ಪುಣೆಯ ರಾಜಾ ಬಹಾದುರ್ ಮಿಲ್ಸ್ ಎಂಬಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಕಾರ ಎ.ಆರ್. ರಹಮಾನ್ ಅವರ ಸಂಗೀತ ಕಾರ್ಯಕ್ರಮವು ನಡೆದಿತ್ತು. ಈ ಮನೋರಂಜನೆ ಕಾರ್ಯಕ್ರಮವು ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು. ಆದರೆ ಈ ಸೋಗೆ ನೀಡಿದ ಸಮಯ ಮೀರಿದೆ ಎಂದು ಪೋಲಿಸರು ತಡೆದರು.
ಪುಣೆ: ಪುಣೆಯ ರಾಜಾ ಬಹಾದುರ್ ಮಿಲ್ಸ್ ಎಂಬಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಕಾರ ಎ.ಆರ್. ರಹಮಾನ್ ಅವರ ಸಂಗೀತ ಕಾರ್ಯಕ್ರಮವು ನಡೆದಿತ್ತು. ಈ ಮನೋರಂಜನೆ ಕಾರ್ಯಕ್ರಮವು ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು. ಆದರೆ ಈ ಸೋ ಗೆ ನೀಡಿದ ಸಮಯ ಮೀರಿದೆ ಎಂದು ಪೋಲಿಸರು ತಡೆದರು.
ರವಿವಾರ ನಡೆದ ರಹಮಾನ್ ಸಂಗೀತ ಕಾರ್ಯಕ್ರಮ ನಿಗದಿತ ಸಮಯವಾದ ರಾತ್ರಿ 10 ಗಂಟೆಯನ್ನು ದಾಟಿದೆ ಎಂಬ ಕಾರಣಕ್ಕಾಗಿ ಪೊಲೀಸರು ನಿಲ್ಲಿಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ವೇದಿಕೆ ಹತ್ತಿ ರಹಮಾನ್ ಮತ್ತಿತರ ಕಲಾವಿದರಿಗೆ ಕಾರ್ಯಕ್ರಮ ನಿಲ್ಲಿಸಲು ಹೇಳುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಯಬೇಕೆಂದು ಸೂಚಿಸಲಾಗಿತ್ತು. ಈ ಕಾರಣ ಕಾರ್ಯಕ್ರಮವನ್ನು ನಿಲ್ಲಿಸಲು ಸೂಚಿಸಲಾಯಿತು, ಅವರು ಸೂಚನೆಯನ್ನು ಪಾಲಿಸಿ ಕಾರ್ಯಕ್ರಮ ನಿಲ್ಲಿಸಿದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಹಮಾನ್ ಅವರು ತಮ್ಮ ಕೈಗಡಿಯಾರ ತೋರಿಸಿ ವೇದಿಕೆಯಲ್ಲಿದ್ದ ಇತರ ಕಲಾವಿದರಿಗೆ ಪ್ರದರ್ಶನ ನಿಲ್ಲಿಸಲು ಸೂಚಿಸುವ ವೀಡಿಯೋ ವೈರಲ್ ಆಗುತ್ತಿದೆ.