗಳು ಅಲ್ಲಿ ಬಂಗಾರ ಖರೀದಿ ಮಾಡಬೇಡಿ ಎಂದು ಆಗ್ರಹಿಸಿದರು.

ಅಕ್ಷಯ ತೃತೀಯಕ್ಕೆ ಹಿಂದೂಗಳ ಮಳಿಗೆಗಳಲ್ಲಿ ಚಿನ್ನ ಖರೀದಿಸಿ ಎಂಬ ಟ್ವಿಟರ್ ಅಭಿಯಾನಕ್ಕೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ಇದೆ. ಹಲಾಲ್, ಜಟ್ಕಾ ಕಟ್ ಬಳಿಕ ಇದೀಗ ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ ಆರಂಭವಾಗಿದೆ.

ಕೇರಳದಲ್ಲಿ 800 ಹಿಂದೂಗಳ ಕೊಲೆಯಾಗಿದೆ. ನೀವು ಅಲ್ಲಿ ಖರೀದಿ ಮಾಡಿದ್ರೆ, ಅದರ ಲಾಭ ಕೇರಳದ ಮುಸ್ಲಿಂ ಸಂಘಟನೆಗಳಿಗೆ ಹೋಗುತ್ತೆ. ಹಿಂದೂಗಳ ಕೊಲೆ ಆಗುತ್ತಿದೆ, ದೌರ್ಜನ್ಯ ಆಗುತ್ತಿದೆ. ಲವ್ ಜಿಹಾದ್ ಆಗುತ್ತಿದೆ. 12 ಸಾವಿರ ಹುಡುಗಿಯರನ್ನ ಮುಸ್ಲಿಂ ಮತಾಂತರ ಮಾಡಿದ್ದಾರೆ.

ನೀವು ಅವರ ಅಂಗಡಿಯಲ್ಲಿ ಬಂಗಾರ ಖರೀದಿ ಮಾಡಿದರೆ ಅದೆಲ್ಲ ದುಡ್ಡು ನಮ್ಮ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂ ಧರ್ಮದವರ ಜ್ಯುವೆಲ್ಲರ್ಸ್ನಲ್ಲಿಯೇ ಖರೀದಿ ಮಾಡಿ ಎಂದು ಮುತಾಲಿಕ್ ಮನವಿ ಮಾಡಿದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.ಕನ್ನಡದ ಪ್ರಥಮ ಪತ್ರಿಕೆ...

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರಕಾರ: ಪುತ್ತೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಪುತ್ತೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಮೈತ್ರಿ ಸರಕಾರ ರಚನೆ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ...

ಬಂಟ್ವಾಳ: ರಸ್ತೆ ಬದಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿ-ರಸ್ತೆ ಸಂಚಾರ ಅಸ್ತವ್ಯಸ್ತ

ಬಂಟ್ವಾಳ : ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ಬದಿಯಲ್ಲಿ ಗುಡ್ಡ ಜರಿದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದಲ್ಲದೆ ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರ,...