Connect with us

    LATEST NEWS

    ಟೆಂಪೋ ಡಿ*ಕ್ಕಿ ಹೊಡೆದು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ನಿ*ಧನ

    Published

    on

    ಮಂಗಳೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟೆಂಪೋ ಡಿಕ್ಕಿಯಾಗಿ ಮಂಗಳೂರು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ 65ರ ಹರೆಯದ ರಾಧಾಕೃಷ್ಣ ರಾವ್ ನಿಧ*ನರಾಗಿರುವ ಘಟನೆ ಕುಚಿಕಾಡು ಎಂಬಲ್ಲಿ ನಡೆದಿದೆ.

    ಬಿಕರ್ನಕಟ್ಟೆ ನಿವಾಸಿ ರಾಧಾಕೃಷ್ಣ ರಾವ್ ಅವರು ಸಂಜೆ 5.45ರ ಸುಮಾರಿಗೆ ಕಲ್ಪನೆ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಟೆಂಪೋ ಡಿ*ಕ್ಕಿ ಹೊಡೆದಿತ್ತು. ಗಂಭೀ*ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 7.45ರ ಸುಮಾರಿಗೆ ಮೃ*ತಪಟ್ಟಿದ್ದಾರೆ.

    ಇದನ್ನೂ ಓದಿ : ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿಗೆ ಯೋಧನ ಜೀವಾಂತ್ಯ..!

    ಮೆಸ್ಕಾಂ ಜೆಪ್ಪು ಶಾಖೆಯ ಕಿರಿಯ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಬಿಕರ್ನಕಟ್ಟೆಯ ಶ್ರೀ ಹರಿಹರ ಪಾಂಡುರಂಗ ವಿಠಲ ಭಜನಾ ಮಂದಿರದ ಅಧ್ಯಕ್ಷರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ನಿವೃತ್ತ ಶಿಕ್ಷಕಿ ಗೌರಿ ರಾಧಾಕೃಷ್ಣ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ಒಂದೇ ಹಾಡಿನಲ್ಲಿ 700 ಮಂದಿ ಬ್ಯಾಕ್ ಡ್ಯಾನ್ಸರ್ಸ್; ಯಾವ ಚಿತ್ರದಲ್ಲಿ ಗೊತ್ತಾ!?

    Published

    on

    ಮಂಗಳೂರು/ಮುಂಬೈ : ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಛವ್ವಾ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಛತ್ರಪತಿ ಸಾಂಬಾಜಿ ಪಾತ್ರದಲ್ಲಿ ವಿಕ್ಕಿ ನಟಿಸಿದರೆ, ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.


    ಡ್ಯಾನ್ಸ್ ಮಾಡುವಾಗ ಸಾಮಾನ್ಯವಾಗಿ 50 – 100 ಮಂದಿ ಕಾಣಿಸಿಕೊಳ್ಳೋದು ಸಾಮಾನ್ಯ. ಆದರೆ, ಬರೋಬ್ಬರಿ 700 ಮಂದಿ ಕಾಣಿಸಿಕೊಂಡರೆ? ಹೀಗೊಂದು ಅಪರೂಪದ ದೃಶ್ಯ ‘ಛವ್ವಾ’ಸಿನಿಮಾದಲ್ಲಿ ಮೂಡಿ ಬಂದಿದೆ. ಎ.ಆರ್. ರೆಹಮಾನ್ ಕಂಪೋಸ್ನಲ್ಲಿ ಈ ಹಾಡು ಮೂಡಿದ್ದು, ಇದರ ಶೂಟ್ಗೆ ಸಿದ್ಧತೆ ನಡೆದಿದೆ.
    ಮರಾಠಿ ಜಾನಪದ ಮ್ಯೂಸಿಕ್ನಲ್ಲಿ ಈ ಹಾಡು ಮೂಡಿ ಬರುತ್ತಿದೆ. ರಾಜರ ಕಾಲವನ್ನು ರೀ ಕ್ರಿಯೇಟ್ ಮಾಡಬೇಕಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ ಡ್ಯಾನ್ಸರ್ಗಳು ಇರಲಿದ್ದಾರೆ. ವಿಜಯ್ ಗಂಗೂಲಿ ಅವರು ಈ ಹಾಡಿಗೆ ಕೊರಿಯೋಗ್ರಾಫಿ ಮಾಡುತ್ತಿದ್ದಾರೆ.
    ಈ ಸಿನಿಮಾದ ಕಥೆ 1681ರ ಕಾಲಘಟ್ಟದ್ದಾಗಿದೆ. ಇದಕ್ಕಾಗಿಯೇ ಬೃಹತ್ ಸೆಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಚಿತ್ರ ಡಿಸೆಂಬರ್ 6 ರಂದು ರಿಲೀಸ್ ಆಗಲಿದ್ದು, ಅದೇ ದಿನ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಕೂಡ ರಿಲೀಸ್ ಆಗುತ್ತಿರೋದು ವಿಶೇಷ.

    Continue Reading

    LATEST NEWS

    ಹ್ಯಾರಿಪಾಟರ್‌ ಖ್ಯಾತಿಯ ಹಾಲಿವುಡ್‌ ನಟಿ ಮ್ಯಾಗಿ ಸ್ಮಿತ್‌ ವಿಧಿವಶ

    Published

    on

    ಹಾಲಿವುಡ್‌ನ ಜನಪ್ರಿಯ ನಟಿ ಹ್ಯಾರಿಪಾಟರ್‌ ಖ್ಯಾತಿಯ ನಟಿ ಮ್ಯಾಗಿ ಸ್ಮಿತ್ ಅವರು ಇಹಲೋಕ ತ್ಯಜಿಸಿದ್ದಾರೆ.

    ಆಸ್ಕರ್ ಪ್ರಶಸ್ತಿ ವಿಜೇತ ನಟಿ ಮ್ಯಾಗಿ ಸ್ಮಿತ್ ಅವರು ಇಬ್ಬರೂ ಮಕ್ಕಳು ಮತ್ತು ಐದು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮ್ಯಾಗಿ ಸ್ಮಿತ್ ಅವರು ಸೆ.27ರಂದು ನಿಧನರಾಗಿದ್ದು, ಕುಟುಂಬ ಮೂಲಗಳು ಅಧಿಕೃತ ಪಡಿಸಿದೆ.

    ಶಾಸಕ ಮುನಿರತ್ನ ಮನೆಗೆ ಐಟಿ ಅಧಿಕಾರಿಗಳ ದಾಳಿ

    ಮ್ಯಾಗಿ ಸ್ಮಿತ್ ಸುಮಾರು 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 60ರ ದಶಕದಿಂದ ಸಿನಿಮಾಗಳಲ್ಲಿ ನಟಿಸುವುದ್ದಕ್ಕೆ ಆರಂಭಿಸಿದ್ದ ಮ್ಯಾಗಿ ಸ್ಮಿತ್ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇವರ ವೃತ್ತಿ ಬದುಕಿನಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ.

    Continue Reading

    LATEST NEWS

    ಶೀಘ್ರವೇ ಗೃಹಲಕ್ಷ್ಮಿ ಹಣ, ಯೋಜನೆ ನಿಲ್ಲುವ ಮಾತೇ ಇಲ್ಲ: ಲಕ್ಷ್ಮಿ ಹೆಬ್ಬಾಳ್ಕರ್‌

    Published

    on

    ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ನಿರಂತರ ಪ್ರಕ್ರಿಯೆ ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಕೊಡುಗೆ ಏನು ಎಂದು ಸಚಿವರು ಪ್ರಶ್ನಿಸಿದ ಹೆಬ್ಬಾಳ್ಕರ್‌ ನಾನು ಎಂದಿಗೂ ಪಂಚಮಸಾಲಿ ಮೀಸಲಾತಿ ಪರವಾಗಿದ್ದೇನೆ. 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.

    ಮುರುಗೇಶ್ ನಿರಾಣಿ ಅವರು ಅಧಿಕಾರದಲ್ಲಿದ್ದಾಗ ಸಮುದಾಯದ ಬಗ್ಗೆ ಯೋಚಿಸಲಿಲ್ಲ. ಈಗ ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ಮೀಸಲಾತಿ ನೀಡಲಿ ಎಂಬುದೇ ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

    Continue Reading

    LATEST NEWS

    Trending