Connect with us

LATEST NEWS

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ : ಬಡವರಿಗೆ ಪ್ರಧಾನಿ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ ಅಡಿ ನವೆಂಬರ್​ವರೆಗೂ ಉಚಿತ ರೇಷನ್

Published

on

ನವದೆಹಲಿ :  ಕೋವಿಡ್​ ಸೋಂಕಿನ ವಿರುದ್ಧ ವಿಶ್ವದ ಪ್ರಮುಖ ದೇಶಗಳು ಹೋರಾಡುತ್ತಿದ್ದು, ಭಾರತ ಕೂಡ ಈ ಹೋರಾಟದಿಂದ ಹಿಂದೆ ಉಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಂಕಿನ ವಿರುದ್ಧ ಹೋರಾಟಕ್ಕೆ ಕಳೆದ ಒಂದೂವರೆ ವರ್ಷಗಳಲ್ಲಿ ಹೊಸ ಆರೋಗ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆ.

ದೇಶದಲ್ಲಿ ವಿವಿಧ ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಲಿದೆ. ಇದರ ಜೊತೆಗೆ ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಲಸಿಕೆಗಳು ಪಡೆದ ಕಾರಣದಿಂದಲೇ ಆರೋಗ್ಯ ಕಾರ್ಯಕರ್ತರು ಜನರ ಜೀವ ಉಳಿಸಲು ಸಾಧ್ಯವಾಯಿತು. ವಿಶ್ವಾಸದಿಂದಲೇ ಸಿದ್ಧಿ ಎಂಬ ಮೂಲಕ ಮಂತ್ರವನ್ನು ಜಪಿಸಿ ಈಗಾಗಲೇ ದೇಶದ 23 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ ಎಂದರು.

ದೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡುವ ನಿಟ್ಟಿನಲ್ಲಿ ಕಾರ್ಯ ನಡೆಸಲಾಗುತ್ತಿದ್ದು, ಜನರು ಕೂಡ ಅವರ ಸರದಿ ಬಂದಾಗ ಲಸಿಕೆ ಹಾಕಿಕೊಳ್ಳಬೇಕು. ಇದೇ ಕಾರಣದಿಂದ ಲಸಿಕೆ ವಿತರಣೆ ವೇಗವನ್ನು ಹೆಚ್ಚಸಿಲಾಗುವುದು.ಲಸಿಕೆ ಲಭ್ಯತೆ ಹೆಚ್ಚಿಸಲು ವಿದೇಶದಿಂದ ಕೂಡಲ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಮಕ್ಕಳಿಗಾಗಿ ಎರಡಯ ಲಸಿಕೆಗಳ ಪ್ರಯೋಗ ನಡೆಯುತ್ತಿದೆ, ಇದರಲ್ಲಿ ಇಂದು ಮೂಗಿನ ದ್ರೌಷಧವಾಗಿದೆ ಎಂದರು.

ಬಡವರ ಜೊತೆಗೆ ಸರ್ಕಾರ ಇದೆ. ಇದೇ ಹಿನ್ನಲೆ ನವೆಂಬರ್​ ವರೆಗೂ ಬಡ ಸಹೋದರ-ಸಹೋದರಿಯರು ಹೊಟ್ಟೆ ಹಸಿವಿನಿಂದ ಬಳಲಬಾರದು. ಇದೇ ಕಾರಣದಿಂದ ನವೆಂಬರ್​ವರೆಗೂ ಪ್ರಧಾನಿ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ ಅಡಿ ನವೆಂಬರ್​ವರೆಗೂ ಉಚಿತ ರೇಷನ್​ ನೀಡಲಾಗುವುದು. ಇದರಿಂದ 80 ಕೋಟಿ ಜನರು ಲಾಭಾ ಪಡೆಯಲಿದ್ದಾರೆ ಎಂದು ಘೋಷಿಸಿದರು.

ವರ್ಷದೊಳಗೆ ಭಾರತದಲ್ಲಿ ಎರಡು ಲಸಿಕೆಗಳು ತಯಾರಾದವು. ಲಸಿಕೆ ಕುರಿತು ಅನೇಕ ರಾಜಕಾರಣಗಳು ನಡೆದವು. ಲಸಿಕೆ ಬಗ್ಗೆ ಜನರಲ್ಲಿ ಅನುಮಾನ ಮೂಡುವಂತೆ ಮಾಡಿ ಜನರ ಜೀವನದ ಜೊತೆ ಆಟವಾಡಿದರು. ಇದೇ ಲಸಿಕೆ ಪಡೆದ ಕಾರಣದಿಂದಲೇ ವೈದ್ಯರು, ನರ್ಸ್​ ಆರೋಗ್ಯ ಸಿಬ್ಬಂದಿಗಳು ಜನರ ಜೀವ ರಕ್ಷಣೆಗೆ ಹೋರಾಡಿದರು. ಇದೇ ಕಾರಣದಿಂದಲೇ ಜನರಲ್ಲಿ ಮನವಿ ಮಾಡುತ್ತೇನೆ. ಜನರು ಹೋಗಿ ಲಸಿಕೆ ಪಡೆಯಬೇಕು, ಯುವ ಜನರು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಜನರು ತಪ್ಪದೇ ಮಾಸ್ಕ್​ ಧರಸಿಬೇಕು. ಸಾಮಾಜಿಕ ಅಂತರ ಕಾಡಬೇಕು, ಕೊರೋನಾ ಕರ್ಫ್ಯೂ ಸಡಿಲಿಸಿದ ಮಾತ್ರಕ್ಕೆ ಸೋಂಕು ಇಲ್ಲ ಎಂದು ತಿಳಿಯದೇ ಎಚ್ಚರವಹಿಸಬೇಕು. ನಾವೆಲ್ಲರೂ ಸೋಂಕಿನ ವಿರುದ್ಧ ಈ ಹೋರಾಟದಲ್ಲಿ ಜಯಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

LATEST NEWS

ಮೋದಿ ಹಾಡು ಶೇರ್ ಮಾಡಿ ಎಂದಿದಕ್ಕೆ ಹಿಗ್ಗಾಮುಗ್ಗ ಯುವಕನಿಗೆ ಥಳಿತ..! ಏನಿದು ಪ್ರಕರಣ?

Published

on

ಮೈಸೂರು: ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಹಾಡೊಂದನ್ನು ಶೇರ್ ಮಾಡುವಂತೆ ಹೇಳಿದ್ದಕ್ಕೆ ಅನ್ಯಕೋಮಿನ ಯುವಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.  ಪ್ರಕರಣದ ಕುರಿತು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

rohith

Read More..; ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ

ಏನಿದು ಪ್ರಕರಣ?

ರೋಹಿತ್ ರಮಣ ಎಂಬ ಯುವಕ ಮೋದಿಗೆ ಸಂಬಂಧಪಟ್ಟ ಹಾಡನ್ನು ಎಲ್ಲೆಡೆ ಶೇರ್ ಮಾಡುತ್ತಿದ್ದರು. ಮೈಸೂರಿನ ಸರಕಾರಿ ಗೆಸ್ಟ್ ಹೌಸ್‌ನಲ್ಲಿ ರೋಹಿತ್ ಕುಳಿತಿದ್ದಾಗ, ಈ ವೇಳೆ ಅಲ್ಲಿಗೆ ಬಂದ ಯುವಕನೊಬ್ಬನಿಗೆ ಮೋದಿಯ ಹಾಡನ್ನು ತೋರಿಸುತ್ತಾನೆ. ಆತ ಸಾಂಗ್ ಬಹಳ ಚೆನ್ನಾಗಿದೆ. ನನ್ನ ಸ್ನೇಹಿತರಿಗೂ ತೋರಿಸು ಎಂದು ಹೇಳಿ ನಿರ್ಜನ ಪ್ರದೇಶಕ್ಕೆ ರೋಹಿತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅನ್ಯಕೋಮಿನ ಯುವಕರ ತಂಡ ರೋಹಿತ್‌ನನ್ನು ಹಿಗ್ಗಾಮುಗ್ಗ ಥಳಿಸಿ, ಮುಖಕ್ಕೆ ಬಿಯರ್ ಸುರಿದರು. ನನ್ನ ಕೈ ಕೊಯ್ದು ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿಪುರಂ ಪೊಲೀಸ್ ನೇತೃತ್ವದಲ್ಲಿ ಹಲ್ಲೆಗೊಳಗಾದ ಯುವಕ ರೋಹಿತ್‌ನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಪ್ರಕರಣ ನಜರಬಾದ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ವರ್ಗಾಯಿಸಲಾಗಿದೆ.

 

Continue Reading

LATEST NEWS

ನಗರ ಸಭೆ ಉಪಾಧ್ಯಕ್ಷೆ ಮಗ ಸೇರಿ ನಾಲ್ವರ ಹ*ತ್ಯೆ! ಹಂ*ತಕರ ಪತ್ತೆಗೆ ವಿಶೇಷ ತಂಡ ರಚನೆ

Published

on

ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಬರ್ಬರ ಹ*ತ್ಯೆ ಮಾಡಲಾಗಿದೆ. ನಗರಸಭೆ ಉಪಾಧ್ಯಕ್ಷೆಯ ಮಗ ಸೇರಿದಂತೆ ನಾಲ್ವರನ್ನು ರಾತೋರಾತ್ರಿ ಹತ್ಯೆ ಮಾಡಲಾಗಿದೆ. ಗದಗ ನಗರದ ದಾಸರ್ ಓಣಿಯ ನಿವಾಸಿಯಾದ ಪ್ರಕಾಶ ಬಾಕಳೆ ಅವರ ಮನೆಯಲ್ಲಿ ಈ ಹ*ತ್ಯಾಕಾಂಡ ನಡೆದಿದೆ.


ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ 27 ವರ್ಷದ ಕಾರ್ತಿಕ್ ಬಾಕಳೆ, ಸಂಬಂಧಿಕರಾದ 66 ವರ್ಷದ ಪರಶುರಾಮ, 45 ವರ್ಷದ ಲಕ್ಷ್ಮಿ ಹಾಗೂ 16 ವರ್ಷದ ಆಕಾಂಕ್ಷಾ ಎನ್ನುವವರ ಕೊ*ಲೆಯಾಗಿದೆ.

 

ಚರಂಡಿಯಲ್ಲಿ ಮಾರಕಾಸ್ತ್ರ ಪತ್ತೆ :

ಮಧ್ಯರಾತ್ರಿ 1 ಗಂಟೆಯಿಂದ 2 ಗಂಟೆಯ ಅವಧಿಯಲ್ಲಿ ಮನೆಯ ಹಿಂದಿನ ಕಿಟಕಿ ಮೂಲಕ ಎಂಟ್ರಿ ಹೊಡೆದ ದುಷ್ಕರ್ಮಿಗಳು ಮೊದಲು ಒಂದನೇಯ ಮಹಡಿಯಲ್ಲಿ ಮಲಗಿಕೊಂಡಿದ್ದ ಕಾರ್ತಿಕ ಹಾಗೂ ಪರಶುರಾಮ ಅವರನ್ನು ಹ*ತ್ಯೆ ಮಾಡಿದ್ದಾರೆ. ಬಳಿಕ ತಳ ಮಹಡಿಯಲ್ಲಿ ಮಲಗಿಕೊಂಡಿದ್ದ ತಾಯಿ ಲಕ್ಷ್ಮಿ ಹಾಗೂ ಮಗಳು ಆಕಾಂಕ್ಷಾ ಅವರನ್ನು ಮಾರಕಾಸ್ತ್ರಗಳಿಂದ ಕೊ*ಚ್ಚಿ ಕೊ*ಲೆ ಮಾಡಿದ್ದಾರೆ.


ಈ ವೇಳೆ ಪಕ್ಕದ ರೂಮಿನಲ್ಲಿದ್ದ ಪ್ರಕಾಶ ಬಾಕಳೆ ಹಾಗೂ ಸುನಂದಾ ಬಾಕಳೆ ಎಂಬವರು ರೂಮ್ ಬಾಗಿಲು ತೆರೆಯದೆ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಬರುತ್ತಾ ಇದ್ದಂತೆ, ಹಂ*ತಕರು ಮನೆಯ ಹಿಂದಿನ ಕಿಟಕಿ ‌ಮೂಲಕ ಎಸ್ಕೇಪಾಗಿದ್ದಾರೆ. ಈ ವೇಳೆ ಹಂ*ತಕರು ಉಪಯೋಗ ಮಾಡಿದ್ದ ಮಾರಕಾಸ್ತ್ರಗಳನ್ನು ಚರಂಡಿಯಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ : ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ
ಬಿಜೆಪಿ ಮುಖಂಡ ಹಾಗೂ ನಗರಸಭೆ ಉಪಾಧ್ಯಕ್ಷೆಯ ಪತಿಯಾದ ಪ್ರಕಾಶ ಬಾಕಳೆಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಈ ಹಿಂದಿಯೇ ಸಾವನ್ನಪ್ಪಿದ್ದಾಳೆ. ಎರಡನೇಯ ಪತ್ನಿಯಾದ ಸುನಂದಾಳ ಜೊತೆಗೆ ಇದೇ ಮನೆಯಲ್ಲಿ ಜೀವನ ನಡೆಸುತ್ತಿದ್ದ. ಏಪ್ರಿಲ್ 17 ರಂದು ಎರಡನೇಯ ಪತ್ನಿ ಸುನಂದಾ ಬಾಕಳೆ ಅವ್ರ ಪುತ್ರ ಕಾರ್ತಿಕ್ ಎಂಗೇಜ್ಮೆಂಟ್ ಸಮಾರಂಭ ನಡೆಸಲಾಗಿತ್ತು.
ಮೊದಲ ಪತ್ನಿಯ ಸಹೋದರ ಪರಶುರಾಮ ಅವರ ಪತ್ನಿ ಲಕ್ಷ್ಮಿ, ಅವರ ಪುತ್ರಿ ಆಕಾಂಕ್ಷಾ ಕೊಪ್ಪಳ ಜಿಲ್ಲೆಯಿಂದ ಎಂಗೇಜ್ಮೆಂಟ್ ಕಾರ್ಯಕ್ಕೆ ಬಂದಿದ್ದರು. ಆದ್ರೆ, ಎಂಗೇಜ್ಮೆಂಟ್ ಮುಗಿಸಿ ವಾಪಾಸಾಗಬೇಕಾದವರು ಕಾರಣಾಂತರದಿಂದ ಇಲ್ಲೇ ಉಳಿದುಕೊಂಡಿದ್ದರು.

ತನಿಖೆಗೆ 4 ತಂಡ ರಚನೆ :

ಉತ್ತರ ವಲಯ ಐಜಿಪಿ ವಿಕಾಸಕುಮಾರ ಅವರು ಘಟನಾ ಸ್ಥಳವನ್ನು ಪರಿಶೀಲನೆ ಮಾಡಿದರು. ಈಗಾಗಲೇ ಗದಗ ಎಸ್ಪಿ ಬಿ.ಎಸ್.ನೇಮಗೌಡ ಅವರ ನೇತೃತ್ವದಲ್ಲಿ 4 ತಂಡವನ್ನು ರಚನೆ ಮಾಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕೊ*ಲೆ ಮಾಡಿರೋದು ದರೋಡೆಕೋರರ ಅಲ್ಲಾ ಅಥವಾ ಇನ್ಯಾರು ಎಂಬ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ‌‌ಮಾಡ್ತಾಯಿದ್ದೇವೆ, ಆದಷ್ಟು ಬೇಗ ಹಂತಕರನ್ನು ಪತ್ತೆ ಮಾಡುವ ಭರವಸೆ ನೀಡಿದ್ದಾರೆ.

ರಾಜಕೀಯ ಹಿನ್ನೆಲೆ, ರಿಯಲ್ ಎಸ್ಟೇಟ್, ಕೌಟುಂಬಿಕ ಕಲಹ ಸೇರಿದಂತೆ ಎಲ್ಲಾ ಆ್ಯಂಗಲ್ ‌ಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಒಂದು ಕುಟುಂಬದ ನಾಲ್ಕು ಜನರ ಹತ್ಯೆ ಮಾಡುವಷ್ಟು ದ್ವೇಷ ಏನೂ ಎನ್ನುವುದು ಪೊಲೀಸರ ಸಮಗ್ರ ತನಿಖೆಯಿಂದಲೇ ಬಯಲಾಗಬೇಕಾಗಿದೆ.

Continue Reading

LATEST NEWS

ಚುನಾವಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿ.. 40 ಮಂದಿಗೆ ಗಾಯ

Published

on

ಮಧ್ಯಪ್ರದೇಶ: ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾದ ಘಟನೆ ಎ.20ರಂದು ಮುಂಜಾನೆ ಮಧ್ಯಪ್ರದೇಶ್ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

palti

ಘಟನೆಯಿಂದ 21 ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಗಾಯಗೊಂಡಿರುವ ಅಧಿಕಾರಿಗಳು ಚುನಾವಣಾ ಕರ್ತವ್ಯ ಮುಗಿಸಿ ರಾಜ್‌ಗಢಕ್ಕೆ ಹಿಂತಿರುಗುತ್ತಿದ್ದಾಗ ಭೋಪಾಲ್-ಬೇತುಲ್ ಹೆದ್ದಾರಿಯ ಬರೇತಾ ಘಾಟ್ ಬಳಿ ಅಪಘಾತ ಸಂಭವಿಸಿದೆ.

Read More..; ಹೊತ್ತಿ ಉರಿದು ಭಸ್ಮ*ವಾದ ಸ್ವೀಟ್ ಕಾರ್ನ್ ಸ್ಟಾಲ್‌..!! ಓಡಿ ಜೀವ ಉಳಿಸಿಕೊಂಡ ಸ್ಟಾಲ್ ಮಾಲೀಕ, ಗ್ರಾಹಕರು

ಐವರು ಪೊಲೀಸರು ಮತ್ತು ಉಳಿದ ಗೃಹರಕ್ಷಕರು (ಹೋಮ್ ಗಾರ್ಡ್)​​​​​ ಸೇರಿದಂತೆ ಒಟ್ಟು 40 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಉಪ ವಿಭಾಗಾಧಿಕಾರಿ ಶಾಲಿನಿ ಪರಸ್ತೆ ತಿಳಿಸಿದ್ದಾರೆ.

 

Continue Reading

LATEST NEWS

Trending