ಪುದುಚೇರಿ: ಬಿಜೆಪಿ (BJP) ಮುಖಂಡನ ಮೇಲೆ ದುಷ್ಕರ್ಮಿಗಳ ಗುಂಪೊಂದು ನಾಡಬಾಂಬ್ ಎಸೆದು ಬರ್ಬರವಾಗಿ ಹತ್ಯೆಗೈದ ಘಟನೆ ಪುದುಚೇರಿಯಲ್ಲಿ (Puducherry) ನಡೆದಿದೆ.
ಬಿಜೆಪಿ ಮುಖಂಡ ಸೆಂಥಿಲ್ ಕುಮಾರ್ (Senthil Kumar) ಮೃತ ವ್ಯಕ್ತಿ.
ಭಾನುವಾರ ರಾತ್ರಿ ವಿಲಿಯನೂರು ಹಾಗೂ ಪುದುಚೇರಿ ರಸ್ತೆಯ ಬದಿಯ ಅಂಗಡಿಯೊಂದರಲ್ಲಿ ಚಹಾ ಸೇವಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಸೆಂಥಿಲ್ ಕುಮಾರ್ ಮೇಲೆ ನಾಡಬಾಂಬ್ ಎಸೆದಿದ್ದಾರೆ. ನಂತರ ಸೆಂಥಿಲ್ ಕುಮಾರ್ ಬಳಿ ಹೋಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ.
ಸೆಂಥಿಲ್ ಕುಮಾರ್ ಪುದುಚೇರಿ ಗೃಹ ಸಚಿವ ನಮಚಿವಾಯಂ ಅವರ ದೂರದ ಸಂಬಂಧಿಯಾಗಿದ್ದು, ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದ ಅವರು, ನಮಚಿವಾಯಂ ಜೊತೆಗೆ ಬಿಜೆಪಿಗೆ ತೆರಳಿದ್ದರು.
ಘಟನೆಗೆ ಸಂಬಂಧಿಸಿ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು 4 ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಪೊಲೀಸರು ಟೀ ಸ್ಟಾಲ್‍ನಿಂದ ಹತ್ತಿರದ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ತನಿಖೆ ನಡೆಯುತ್ತಿದೆ.